ಕಳೆದ ಒಂದು ತಿಂಗಳಿಂದಲೂ ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ನು ಹಿಡಿದು ಕೂತಿರೋ ಪವಿತ್ರಾ ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರಂತೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು.? ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲು ಗೋಡೆಗಳ ಮಧ್ಯೆ ಬಿಚ್ಚಿಕೊಳ್ಳುತ್ತಿದೆ ರಹಸ್ಯ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಲಿನಲ್ಲಿ ಬರೆದ ಆತ್ಮಕತೆಗಳು ಸಾಹಿತ್ಯ ಲೋಕದಲ್ಲಿ ಮೈಲುಗಲ್ಲಾಗಿವೆ. ಸೆರೆಮನೆಯಲ್ಲಿ ಬಂಧನದಲ್ಲಿದ್ದಾಗ ತಮ್ಮ ಜೀವನದ ಸತ್ಯಗಳು, ಹೋರಾಟದ ಬದುಕು ಹರಟೆಯಲ್ಲೇ ಕಳೆಯದೇ ಅಕ್ಷರರೂಪ ಪಡೆಯುತ್ತವೆ. ಈಗ ನಟ ದರ್ಶನ್ (Darshan Thoogudeepa) ಮನದಲ್ಲಿ ಸೇರಿಕೊಂಡಿರೋ ಸ್ಮೇಹಿತೆ ಪವಿತ್ರಾ ಗೌಡ (Pavithra Gowda) ಜೈಲಿನಲ್ಲಿ ತನ್ನ ಆತ್ಮಕತೆ ಬರೆಯುತ್ತಿದ್ದಾರಂತೆ. ಅರೆ, ಈ ವಿಷಯ ಕೇಳಿ ಆಶ್ಚರ್ಯ ಆಯ್ತಾ..? ಪವಿತ್ರಾಳ ಆ ಆತ್ಮಕಥೆಯ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ...

ನಟ ದರ್ಶನ್ ಸಿನಿಮಾ ಜಗತ್ತಿನ ಒಂದು ದಂತಕಥೆ.. ದಾಸ ನಡೆದು ಬಂದ ಹಾದಿ. ಸಿಕ್ಕಿರೋ ಕೀರ್ತಿ, ಗೆದ್ದ ಗದ್ದುಗೆ.. ಈಗ ಬಿದ್ದಿರೋ ಸಾಮ್ರಾಜ್ಯ ಇದೆಲ್ಲ ಇವತ್ತು ಇತಿಹಾಸ.. ಮನಸ್ಸು ಮಾಡಿದ್ರೆ ನಟ ದರ್ಶನ್ ತನ್ನದೇ ಆತ್ಮ ಚರಿತ್ರೆಯನ್ನ ಅದ್ಭುತವಾಗಿ ಗೀಚಿ ಬಿಡಬಹುದು.. ಆ ಆತ್ಮಚರಿತ್ರೆ ಹೊರಗೆ ಬಂದ್ರೆ ಬಾಕ್ಸ್‌ ಆಫೀಸ್​​​​ ಕಲೆಕ್ಷನ್​​ಗಿಂತಲೂ ದೊಡ್ಡ ಹಿಟ್ ಆಗೋದ್ರಲ್ಲಿ ನೋ ಡೌಟ್.. ಆದ್ರೆ ಈ ಕೆಲಸಕ್ಕೆ ಈಗ ಕೈ ಹಾಕಿರೋದು ದಚ್ಚು ಆತ್ಮೀಯ ಗೆಳತಿ ಪವಿತ್ರಾ ಗೌಡ...

ದರ್ಶನ್ ಕೈಯಲ್ಲಿ ಪುಸ್ತಕ, ಪವಿತ್ರಾ ಕೈಯಲ್ಲಿ ಪೆನ್ನು..!

ನಟ ದರ್ಶನ್ ಪವಿತ್ರಾ ಗೌಡ ಜೈಲು ಸೇರಿದ್ದು ಜೂನ್​ 11ಕ್ಕೆ. ಈ ಜೋಡಿ ಜೈಲಿನಿಂದ ಹೊರ ಬರೋಕೆ ಏನಿಲ್ಲ ಅಂದ್ರು ಇನ್ನೂ ಒಂದು ವರ್ಷ ಬೇಕೇ ಬೇಕು ಅಂತ ಕಾನೂನು ತಜ್ಞರು ಹೇಳ್ತಾರೆ. ಈ ಜೈಲುವಾಸದಿಂದ ಕುಗ್ಗಿರೋ ದಾಸ ಪುಸ್ತಕ ಹಿಡಿಯುತ್ತಿದ್ದಾರೆ, ಕಾಂದಂಬರಿಗಳನ್ನ ಓದುತ್ತಿದ್ದಾರೆ. ಆದ್ರೆ ದಚ್ಚು ಗೆಳತಿ ಪವಿತ್ರಾ ಮಾತ್ರ ಪೆನ್ನು ಹಿಡಿದಿದ್ದಾರೆ.

ಪರಪ್ಪನ ಅಗ್ರಹಾರ ಜೈಲು ಗೋಡೆಗಳ ಮಧ್ಯೆ ಬಿಚ್ಚಿಕೊಳ್ಳುತ್ತಿದೆ ರಹಸ್ಯ.!

ಆತ್ಮ ಚರಿತ್ರೆ ಬರೆಯಲು ಮುಂದಾಗಿದ್ದಾರಂತೆ ದಾಸನ ಗೆಳತಿ ಪವಿತ್ರಾ..!

