- Home
- Entertainment
- Sandalwood
- Naanu Matthu Gunda 2 Movie: ಶ್ವಾನವೇ ಪ್ರಪಂಚ ಎನ್ನೋ ಶಂಕರನ ಭಾವನಾತ್ಮಕ ಕಥೆ ರಿಲೀಸ್ ಯಾವಾಗ?
Naanu Matthu Gunda 2 Movie: ಶ್ವಾನವೇ ಪ್ರಪಂಚ ಎನ್ನೋ ಶಂಕರನ ಭಾವನಾತ್ಮಕ ಕಥೆ ರಿಲೀಸ್ ಯಾವಾಗ?
‘ನಾನು ಮತ್ತು ಗುಂಡ’ ಸಿನಿಮಾವು ಭಾವನಾತ್ಮಕವಾಗಿ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ಇದೀಗ ಈ ಸಿನಿಮಾದ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ 2’ ಸೀಕ್ವೆಲ್ ರೆಡಿಯಾಗಿದೆ. ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣುತ್ತಿದೆ.

ಹಿಂದಿನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಹಾಸನ್ ಅವರೇ ಈ ಸಿನಿಮಾದ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ. ಈ ಸಿನಿಮಾದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ಲೀಡ್ ಪಾತ್ರದಲ್ಲಿ ನಟಿಸಿದ್ದಾರೆ.
ಆರ್‌ಪಿ ಪಟ್ನಾಯಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದುರುವ ಈ ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿವೆ. ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ಯಾವುದೇ ಕಟ್ ಸೂಚಿಸದೆ 'ಯು/ಎ' ಕೊಟ್ಟಿದೆ.
ಈ ಸಿನಿಮಾದಲ್ಲಿನ ಶಂಕರ್ ನಿಧನನಾದ ಮೇಲೆ ಆತನ ಮಗನಿಂದ ಕಥೆಯಿ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ಅವನ ನಾಯಿಯೇ ಪ್ರಪಂಚ. ಸಾಮಾಜಿಕ ಕಾಳಜಿ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಸಿನಿಮಾದಲ್ಲಿದೆ.
ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿಂಬು ಜೊತೆ ಬಂಟಿ ಎಂಬ ನಾಯಿಯ ಜತೆ ಬಾಲನಟ ಜೀವನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್ ಅವರೇ ನಿರ್ಮಿಸಿರುವ ‘ನಾನು ಮತ್ತು ಗುಂಡ 2’ ಸಿನಿಮಾಕ್ಕೆ ಆರ್ ಪಿ ಪಟ್ನಾಯಕ್ ಸಂಗೀತ ಸಂಯೋಜನೆ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಛಾಯಾಗ್ರಹಣವಿದೆ. ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

