MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಪತ್ನಿಯನ್ನು Better half ಅನ್ನೋದು ಯಾಕೆ ಗೊತ್ತಾ?

ಪತ್ನಿಯನ್ನು Better half ಅನ್ನೋದು ಯಾಕೆ ಗೊತ್ತಾ?

'ಬೆಟರ್ ಹಾಫ್' (better half) ಎಂಬ ಪದವನ್ನು ಹೆಚ್ಚಾಗಿ ಪುರುಷರು ಸ್ನೇಹಿತರಿಗೆ ತಮ್ಮ ಹೆಂಡತಿಯನ್ನು ಪರಿಚಯಿಸುವಾಗ ಹೆಮ್ಮೆಯಿಂದ ಹೇಳಿಕೊಳ್ಳುವ ಸಾಮಾನ್ಯ ಪದ. ಹೊಸದಾಗಿ ಮದುವೆಯಾದ ಹುಡುಗರು ಸ್ನೇಹಿತರಿಗೆ ನನ್ನ ಬೆಟರ್ ಹಾಫ್ ಮೀಟ್ ಆಗಿ… ಎಂದು ಪರಿಚಯ ಮಾಡಿಕೊಡ್ತಾರೆ. ಆದ್ರೆ ಇದರ ನಿಜವಾದ ಅರ್ಥ ಗೊತ್ತಾ ನಿಮಗೆ?

2 Min read
Suvarna News
Published : Feb 16 2023, 05:05 PM IST
Share this Photo Gallery
  • FB
  • TW
  • Linkdin
  • Whatsapp
18

ಇಬ್ಬರು ವ್ಯಕ್ತಿಗಳು ತಮ್ಮ ಬಂಧವನ್ನು ಕಾಪಾಡಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಮಾನವಾಗಿ ಪ್ರಯತ್ನಿಸಿದಾಗ, ಅಥವಾ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬಾಳ್ವೆ ನಡೆಸಿದಾಗ ವಿವಾಹವು ಪೂರ್ಣವಾಗುತ್ತದೆ (perfect marriage). ಮಿಸ್ ಆದ ಒಂದು ಅಕ್ಷರವನ್ನು ಸೇರಿಸಿದಾಗ ಪದ ಬಂಧವು ಹೇಗೆ ಪೂರ್ಣಗೊಳ್ಳುವುದೋ? ಅದೇ ರೀತಿ ಪತಿ ಮತ್ತು ಪತ್ನಿ ಅರ್ಧ -ಅರ್ಧ ಜೊತೆ ಸೇರಿದಾಗ ಸಂಪೂರ್ಣರಾಗುತ್ತಾರೆ. 

28

ಹೆಂಡತಿಯನ್ನು ಸಾಮಾನ್ಯವಾಗಿ ಬೆಟರ್ ಹಾಫ್ (better half) ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ತನ್ನ ಗಂಡನ ಎಲ್ಲಾ ಚಟುವಟಿಕೆಗಳನ್ನು ಹಂಚಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಹೆಂಡತಿಯು ಪುರುಷನ ಜೀವನದಲ್ಲಿ ಬರುತ್ತಾಳೆ ಮತ್ತು ಅವನ ಜೀವನವನ್ನು ಪ್ರೀತಿ, ಕಾಳಜಿ ಮತ್ತು ತಿಳುವಳಿಕೆಯಿಂದ ತುಂಬುತ್ತಾಳೆ. ಇದರಿಂದ ಇಬ್ಬರ ಜೀವನವೂ ಪೂರ್ಣವಾಗುತ್ತೆ.

