- Home
- Entertainment
- Sandalwood
- ಗೆಳೆಯನ ಹೆಂಡ್ತಿ ಮೇಲೆ ಕಣ್ಣಾಕಿದ ಹುಚ್ಚು ಪ್ರೇಮಿಯ ಸಿನಿಮಾ ನೋಡಿ ಕಣ್ಣೀರಿಟ್ಟ ವೀಕ್ಷಕರು!
ಗೆಳೆಯನ ಹೆಂಡ್ತಿ ಮೇಲೆ ಕಣ್ಣಾಕಿದ ಹುಚ್ಚು ಪ್ರೇಮಿಯ ಸಿನಿಮಾ ನೋಡಿ ಕಣ್ಣೀರಿಟ್ಟ ವೀಕ್ಷಕರು!
Kannada Musical Hit Movie: ಆಪ್ತ ಗೆಳೆಯನ ಹೆಂಡತಿ ಮೇಲೆ ಆಸೆ ಪಟ್ಟ ಯುವಕನ ಕಥೆ. ಗೆಳೆಯನ ಸಾವಿನ ರಹಸ್ಯ ಬಯಲಾಗುತ್ತಾ? ವೀಣಾ ತೆಗೆದುಕೊಳ್ಳುವ ನಿರ್ಧಾರವೇನು?

ತ್ರಿಕೋನ ಪ್ರೇಮಕಥೆಯ ಸಿನಿಮಾಗಳು ಬಹುತೇಕ ಯಶಸ್ಸು ಆಗುತ್ತೆ ಎಂಬ ಮಾತುಗಳು ಸಿನಿಮಾ ವಲಯದಲ್ಲಿವೆ. ಆಪ್ತ ಗೆಳೆಯನ ಹೆಂಡತಿ ಮೇಲೆ ಕಣ್ಣಾಕಿದ ಯುವಕನ ಕಥೆಯನ್ನು ಹೊಂದಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಾ ಒಂದಾಗಿದೆ.
1997ರಲ್ಲಿ ಬಿಡುಗಡೆಯಾದ ಅಮೃತವರ್ಷಿಣಿ ಸಿನಿಮಾದಲ್ಲಿ ರಮೇಶ್ ಅರವಿಂದ್, ಶರತ್ ಬಾಬು, ಸುಹಾಸಿನಿ ಮತ್ತು ನಿವೇದಿತಾ ಜೈನ್ ನಟಿಸಿದ್ದರು. ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರು, ಕೊನೆಗೆ ಆತನ ಮೇಲೆ ಪ್ರೇಕ್ಷಕರಿಗೆ ಕನಿಕರ ಉಂಟಾಗುತ್ತದೆ. ಚಿತ್ರದ ಪ್ರತಿಯೊಂದು ಪಾತ್ರಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ.
ಚಿತ್ರದ ಕಥೆ ಏನು?
ಹೇಮಂತ್ ಮತ್ತು ವೀಣಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುತ್ತಾರೆ. ಇವರಿಬ್ಬರ ಹೇಮಂತ್ ಗೆಳೆಯನಾದ ಅಭಿಷೇಕ್ ಭಾರದ್ವಾಜ್ ಬರುತ್ತಾನೆ. ಗೆಳತಿ ಶೃತಿ ಸಾವಿನಿಂದ ಅಭಿಷೇಕ್ ಮಾನಸಿಕವಾಗಿ ಖಿನ್ನತೆಗೊಳಗಾಗಿರುತ್ತಾನೆ. ಈ ವೇಳೆ ಗೆಳೆಯ ಶರತ್ ಪತ್ನಿ ವೀಣಾ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಹಠಕ್ಕೆ ಬರುತ್ತಾನೆ
ಹೀಗಿರುವಾಗ ಒಮ್ಮೆ ಪ್ರವಾಸಿ ಸ್ಥಳದಲ್ಲಿ ಬೆಟ್ಟದಿಂದ ಗೆಳೆಯನನ್ನು ಬೆಟ್ಟದಿಂದ ತಳ್ಳಿ ಸಾಯಿಸಿ, ನಂತರ ಅದೊಂದು ಅಪಘಾತ ಎಂಬಂತೆ ಬಿಂಬಿಸುವಲ್ಲಿಯೂ ಅಭಿಷೇಕ್ ಯಶಸ್ವಿಯಾಗುತ್ತಾನೆ. ಗಂಡನ ಸಾವಿನ ಬಳಿಕ ಒಂಟಿಯಾದ ವೀಣಾ ಸ್ವಲ್ಪ ಸಮಯದವರೆಗೆ ಮನೆಯಲ್ಲಿರುವಂತೆ ಅಭಿಷೇಕ್ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ವೀಣಾ ಮಾತಿನಿಂದ ಖುಷಿಯಾಗಿ ಅಭಿಷೇಕ್ ಸಹ ಉಳಿದುಕೊಳ್ಳುತ್ತಾನೆ.
ಮುಂದೆ ವೀಣಾಗೆ ತನ್ನ ಗಂಡನ ಸಾವು ಕೊಲೆ ಮತ್ತು ಅದು ಅಭಿಷೇಕ್ ಮಾಡಿದ್ದು ಅನ್ನೋದು ಗೊತ್ತಾಗುತ್ತದೆ. ಮುಂದೆ ವೀಣಾ ತೆಗೆದುಕೊಳ್ಳುವ ನಿರ್ಧಾರಗಳು ಅಭಿಷೇಕ್‌ನನ್ನು ತೀವ್ರ ವಿಚಲಿತನಾಗುವಂತೆ ಮಾಡುತ್ತದೆ. ಅಭಿಷೇಕ್‌ನನ್ನು ವೀಣಾ ಕ್ಷಮಿಸ್ತಾಳಾ? ಅಭಿಷೇಕ್ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನಾ ಅನ್ನೋದು ಚಿತ್ರದ ಸಸ್ಪೆನ್ಸ್.
ಒಂದಕ್ಕಿಂತ ಒಂದು ಚೆಂದದ ಹಾಡುಗಳು
ಇನ್ನು ಈ ಚಿತ್ರದ ಹಾಡುಗಳು ಸಿನಿಮಾಗೆ ಮುಕುಟದಂತಿವೆ. ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಜೀವಂತವಾಗಿವೆ. ಕೆ ಎಸ್ ಚಿತ್ರಾ & ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡುಗಳಿಗೆ ಧ್ವನಿಯಾಗಿದ್ದು, ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುತ್ತವೆ. ಯಾವುದೇ ಸಂಗೀತ ಕಾರ್ಯಕ್ರಮ ನಡೆದ್ರೂ ಅಮೃತವರ್ಷಿಣಿ ಸಿನಿಮಾದ ಹಾಡುಗಳು ಇರಲೇಬೇಕು.