MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra

ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra

Actor Vijay Raghavendra On Wife Spandana: ನಟ ವಿಜಯ್‌ ರಾಘವೇಂದ್ರ ಅವರು ಫಸ್ಟ್‌ ಟೈಮ್‌ ತುಳು ಭಾಷೆಯಲ್ಲಿ ಅವರು ಸಂದರ್ಶನ ನೀಡಿದ್ದಾರೆ. ಇವರ ಪತ್ನಿ ಸ್ಪಂದನಾ ಮಂಗಳೂರಿನವರು. ಒಂದೇ ವರ್ಷದಲ್ಲಿ ತುಳು ಭಾಷೆ ಕಲಿತ ವಿಜಯ್‌ ರಾಘವೇಂದ್ರ ಈಗ ತುಳುವಿನಲ್ಲೇ ಪತ್ನಿ ಬಗ್ಗೆಯೇ ಸಂದರ್ಶನ ನೀಡಿದ್ದಾರೆ. 

2 Min read
Author : Padmashree Bhat
Published : May 02 2026, 09:19 AM IST
Share this Photo Gallery
  • FB
  • TW
  • Linkdin
  • Whatsapp
17
ಮನೆಯಿಂದ ಹೊರಡುವಾಗ, ಪ್ರತಿದಿನ ಅಪ್ಪಿಕೊಂಡು ಕಿಸ್‌ ಕೊಡ್ತಿದ್ದೆ
Image Credit : actor vijay raghavendra instagram

ಮನೆಯಿಂದ ಹೊರಡುವಾಗ, ಪ್ರತಿದಿನ ಅಪ್ಪಿಕೊಂಡು ಕಿಸ್‌ ಕೊಡ್ತಿದ್ದೆ

ಪತ್ನಿ ಸ್ಪಂದನಾ ನೆನಪಿನ ಬಗ್ಗೆ ಅವರು ಮಾತನಾಡುತ್ತ, ನಿನ್ನ ಕಣ್ಣಿನಲ್ಲಿ ಏನೋ ಇದೆ ಎಂದು ನಾನು ಯಾವಾಗಲೂ ಅವಳಿಗೆ ರೇಗಿಸುತ್ತಿದ್ದೆ. ಪ್ರತಿದಿನ ನಾನು ಅವಳನ್ನು ಮಿಸ್‌ ಮಾಡಿಕೊಳ್ತಿದ್ದೀನಿ, ನಾನು ಶೂಟಿಂಗ್‌ಗೆ ಹೋದಾಗ ಮೇಕಪ್‌ ಹಾಕಿಕೊಂಡೆ, ತಿಂಡಿ ತಿಂದೆ ಎಂದು ನಾನು ನನ್ನ ಮನಸ್ಸಿನಲ್ಲಿ ಹೇಳಿಕೊಳ್ತೀನಿ. ನಾನು ಹೊರಗಡೆ ಹೋಗುವಾಗ ನಾನು ಪ್ರತಿದಿನ ಅವಳಿಗೆ ಹಗ್‌ ಮಾಡಿ, ಕಿಸ್‌ ಮಾಡಿ ಹೋಗುತ್ತಿದ್ದೆ. ಒಂದಿನ ನಾನು ಇದನ್ನು ಮಿಸ್‌ ಮಾಡಿದೆ. ಆಮೇಲೆ ನಾನು ಎಷ್ಟೇ ಮೆಸೇಜ್‌ ಮಾಡಿದರೂ ಕೂಡ ಅವಳು ಉತ್ತರವೇ ಕೊಡಲಿಲ್ಲ ಎಂದು ಹೇಳಿದ್ದಾರೆ.

