- Home
- Entertainment
- Sandalwood
- ನೀವು ನೋಡಲೇಬೇಕಾದ 5 Underrated ಕನ್ನಡ ಥ್ರಿಲ್ಲರ್ ಸಿನಿಮಾಗಳು… ಶಿವಣ್ಣನ ಸಿನಿಮಾವೂ ಈ ಲಿಸ್ಟಲ್ಲಿದೆ…
ನೀವು ನೋಡಲೇಬೇಕಾದ 5 Underrated ಕನ್ನಡ ಥ್ರಿಲ್ಲರ್ ಸಿನಿಮಾಗಳು… ಶಿವಣ್ಣನ ಸಿನಿಮಾವೂ ಈ ಲಿಸ್ಟಲ್ಲಿದೆ…
Underrated Kannada Thriller Movies: ಥ್ರಿಲ್ಲರ್ ಸಿನಿಮಾಗಳು ಅಂದ್ರೆ ಇಷ್ಟಾನ? ಬೇರೆ ಭಾಷೆಗಳಲ್ಲಿ ಇಂಟ್ರೆಸ್ಟಿಂಗ್ ಥ್ರಿಲ್ಲರ್ ಸಿನಿಮಾಗಳಿವೆ, ಕನ್ನಡದಲ್ಲಿ ಅಂತಹ ಸಿನಿಮಾಗಳೇ ಇಲ್ಲ ಎಂದು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಲೇಖನ ನಿಮಗಾಗಿ. ನೀವು ನೋಡಲೇಬೇಕಾದ ಥ್ರಿಲ್ಲರ್ ಮಿಸ್ಟ್ರಿ ಸಿನಿಮಾಗಳಿವು.

ಕನ್ನಡ ಥ್ರಿಲ್ಲರ್ ಸಿನಿಮಾಗಳು
ಮಲಯಾಲಂ ಭಾಷೆಯಲ್ಲಿ ಎಷ್ಟೊಂದು ಸಖತ್ ಥ್ರಿಲ್ಲರ್ ಸಿನಿಮಾಗಳಿವೆ, ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದು ನೀವು ಹೇಳೊದಾದರೆ, ನೀವು ತಪ್ಪು ತಿಳಿದುಕೊಂಡಿದ್ದೀರಿ. ಕನ್ನಡದಲ್ಲಿ ಅದ್ಭುತವಾದ ಥ್ರಿಲ್ಲರ್, ಮಿಸ್ಟ್ರಿ ಕಥೆಗಳಿವೆ. ಆದರೆ ನೀವು ನೋಡಿಲ್ಲ ಅಷ್ಟೆ. ಇಲ್ಲಿವೆ ನೋಡಿ ನೀವು ನೋಡಲೇಬೇಕಾದ ಅದ್ಭುತವಾದ ಕನ್ನಡ ಥ್ರಿಲ್ಲರ್ ಸಿನಿಮಾಗಳು.
ಬೀರ್ ಬಲ್
ಬೀರ್ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ ಅಥವಾ ಸರಳವಾಗಿ ಬೀರ್ಬಲ್ 2019 ರಲ್ಲಿ ಬುಡುಗಡೆಯಾದ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಇದನ್ನು ಎಂ. ಜಿ. ಶ್ರೀನಿವಾಸ್ ಅವರು ಬರೆದು,ನಿರ್ದೇಶಿಸಿದ್ದಾರೆ., ನಟಿಸಿದ್ದಾರೆ. ಇದು ರುಕ್ಮಿಣಿ ವಸಂತ್ ಅವರ ಮೊದಲ ಸಿನಿಮಾ ಕೂಡ ಹೌದು. ಒಂದು ಮಳೆಗಾಲದ ಮಧ್ಯರಾತ್ರಿ ರಸ್ತೆಯಲ್ಲಿ ಒಬ್ಬ ಕ್ಯಾಬ್ಡ್ರೈವರ್ನ ಕೊಲೆಯಾಗುತ್ತದೆ, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾರ್ಟೆಂಡರ್ ಇದನ್ನು ಪೊಲೀಸರಿಗೆ ತಿಳಿಸುತ್ತಾನೆ. ಆದರೆ ಪೊಲೀಸರು ವಿಷ್ಣುವನ್ನು ಅಪರಾಧಿ ಎಂದು ಬಂಧಿಸಿ, ಅವನಿಗೆ ಜೀವಾವಧಿ ಶಿಕ್ಷೆ ಸಿಗುವಂತೆ ಮಾಡುತ್ತಾರೆ. ಏಳು ವರ್ಷಗಳ ಬಳಿಕ ಯುವ ವಕೀಲ ಮಹೇಶ್ ದಾಸ್ ಪ್ರಕರಣವನ್ನು ರೀಓಪನ್ ಮಾಡಿ, ಅಪರಾಧಿಯ ಪತ್ತೆಗೆ ಹುಡುಕುವುದೇ ಸಿನಿಮಾ ಕಥೆ.
ಸಂಯುಕ್ತ
ಸಂಯುಕ್ತ 1988ರಲ್ಲಿ ಬಿಡುಗಡೆಯಾಗಿ ಥ್ರಿಲ್ಲರ್ ಸಿನಿಮಾ. ಇದನ್ನು ಕೆ.ಎನ್. ಚಂದ್ರಶೇಖರ್ ಶರ್ಮಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಬಾಲರಾಜ್, ಚಿ ಗುರುದತ್ ಮತ್ತು ವೀಣಾ ನಟಿಸಿದ್ದಾರೆ. ಸಾಲಿಗ್ರಾಮದ ಫ್ಯಾಕ್ಟರಿಗೆ ಕೆಲಸಕ್ಕಾಗಿ ಬರುವ ಶಿವು, ಗುರು ಮತ್ತು ಬಾಲು ಎನ್ನುವ ಮೂವರು ಯುವಕರಿಗೆ, ಅಲ್ಲಿನ ಸಂಯುಕ್ತ ಬಂಗಲೆಯಲ್ಲಿ ನಡೆಯುವ ಪ್ಯಾರಾನಾರ್ಮಲ್ ಆಕ್ಟಿವಿಟಿ ಸಮಸ್ಯೆ ತಂದೊಡ್ಡುತ್ತದೆ. ಅದನ್ನು ಭೇದಿಸಿ ಹೊರಟ ಮೂವರಿಗೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕಥೆ.
ತರ್ಕ
'ತರ್ಕ' 1989ರಲ್ಲಿ ರಿಲೀಸ್ ಆಗಿರುವ ಮಿಸ್ಟರಿ-ಥ್ರಿಲ್ಲರ್ ಸಿನಿಮಾವಾಗಿದೆ. ಪ್ರವೀಣ್ ನಿರ್ಮಿಸಿರುವ ಈ ಚಿತ್ರಕ್ಕೆ ಸುನಿಲ್ ಕುಮಾರ್ ದೇಸಾಯಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಂಕರ್ ನಾಗ್, ವನಿತಾ ವಾಸು ಮತ್ತು ದೇವರಾಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡ ಕೈದಿಯೊಬ್ಬ, ತನ್ನ ಬಾಲ್ಯದ ಸ್ನೇಹಿತೆಯ ಮನೆಯಲ್ಲಿ ವ್ಯಕ್ತಿಯೊಬ್ಬನ ಶವವನ್ನು ಕಂಡುಕೊಳ್ಳುವ ಸುತ್ತ ಈ ಚಿತ್ರದ ಕಥೆ ನಡೆಯುತ್ತೆ. ಮುಂದೇನಾಗುತ್ತದೆ ಅನ್ನೋದೆ ರೋಚಕ ತಿರುವು.
ಮರ್ಮ
'ಮರ್ಮ' ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ, 2002ರಲ್ಲಿ ಬಿಡುಗಡೆಯಾದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಪ್ರೇಮಾ ಮತ್ತು ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಸ್ಪ್ಲಿಟ್ ಪರ್ಸನಾಲಿಟಿ ಮತ್ತು post-traumatic stress disorder ಹೊಂದಿರುವ ಒಬ್ಬ ಮಹಿಳೆಯ ಕಥೆಯನ್ನು ಹೊಂದಿದೆ. ಸಿನಿಮಾವು ಆರಂಭದಲ್ಲಿ ಭಯ ಹುಟ್ಟಿಸಿದರೂ, ನಮ್ಮ ಮನಸನೆನ್ ಕಾಡುವಂತಹ ಸಿನಿಮಾ ಇದಾಗಿದೆ.
ಆಕ್ಸಿಡೆಂಟ್
'ಆಕ್ಸಿಡೆಂಟ್' 2008ರಲ್ಲಿ ರಿಲೀಸ್ ಆಗಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ರಮೇಶ್ ಅರವಿಂದ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೊಂದಿಗೆ ರೇಖಾ ವೇದವ್ಯಾಸ್ ಮತ್ತು ಪೂಜಾ ಗಾಂಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಿಲಕ್ ಶೇಖರ್ ಮತ್ತು ಮೋಹನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಪತ್ನಿಯ ಆಕ್ಸಿಡೆಂಟ್, ಅಪಘಾತ ಅಲ್ಲ ಅದೊಂದು ಕೊಲೆ ಎಂಬುದನ್ನು ಪತ್ತೆ ಮಾಡಲು ಹೊರಟ ಗಂಡನ ಕಥೆ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