ಹೌದು, ಜೈಲು ಅನ್ನೋದು ತಾವು ಮಾಡಿದ ತಪ್ಪನ್ನ ತಿದ್ದೋ ಜಾಗ.. ತಪ್ಪಿಗೆ ಶಿಕ್ಷೆ ಅನುಭವಿಸೋ ಸ್ಥಳ. ಅಷ್ಟೆ ಅಲ್ಲ ಕೆಲವರಿಗೆ ಮನುಷ್ಯನಾಗಿ ಬದಲಾಗೋಕೆ ಇದುವೇ ದೇವಸ್ಥಾನ.. ಇಂತಹ ಜಾಗದಲ್ಲಿ ಅದೆಷ್ಟೋ ಕಥೆಗಳು ಹುದುಗಿವೆ. ಆದ್ರೆ ಈಗ ಅಂತಹ ತನ್ನ ಕತೆಗೆ ದಚ್ಚು ಸ್ನೇಹಿತೆ ಪವಿತ್ರಾ ಗೌಡ ಅಕ್ಷರ ರೂಪ ಕೊಡುತ್ತಿದ್ದಾರಂತೆ. ಅಂದ್ರೆ 24 ಗಂಟೆಯೂ ಜೈಲಿನ್ಲಲೇ ಇರೋ ಪವಿತ್ರಾ ತನ್ನ ಜೀವನದಲ್ಲಾದ ಎಲ್ಲಾ ಘಟನೆಗಳನ್ನ ಸೇರಿಸಿ ಆತ್ಮ ಚರಿತ್ರೆಯನ್ನ ಬರೆಯುತ್ತಿದ್ದಾರೆ ಅಂತ ಹೇಳಲಾಗ್ತಿದೆ.

ಆತ್ಮ ಚರಿತ್ರೆಗೆ ಪವಿತ್ರಾ ಗೌಡ ಇಟ್ಟ ಹೆಸರು ಏನು ಗೊತ್ತಾ..?

ನಾಲ್ಕು ಗೋಡೆ ಮಧ್ಯೆ ಕುಳಿತು ಆತ್ಮಚರಿತ್ರೆ ಬರೆಯುತ್ತಿರೋ ಪವಿತ್ರಾ ಗೌಡ, ತಮ್ಮ ಅಕ್ಕ ಪಕ್ಕ ರಾಶಿ ರಾಶಿ ಆತ್ಮ ಚರಿತ್ರೆಯ ಹಾಳೆಗಳನ್ನು ಹರಡಿಕೊಂಡಿದ್ದಾರಂತೆ. ಪವಿತ್ರಾ ಗೌಡ ಜೀವನದ ಕಥೆಯೇ ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕತೆಯಂತಿದೆ. ಹೀಗಾಗಿ ತನ್ನ ಜೀವನದುದ್ದಕ್ಕೂ ಆದ ಎಲ್ಲಾ ಘಟನೆಗಳನ್ನ ಸೇರಿಸಿ ಬರೆಯುತ್ತಿರೋ ಆ ಆತ್ಮಕಥೆಗೆ ‘ಪವಿತ್ರ ದರ್ಶನ’ ಅಂತ ಹೆಸರಿಟ್ಟಿದ್ದಾರಂತೆ..

'ಪವಿತ್ರ ದರ್ಶನ' ಇದು ಸುಬ್ಬಿಯ ರೋಚಕ ಕಥಾನಕ..!

ರೇಣುಕಾಸ್ವಾಮಿ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ

ತಮ್ಮ ಬದುಕಿನ ಇದುವರೆಗಿನ ಏಳು-ಬೀಳುಗಳನ್ನು ಈ ಪವಿತ್ರ ದರ್ಶನ ಪುಸ್ತಕದಲ್ಲಿ ತೆರೆದಿಡುತ್ತಿದ್ದಾರಂತೆ. ದರ್ಶನ್‌ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಬಹುದೇನೋ. ಯಾಕಂದ್ರೆ ದಾಸ ಇಂದು ಜೈಲಲ್ಲಿರೋದಕ್ಕೆ ಕಾರಣವೇ ಪವಿತ್ರಾ ಗೌಡ..

ಪವಿತ್ರ ದರ್ಶನ ಆತ್ಮಕಥೆಯಲ್ಲಿ ಏನಿರುತ್ತೆ..?

ಕಳೆದ ಒಂದು ತಿಂಗಳಿಂದಲೂ ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ನು ಹಿಡಿದು ಕೂತಿರೋ ಪವಿತ್ರಾ ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರಂತೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು.? ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೇ ಪವಿತ್ರಾ ಗೌಡ ಜೈಲಿನ ಕೋಣೆಯಲ್ಲಿ ಕುಳಿತು ಆತ್ಮಚರಿತ್ರೆ ಬರೆಯುವುದರಲ್ಲೇ ಮಗ್ನರಾಗಿದ್ರಂತೆ. ಆದ್ರೆ ಈ ಆತ್ಮಕಥೆ ಕೆಲವು ಚಾಪ್ಟರ್‌ಗಳಲ್ಲಿ ದರ್ಶನ್ ಜೊತೆಗಿನ ಒಡನಾಟ, ಸ್ನೇಹ, ಅತ್ಮೀಯತೆ ಬಗ್ಗೆ ಉಲ್ಲೇಖ ಮಾಡುತ್ತಾರಾ? ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯನ್ನು ಹೇಳಬಹುದಾ? ತಮ್ಮ ಮೇಲಿನ ಆರೋಪಗಳಿಗೆ ಈ ಆತ್ಮಕಥೆಯಲ್ಲಿ ಕ್ಲಾರಿಟಿ ಕೊಡಬಹುದಾ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..