27
ನೀವು ಬದಲಾಗಿದ್ದೀರಿ ಎಂದಳು
Image Credit : actor vijay raghavendra instagram

ನೀವು ಬದಲಾಗಿದ್ದೀರಿ ಎಂದಳು

ಏನಾಯಿತು ಎಂದು ತಲೆ ಕೆಡಿಸಿಕೊಂಡೆ, ನೀವು ಬದಲಾಗಿದ್ದೀರಾ ಎಂದು ಅವಳು ಹೇಳಿದಳು. ಇದೆಲ್ಲ ನಾನೇ ಪ್ರೀತಿಯಿಂದ ರೂಢಿ ಮಾಡಿದ್ದು ಎಂದು ಅಂದುಕೊಂಡೆ, ನಾನು ಅವಳ ಜೊತೆ ಹಾಗೆ ಇದ್ದೆ. ಈಗ ನನ್ನ ಸಹೋದರಿಗೆ ಆಗಲೀ, ಬೇರೆ ಯಾರಿಗೇ ಆಗಲಿ ಎಲ್ಲಿ ಹೋದೆ ಎಂದು ಹೇಳೋದಿಲ್ಲ. ಅವಳು ಇಲ್ಲೇ ಇದ್ದಾಳೆ ಎಂದು ನಂಬಿದ್ದೇನೆ, ಅವಳಿಗೆ ಅಪ್‌ಡೇಟ್‌ ಮಾಡುತ್ತಿರುತ್ತೇನೆ ಎಂದಿದ್ದಾರೆ.

Related Articles

Related image1
ಪತ್ನಿ ಸ್ಪಂದನಾಗೆ ಮುತ್ತಿಡುವ ಸುಂದರ ಫೋಟೋ ಹಾಕಿ ಕಣ್ಣಂಚಲ್ಲಿ ನೀರು ತರಿಸಿದ ವಿಜಯ್‌ ರಾಘವೇಂದ್ರ
Related image2
ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ!
37
ಪೋಸ್ಟ್‌ ಹಾಕಿಲ್ಲ ಅಂದ್ರೆ ಜನರು ಕೇಳ್ತಾರೆ
Image Credit : actor vijay raghavendra instagram

ಪೋಸ್ಟ್‌ ಹಾಕಿಲ್ಲ ಅಂದ್ರೆ ಜನರು ಕೇಳ್ತಾರೆ

ನಾನು ಸುಸ್ತು ಅಂತ ಮನೆಯಲ್ಲಿದ್ದರೆ, ಅವಳು, ನನಗೆ ನೀವು ರಜನಿಕಾಂತ್?‌ ಹೋಗಿ ಶೂಟಿಂಗ್‌ ಮಾಡಿ ಬನ್ನಿ, ನೀವು ಮನೆ ಕಟ್ಟೋಕೆ ಹೋಗಿದ್ದರಾ? ಹೋಗಿ, ಜಿಮ್‌ಗೆ ಹೋಗಿ ಎಂದು ಹೇಳುತ್ತಿದ್ದಳು. ನಾವು ಆರು ತಿಂಗಳಿಗೊಮ್ಮೆ ನಾನಾಗಲೀ, ನನ್ನ ಮಗನಾಗಲೀ ಸೋಶಿಯಲ್‌ ಮೀಡಿಯಾದಲ್ಲಿ ಅವಳ ಬಗ್ಗೆ ಪೋಸ್ಟ್‌ ಹಾಕುತ್ತಿರುತ್ತೇವೆ, ನಾನು ಪೋಸ್ಟ್‌ ಹಾಕಿಲ್ಲ ಅಂದ್ರೆ ಜನರು ಕೂಡ ಯಾಕೆ ಸ್ಪಂದನಾ ಬಗ್ಗೆ ಹಾಕಿಲ್ಲ ಅಂದ್ರೆ ಪೋಸ್ಟ್‌ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

47
ನನ್ನ ಕುಟುಂಬಸ್ಥರಿಗೆ ನನ್ನ ಪತ್ನಿ ತಾಯಿ ಇದ್ದಂತೆ
Image Credit : actor vijay raghavendra instagram

