MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ': ನಟ ಅವಿನಾಶ್ ಬೆನ್ನಿಗೆ ನಿಂತಿದ್ದ ವಿಷ್ಣುದಾದಾ

'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ': ನಟ ಅವಿನಾಶ್ ಬೆನ್ನಿಗೆ ನಿಂತಿದ್ದ ವಿಷ್ಣುದಾದಾ

How Vishnuvardhan Shaped Actor Avinash's Career: "ವಿಷ್ಣು ಅವರು ನಮ್ಮ ಕುಟುಂಬದ ಆಪ್ತ ಹಿತೈಷಿಯಾಗಿದ್ದರು, ಇಂದಿಗೂ ನಮ್ಮ ಮನೆಯ ದೇವರ ಕೋಣೆಯಲ್ಲಿ ಅವರ ಫೋಟೋ ಇದೆ" ಎಂದು ಅವಿನಾಶ್ ಭಾವುಕರಾಗಿ ಸ್ಮರಿಸಿದ್ದಾರೆ.

2 Min read
Author : Ashwini HR
Published : Oct 14 2026, 12:37 PM IST
Share this Photo Gallery
  • FB
  • TW
  • Linkdin
  • Whatsapp
16
ಭಾವುಕರಾದ ಅವಿನಾಶ್
Image Credit : Social Media

ಭಾವುಕರಾದ ಅವಿನಾಶ್

ಭಾವುಕರಾದ ಅವಿನಾಶ್
ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನ (ಅಮೃತ ಮಹೋತ್ಸವ)ದ ಹಿನ್ನೆಲೆಯಲ್ಲಿ ಖ್ಯಾತ ನಟ ಅವಿನಾಶ್ ಅವರು ವಿಷ್ಣು ಜೊತೆಗಿನ ತಮ್ಮ ದೀರ್ಘಕಾಲದ ಆತ್ಮೀಯ ಬಾಂಧವ್ಯ ಹಾಗೂ ಅವಿಸ್ಮರಣೀಯ ನೆನಪುಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹಂಚಿಕೊಂಡು ಭಾವುಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆರಂಭಿಕ ದಿನಗಳಲ್ಲೇ ಬೆಂಬಲವಾಗಿ ನಿಂತಿದ್ದ ವಿಷ್ಣುದಾದಾ
Image Credit : Asianet News

ಆರಂಭಿಕ ದಿನಗಳಲ್ಲೇ ಬೆಂಬಲವಾಗಿ ನಿಂತಿದ್ದ ವಿಷ್ಣುದಾದಾ

ಆರಂಭಿಕ ದಿನಗಳಲ್ಲೇ ಬೆಂಬಲವಾಗಿ ನಿಂತಿದ್ದ ವಿಷ್ಣುದಾದಾ
ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅವಿನಾಶ್, "ಪಿ. ವಾಸು ಅವರ ನಿರ್ದೇಶನದ 'ದಾದಾ' ನನ್ನ ಆರಂಭಿಕ ಚಿತ್ರಗಳಲ್ಲಿ ಒಂದು. ಬಳಿಕ ಕೆ.ಎಸ್.ಆರ್. ದಾಸ್ ಅವರ ನಿರ್ದೇಶನದ ಚಿತ್ರದಲ್ಲಿ ನನಗೆ ವಿಷ್ಣು ಅವರ ಅಣ್ಣನ ಪ್ರಮುಖ ಪಾತ್ರ ಸಿಕ್ಕಿತು. 'ಇನ್ನೂ ಹೊಸ ಹುಡುಗ, ಅಷ್ಟು ದೊಡ್ಡ ಪಾತ್ರ ಕೊಡಬೇಕಾ?' ಎಂದು ನಿರ್ದೇಶಕರು ಹಿಂಜರಿದಾಗ, 'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ, ಕೊಡ್ರಿ ಆ ರೋಲ್' ಎಂದು ನನ್ನ ಪರ ನಿಂತು ಅವಕಾಶ ಕೊಡಿಸಿದ್ದು ವಿಷ್ಣುವರ್ಧನ್" ಎಂದು ಸ್ಮರಿಸಿದರು.