38

ಪುರುಷರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚಿನ ಪ್ರೀತಿ ಮತ್ತು ಕಾಳಜಿ ಹೊಂದಿರೋದಿಲ್ಲ ಎನ್ನಲಾಗುತ್ತೆ. ಮದುವೆಯಾದ ಬಳಿಕ ಪತ್ನಿಯು ತಮ್ಮ ಸಂಗಾತಿಗೆ ಸಾಕಷ್ಟು ಪ್ರೀತಿಯನ್ನು ತೋರಿಸುವ ಮೂಲಕ ಈ ಅಂತರವನ್ನು ತುಂಬುತ್ತಾರೆ. ಒಬ್ಬ ಪತ್ನಿ ಮಾತ್ರ ತನ್ನ ಪತಿಗೆ ಭಾವನೆಗಳನ್ನು ಸ್ವೀಕರಿಸಲು ಮತ್ತು ಪ್ರೀತಿ ಹಂಚಲು ಕಲಿಸುತ್ತಾಳೆ.  ತನ್ನ ಪ್ರೀತಿಯ ಮೂಲಕ ಇತರರ ಮುಂದೆ ಕೋಪಿಷ್ಟ, ಕಲ್ಲು ಹೃದಯದವನಾಗಿದ್ದ ಪತಿಯ ಮನಸನ್ನು ಕರಗಿಸಿ, ತನ್ನೆಡೆಗೆ ಒಲಿಸಿಕೊಳ್ಳುತ್ತಾಳೆ.

48

ನೀವು ಪಾಪ್ ಕಲ್ಚರ್ ಮತ್ತು ರೊಮ್ಯಾಂಟಿಕ್ ಸಿನಿಮಾಗಳನ್ನು (romantic cinema) ನೋಡಿದ್ರೆ ಅದರಲ್ಲಿ ಮಹಿಳೆಯರ ಪ್ರಾತಿನಿಧ್ಯವು ಪುರುಷನ ಮನಸ್ಸನ್ನು ಕರಗಿಸುವ ಒಂದು ಮಾರ್ಗ. ಸಾಮಾನ್ಯವಾಗಿ ಹೆಚ್ಚಿನ ಸಿನಿಮಾಗಳಲ್ಲಿ ಹೇಗಿರುತ್ತೆ ಅಂದ್ರೆ, ಪುರುಷ ತುಂಬಾನೆ ಕೋಪಿಷ್ಟ, ರೌಡಿ ಅಥವಾ ಪ್ರೀತಿಗೆ ಬೆಲೆಕೊಡದಂತಹ ವ್ಯಕ್ತಿಯಾಗಿರುತ್ತಾರೆ. ಬಳಿಕ ಅವನ ಜೀವನದಲ್ಲಿ ಹುಡುಗಿಯ ಅಥವಾ ನಾಯಕಿಯ ಪ್ರವೇಶ ಆಗುತ್ತೆ. ಬಳಿಕ ಆತ ಬದಲಾಗುತ್ತಾನೆ. ಅವನ ಜೀವನದಲ್ಲಿ ಪ್ರೀತಿ ಹುಟ್ಟುತ್ತೆ, ಹೃದಯ ಕರಗುತ್ತೆ.

58

ನಾಯಕಿ ಕಟು ಹೃದಯದ ನಾಯಕನಿಗೆ ಪ್ರೀತಿ ಹೇಗೆ ಮೃದು ಮತ್ತು ಬೆಚ್ಚಗಿನ ಹೃದಯದಿಂದ ಕೂಡಿರುತ್ತದೆ. ಪ್ರೀತಿಗೆ ಕತ್ತಲೆಯಲ್ಲೂ ಬೆಳಕನ್ನು ಮೂದಿಸೋ ಸಾಮರ್ಥ್ಯ ಇದೆ ಅನ್ನೋದನ್ನು ಆಕೆ ತೋರಿಸುತ್ತಾಳೆ. ಮತ್ತು ಹಂತ ಹಂತವಾಗಿ, ಅವಳು ಅವನ ಬೆಟರ್ ಹಾಫ್ (better half) ಆಗಲು ಆತನ ಜೀವನಕ್ಕೆ ಹೆಜ್ಜೆ ಇಡುತ್ತಾಳೆ.
 