ನನ್ನ ಕುಟುಂಬಸ್ಥರಿಗೆ ನನ್ನ ಪತ್ನಿ ತಾಯಿ ಇದ್ದಂತೆ

ಕೊರೊನಾ ಟೈಮ್‌ನಲ್ಲಿ ಅನೇಕರಿಗೆ ಬೆಡ್‌, ಆಕ್ಸಿಜನ್‌ ವ್ಯವಸ್ಥೆ ಮಾಡಲು ಸ್ಪಂದನಾ ಸಾಕಷ್ಟು ಸಹಾಯ ಮಾಡಿದ್ದಾರೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಸ್ಪಂದನಾ ಅಂತೂ ಸಿಕ್ಕಾಪಟ್ಟೆ ಕೇರ್‌ ಮಾಡಿದಳು. ನನ್ನ ಸಹೋದರಿ, ನನ್ನ ತಾಯಿ, ನನ್ನ ಪತ್ನಿಯನ್ನು ತಾಯಿ ಎಂದು ಭಾವಿಸುತ್ತಾರೆ ಎಂದರೆ ನಾನೆಷ್ಟು ಅದೃಷ್ಟವಂತ ಎಂದು ನಂಬಿ. ನಾನು ಸ್ಪಂದನಾ ಜೊತೆಗೆ 16 ವರ್ಷ ಕಳೆದಿದ್ದೇನೆ, ಅದು ತುಂಬ ಖುಷಿಯಾದ ವಿಷಯ ಎಂದು ವಿಜಯ್‌ ರಾಘವೇಂದ್ರ ಹೇಳಿದ್ದಾರೆ.

57
ನಾಲ್ಕು ಬೆಡ್‌ ರೂಮ್‌ ಮನೆ ಪ್ಲ್ಯಾನ್‌ ಆಗಿತ್ತು
Image Credit : actor vijay raghavendra instagram

ನಾಲ್ಕು ಬೆಡ್‌ ರೂಮ್‌ ಮನೆ ಪ್ಲ್ಯಾನ್‌ ಆಗಿತ್ತು

ಜೀವನವನ್ನು ನಾವು ಪ್ರಶ್ನೆ ಮಾಡಬಾರದು, ಏನಾಗುತ್ತಿದೆಯೋ ಅದನ್ನು ನಾವು ಸ್ವೀಕರಿಸಬೇಕು. ನಾನು ಜೀವನದಲ್ಲಿ ಹೀಗೆ ಮಾಡ್ತೀವಿ ಎಂದುಕೊಂಡೆ, ಜೀವನ ಮಾತ್ರ ಯೂಟರ್ನ್‌ ತಗೊಳ್ಳೋ ಹಾಗೆ ಮಾಡುತ್ತದೆ. 2023 ರಲ್ಲಿ ಸ್ಪಂದನಾ ಮುಂದಿನ ಆರು ತಿಂಗಳಗಳ ಕಾಲ ಪ್ಲ್ಯಾನ್‌ ಮಾಡಿದ್ದಳು. ನಮ್ಮ ಬಳಿ ಇರುವ ಹಣದಲ್ಲಿ ನಾಲ್ಕು ಬೆಡ್‌ ರೂಮ್‌ ಮನೆ ಮಾಡಲು ಪ್ಲ್ಯಾನ್‌ ಮಾಡಿದ್ದಳು. ನಮ್ಮ ಮನೆಗೆ ಎಲ್ಲರೂ ಬರಬೇಕು ಎಂದು ಅವಳು ಬಯಸುತ್ತಿದ್ದಳು. ಮಲ್ಲೇಶ್ವರಂಗೂ, ನಮ್ಮ ಜಕ್ಕೂರಿನ ಮನೆಗೂ ತುಂಬ ದೂರ.