Related Articles

Related image1
'ಯಾರು ಏನು ಬೇಕಾದರೂ ಮಾತನ್ನಾಡಬಹುದು; ಅಪ್ಪಾಜಿ, ವಿಷ್ಣು ಸರ್ ಸಂಬಂಧವೇ ಬೇರೆ' ಶಿವಣ್ಣ ಹೇಳಿದ್ದೇನು?
Related image2
ಶಿವಣ್ಣಗೆ ವಾಚ್ ಉಡುಗೊರೆ ನೀಡಿ ವಿಷ್ಣು ದಾದಾ ಏನು ಹೇಳಿದ್ದರಂತೆ ಗೊತ್ತಾ? ಸಾಹಸಸಿಂಹನ ನೆನೆದ ಹ್ಯಾಟ್ರಿಕ್ ಹೀರೋ
36
'ಯಜಮಾನ' ಚಿತ್ರದ ಬಳಿಕ ಬೆಳೆದ ಗಾಢ ಸ್ನೇಹ
Image Credit : Asianet News

'ಯಜಮಾನ' ಚಿತ್ರದ ಬಳಿಕ ಬೆಳೆದ ಗಾಢ ಸ್ನೇಹ

'ಯಜಮಾನ' ಚಿತ್ರದ ಬಳಿಕ ಬೆಳೆದ ಗಾಢ ಸ್ನೇಹ 
'ಯಜಮಾನ' ಚಿತ್ರದ ಬಳಿಕ ಇಬ್ಬರ ನಡುವಿನ ಒಡನಾಟ ಇನ್ನಷ್ಟು ಗಾಢವಾಯಿತು. ಒಮ್ಮೆ ಚಿತ್ರೀಕರಣದ ವೇಳೆ ಅವಿನಾಶ್ ಅವರ ಮೈಮೇಲೆ ಗಾಯಗಳಾಗಿದ್ದನ್ನು ಗಮನಿಸಿದ ವಿಷ್ಣುವರ್ಧನ್, "ಜೊತೆಗೊಬ್ಬ ಹುಡುಗನನ್ನು (ಅಸಿಸ್ಟೆಂಟ್) ಇಟ್ಟುಕೋ" ಎಂದು ಗದರಿ ಹೇಳಿದ್ದರು. ಅಂದು ವಿಷ್ಣು ಅವರ ಮಾತಿನಂತೆ ಜೊತೆಗೆ ಕರೆತಂದ ಹುಡುಗ ಇಂದಿಗೂ (25 ವರ್ಷಗಳ ನಂತರವೂ) ತಮ್ಮ ಜೊತೆಯೇ ಇದ್ದಾನೆ ಎಂದು ಅವಿನಾಶ್ ತಿಳಿಸಿದರು.

46
'ಆಪ್ತಮಿತ್ರ' ಚಿತ್ರಕ್ಕೆ ಮುಹೂರ್ತ ಇಟ್ಟಿದ್ದೇ ವಿಷ್ಣು
Image Credit : our own

'ಆಪ್ತಮಿತ್ರ' ಚಿತ್ರಕ್ಕೆ ಮುಹೂರ್ತ ಇಟ್ಟಿದ್ದೇ ವಿಷ್ಣು

'ಆಪ್ತಮಿತ್ರ' ಚಿತ್ರಕ್ಕೆ ಮುಹೂರ್ತ ಇಟ್ಟಿದ್ದೇ ವಿಷ್ಣು
'ಆಪ್ತಮಿತ್ರ' ಚಿತ್ರದಲ್ಲಿ ಮಂತ್ರವಾದಿಯ ಪಾತ್ರವನ್ನು ಅವಿನಾಶ್ ಅವರೇ ಮಾಡಬೇಕೆಂದು ಪಟ್ಟುಹಿಡಿದು ದ್ವಾರಕೀಶ್ ಅವರಿಗೆ ಸೂಚಿಸಿದ್ದು ವಿಷ್ಣುವರ್ಧನ್. ಆರಂಭದಲ್ಲಿ ಆ ಪಾತ್ರ ಮಾಡಲು ಹಿಂಜರಿದಿದ್ದ ಅವಿನಾಶ್ ಅವರಿಗೆ ಧೈರ್ಯ ತುಂಬಿ ಆ ಪಾತ್ರವನ್ನು ಮಾಡಿಸಿದ್ದರು. ಆ ಪಾತ್ರ ಅವಿನಾಶ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು.

56
ಮಾಳವಿಕಾ–ಅವಿನಾಶ್ ಮೇಲಿದ್ದ ಮಗಳಂಥ ವಾತ್ಸಲ್ಯ
Image Credit : Instagram

ಮಾಳವಿಕಾ–ಅವಿನಾಶ್ ಮೇಲಿದ್ದ ಮಗಳಂಥ ವಾತ್ಸಲ್ಯ

ಮಾಳವಿಕಾ–ಅವಿನಾಶ್ ಮೇಲಿದ್ದ ಮಗಳಂಥ ವಾತ್ಸಲ್ಯ
ಅವಿನಾಶ್ ಮದುವೆ ವಿಚಾರದಲ್ಲಿ ವಿಷ್ಣುವರ್ಧನ್ ಸದಾ ಕಾಳಜಿ ವಹಿಸುತ್ತಿದ್ದರು. ನಟಿ ಮಾಳವಿಕಾ ಅವರನ್ನು ಅವಿನಾಶ್ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದಾಗ ತಮಾಷೆಯಾಗಿ ಬೈದು ಸಂಭ್ರಮಿಸಿದ್ದರು. ಮಾಳವಿಕಾ ಅವರನ್ನು ಮಗಳಂತೆ ಪ್ರೀತಿಸುತ್ತಿದ್ದ ವಿಷ್ಣು, ರಾತ್ರಿ ಎಂಟು ಗಂಟೆಗೆ ದಿಢೀರ್ ಮನೆಗೆ ಬಂದು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಮ್ಮ ಕೊನೆಯ ದಿನಗಳವರೆಗೂ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.

