- Home
- Life
- Relationship
- '50% ಕಾರ್ಪೊರೇಟ್ ಮಹಿಳಾ ಉದ್ಯೋಗಿಗಳು ವಿವಾಹೇತರ ಅಕ್ರಮ ಸಂಬಂಧ ಹೊಂದಿರುತ್ತಾರೆ!?' ಹೀಗಾಗಲು ಕಾರಣವೇನು?
'50% ಕಾರ್ಪೊರೇಟ್ ಮಹಿಳಾ ಉದ್ಯೋಗಿಗಳು ವಿವಾಹೇತರ ಅಕ್ರಮ ಸಂಬಂಧ ಹೊಂದಿರುತ್ತಾರೆ!?' ಹೀಗಾಗಲು ಕಾರಣವೇನು?
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ಪೊರೇಟ್ ಮಹಿಳಾ ಉದ್ಯೋಗಿಯೊಬ್ಬರು, ಕಾರ್ಪೊರೇಟ್ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಮಂದಿ ವಿವಾಹೇತರ ಅಕ್ರಮ ಸಂಬಂಧ ಹೊಂದಿರುತ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಷ್ಟಕ್ಕೂ ಹೀಗಾಗಲು ಕಾರಣವೇನು? ನೋಡೋಣ ಬನ್ನಿ

ಕಾರ್ಪೊರೇಟ್ ಕೆಲಸದ ವಾತಾವರಣ
ಕಾರ್ಪೊರೇಟ್ ಕೆಲಸದ ವಾತಾವರಣದಲ್ಲಿ ಕೆಲಸ ಮಾಡುವ ಕೆಲ ಮಹಿಳೆಯರು, ಹೆಚ್ಚು ಒತ್ತಡ, ದೀರ್ಘ ಕೆಲಸದ ಸಮಯ ಮತ್ತು ನಿರಂತರ ಸಹಕಾರದ ಕಾರಣದಿಂದಾಗಿ ಸಹೋದ್ಯೋಗಿಗಳ ಜೊತೆ ಅತೀ ಹತ್ತಿರದ ಸಂಬಂಧಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಈ ರೀತಿಯ ಪರಿಸ್ಥಿತಿಗಳು ಕೆಲವೊಮ್ಮೆ ಅಕ್ರಮ ಅಥವಾ ವಿವಾಹೇತರ ಸಂಬಂಧಗಳಿಗೂ ದಾರಿ ಮಾಡಿಕೊಡಬಹುದು.
ಅಷ್ಟಕ್ಕೂ ಕಾರ್ಪೊರೇಟ್ ಉದ್ಯೋಗದಲ್ಲಿ ವಿವಾಹೇತರ ಸಂಬಂಧಗಳು ಉಂಟಾಗೋದೇಕೆ?
ಕಾರ್ಪೊರೇಟ್ ಉದ್ಯೋಗದಲ್ಲಿ ದಿನವಿಡೀ ಒಟ್ಟಿಗೆ ಕೆಲಸ ಮಾಡುವುದು, ಒಂದೇ ರೀತಿಯ ಒತ್ತಡ, ಗುರಿಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಸಹೋದ್ಯೋಗಿಗಳ ನಡುವೆ ಗಾಢ ಬಾಂಧವ್ಯವನ್ನು ರೂಪಿಸುತ್ತದೆ.
ಭಾವನಾತ್ಮಕವಾಗಿ ಹತ್ತಿರವಾಗುವುದರಿಂದ ಹೀಗಾಗಬಹುದು
ಈ ಭಾವನಾತ್ಮಕ ಹತ್ತಿರತೆಯಿಂದಾಗಿ ಕೆಲ ಸಂದರ್ಭಗಳಲ್ಲಿ ಪ್ರೇಮ ಅಥವಾ ವೈಯಕ್ತಿಕ ಸಂಬಂಧಗಳಾಗಿ ಮಾರ್ಪಡಬಹುದು.
ವೈಯುಕ್ತಿಕ ಜೀವನದಲ್ಲಿ ಸಿಗದ ಭಾವಾನತ್ಮಕ ಸಂಬಂಧಗಳನ್ನು ಕೆಲಸದ ವಾತಾವರಣದಲ್ಲಿ ಹುಡುಕುತ್ತಾರೆ
ಇನ್ನೂ ಕೆಲವರಿಗೆ, ತಮ್ಮ ವೈಯಕ್ತಿಕ ಜೀವನದಲ್ಲಿ ಸಿಗದ ಭಾವನಾತ್ಮಕ ಬೆಂಬಲ, ಗೌರವ ಅಥವಾ ಗಮನವನ್ನು ಕೆಲಸದ ಸ್ಥಳದಲ್ಲಿ ಸಿಗುತ್ತದೆ ಎಂಬ ಭಾವನೆ ಉಂಟಾಗುತ್ತದೆ. ಇದರಿಂದ ಅವರು ಆ ಸಂಬಂಧಗಳತ್ತ ಆಕರ್ಷಿತರಾಗಬಹುದು.
ವೃತ್ತಿಪರ ಲಾಭಗಳ ಉದ್ದೇಶದಿಂದಲೂ ಹೀಗಾಗಬಹುದು!
ಅದೇ ರೀತಿ, ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಅಥವಾ ವೃತ್ತಿಪರ ಲಾಭಗಳ ನಿರೀಕ್ಷೆಯೂ ಇಂಥ ಸಂಬಂಧಗಳಿಗೆ ಕಾರಣವಾಗಬಹುದು. ಸ್ಥಾನಮಾನ, ಸಂಪರ್ಕಗಳು ಅಥವಾ ಕೆಲಸದ ಬೆಳವಣಿಗೆಗೆ ಸಹಾಯವಾಗುತ್ತದೆ ಎಂಬ ಭಾವನೆಯಿಂದಲೂ ಇಂತಹ ಸಂಬಂಧಗಳು ಹುಟ್ಟಿಕೊಳ್ಳಬಹುದು.
ನೆನಪಿಡಿ: ಎಲ್ಲಾ ಕಡೆಯೂ ಇದೇ ರೀತಿ ಪರಿಸ್ಥಿತಿ ಇರುತ್ತದೆ ಎಂದೇನಿಲ್ಲ!
ಆದರೆ ಕೆಲಸದ ಸ್ಥಳದಲ್ಲಿನ ಸಂಬಂಧಗಳು ತುಂಬಾ ಸಂಕೀರ್ಣವಾಗಿದ್ದು, ಪ್ರತಿಯೊಬ್ಬರ ಪರಿಸ್ಥಿತಿ, ಮನಸ್ಥಿತಿ ಮತ್ತು ವೈಯಕ್ತಿಕ ಕಾರಣಗಳ ಮೇಲೆ ಅವಲಂಬಿತವಾಗಿರುತ್ತವೆ. ಎಲ್ಲ ಸಂದರ್ಭಗಳನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