67
ಆ ಮನೆಯನ್ನು ಕೊಟ್ಟೆ
Image Credit : actor vijay raghavendra instagram

ಆ ಮನೆಯನ್ನು ಕೊಟ್ಟೆ

ಮನೆ ಕೆಲಸ ನಡೆಯುತ್ತಿದ್ದರೂ ಕೂಡ ನಾನು ಆ ಮನೆಯನ್ನು ಕೊಟ್ಟೆ. ಈಗ ಮಲ್ಲೇಶ್ವರಂಗೆ ಹತ್ತಿರ ಆಗುವ ಹಾಗೆ ನಾನು ಬೇರೆ ಏರಿಯಾಗೆ ಶೇರ್‌ ಮಾಡಿದೆ. ನನ್ನ ಮಗ ನನ್ನ ಮುಂದೆ ಅಳೋದಿಲ್ಲ. ಸ್ಪಂದನಾ ಇಲ್ಲ ಎಂಬ ವಿಷಯ ಗೊತ್ತಾದಾಗ ಅವನು ನನ್ನ ತೋಳಿನಲ್ಲಿ ಅಪ್ಪಿಕೊಂಡು ಅತ್ತ, ಆಮೇಲೆ ಅತ್ತಿಲ್ಲ. ಪದೇ ಪದೇ ಅವನಿಗೆ ಅಳೋದು ಇಷ್ಟ ಆಗೋದಿಲ್ಲ, ಅವನು ತಾಯಿ ಥರ ಇದ್ದಾನೆ. ನನ್ನ ಪತ್ನಿ ಹೋದಾಗ ಅವನಿಗೆ 15 ವರ್ಷ ವಯಸ್ಸಾಗಿತ್ತು.

77
ಖುಷಿಯಾಗಿರೋದನ್ನು ಕಲಿಯುತ್ತಿದ್ದೇನೆ
Image Credit : Asianet News

ಖುಷಿಯಾಗಿರೋದನ್ನು ಕಲಿಯುತ್ತಿದ್ದೇನೆ

ನನ್ನ ಮದುವೆ ಬಗ್ಗೆ ಆಗಾಗ ಗಾಸಿಪ್‌ ಬರುತ್ತಲೇ ಇರುತ್ತದೆ. ನನಗೆ ಬೇರೆಯವರನ್ನು ಅವಳ ಜಾಗದಲ್ಲಿ ಊಹಿಸಲು ಆಗೋದಿಲ್ಲ. ನಾನು ಖುಷಿಯಾಗಿ ಇರೋದನ್ನು ಕಲಿಯುತ್ತಿದ್ದೇನೆ ಎಂದು ವಿಜಯ್‌ ರಾಘವೇಂದ್ರ ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ವಿಜಯ್ ರಾಘವೇಂದ್ರ
ಸ್ಯಾಂಡಲ್‌ವುಡ್
ಸೆಲೆಬ್ರಿಟಿಗಳು

Latest Videos
Recommended Stories
Recommended image1
Dhananjaya Baby: ತಂದೆ ಆಸೆ ಈಡೇರಿತು; ಸಿಂಹದ ಮರಿಯಂಥ ಮಗು ಪಡೆದ ಡಾಲಿ ಧನಂಜಯ; ಧನ್ಯತಾ ಈಗ ತಾಯಿ!
Recommended image2
ಲೇಬಲ್‌ಗಿಂತ ಕಂಟೆಂಟ್‌ ಮುಖ್ಯ: ಮರೆಯಾಗುತ್ತಿದೆ ಪ್ಯಾನ್‌ ಇಂಡಿಯಾ ಪರಿಕಲ್ಪನೆ
Recommended image3
ಧ್ರುವ ಸರ್ಜಾ ಭರ್ಜರಿ, ಪ್ರೇಮ್ ಮಚ್ಚು ಅದ್ದೂರಿ: ಕೆಡಿ ಕ್ಲೈಮ್ಯಾಕ್ಸ್ ಟ್ವಿಸ್ಟ್ ನೋಡಿದ್ರೆ ಶಾಕ್ ಆಗ್ತೀರಾ!
Related Stories
Recommended image1
ಪತ್ನಿ ಸ್ಪಂದನಾಗೆ ಮುತ್ತಿಡುವ ಸುಂದರ ಫೋಟೋ ಹಾಕಿ ಕಣ್ಣಂಚಲ್ಲಿ ನೀರು ತರಿಸಿದ ವಿಜಯ್‌ ರಾಘವೇಂದ್ರ
Recommended image2
ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved