Sandalwood movies 2025: ಈ ವರ್ಷ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಕನ್ನಡ ಸಿನಿಮಾಗಳು
Sandalwood movies 2025: 2025ರಲ್ಲಿ ಚಂದನವನದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಸಿನಿಮಾಗಳು ಮಾತ್ರ ಕೆಲವೇ ಕೆಲವು. ಇದರಲ್ಲಿ ಕಾಂತಾರ ಚಾಪ್ಟರ್ 1 ಮೊದಲನೇ ಸ್ಥಾನದಲ್ಲಿದೆ. ಹಾಗಿದ್ರೆ ಸೂಪರ್ ಹಿಟ್ ಆಗಿರುವ ಉಳಿದ ಸಿನಿಮಾಗಳು ಯಾವುವು ನೋಡೋಣ.

ಬ್ಲಾಕ್ ಬಸ್ಟರ್ ಸಿನಿಮಾ
2025ರಲ್ಲಿ ಹಲವಾರು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಆದರೆ ಸೂಪರ್ ಹಿಟ್ ಆದ, ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಸಿನಿಮಾಗಳು ಕೆಲವೇ ಕೆಲವು. ಇಲ್ಲಿದೆ ಈ ವರ್ಷ ಸದ್ದು ಮಾಡಿದ ಕೆಲವು ಸಿನಿಮಾಗಳು.
ಕಾಂತಾರ ಚಾಪ್ಟರ್ 1:
ರಿಷಭ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಂ, ಗುಲ್ಶನ್ ದೇವಯ್ಯ ನಟಿಸಿರುವ ಕಾಂತಾರ ಚಾಪ್ಟರ್ 1 ಚಿತ್ರ, ದೇಶದಾದ್ಯಂತ ರಿಲೀಸ್ ಆಗಿ ಭಾರಿ ಸದ್ದು ಮಾಡಿತ್ತು. ಈ ಚಿತ್ರ 850 ರಿಂದ 900 ಕೋಟಿ ಗಳಿಸಿತ್ತು.
ಮಹಾವತಾರ್ ನರಸಿಂಹ
ಮಹಾವತಾರ್ ನರಸಿಂಹ ಕನ್ನಡ ಸಿನಿಮಾವಲ್ಲ, ಆದರೆ ಕ್ಲೀಮ್ ಪ್ರೊಡಕ್ಷನ್ ಕಂಪನಿಯ ಈ ಆನಿಮೇಷನ್ ಚಿತ್ರ, ಕನ್ನಡದಲ್ಲೂ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈ ಸಿನಿಮಾ 300 - 325 ಕೋಟಿ ಗಳಿಸಿತ್ತು.
ಸು ಫ್ರಮ್ ಸೋ
ಯಾರೂ ಊಹಿಸದ ಕನ್ನಡದ ಈ ಸಣ್ಣ ಬಜೆಟ್ ಕಾಮಿಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಜೆಪಿ ತುಮಿನಾಡ್ ನಟಿಸಿ ನಿರ್ದೇಶಿರುವ, ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ ನಟಿಸಿರುವ ಈ ಚಿತ್ರ 125 ಕೋಟಿ ಗಳಿಸಿತ್ತು ಇತಿಹಾಸವೇ ಸರಿ.
ಜೂನಿಯರ್
ರಾಧಾ ಕೃಷ್ಣ ರೆಡ್ಡಿ ನಿರ್ದೇಶನ ಮಾಡಿರುವ ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆಲಿಲಿಯಾ ಹಾಗೂ ರವಿಚಂದ್ರನ್ ನಟಿಸಿರುವ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಗಳಿಕೆ 12.45 ಕೋಟಿಯಾಗಿತ್ತು.
ಎಕ್ಕ
ಯುವ ರಾಜಕುಮಾರ್, ಸಂಪದ ಮತ್ತು ಸಂಜನಾ ಆನಂದ್ ನಟಿಸಿರುವ ಈ ಚಿತ್ರದ ಕಥೆಯನ್ನು ಸಹ ಜನರು ಇಷ್ಟಪಟ್ಟಿದ್ದರು, ರೋಹಿತ್ ಪಡಾಕಿ ನಿರ್ದೇಶನ ಮಾಡಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 12 ಕೋಟಿ ಗಳಿಸಿತ್ತು.
ಮಾದೇವ
ನವೀನ್ ರೆಡ್ಡಿ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ನಟಿಸಿದ್ದಾರೆ. ಇದು ಜೈಲು ಮತ್ತು ಹ್ಯಾಂಗ್ ಮ್ಯಾನ್ ಕಥೆಯನ್ನು ಹೊಂದಿದ ಸಿನಿಮಾ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದರು. ಈ ಚಿತ್ರ 7.37 ಕೋಟಿ ಗಳಿಸಿತ್ತು.
ಛೂ ಮಂಥರ್
ನವನೀತ್ ನಿರ್ದೇಶನ ಮಾಡಿರುವ ಶರಣ್, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ ನಟಿಸಿರುವ ಈ ಹಾರರ್ ಸಿನಿಮಾ ಛೂ ಮಂಥರ್ ಬಾಕ್ಸ್ ಆಫೀಸ್ ನಲ್ಲಿ 6.45 ಕೋಟಿ ಗಳಿಸಿತ್ತು.
ಯುದ್ಧಕಾಂಡ ಚಾಪ್ಟರ್ 2
ಅಜಯ್ ರಾವ್, ಪ್ರಕಾಶ್ ಬೆಳವಾಡಿ ಮತ್ತು ಅರ್ಚನಾ ಜೋಯಿಸ್ ನಟಿಸಿರುವ ಕೋರ್ಟ್ ಕಥೆಯನ್ನು ಹೊಂದಿರುವ ಚಿತ್ರ ಯುದ್ಧಕಾಂಡ ಚಾಪ್ಟರ್ 2. ಈ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಈ ಚಿತ್ರ 5.54 ಕೋಟಿ ಗಳಿಸಿದೆ.
ಬ್ರಾಟ್
ಇತ್ತೀಚೆಗೆ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ನಟಿಸಿರುವ ಬ್ರಾಟ್ ಸಿನಿಮಾವನ್ನು ಸಹ ಜನ ಸಿಕ್ಕಾಪಟ್ತೆ ಇಷ್ಟಪಟ್ಟಿದ್ದರು, ಭರ್ಜರಿ ಮನರಂಜನೆ ನೀಡಿರುವ ಈ ಚಿತ್ರ 5.47 ಕೋಟಿ ಗಳಿಸಿತ್ತು.
ಏಳುಮಲೆ
ಇನ್ನು ರಾಣಾ ಮತ್ತು ಪ್ರಿಯಾಂಕಾ ಆಚಾರ್ ನಟಿಸಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಏಳುಮಲೆ ಸಿನಿಮಾ ಪ್ರೇಮಿಗಳ ಕಥೆಯನ್ನು ಹೇಳಿದ್ದು, ಇದನ್ನು ಕೂಡ ಜನ ಇಷ್ಟಪಟ್ಟಿದ್ದರು. ಈ ಚಿತ್ರ 5.25 ಕೋಟಿ ಗಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

