- Home
- Entertainment
- Sandalwood
- Ramesh Aravind: ಮಧುರ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟು, ಪತ್ನಿಗೆ ಆನಿವರ್ಸರಿ ಶುಭ ಕೋರಿದ ನಟ ರಮೇಶ್ ಅರವಿಂದ್
Ramesh Aravind: ಮಧುರ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟು, ಪತ್ನಿಗೆ ಆನಿವರ್ಸರಿ ಶುಭ ಕೋರಿದ ನಟ ರಮೇಶ್ ಅರವಿಂದ್
Ramesh Aravind: ಕನ್ನಡದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, ಪತ್ನಿಗೆ ಶುಭ ಕೋರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದೆ.

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಮೇಶ್ ಅರವಿಂದ್
ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಮತ್ತು ಅವರ ಪತ್ನಿ ಅರ್ಚನಾ ತಮ್ಮ ದಾಂಪತ್ಯ ಜೀವನದ ಮತ್ತೊಂದು ಸುಂದರ ಮೈಲಿಗಲ್ಲನ್ನು ಸಂಭ್ರಮಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ರಮೇಶ್ ಅರವಿಂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ.
ರಮೇಶ್ ಅರವಿಂದ್ ವಿಶ್
ರಮೇಶ್ ಅರವಿಂದ್ ತಮ್ಮ ಪತ್ನಿಯೊಂದಿಗೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ಜೀವನದ ಏಳು-ಬೀಳುಗಳಲ್ಲೂ ಜೊತೆ ನಿಂತಿರುವ ಸಂಗಾತಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಗೌರವ, ಪ್ರೀತಿ ಮತ್ತು ವಿಶ್ವಾಸವೇ ತಮ್ಮ ದಾಂಪತ್ಯದ ದೊಡ್ಡ ಬಲ ಎಂಬ ಸಂದೇಶವನ್ನು ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಸಿನಿತಾರೆಯರು ಮುದ್ದಾದ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ದಾಂಪತ್ಯ ಜೀವನದ ಬಗ್ಗೆ ರಮೇಶ್ ಹೇಳಿದ್ದೇನು?
ಜುಲೈ 7 ಇಂದು ನಾವು ಹಂಚಿಕೊಂಡ ಜೀವನದ ಮತ್ತೊಂದು ವರ್ಷವನ್ನು ಪ್ರವೇಶಿಸುತ್ತೇವೆ.ಅವಳು ನಿರಂತರವಾಗಿ ಕಾಳಜಿ ವಹಿಸುತ್ತಾಳೆ. ನಮ್ಮ ಜೀವನ ಏರಿಳಿತಗಳ ರೋಲರ್ ಕೋಸ್ಟರ್ ಆಗಿದೆ. ಹೆಚ್ಚಾಗಿ ವಿನೋದ, ಸಂತೋಷ, ನಗುವಿನಿಂದ ಕೂಡಿದ್ದರೆ, ಸ್ವಲ್ಪವೇ ಸ್ವಲ್ಪ ಕಣ್ಣೀರು, ಭಯ ಸಣ್ಣ ನಿರಾಶೆಯೂ ಸೇರಿರುತ್ತವೆ. ಆದರೆ ನಮಗೆ ನಿಜವಾಗಿ ಬೇಕಾಗಿರೋದು ಏನು? ಎನ್ನುವುದಷ್ಟೇ ಮುಖ್ಯ. ಹಾಗಾಗಿ ನಾವು ಬೇಗನೆ ರಿಪೇರಿ, ರಿಚಾರ್ಜ್, ರಿಫ್ರೆಶ್ ಆಗಿ ಮತ್ತೆ ನಗುತ್ತಾ, ಉತ್ತಮ ಸಮಯ ಕಳೆಯುತ್ತೇವೆ. ಎನ್ನುತ್ತಾ ತಮ್ಮ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಪ್ರೇಮಕಥೆ ಹೇಗೆ ಆರಂಭವಾಯಿತು?
ರಮೇಶ್ ಅರವಿಂದ್ ಮತ್ತು ಅರ್ಚನಾ ಅವರದ್ದು ಪ್ರೇಮ ವಿವಾಹ, ಇವರದ್ದು ಇಂಟರ್ ಕಾಲೇಜ್ ಕಾಂಪೀಟೀಶನ್ ಸಮಯದಲ್ಲಿ ಶುರುವಾದ ಪ್ರೇಮ.ಆದರೆ ಕುಟುಂಬದ ಒಪ್ಪಿಗೆಯೊಂದಿಗೆ ನಡೆದಿತ್ತು. ಮದುವೆಯಾದ ಬಳಿಕವೂ ಅರ್ಚನಾ ಸದಾ ರಮೇಶ್ ಅವರ ವೃತ್ತಿಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ, ನಿರ್ದೇಶನ, ಟಿವಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ ರಮೇಶ್ ಅವರ ಹಿಂದೆ ಪತ್ನಿಯ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ವತಃ ರಮೇಶ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
'ನಾನು' ಎನ್ನುವುದಕ್ಕಿಂತ 'ನಾವು' ಮುಖ್ಯ
ಒಂದು ಸಂದರ್ಶನದಲ್ಲಿ ರಮೇಶ್ ಅರವಿಂದ್ ಮತ್ತು ಅರ್ಚನಾ, ಯಶಸ್ವಿ ದಾಂಪತ್ಯದ ರಹಸ್ಯವನ್ನು ಹಂಚಿಕೊಂಡಿದ್ದರು. "ದಾಂಪತ್ಯ ಜೀವನದಲ್ಲಿ 'ನಾನು' ಎನ್ನುವುದಕ್ಕಿಂತ 'ನಾವು' ಎನ್ನುವ ಭಾವನೆಗೆ ಹೆಚ್ಚು ಆದ್ಯತೆ ನೀಡಿದರೆ ಸಂಬಂಧ ಸುಂದರವಾಗಿರುತ್ತದೆ" ಎಂದು ಇಬ್ಬರೂ ಹೇಳಿದ್ದರು. ಇದೇ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಅವರ ದಾಂಪತ್ಯವನ್ನು ಹಲವು ವರ್ಷಗಳಿಂದ ಗಟ್ಟಿಯಾಗಿ ಉಳಿಸಿದೆ.
ರಮೇಶ್ ಅರವಿಂದ್ ಸಿನಿಮಾಗಳು
ರಮೇಶ್ ಅರವಿಂದ್ ಅವರ ಕರಿಯರ್ ಬಗ್ಗೆ ಹೇಳುವುದಾದರೆ, ಸಾಲು ಸಾಲು ಸಿನಿಮಾಗಳಲ್ಲಿ ರಮೇಶ್ ನಟಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ‘ಯುವರ್ ಸಿನ್ಸಿಯರ್ಲಿ ರಾಮ್’ ಹಾಗೂ ಹಾರರ್ ಥ್ರಿಲ್ಲರ್ ಸಿನಿಮಾ ‘ಡೈಜಿ’ಯಲ್ಲಿ ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕರಿಯರ್ ಜೊತೆಗೆ ತಮ್ಮ ಕುಟುಂಬದೊಂದಿಗೂ ಸಹ ರಮೇಶ್ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

