- Home
- Entertainment
- Sandalwood
- Ramesh Aravind: ಬೋರ್ ಹೊಡೆಸದೆ, ಕೊನೇ ತನಕವೂ ನೋಡಿಸಿಕೊಂಡು ಹೋಗೋ ರಮೇಶ್ ಅರವಿಂದ್ TOP MOVIES
Ramesh Aravind: ಬೋರ್ ಹೊಡೆಸದೆ, ಕೊನೇ ತನಕವೂ ನೋಡಿಸಿಕೊಂಡು ಹೋಗೋ ರಮೇಶ್ ಅರವಿಂದ್ TOP MOVIES
‘ಸುಂದರ ಸ್ವಪ್ನಗಳು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಮೇಶ್ ಅರವಿಂದ್‌ಗೆ ಇಂದು ಜನ್ಮದಿನದ ಸಂಭ್ರಮ. 60ನೇ ವಯಸ್ಸಿಗೆ ಕಾಲಿಟ್ಟಿರೋ ರಮೇಶ್ 140 ಸಿನಿಮಾಗಳಲ್ಲಿ ನಟಿಸಿದ್ದು, 10 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಮೋಶನಲ್ ದೃಶ್ಯಗಳಿಗೆ ಜೀವ ತುಂಬುವ ರಮೇಶ್ ಅರವಿಂದ್, ಅದ್ಭುತವಾದ ನಟ

ಶಾಂತಿ ಕ್ರಾಂತಿ ಸಿನಿಮಾ
ಶಾಂತಿ ಕ್ರಾಂತಿ ಸಿನಿಮಾವು 1991ರಲ್ಲಿ ತೆರೆ ಕಂಡ ಸಿನಿಮಾವಿದು. ಟ್ರಾಫಿಕಿಂಗ್ ಮಾಫಿಯಾ ಕುರಿತು ಇಬ್ಬರು ಪೊಲೀಸ್ ಆಫೀಸರ್ಸ್ ಹೊಡೆದಾಡಿಕೊಂಡ ಸಿನಿಮಾವಿದು.
ಪಂಚಮ ವೇದ ಸಿನಿಮಾ
1990ರಲ್ಲಿ ತೆರೆ ಕಂಡ ಸಿನಿಮಾವಿದು. ಪಿಎಚ್ ವಿಶ್ವನಾಥ್, ಸುಧಾರಾಣಿ, ಗೀತಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಆಪ್ತಮಿತ್ರ ಸಿನಿಮಾ
ರಮೇಶ್, ಪ್ರೇಮಾ, ಡಾ ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಸಿನಿಮಾವಿದು. 2004ರಲ್ಲಿ ತೆರೆ ಕಂಡ ಚಿತ್ರವಿದು. ನಾಗವಲ್ಲಿ ದೆವ್ವದ ಕಥೆ ಇಲ್ಲಿದೆ. 2004ರಲ್ಲಿ ತೆರೆ ಕಂಡ ಸಿನಿಮಾವಿದು.
ಪ್ರತ್ಯರ್ಥ ಸಿನಿಮಾ
ಪ್ರತ್ಯರ್ಥ ಸಿನಿಮಾವು 1999ರಲ್ಲಿ ರಿಲೀಸ್ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಿದು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ. ರಘುವರನ್, ಗಿರೀಶ್ ಕಾರ್ನಾಡ್, ಕಿಚ್ಚ ಸುದೀಪ್ ನಟನೆಯ ಸಿನಿಮಾವಿದು. ಇಳಯರಾಜ ಸಂಗೀತ ನಿರ್ದೇಶನದ ಚಿತ್ರವಿದು. Nick Of Time ಸಿನಿಮಾದ ಕಾನ್ಸೆಪ್ಟ್ ಇಲ್ಲಿದೆ.
ನಮ್ಮೂರ ಮಂದಾರ ಹೂವೇ
ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಪ್ರೇಮಾ ನಟನೆಯ ಸೂಪರ್ ಹಿಟ್ ಸಿನಿಮಾವಿದು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ. ಇದು ಕೂಡ ತ್ರಿಕೋನ ಪ್ರೇಮಕಥೆ ಇರುವ ಕಥೆ. 1996ರಲ್ಲಿ ತೆರೆ ಕಂಡ ಚಿತ್ರವಿದು.
ಅಮೆರಿಕ ಅಮೆರಿಕ ಸಿನಿಮಾ
ಅಮೆರಿಕ ಅಮೆರಿಕ ಸಿನಿಮಾವು 1995ರಲ್ಲಿ ರಿಲೀಸ್ ಆಗಿದೆ. ಮೂವರು ಬಾಲ್ಯ ಸ್ನೇಹಿತರ ಕಥೆ ಇಲ್ಲಿದೆ. ಒಟ್ಟಿನಲ್ಲಿ ಇದೊಂದು ತ್ರಿಕೋನ ಪ್ರೇಮಕಥೆ. ಅಮೆರಿಕದಲ್ಲಿ ನಡೆಯುವ ಕಥೆ ಇಲ್ಲಿದೆ. ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ ಸಿನಿಮಾವಿದು. ಅಕ್ಷಯ್ ಆನಂದ್, ಹೇಮಾ ಪ್ರಭಾತ್ ಕೂಡ ನಟಿಸಿದ್ದಾರೆ.
ಅಮೃತ ವರ್ಷಿಣಿ ಧಾರಾವಾಹಿ
ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕುವ ಸಿನಿಮಾವಿದು. ರಮೇಶ್ ಅರವಿಂದ್ ಅವರು ಅದ್ಭುತವಾಗಿ ನಟಿಸಿದ ಸಿನಿಮಾವಿದು. ದಿನೇಶ್ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಶರತ್ ಬಾಬು, ಸುಹಾಸಿನಿ, ರಮೇಶ್ ಅರವಿಂದ್ ಅವರು ನಟಿಸಿದ್ದಾರೆ. 1997ರಲ್ಲಿ ತೆರೆ ಕಂಡ ಸಿನಿಮಾವಿದು. ಸೂಪರ್ ಹಿಟ್ ಚಿತ್ರವಿದು.
ಶಿವಾಜಿ ಸುರತ್ಕಲ್
2020ರಲ್ಲಿ ತೆರೆ ಕಂಡ ಸಿನಿಮಾವಿದು. ಡಿಟೆಕ್ಟಿವ್ ಶಿವಾಜಿ ಸುರತ್ಕಲ್ ಅವರು ರಣಗಿರಿಯಲ್ಲಿ ಕೆಲ ರಹಸ್ಯಗಳನ್ನು ಬೇಧಿಸುವ ಕಥೆ ಇಲ್ಲಿದೆ. ಆ ವೇಳೆ ಅವರಿಗೆ ಒಂದಿಷ್ಟು ಆಂತರಿಕ ಸಮಸ್ಯೆಗಳು ಬಯಲಾಗುತ್ತದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಸಿನಿಮಾವಿದು. ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಪುಷ್ಪಕ ವಿಮಾನ
2017ರಲ್ಲಿ ತೆರೆ ಕಂಡ ಸಿನಿಮಾವಿದು. ತನ್ನಲ್ಲಿ ಸಮಸ್ಯೆ ಇದ್ದರೂ ಕೂಡ, ಮಗಳಿಗೆ ಉತ್ತಮ ತಂದೆ ಆಗುವ ಕಥೆ. ಎಸ್ ರವೀಂದ್ರನಾಥ್ ನಿರ್ದೇಶನದ ಸಿನಿಮಾವಿದು. ರಮೇಶ್ ಅರವಿಂದ್, ಯುವಿನಾ, ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆ.
ರಾಮ ಶ್ಯಾಮ ಭಾಮ
2003ರಲ್ಲಿ ತೆರೆಕಂಡ ಸಿನಿಮಾವಿದು. ಲವ್ ಕಾಮಿಡಿ ಸಿನಿಮಾವಿದು. ರಾಮ ತನ್ನ ಪತ್ನಿ ಜೊತೆಗೆ ಸುಂದರ ಜೀವನವನ್ನು ನಡೆಸುತ್ತಿರುತ್ತಾನೆ. ಆಗ ಪತ್ನಿ ಜೊತೆಗೆ ಹೊಸ ಮನೆ ಖರೀದಿ ಮಾಡಲು ಹೋಗುತ್ತಾನೆ, ಆಗ ಅವನು ಪ್ರಿಯಾ ಎನ್ನುವ ಹುಡುಗಿ ಜೊತೆ ಲವ್‌ನಲ್ಲಿ ಬೀಳುತ್ತಾನೆ. ಗೋವಾ ಟ್ರಿಪ್‌ಗೆ ಹೋದಾಗ ಅವರು ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾವಿದು. ಕಮಲ್ ಹಾಸನ್, ಶ್ರುತಿ, ಊರ್ವಶಿ, ರಮೇಶ್ ಅರವಿಂದ್ ಕೂಡ ನಟಿಸಿದ್ದರು.