66
ಮನೆ ಪೂಜೆ ಹಾಗೂ ಕೊನೆಯ ಭೇಟಿ
Image Credit : Asianet News

ಮನೆ ಪೂಜೆ ಹಾಗೂ ಕೊನೆಯ ಭೇಟಿ

ಮನೆ ಪೂಜೆ ಹಾಗೂ ಕೊನೆಯ ಭೇಟಿ
ಅವಿನಾಶ್ ಅವರ ನೂತನ ಮನೆಗೆ ಭೂಮಿಪೂಜೆ ನೆರವೇರಿಸಿದ್ದೇ ವಿಷ್ಣುವರ್ಧನ್. 'ಆಪ್ತರಕ್ಷಕ' ಚಿತ್ರದ ಕೊನೆಯ ಹಂತದ ಚಿತ್ರೀಕರಣದ ವೇಳೆ, ತೀವ್ರ ಜ್ವರವಿದ್ದರೂ ಲೆಕ್ಕಿಸದೆ ಅವಿನಾಶ್ ಅವರ ಹೊಸ ಮನೆಗೆ ಆಗಮಿಸಿ, ಅರ್ಧ ಗಂಟೆ ಕಾಲ ಕುಳಿತು ಹರಸಿ ಹೋಗಿದ್ದರು.

"ವಿಷ್ಣುವರ್ಧನ್ ಅವರು ಕೇವಲ ಒಬ್ಬ ನಟ ಅಥವಾ ಸ್ಟಾರ್ ಮಾತ್ರ ಆಗಿರಲಿಲ್ಲ, ನಮ್ಮ ಪಾಲಿಗೆ ಅವರು ಕುಟುಂಬದ ಹಿರಿಯ, ಅತ್ಯಂತ ಆಪ್ತ ಸ್ನೇಹಿತ ಹಾಗೂ ನಿಸ್ವಾರ್ಥ ಮಾರ್ಗದರ್ಶಿಯಾಗಿದ್ದರು. ಇಂದಿಗೂ ನಮ್ಮ ಮನೆಯ ದೇವರ ಕೋಣೆಯಲ್ಲಿ ಅವರ ಫೋಟೋ ಇಟ್ಟು ಗೌರವಿಸುತ್ತಿದ್ದೇವೆ," ಎಂದು ನಟ ಅವಿನಾಶ್ ಭಾವುಕರಾಗಿ ನುಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Premada Oorali: 'ಪ್ರೇಮದ ಊರಲಿ' ಮೆಚ್ಚಿ ರಿಯಲ್ ಸ್ಟಾರ್ ನಟ ಉಪೇಂದ್ರ ಹೇಳಿದ್ದು 'ಭಾರೀ ತೂಕದ ಮಾತು!'
Recommended image2
ಕಿಚ್ಚ ಸುದೀಪ್‌ಗೆ ಸವಾಲೆಸೆದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ; ಕ್ಷಮೆಯಾಚಿಸುವಂತೆ ಮಾಜಿ ಸಚಿವ ರಾಜುಗೌಡ ಆಗ್ರಹ!
Recommended image3
Premada Oorali: ಯಾವೆಲ್ಲಾ ಸಿನಿಮಾಗಳನ್ನು ಬೀಟ್ ಮಾಡಿದೆ 'ಪ್ರೇಮದ ಊರಲಿ' ಸಿನಿಮಾ ಗೊತ್ತಾ? ಗಳಿಕೆ ಎಷ್ಟು ಪಟ್ಟು?
Related Stories
Recommended image1
'ಯಾರು ಏನು ಬೇಕಾದರೂ ಮಾತನ್ನಾಡಬಹುದು; ಅಪ್ಪಾಜಿ, ವಿಷ್ಣು ಸರ್ ಸಂಬಂಧವೇ ಬೇರೆ' ಶಿವಣ್ಣ ಹೇಳಿದ್ದೇನು?
Recommended image2
ಶಿವಣ್ಣಗೆ ವಾಚ್ ಉಡುಗೊರೆ ನೀಡಿ ವಿಷ್ಣು ದಾದಾ ಏನು ಹೇಳಿದ್ದರಂತೆ ಗೊತ್ತಾ? ಸಾಹಸಸಿಂಹನ ನೆನೆದ ಹ್ಯಾಟ್ರಿಕ್ ಹೀರೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved