ಥ್ರಿಲ್ಲರ್, ಸಸ್ಪೆನ್ಸ್ ಮತ್ತು ಹಾರರ್ ಇಷ್ಟಪಡುವವರಿಗಾಗಿ ಒಟ್ಟು ಹತ್ತು ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈ ಸಿನಿಮಾಗಳು ವೀಕ್ಷಕರಿಗೆ ವಿಪರೀತ ಭಯ ಹುಟ್ಟಿಸುವುದರ ಜೊತೆಗೆ ಶಾಕಿಂಗ್ ಟ್ವಿಸ್ಟ್ ಮತ್ತು ಮನರಂಜನೆಯನ್ನು ಒದಗಿಸುತ್ತವೆ. ಈ ಹಾರರ್ ಸಿನಿಮಾಗಳು ಎಲ್ಲಿ ನೋಡಬಹುದು?
ಕೆಲವರಿಗೆ ಸಿನಿಮಾ ನೋಡೋದಂದ್ರೆ ಒಂದು ರೀತಿ ಕ್ರೇಜ್. ಸಾಮಾನ್ಯ ಕತೆ ಇರುವ ಸಿನಿಮಾಗಳೆಂದರೆ ಇಷ್ಟವಾಗಲ್ಲ. ಅದರಲ್ಲಿ ಥ್ರಿಲ್ಲರ್, ಸಸ್ಪೆನ್ಸ್, ಮಿಸ್ಟರಿ, ಹಾರರ್ ಇದ್ರೆನೇ ಅಂಥರಿಗೆ ಇಷ್ಟ. ನೀವು ಅದೇ ಗುಂಪಿನವರಾಗಿದ್ದರೆ ನಿಮಗಾಗಿ ಇಲ್ಲಿ ಹತ್ತು ಹಾರರ್ ಸಿನಿಮಾಗಳಿವೆ. ಮೃದು ಸ್ವಾಭವದ ಜನರು ಈ ಸಿನಿಮಾ ನೋಡೋಕೆ ಆಗದಷ್ಟು ವಿವರೀತ ಭಯ ಹುಟ್ಟಿಸುತ್ತವೆ. ನಾವು ಸಿನಿಮಾ ನೋಡಲು ಅಲ್ಲಿ ಕುಳಿತಿದ್ದೆವೆ ಎಂಬುದನ್ನೇ ಮರೆತು ಆ ದೃಶ್ಯದ ಭಾಗವೇ ಆಗಿಹೋಗುತ್ತೇವೆ ಶಾಕಿಂಗ್ ಟ್ವಿಸ್ಟ್ ಇರುವ ಈ ಹತ್ತು ಹಾರರ್ ಮೂವಿಗಳು ಇಲ್ಲಿವೆ ನೋಡಿ.
ದಿ ನೈಟ್ಮೇರ್ ಬಿಫೋರ್ ಕ್ರಿಸ್ಮಸ್ (The nightmare before christmas):
ಈ ಸಿನಿಮಾ ನಿಮ್ಮನ್ನು ಒಂದು ವಿಚಿತ್ರ, ನಿಗೂಢ ಜಗತ್ತಿಗೆ ಕರೆದೊಯ್ಯುತ್ತದೆ. ಇಂಥ ಸಿನಿಮಾ ನಿಮಗೆ ಇಷ್ಟವಾಗುವುದಾದರೇ ಖಂಡಿತಾ ಈ ಮೂವಿ ನೋಡಿ. ಇದು 'ಹ್ಯಾಲೋವೀನ್ ಟೌನ್'ನ ರಾಜನ ಕಥೆಯನ್ನು ಹೇಳುತ್ತದೆ. ಪ್ರತಿ ಹ್ಯಾಲೋವೀನ್ ಹಬ್ಬದಂದು ಒಂದೇ ರೀತಿಯಲ್ಲಿ ಜನರನ್ನು ಹೆದರಿಸಿ ಆತ ಬೇಸತ್ತು ಹೋಗಿರುತ್ತಾನೆ.
ಇದಾದ ನಂತರ ಕ್ರಿಸ್ಮಸ್ ಹಬ್ಬದಂದು ಜನರನ್ನು ಬೆದರಿಸಲು ಅವನು ಹೊಸ ರೀತಿ ಯೋಚಿಸುತ್ತಾನೆ. ಇದು ಕುತೂಹಲಕಾರಿಯಾಗಿದೆ, ಏಕೆಂದರೆ ಕ್ರಿಸ್ಮಸ್ ದಿನದಂದು ಇಂತಹ ಘಟನೆ ನಡೆಯಬಹುದು ಎಂದು ಯಾರೂ ನಿರೀಕ್ಷಿಸಿರುವುದಿಲ್ಲ. ನೀವು ಈ ಚಲನಚಿತ್ರವನ್ನು ಜಿಯೋ ಹಾಟ್ಸ್ಟಾರ್ (Jio Hotstar) ನಲ್ಲಿ ವೀಕ್ಷಿಸಬಹುದು.
ಘೋಸ್ಟ್ಬಸ್ಟರ್ಸ್ (Ghostbusters):
ಇದೊಂದು ವೈಜ್ಞಾನಿಕ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಹ್ಯಾಲೋವೀನ್ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ನೋಡಿದ್ರೆ ಹಾರರ್ ಜೊತೆಗೆ ಫುಲ್ ಎಂಟರ್ಟೈನ್ಮೆಂಟ್ ಸಿಗುತ್ತೆ. ಇದರಲ್ಲಿ ಮೂವರು ವಿಜ್ಞಾನಿಗಳು ನ್ಯೂಯಾರ್ಕ್ ನಗರದಲ್ಲಿ ದೆವ್ವಗಳನ್ನು ಪತ್ತೆಹಚ್ಚಲು ಹೋಗ್ತಾರೆ. ಅಲ್ಲಿ ಅವುಗಳನ್ನು ಪತ್ತೆ ಹಚ್ಚಿ ಸೆರೆಹಿಡಿಯುಲು ಮುಂದಾಗ್ತಾರೆ. ಆದರೆ ಈ ನಿರ್ಧಾರವು ಅವರಿಗೆ ಸಾಕಷ್ಟು ಕಷ್ಟಕರವಾಗಿ ಪರಿಣಮಿಸುತ್ತದೆ. ಅವರು ಅನೇಕ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನೀವು ಈ ಚಲನಚಿತ್ರವನ್ನು 'ಹುಲು' (Hulu) ಅಥವಾ 'ಆಪಲ್ ಟಿವಿ' (Apple TV) ಪ್ಲಾಟ್ಫಾರ್ಮ್ಗಳಲ್ಲಿ ವೀಕ್ಷಿಸಬಹುದು.
ಎಡ್ವರ್ಡ್ ಸಿಸರ್ಹ್ಯಾಂಡ್ಸ್ (Edward Scissorhands):
ಈ ಚಲನಚಿತ್ರದ ಕಥೆ ಸಾಮಾನ್ಯ ಚಿತ್ರಗಳಿಗಿಂತ ಭಿನ್ನವಾಗಿದೆ. ಇದರಲ್ಲಿ, ಒಬ್ಬ ರೀಸರ್ಚರ್ ಮನುಷ್ಯನಂತೆಯೇ ಇರುವ ಕೃತಕ ರೋಬೋಟ್ ಒಂದನ್ನು ಸೃಷ್ಟಿಸುತ್ತಾನೆ. ಆದರೆ, ಆ ರೋಬೋಟ್ಗೆ ಕೈಗಳನ್ನು ಜೋಡಿಸಿ ಪೂರ್ಣಗೊಳಿಸುವ ಮೊದಲೇ ಅವನು ಸತ್ತು ಹೋಗ್ತಾನೆ. ಹೀಗಾಗಿ ಕೈಗಳ ಬದಲಿಗೆ ಆ ರೋಬೋಟ್ಗೆ ಕೇವಲ ಕತ್ತರಿಗಳು ಮಾತ್ರ ಉಳಿದುಕೊಳ್ಳುತ್ತವೆ. ಮುಂದೆ ಏನಾಗುತ್ತದೆ ಎಂಬುದೇ ಈ ಕಥೆಯ ಟ್ವಿಸ್ಟ್. ಇದೊಂದು ರೋಮ್ಯಾಂಟಿಕ್ ಫ್ಯಾಂಟಸಿ ಮೂವಿ. ನೀವು ಇದನ್ನು ಗೂಗಲ್ ಪ್ಲೇ ಮೂವೀಸ್ (Google Play Movies), ಆಪಲ್ ಐಟ್ಯೂನ್ಸ್ (Apple iTunes) ಅಥವಾ ಯೂಟ್ಯೂಬ್ (YouTube) ನಲ್ಲಿ ವೀಕ್ಷಿಸಬಹುದು.
ಫ್ರಾಂಕೆನ್ವೀನಿ (Frankenweenie):
ಈ ಕಥೆಯು ಒಂದು ವೈಜ್ಞಾನಿಕ ಪ್ರಯೋಗದಿಂದ ಪ್ರೇರಿತವಾಗಿ ನಿರ್ಮಿಸಲಾಗಿದೆ. ವಿಜ್ಞಾನಿಯೊಬ್ಬರು ತಮ್ಮ ಮೃತ ಸಾಕುಪ್ರಾಣಿಯನ್ನು ಮತ್ತೆ ಜೀವಂತಗೊಳಿಸುವ ಮಾರ್ಗವೊಂದನ್ನು ಕಂಡುಕೊಳ್ಳುತ್ತಾರೆ. ಆ ವಿಷಯವನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಾರೆ. ಆದರೆ ಇತರ ವಿದ್ಯಾರ್ಥಿಗಳು ಕೂಡ ಇದೇ ರೀತಿಯ ಆವಿಷ್ಕಾರಗಳನ್ನು ಮಾಡಲು ಪ್ರಾರಂಭಿಸಿದಾಗ ಕಥೆಯು ಒಂದು ಕುತೂಹಲಕಾರಿ ತಿರುವನ್ನು ಪಡೆಯುತ್ತದೆ. ನೀವು ಈ ಚಲನಚಿತ್ರವನ್ನು ಯೂಟ್ಯೂಬ್ ಮೂವೀಸ್ (YouTube Movies) ಮತ್ತು ಗೂಗಲ್ ಪ್ಲೇ ಮೂವೀಸ್ (Google Play Movies) ನಲ್ಲಿ ವೀಕ್ಷಿಸಬಹುದು.
'ಬೀಟಲ್ಜ್ಯೂಸ್' (Beetlejuice):
ಇದು ಮೃತ ದಂಪತಿಗಳ ಕಥೆ. ತಮ್ಮ ಮನೆಗೆ ಹೊಸ ಕುಟುಂಬವೊಂದು ಬರುತ್ತದೆ. ಈ ಚಲನಚಿತ್ರವು ಎಷ್ಟು ಜನಪ್ರಿಯವಾಯಿತೆಂದರೆ, ದಶಕಗಳ ನಂತರ ಅಂದರೆ 2024ರಲ್ಲಿ ಇದರ ಮುಂದುವರಿದ ಭಾಗ (sequel) ಬಿಡುಗಡೆಯಾಯಿತು. ಈ ಚಿತ್ರವು ಆಪಲ್ ಟಿವಿ (Apple TV) ಮತ್ತು ಪ್ರೈಮ್ ವಿಡಿಯೋ (Prime Video)ಗಳಲ್ಲಿ ಲಭ್ಯವಿದೆ.
ಮಪೆಟ್ಸ್ ಹಾಂಟೆಡ್ ಮ್ಯಾನ್ಷನ್ (Muppets Haunted Mansion) ನಲ್ಲಿ ಗೊಂಜೊ ಎಂಬ ಪಾತ್ರಧಾರಿ ಇದ್ದಾನೆ, ಅವನು ತನ್ನನ್ನು ತಾನು ಬಹಳ ಧೈರ್ಯಶಾಲಿ ಎಂದು ಭಾವಿಸುತ್ತಾನೆ. ಆದರೆ, ದೆವ್ವಗಳಿರುವ ಮನೆಯೊಂದರಲ್ಲಿ ಒಂದು ರಾತ್ರಿ ಕಳೆಯುವ ಸವಾಲು ಎದುರಾದಾಗ, ಅವನ ಆತ್ಮವಿಶ್ವಾಸ ಸಂಪೂರ್ಣವಾಗಿ ಮಾಯವಾಗುತ್ತದೆ. ಈ ಕಥೆಯು ಭಯಾನಕವಾಗಿದ್ದಷ್ಟೇ ತಮಾಷೆಯಾಗಿಯೂ ಇದೆ. ನೀವು ಈ ಹಾರರ್-ಮ್ಯೂಸಿಕಲ್ ಕಾಮಿಡಿಯನ್ನು 'ಹುಲು' (Hulu) ನಲ್ಲಿ ವೀಕ್ಷಿಸಬಹುದು.
ಮಾನ್ಸ್ಟರ್ ಹೌಸ್ (Monster House): ಇದೊಂದು ಅನಿಮೇಟೆಡ್ ಹಾರರ್-ಕಾಮಿಡಿ (ಭಯಾನಕ-ಹಾಸ್ಯಮಯ) ಚಲನಚಿತ್ರವಾಗಿದ್ದು, ಇದನ್ನು ನೀವು ಆಪಲ್ ಟಿವಿ (Apple TV) ಅಥವಾ ಪ್ರೈಮ್ ವಿಡಿಯೋ (Prime Video) ನಲ್ಲಿ ವೀಕ್ಷಿಸಬಹುದು. ತನ್ನ ಮನೆಯ ಎದುರಿರುವ ಕಟ್ಟಡದಲ್ಲಿ ಏನೋ ವಿಚಿತ್ರವಾದದ್ದು ನಡೆಯುತ್ತಿದೆ ಎಂಬುದನ್ನು ಕಂಡುಹಿಡಿಯಲು ಹೊರಡುವ ಹುಡುಗನೊಬ್ಬನ ಕಥೆ ಇದಾಗಿದೆ. ಆ ಮನೆಯು ಒಂದು ಜೀವಂತ ಪ್ರಾಣಿಯಂತೆ ವರ್ತಿಸುತ್ತದೆ. ಹ್ಯಾಲೋವೀನ್ ಹಬ್ಬದಂದು ಮಕ್ಕಳು ಮನೆ ಮನೆಗೆ ಹೋಗಿ ಸಿಹಿತಿಂಡಿಗಳನ್ನು ಕಲೆಕ್ಟ್ ಮಾಡ್ತಾರೆ. ಅಂತಹ ಸಂದರ್ಭದಲ್ಲಿ ಅವರು ನಿಗೂಢವಾಗಿರುವ ಮನೆಗೆ ಹೋದಾಗ ಏನಾಗುತ್ತದೆ ಎಂಬುದನ್ನು ನೋಡುವುದು ಬಹಳ ಕುತೂಹಲ, ಭಯ ಹುಟ್ಟಿಸುತ್ತದೆ.
'ದಿ ಆಡಮ್ಸ್ ಫ್ಯಾಮಿಲಿ' (The Addams Family): ನಿಮಗೆ ಡಾರ್ಕ್ ಕಾಮಿಡಿ (ಕರಾಳ ಹಾಸ್ಯ) ಮತ್ತು ನಿಗೂಢ ಕಥೆಗಳು ಇಷ್ಟವಾಗುವುದಾದರೆ ಪ್ರೈಮ್ ವಿಡಿಯೋ (Prime Video) ಮತ್ತು ಪ್ಯಾರಾಮೌಂಟ್ (Paramount) ನಲ್ಲಿ ಲಭ್ಯವಿರುವ ಈ ಚಲನಚಿತ್ರವು ನಿಮಗೊಂದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಕರಾಳ ಹಾಗೂ ಭಯಾನಕ ಜಗತ್ತಿಗೆ ಕರೆದೊಯ್ಯುವ ಸಿನಿಮಾ. ಇದು ಒಂದು ಕುಟುಂಬದ ಕಥೆಯನ್ನು ಹೇಳುತ್ತದೆ. ಅವರ ವಿಚಿತ್ರ ನಡವಳಿಕೆ ಮತ್ತು ಜೀವನಶೈಲಿಯು ಇತರರನ್ನು ಬೆಚ್ಚಿಬೀಳಿಸುವಂತಿರುತ್ತದೆ. ಕುಟುಂಬದ ಮೃತ ಸದಸ್ಯನೊಬ್ಬನಂತೆ ನಟಿಸುತ್ತಾ ವ್ಯಕ್ತಿಯೊಬ್ಬ ಅಲ್ಲಿಗೆ ಬರುತ್ತಾನೆ, ಆದರೆ ಆ ಕುಟುಂಬದ ಸದಸ್ಯೆಯೊಬ್ಬಳಿಗೆ ಆತ ಕೇವಲ ಕುಟುಂಬದ ಆಸ್ತಿಯನ್ನು ದೋಚುವ ಉದ್ದೇಶದಿಂದ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬರುತ್ತದೆ. ಈ ನಿಗೂಢ ಕಥೆಯು ನಿಮ್ಮನ್ನು ಹೆಚ್ಚು ಇಷ್ಟವಾಗಬಹುದು.
'ಹಾಂಟೆಡ್ ಮ್ಯಾನ್ಷನ್' (Haunted Mansion): ಹೆಸರೇ ಸೂಚಿಸುವಂತೆ, ಇದು ದೆವ್ವಗಳು ನೆಲೆಸಿರುವ ಒಂದು ಬಂಗಲೆಯ ಕಥೆ. ಈ ವಿಷಯ ತಿಳಿಯದ ತಾಯಿ ಮತ್ತು ಮಗ ಅಲ್ಲಿಗೆ ಬಂದು ನೆಲೆಸುತ್ತಾರೆ, ಆದರೆ ಆ ಮನೆಯಲ್ಲಿ ಹಲವಾರು ದೆವ್ವಗಳಿರುವುದನ್ನು ಕಂಡು ಅವರು ಕಂಗಾಲಾಗುತ್ತಾರೆ. ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಸಹಾಯಕ್ಕಾಗಿ ಬೇರೆ ಬೇರೆ ವ್ಯಕ್ತಿಗಳನ್ನು ಸಂಪರ್ಕಿಸುತ್ತಾರೆ. ಇದೇ ವೇಳೆ ಹೊರಬರುವ ಸತ್ಯಾಂಶವು ಸಂಪೂರ್ಣವಾಗಿ ಊಹಿಸಲಾಸಾಧ್ಯ ತಿರುವು ಪಡೆದು ಶಾಕ್ ಆಗುವಂತೆ ಮಾಡುತ್ತೆ. ಈ ಅಲೌಕಿಕ ಹಾಸ್ಯಮಯ ಚಲನಚಿತ್ರವನ್ನು ನೀವು 'ಪ್ರೈಮ್ ವಿಡಿಯೋ' (Prime Video) ನಲ್ಲಿ ವೀಕ್ಷಿಸಬಹುದು.
ಕ್ಯಾಸ್ಪರ್ (Casper): ಇದೊಂದು ಕೌಟುಂಬಿಕ ಫ್ಯಾಂಟಸಿ ಚಲನಚಿತ್ರ. ಕ್ಯಾಸ್ಪರ್ ಎಂಬುದು ಹಳೆಯ ಬಂಗಲೆಯೊಂದರಲ್ಲಿ ವಾಸಿಸುವ, ಮುದ್ದಾದ ದೆವ್ವ. ಇತರ ದೆವ್ವಗಳಂತೆ ಜನರನ್ನು ಹೆದರಿಸುವ ಬದಲು, ಕ್ಯಾಸ್ಪರ್ ಎಲ್ಲರೊಂದಿಗೆ ಸ್ನೇಹ ಬೆಳೆಸಲು ಬಯಸುತ್ತಾನೆ. ಆದರೆ, ಅವನ ಮೂವರು ತುಂಟ ದೆವ್ವ ಮಾವಂದಿರು ಅವನಿಗೆ ಹಾಗೆ ಮಾಡಲು ಬಿಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವೈದ್ಯರು ತಮ್ಮ ಮಗಳೊಂದಿಗೆ ಆ ಬಂಗಲೆಗೆ ಬಂದಾಗ, ಕ್ಯಾಸ್ಪರ್ ಆ ಹುಡುಗಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಕಥೆ ಮುಂದುವರೆದಂತೆ, ಕ್ಯಾಸ್ಪರ್ನ ಭೂತಕಾಲದ ಬಗ್ಗೆ ನಮಗೆ ತಿಳಿಯುತ್ತದೆ. ಈ ಚಲನಚಿತ್ರವನ್ನು ನೀವು 'ಹುಲು' (Hulu) ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಬಹುದು.


