ಗಾಂಜಾ ಸೇವನೆ ಹಾಗೂ ಮಾರಾಟವನ್ನು ಕಾನೂನುಬದ್ಧ ಮಾಡಿ ಎನ್ನುವ ವಾದವನ್ನು ನಟ ರಾಕೇಶ್‌ ಅಡಿಗ ಮುಂದಿಟ್ಟಿದ್ದಾರೆ.

ಇತ್ತೀಚೆಗೆ ನಟಿ ನಿವೇದಿತಾ ಅವರು ಈಗಾಗಲೇ ಇದೇ ಹೇಳಿಕೆ ನೀಡಿದ್ದು, ಗಾಂಜಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದೊಂದು ಭಕ್ತಿಯ ಭಾಗ ಎಂದು ಹೇಳಿದ್ದರು. ಅದಕ್ಕೆ ಅಡಿಗ ದನಿಗೂಡಿಸಿದ್ದಾರೆ.

ಈ ಕುರಿತು ಅವರು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿರುವ ಅಡಿಗ, ‘ಡ್ರಗ್‌ ಮತ್ತು ಗಾಂಜಾ ಬೇರೆ ಬೇರೆ. ಒಂದಕ್ಕೊಂದು ಸಂಬಂಧ ಇಲ್ಲ. ಗಾಂಜಾ ಅದೊಂದು ಮೆಡಿಸಿನ್‌. ಅದು ಅರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಗಾಂಜಾ ಸೇವನೆಯನ್ನು ಕಾನೂನು ಬದ್ಧ ಮಾಡಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಗಿಣಿ ದ್ವಿವೇದಿ ಹೆಸರು ರಿವೀಲ್ ಮಾಡಿದ ರವಿಶಂಕರ್‌; ಲೋಕೇಷನ್‌ ಟ್ರ್ಯಾಕ್‌ ಮಾಡಿದ ಸಿಸಿಬಿ

‘ಆದರೆ, ಮದ್ಯಪಾನ ಹಾಗೂ ಡ್ರಗ್‌ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಈ ಕಾರಣಕ್ಕೆ ಮದ್ಯ ಮಾರಾಟ ಮತ್ತು ತಯಾರಿಕೆಯನ್ನು ಬಂದ್‌ ಮಾಡಿ. ಗಾಂಜಾ ಮಾರಾಟ ಮತ್ತು ಸೇವನೆಗೆ ಅವಕಾಶ’ ಎಂದು ರಾಕೇಶ್‌ ಅಡಿಗ ಒತ್ತಾಯಿಸಿದ್ದಾರೆ. ಆ ಮೂಲಕ ಗಾಂಜಾ ಪದಾರ್ಥವನ್ನು ಲೀಗಲ್‌ ಮಾಡಿ ಎನ್ನುವ ಬೇಡಿಕೆಗೆ ಚಿತ್ರರಂಗದಲ್ಲಿ ಒಬ್ಬೊಬ್ಬರಾಗಿ ಬೆಂಬಲ ಸೂಚಿಸುತ್ತಿದ್ದಾರೆ.

"