ಡಿಯರ್ ಲೇಡೀಸ್… ಈ ವಿಷ್ಯಗಳೇ ಲೈಂಗಿಕ ಸಮಸ್ಯೆಗೆ ಕಾರಣ… ತಿಳ್ಕೊಳ್ಳೋದು ಮುಖ್ಯ
ಮಹಿಳೆಯರಿಗೆ ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಯಾಕಂದ್ರೆ ಅದರ ಬಗ್ಗೆ ಮಾತನಾಡಲು ಇನ್ನೂ ಸಹ ಜನರು ಮುಜುಗರ ಪಟ್ಟುಕೊಳ್ಳುತ್ತಾರೆ. ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳ ಬಗ್ಗೆ ಇವತ್ತಾದ್ರೂ ನೀವು ತಿಳಿದುಕೊಳ್ಳಬೇಕು.
ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದರೂ, ಸಮಾಜದ ಹೆಚ್ಚಿನ ಭಾಗವು ಕೆಲವೊಂದು ವಿಷಯಗಳಲ್ಲಿ ಇನ್ನೂ ಮಹಿಳೆಯರನ್ನು ಕಡೆಗಣಿಸುತ್ತದೆ. ಮಹಿಳೆಯರ ಆಸೆಗಳು, ಅವರ ಭಾವನೆಗಳು, ಅವರ ಕನಸುಗಳು ಮತ್ತು ಜೀವನದಿಂದ ಅವರ ನಿರೀಕ್ಷೆಗಳ ಬಗ್ಗೆ ಮಾತನಾಡೋದೆ ಕಡಿಮೆ. ಮಹಿಳೆಯರಿಗೇನು ಆಸೆಗಳಿರುತ್ತೆ ಎಂದು ಸುಮ್ಮನಾಗುತ್ತಾರೆ.
ಮಹಿಳೆಯರಿಗೆ ಸಂಬಂಧಿಸಿದ ಸಾಮಾನ್ಯ ವಿಷಯಗಳ ಬಗ್ಗೆ ಮಾತನಾಡೋದಕ್ಕೆ ಕಷ್ಟ ಪಡುವ ಈ ಸಮಾಜದಲ್ಲಿ ಮಹಿಳೆಯರ ಲೈಂಗಿಕ ಆರೋಗ್ಯದ (sexual health) ಬಗ್ಗೆ ಮುಕ್ತವಾಗಿ ಮಾತನಾಡೋದಾದರೂ ಹೇಗೆ ಅಲ್ವಾ? ನಿಜಾ ಹೇಳಬೇಕಂದ್ರೆ, ಅದರ ಬಗ್ಗೆ ಬಹಿರಂಗವಾಗಿ ಮಾತನಾಡಬೇಕು. ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕಾಗಿದೆ. ಇಲ್ಲವಾದರೆ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಮಹಿಳೆಯರು ತಮ್ಮ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ ಮತ್ತು ಈ ಕಾರಣದಿಂದಾಗಿ, ಅವರು ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ವಿಷಯಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ. ಇವುಗಳ ಬಗ್ಗೆ ತಿಳಿದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರೆ, ನಿಮ್ಮ ಲೈಂಗಿಕ ಜೀವನದ (sex life) ಜೊತೆಗೆ ವೈವಾಹಿಕ ಜೀವನವೂ ಚೆನ್ನಾಗಿರುತ್ತೆ.
ಹಾರ್ಮೋನುಗಳ ಅಸಮತೋಲನ (Hormonal Imbalance)
ಋತುಚಕ್ರ, ಗರ್ಭಧಾರಣೆ, ಹೆರಿಗೆ ಮತ್ತು ಋತುಬಂಧ ಸೇರಿದಂತೆ ಅನೇಕ ಕಾರಣಗಳಿಂದಾಗಿ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳು ಏರಿಳಿತಗೊಳ್ಳಬಹುದು. ಈ ಅಸಮತೋಲನವು ಕಾಮಾಸಕ್ತಿಯ ಕೊರತೆ, ಯೋನಿ ಶುಷ್ಕತೆ (Vaginal Dryness) ಮತ್ತು ಮೂಡ್ ಸ್ವಿಂಗ್ ಗಳಿಗೆ (mood swing) ಕಾರಣವಾಗಬಹುದು. ಇದು ಮಹಿಳೆಯರ ಲೈಂಗಿಕ ಬಯಕೆ ಮತ್ತು ಸಂತೋಷದ ಮೇಲೆ ನೇರ ಪರಿಣಾಮ ಬೀರುತ್ತದೆ.
ಮಾನಸಿಕ ಆರೋಗ್ಯ (mental health)
ಮಹಿಳೆಯರು ತಮ್ಮ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸೋದೆ ಹೆಚ್ಚು. ಆದರೆ ಲೈಂಗಿಕ ಆರೋಗ್ಯವು ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿದೆ. ಒತ್ತಡ (Stress), ಆತಂಕ (Anxiety), ಖಿನ್ನತೆ (Depression) ಮತ್ತು ಇತರ ಅನೇಕ ಕಾರಣಗಳು ಲೈಂಗಿಕ ಸಂಬಂಧವನ್ನು (Sexual Relationship) ಹೊಂದುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಇವುಗಳ ಬಗ್ಗೆಯೂ ಗಮನ ಹರಿಸುವುದು ಮುಖ್ಯ.
ಭೌತಿಕ ಪರಿಸ್ಥಿತಿಗಳು (Physical Conditions)
ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್-PCoS), ಪಿಐಡಿ (ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್) ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳಂತಹ (STI) ಅನೇಕ ವೈದ್ಯಕೀಯ ಪರಿಸ್ಥಿತಿಗಳು ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಜೀವನಶೈಲಿ (Lifestyle)
ಕಳಪೆ ಆಹಾರ (Poor Quality Food), ನಿದ್ರೆಯ ಕೊರತೆ (Sleeplessness) ಮತ್ತು ಇತರ ಜೀವನಶೈಲಿ ಸಂಬಂಧಿತ ಕಾರಣಗಳು ಸಹ ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇವು ಆಯಾಸ (Tiredness), ದೌರ್ಬಲ್ಯ (Weakness) ಮತ್ತು ಕಾಮಾಸಕ್ತಿ ಕಡಿಮೆಯಾಗಲು ಕಾರಣವಾಗಬಹುದು. ಆದ್ದರಿಂದ, ಇವುಗಳನ್ನು ಸಹ ಅರ್ಥಮಾಡಿಕೊಳ್ಳುವುದು ಮುಖ್ಯ. ಇವುಗಳನ್ನು ಅರ್ಥ ಮಾಡಿಕೊಂಡು ಅದಕ್ಕೊಂದು ಪರಿಹಾರ ಕಂಡುಕೊಂಡರೆ ಲೈಂಗಿಕ ಜೀವನ ಚೆನ್ನಾಗಿರುತ್ತೆ.