ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ನೆನಪಿನಲ್ಲಿ ಮತ್ತೊಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ಪಂದನಾ ಜೊತೆಗಿನ ಫೋಟೋದಲ್ಲಿ "ಐ ಲವ್ ಯು" ಎಂದು ಬರೆದು, ಕವನದ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ. ಮಗ ಶೌರ್ಯ ಜೊತೆ ಬದುಕು ಮುಂದುವರೆಸುತ್ತಿರುವ ವಿಜಯ್, 'ರುದ್ರಾಭಿಷೇಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸ್ಯಾಂಡಲ್ವುಡ್ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Sandalwood Chinnari Mutta Vijay Raghavendra) ತಮ್ಮ ಪ್ರೀತಿಯ ಮಡದಿ ಸ್ಪಂದನಾ ವಿಜಯ್ (Spandana Vijay) ಜೊತೆಗಿರುವ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಸ್ಪಂದನಾ ಅವರನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯನ್ನು ಮರೆಯಲು ಸಾಧ್ಯವೇ ಇಲ್ಲ. ಸ್ಪಂದನ ಇಲ್ಲದೆ ಮಗನ ಜೊತೆ ಜೀವನ ಮುಂದೂಡ್ತಿರೋ ವಿಜಯ್ ರಾಘವೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಈಗ ಮತ್ತೊಂದು ಪೋಸ್ಟ್ ಹಾಕಿ, ಕವನದ ಮೂಲಕ ಪ್ರೀತಿ ವ್ಯಕ್ತಪಡಿಸಿರುವ ಅವರು, ಬಳಕೆದಾರರನ್ನು ಭಾವುಕಗೊಳಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಜಯ್ ರಾಘವೇಂದ್ರ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಸ್ಪಂದನ ತುಂಬಾ ಸುಂದರವಾಗಿ ಕಾಣ್ತಾರೆ. ಅವರಿಗೆ ವಿಜಯ್ ರಾಘವೇಂದ್ರ ಮುತ್ತಿಡ್ತಿದ್ದಾರೆ. ಫೋಟೋ ಮೇಲೆ ಐ ಲವ್ ಯು ಎಂದು ಬರೆಯಲಾಗಿದೆ. ಫೋಟೋಗೆ ಕವನದ ಶೀರ್ಷಿಕೆ ಹಾಕಿದ್ದಾರೆ ವಿಜಯ್ ರಾಘವೇಂದ್ರ. ಸಮಯ ಜಾರಿದರೂ ನೆನಪು ನಿಲ್ಲದು, ನೆನಪು ನಗಿಸಿದರೂ ನೋವು ಮಾಸದು, ನಿನ್ನ ನಗುವಿನ ಬೆಳಕು ಎಂದೂ ಆರದು. because it’s ONLY YOU Chinna ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋ ಹಾಗೂ ಕವನ ನೋಡಿದ ಫ್ಯಾನ್ಸ್ ಮತ್ತೆ ಭಾವುಕರಾಗಿದ್ದಾರೆ. ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜೊತೆಗಿರುವ ಜೀವ ಎಂದಿಗೂ ಜೀವಂತ, ಎಂದೆಂದೂ ಮರೆಯಲಾಗದ ಜೋಡಿ ನೀವು, ಸ್ಪಂದನ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ, ನಿಮಗೆ ದೇವರು ಶಕ್ತಿ ನೀಡಲಿ ಎಂದು ಫ್ಯಾನ್ಸ್ ವಿಜಯ್ ರಾಘವೇಂದ್ರ ಅವರಿಗೆ ಧೈರ್ಯ ತುಂಬಿದ್ದಾರೆ.
ಅಂದು ಪತ್ನಿಗೆ ಕೈ ಹಿಡಿದು ನಡೆಸಿದ್ದು ಶಿವಣ್ಣ, ಇಂದು ಶಕ್ತಿಯಾಗಿ ನಿಂತಿದ್ದು ಗೀತಕ್ಕ; ಭಾವುಕರಾದ ತಾರಾ- ಶ್ರುತಿ
ಡಿಸೆಂಬರ್ 31, 2024ರಂದು ಸ್ಪಂದನ ಮಗ ಶೌರ್ಯ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಿರುವ ಒಂದು ಫೋಟೋ ಪೋಸ್ಟ್ ಮಾಡಿ, ಮಗನ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು ವಿಜಯ್ ರಾಘವೇಂದ್ರ. ಸ್ಪಂದನ ಇಹಲೋಕ ತ್ಯಜಿಸಿ ಒಂದುವರೆ ವರ್ಷಗಳೇ ಕಳೆದಿವೆ. 2023ರ ಆಗಸ್ಟ್ ನಲ್ಲಿ ಬ್ಯಾಂಕಾಕ್ ನಲ್ಲಿ ಸ್ಪಂದನ ಕೊನೆಯುಸಿರೆಳೆದಿದ್ದರು. ಸ್ನೇಹಿತೆಯರ ಜೊತೆ ಬ್ಯಾಂಕಾಕ್ ಟ್ರಿಪ್ ಹೋಗಿದ್ದ ಸ್ಪಂದನ ಮತ್ತೆ ಮರಳಿ ಬರಲಿಲ್ಲ. ತಮ್ಮ ಜೀವವೇ ಸ್ಪಂದನಾ ಆಗಿ ಬದುಕ್ತಿದ್ದ ವಿಜಯ್ ರಾಘವೇಂದ್ರ ಈ ದುಃಖವನ್ನು ನುಂಗಿ ಜೀವನ ನಡೆಸ್ತಿದ್ದಾರೆ. ಸ್ಪಂದನಾ, ವಿಜಯ್ ರಾಘವೇಂದ್ರ ಹೃದಯದಲ್ಲಿ, ಮನೆಯಲ್ಲಿ ಸದಾ ಮನೆ ಮಾಡಿದ್ದಾರೆ. ಅವರ ನೆನಪುಗಳೇ ವಿಜಯ್ ರಾಘವೇಂದ್ರ ಅವರಿಗೆ ಶಕ್ತಿಯಾಗಿದೆ. ಸ್ಪಂದನ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸ್ತಿರುತ್ತಾರೆ ವಿಜಯ್ ರಾಘವೇಂದ್ರ.
ಮತ್ತೊಮ್ಮೆ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಬ್ರೇಕಪ್ ಮಾಡ್ಕೊಂಡ 'ಬಿಗ್ ಬಾಸ್ ಕನ್ನಡ'
ಮಗ ಶೌರ್ಯನಿಗೆ ಅಮ್ಮ – ಅಪ್ಪ ಎರಡೂ ಆಗಿ ಬದುಕು ಮುನ್ನಡೆಸುತ್ತಿರುವ ವಿಜಯ್ ರಾಘವೇಂದ್ರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ರುದ್ರಾಭಿಷೇಕ. ಇದ್ರಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ. ತಂದೆ ಹಾಗೂ ಮಗ ಎರಡೂ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಮಿಂಚಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ. ವೀರಗಾಸೆ ಕಲಾವಿದ ಪಾತ್ರಕ್ಕೆ ವಿಜಯ್ ರಾಘವೇಂದ್ರ ಜೀವ ತುಂಬಿದ್ದಾರೆ. ವಿಜಯ್ ರಾಘವೇಂದ್ರ ಅವರಿಗೆ ನಟಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲನಟನಾಗಿ ಸಿನಿಮಾಕ್ಕೆ ಬಂದು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ವಿಜಯ್ ರಾಘವೇಂದ್ರ ನಂತ್ರದ ದಿನಗಳಲ್ಲಿ ಸಿನಿಮಾಗಿಂತ ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಮತ್ತೆ ಸಿನಿಮಾಕ್ಕೆ ವಾಪಸ್ ಆಗಿದ್ದಾರೆ. ಹಿಂದಿನ ವರ್ಷ ಕೇಸ್ ಆಫ್ ಕೊಂಡಾಣ, ಜೋಗ್ 101, ಗ್ರೇ ಗೇಮ್ಸ್, ಜೀನಿಯಸ್ ಮುತ್ತು ಚಿತ್ರಗಳು ತೆರೆಗೆ ಬಂದಿವೆ.