68

ಒಬ್ಬ ಪುರುಷನಿಗೆ ತನ್ನ ಹೆಂಡತಿ, ಬೆಟರ್ ಹಾಫ್ ಯಾವಾಗಲೂ ತನ್ನ ಜೊತೆ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಡೆಯುತ್ತಾಳೆ ಎಂಬ ಭರವಸೆ ಇರುತ್ತೆ. ತನ್ನ ಗಂಡನ ಅರ್ಧದಷ್ಟು ಕರ್ತವ್ಯಗಳನ್ನು ನೋಡಿಕೊಳ್ಳಲು ಹೆಂಡತಿ ಜವಾಬ್ದಾರಳಾಗಿದ್ದಾಳೆ. ವಿವಾಹವು ಪುರುಷ ಮತ್ತು ಮಹಿಳೆಯ ನಡುವಿನ ಪವಿತ್ರ ಸಂಬಂಧ. ಪರಸ್ಪರ ಸಹಕಾರ, ತಿಳುವಳಿಕೆ, ಪ್ರಾಮಾಣಿಕತೆ ಮತ್ತು ಪ್ರೀತಿ ಇದ್ದಾಗ, ಯಾವುದೇ ವಿವಾಹವು ಕಠಿಣ ಸಂದರ್ಭಗಳಲ್ಲಿಯೂ ಮುರಿಯಲು ಸಾಧ್ಯವಿಲ್ಲ.

78

ಮಹಿಳೆ ತನ್ನ ಗಂಡನಿಗೆ ಎಲ್ಲಾ ಕೆಲಸದಲ್ಲೂ ಸಹಾಯ ಮಾಡಬೇಕು ಮತ್ತು ಕರ್ತವ್ಯಗಳು, ಹೊರೆಗಳು, ಜವಾಬ್ದಾರಿ ಮತ್ತು ಸಮಸ್ಯೆಗಳ ಬಗ್ಗೆ ಅವನ ಆತಂಕವನ್ನು ಕಡಿಮೆ ಮಾಡಬೇಕು. ಅದೇ ರೀತಿ ಹೆಂಡತಿಯ ಎಲ್ಲಾ ಹೆಜ್ಜೆಗಳಲ್ಲೂ ಪತಿ ಜೊತೆಯಾಗಿ ಹೆಜ್ಜೆ ಹಾಕಬೇಕು. ಇಬ್ಬರು ಜೊತೆಯಾಗಿ ಅರ್ಥ ಮಾಡಿಕೊಂಡು ಬಾಳಿದರೆ ಪರ್ಫೆಕ್ಟ್ ಜೀವನ (perfect life) ನಿಮ್ಮದಾಗುತ್ತೆ. 

88

ಒಬ್ಬ ಮಹಿಳೆ ತನ್ನ ಗಂಡನಿಗಾಗಿ ಎಲ್ಲಾ ಕೆಲಸಗಳನ್ನು ಮಾಡಲು ಮುಂದಾದಾಗ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಗಂಡನಿಗೆ ಭಾವನಾತ್ಮಕ ಮತ್ತು ಮಾನಸಿಕ ಬೆಂಬಲವನ್ನು (mental and emotional support) ಒದಗಿಸಿದಾಗ, ಅವಳನ್ನು 'ಬೆಟರ್ ಹಾಫ್' ಎಂದು ಕರೆಯಲಾಗುತ್ತದೆ. ಇದನ್ನು ಪುರುಷರು ತಮ್ಮ ಪ್ರೀತಿಯ ಹೆಂಡತಿಯರನ್ನು ಪರಿಚಯಿಸಲು ಗೌರವದಿಂದ ಬಳಸುವ ಪದವಾಗಿದೆ..  

About the Author

SN
Suvarna News
ಪತ್ನಿ
ಸಂತೋಷ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved