MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ವಿದೇಶದಲ್ಲಿದ್ರೂ ಸಂಪ್ರದಾಯಬದ್ಧವಾಗಿ 30ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಅಣ್ಣಾವ್ರ ನಾಯಕಿ

ವಿದೇಶದಲ್ಲಿದ್ರೂ ಸಂಪ್ರದಾಯಬದ್ಧವಾಗಿ 30ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಅಣ್ಣಾವ್ರ ನಾಯಕಿ

Actress Madhavi: ಕನ್ನಡ ಚಿತ್ರರಂಗ ಸೇರಿ ಭಾರತೀಯ ಸಿನಿಮಾಗಳಲ್ಲಿ 80ನೇ ದಶಕದಲ್ಲಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಮಿಂಚಿದ ನಟಿ ಮಾಧವಿ, ಇದೀಗ ತಮ್ಮ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಪ್ರದಾಯಬದ್ಧವಾಗಿ ಅಮೆರಿಕಾದಲ್ಲಿ ಆಚರಿಸಿದ್ದಾರೆ. 

2 Min read
Author : Pavna Das
Published : Feb 17 2026, 01:59 PM IST
Share this Photo Gallery
  • FB
  • TW
  • Linkdin
  • Whatsapp
16
ನಟಿ ಮಾಧವಿ
Image Credit : Instagram

ನಟಿ ಮಾಧವಿ

ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದಲ್ಲಿ 80ರ ದಶಕದಲ್ಲಿ ತೆರೆ ಮೇಲೆ ಮೋಡಿ ಮಾಡಿದ ನಟಿ ಮಾಧವಿ. ಅವರ ನಟನೆ, ಸೌಂದರ್ಯ, ಕಣ್ಣೋಟಕ್ಕೆ ಸೋಲದವರು ಇಲ್ಲ. ಇದೀಗ ನಟನೆಯಿಂದ ದೂರವಾಗಿ ದೂರದ ಅಮೆರಿಕಾದಲ್ಲಿ ನೆಲೆಸಿರುವ ನಟಿ ಮಾಧವಿ ತಮ್ಮ ಮೂವತ್ತನೇ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ.

26
30ನೇ ವಿವಾಹ ವಾರ್ಷಿಕೋತ್ಸವ
Image Credit : Instagram

30ನೇ ವಿವಾಹ ವಾರ್ಷಿಕೋತ್ಸವ

ನಟಿ ಮಾಧವಿ ಅವರು ಇದೀಗ ಅಮೆರಿಕಾದಲ್ಲಿ ಸಂಪ್ರದಾಯಬದ್ಧವಾಗಿ ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿದ್ದು, ಮೂವರು ಮಕ್ಕಳು ತಮಗಾಗಿ ಅದ್ಧೂರಿಯಾಗಿ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿರುವುದಾಗಿ ಹೇಳಿದ್ದಾರೆ. ನಟಿ ಸೀರೆಯುಟ್ಟು, ಕೈಗೆ ಮೆಹೆಂದಿ ಹಾಕಿ, ಮದುಮಗಳಂತೆ ತಯಾರಾಗಿ ಉಂಗುರ ಬದಲಾಯಿಸುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ್ದಾರೆ.

Related Articles

Related image1
Sandalwood movies 2025: ಈ ವರ್ಷ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಕನ್ನಡ ಸಿನಿಮಾಗಳು
Related image2
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು
36
ಸಂಭ್ರಮವನ್ನು ಹಂಚಿಕೊಂಡ ನಟಿ
Image Credit : Instagram

ಸಂಭ್ರಮವನ್ನು ಹಂಚಿಕೊಂಡ ನಟಿ

ರಾಲ್ಫ್ ಮತ್ತು ನಾನು ಇಂದು ಫೆಬ್ರವರಿ 14 ರಂದು ನಮ್ಮ 3 ಹೆಣ್ಣುಮಕ್ಕಳಾದ ಟಿಫಾನಿ, ಪ್ರಿಸ್ಸಿಲ್ಲಾ ಮತ್ತು ಎವೆಲಿನ್ ಜೊತೆ ನಮ್ಮ 30 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದೆವು. ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳು ಯಾವಾಗಲೂ ನಮ್ಮೊಂದಿಗೆ ಇರಲಿ ಎಂದು ಆಶಿಸುತ್ತೇವೆ! ಎಂದು ಮಾಧವಿ ಬರೆದುಕೊಂಡಿದ್ದಾರೆ.

46
 ಘಟಾನುಘಟಿಗಳ ಜೊತೆ ನಟಿಸಿದ ನಟಿ
Image Credit : Instagram

ಘಟಾನುಘಟಿಗಳ ಜೊತೆ ನಟಿಸಿದ ನಟಿ

ಮಾಧವಿ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ಮನಸ್ಸಲ್ಲಿ ಮನೆ ಮಾಡಿದ್ದರು. ಇವರು ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಷ್ ಸೇರಿ ಹಲವು ನಟರ ಜೊತೆ ನಟಿಸಿದ್ದಾರೆ. ಚಿತ್ರರಂಗದ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸಿನಿಮಾದಿಂದ ದೂರ ಸರಿದರು.

56
ಪತಿ ಹಾಗೂ ಮಕ್ಕಳೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆ
Image Credit : Instagram

ಪತಿ ಹಾಗೂ ಮಕ್ಕಳೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆ

ತಮಿಳು, ತೆಲುಗು, ಮಲಯಾಲಂ, ಹಿಂದಿ ಹಾಗೂ ಕನ್ನಡ ಸೇರಿ ಸುಮಾರು 200 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮಾಧವಿ ಅವರು ಭಾರತೀಯ ಮೂಲದ ಬ್ಯುಸಿನೆಸ್ ಮೆಸ್ ರಾಲ್ಫ್ ಶರ್ಮಾ ಅವರನ್ನು ವಿವಾಹವಾಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು. ಈ ಜೋಡಿಗೆ ಮೂವರು ಹೆಣ್ಮಕ್ಕಳಿದ್ದಾರೆ. ನಟಿ ಸದ್ಯ , ನ್ಯೂಜೆರ್ಸಿಯಲ್ಲಿ ನೆಲೆಯಾಗಿದ್ದಾರೆ. ಇವರಿಗೆ ಎವಿಲಿನ್ ಶರ್ಮಾ, ಟಿಫಾನಿ ಶರ್ಮಾ, ಪ್ರಿಸ್ಕಿಲಾ ಶರ್ಮಾ ಎಂಬ ಮೂವರು ಹೆಣ್ಣು ಮಕ್ಕಳಿದ್ದು, ಇದೀಗ ಮೂರು ಜನ ಸೇರಿ

66
 ಮಾಧವಿ ನಟಿಸಿದ ಸಿನಿಮಾಗಳು
Image Credit : Instagram

ಮಾಧವಿ ನಟಿಸಿದ ಸಿನಿಮಾಗಳು

ಕನ್ನಡದಲ್ಲಿ 25 ಸಿನಿಮಾಗಳಲ್ಲಿ (kannada films) ನಟಿಸಿದ್ದಾರೆ. ಕೊನೆಯದಾಗಿ ನಟಿಸಿದ್ದು ಕೂಡ ಕನ್ನಡ ಸಿನಿಮಾದಲ್ಲೇ. ಹಾಲು ಜೇನು, ಗರುಡ ರೇಖೆ, ಚಿನ್ನದಂಥ ಮಗ, ಚಾಣಕ್ಯ, ಭಾಗ್ಯದ ಲಕ್ಷ್ಮೀ ಬಾರಮ್ಮ, ಅನುರಾಗ ಅರಳಿತು, ಮಲಯ ಮಾರುತ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು ಮಾಧವಿ ನಟಿಸಿದ ಕನ್ನಡದ ಪ್ರಮುಖ ಚಲನಚಿತ್ರಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮದುವೆ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!
Recommended image2
'ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ' ವೇಳೆ ನೀಚರಿಂದ ಶೌಚಾಲಯದಲ್ಲಿದ್ದ ನಟಿಯ ವಿಡಿಯೋ ರೆಕಾರ್ಡ್
Recommended image3
ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ
Related Stories
Recommended image1
Sandalwood movies 2025: ಈ ವರ್ಷ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಕನ್ನಡ ಸಿನಿಮಾಗಳು
Recommended image2
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved