ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರ ಶುಕ್ರವಾರ ರಂದು ಬಿಡುಗಡೆಯಾಗಿದೆ. ಚಿತ್ರದ ಸೆನ್ಸಾರ್ ರಿವ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಟ ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರ ಜೂನ್ 20ರ ಶುಕ್ರವಾರದಂದು ಬಿಡುಗಡೆಯಾಗಿದೆ. ಶೇಖರ್ ಕಮ್ಮುಲ ನಿರ್ದೇಶನದ ಈ ಸಿನಿಮಾ ರಿಲೀಸ್ ಆಗೋದಕ್ಕೂ ಮುನ್ನವೇ ಭಾರಿ ನಿರೀಕ್ಷೆ ಮೂಡಿಸಿದೆ.
ನಾಗಾರ್ಜುನ ಹೇಳಿದ್ದೇನು?
ಈ ಸಿನಿಮಾ ಬಗ್ಗೆ ನಾಗಾರ್ಜುನ ಮಾತನಾಡಿ, “'ಕುಬೇರ' ಒಂದು ಅಪರೂಪದ ಸೋಶಿಯಲ್ ಸಿನಿಮಾ. ಶೇಖರ್ ಕಮ್ಮುಲ ಅವರು ಈ ಕಥೆಯನ್ನು ಬಹಳ ನಂಬಿಕೆಯಿಂದ ನಿರ್ದೇಶಿಸಿದ್ದಾರೆ. ಸಮಾಜದಲ್ಲಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ” ಎಂದಿದ್ದಾರೆ.
ಈ ಸಿನಿಮಾದಲ್ಲಿ ನಾಗಾರ್ಜುನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜದ ಮೂರು ವರ್ಗಗಳ ನಡುವಿನ ಸಂಘರ್ಷವೇ ಚಿತ್ರದ ಕಥಾವಸ್ತು ಎಂದು ಹೇಳಿದ್ದಾರೆ. ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಮೂವರೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಧನುಷ್ ನಾಯಕನಾಗಿ, ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಿಮ್ ಸರ್ಬ್, ದಲೀಪ್ ತಾಹಿಲ್, ಸಾಯಾಜಿ ಶಿಂಧೆ ಮುಂತಾದವರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಕಮ್ಮುಲ ಅವರ ಚಿತ್ರಕಥೆ, ಧನುಷ್ ಅವರ ನಟನೆ, ನಾಗಾರ್ಜುನ ಮತ್ತು ರಶ್ಮಿಕಾ ಅವರ ಪಾತ್ರಗಳು ಚಿತ್ರಕ್ಕೆ ಮೆರಗು ನೀಡಿವೆ.

‘ಕುಬೇರ’ ಸಿನಿಮಾ ಮೊದಲ ರಿವ್ಯೂ ವೈರಲ್
ಈ ಸಿನಿಮಾದ ಮೊದಲ ರಿವ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. ಈ ಸಿನಿಮಾದ ಅವಧಿ 3 ಗಂಟೆ 3 ನಿಮಿಷಗಳು. ಇಷ್ಟು ದೀರ್ಘ ಇರುವ ಸಿನಿಮಾವನ್ನು ಪ್ರೇಕ್ಷಕರಿಗೆ ಬೋರ್ ಮಾಡದೆ ನಿರ್ದೇಶಿಸುವುದು ತುಂಬ ಕಷ್ಟ. ಆದರೆ ಶೇಖರ್ ಕಮ್ಮುಲ ಅವರು ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಎರಡನೇ ಭಾಗದ ಕೆಲವು ದೃಶ್ಯಗಳು ಸ್ವಲ್ಪ ನಿಧಾನವಾಗಿದ್ದರೂ, ಕ್ಲೈಮ್ಯಾಕ್ಸ್ ಮಾತ್ರ ಅದ್ಭುತವಾಗಿದೆ.
ನಾಗಾರ್ಜುನ, ಧನುಷ್ ಮತ್ತು ರಶ್ಮಿಕಾ ಅವರ ಪಾತ್ರಗಳನ್ನು ಸಂಪರ್ಕಿಸುವ ಶೇಖರ್ ಕಮ್ಮುಲ ಅವರ ಚಿತ್ರಕಥೆ ಉತ್ತಮವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೆನ್ಸಾರ್ ಮಂಡಳಿಯಿಂದ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾವು ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಹೇಗೆ ಆಕರ್ಷಿಸುತ್ತದೆ ಎಂಬುದನ್ನು ಕಾದು ನೋಡಬೇಕು.

ನಿರ್ಮಾಪಕರು ಯಾರು?
ಸುನೀಲ್ ನಾರಂಗ್ ಮತ್ತು ರಾಮ್ ಮೋಹನ್ ರಾವ್ ಚಿತ್ರವನ್ನು ನಿರ್ಮಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಕಥಾವಸ್ತುವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಓಪನಿಂಗ್ ಕಲೆಕ್ಷನ್ ಬಗ್ಗೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ಮೊದಲ ಬಾರಿಗೆ ಧನುಷ್, ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ ಧನುಷ್ ಅವರು ಭಿಕ್ಷುಕನಾಗಿ ನಟಿಸಿರುವುದು ಕೂಡ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

