MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • 1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್‌ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?

1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್‌ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?

ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

3 Min read
Author : Anusha Kb
Published : Apr 22 2026, 10:20 AM IST
Share this Photo Gallery
  • FB
  • TW
  • Linkdin
  • Whatsapp
16
ವಿರಾಟ್‌ಗೆ ಒಂದು ಲೈಕ್ ತಂದಿಟ್ಟ ಸಂಕಷ್ಟ
Image Credit : X/@CricketCentrl

ವಿರಾಟ್‌ಗೆ ಒಂದು ಲೈಕ್ ತಂದಿಟ್ಟ ಸಂಕಷ್ಟ

ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವಾಗಿರುವುದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಒತ್ತಿದ ಒಂದು ಲೈಕ್. ಹೌದು ಕ್ರಿಕೆಟರ್ ಆರ್‌ಸಿಬಿ ಆಟಗಾರ ಜಗತ್ತಿನೆಲ್ಲೆಡೆ ಕೋಟ್ಯಾಂತರ ಜನ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ.

26
ವಿರಾಟ್ ಚಟುವಟಿಕೆಯನ್ನು ದುರ್ಬಿನ್ ಕಣ್ಣಲ್ಲಿ ನೋಡುವ ಅಭಿಮಾನಿಗಳು
Image Credit : Social Media

ವಿರಾಟ್ ಚಟುವಟಿಕೆಯನ್ನು ದುರ್ಬಿನ್ ಕಣ್ಣಲ್ಲಿ ನೋಡುವ ಅಭಿಮಾನಿಗಳು

ಈ ಬಾರಿ ಅವರು ಸುದ್ದಿಗೆ ಗ್ರಾಸವಾಗಿರುವುದು ಕ್ರಿಕೆಟ್ ಮೈದಾನದಲ್ಲಿ ಮಾಡಿದ ದಾಖಲೆಗಳಿಗಾಗಿ ಅಲ್ಲ ಬದಲಾಗಿದೆ ಜರ್ಮನ್ ವ್ಲಾಗರ್ ಒಬ್ಬರ ಫೋಟೋಗೆ ಲೈಕ್ ಒತ್ತಿದ ಕಾರಣಕ್ಕೆ. ಸಾಮಾನ್ಯವಾಗಿ ಒಮ್ಮೆ ಸೆಲೆಬ್ರಿಟಿ ಪಟ್ಟಕ್ಕೆ ಏರಿದರೆ ಅವರಿಗೆ ವೈಯಕ್ತಿಕ ಬದುಕು ಎಂಬುದು ಇರುವುದಿಲ್ಲ. ಅವರ ಪ್ರತಿಯೊಂದು ಚಲನವಲನಗಳ ಮೇಲೆ ಅವರಿಗೆ ಅರಿವಿಲ್ಲದಂತೆ ಬೇರೆಯವರ ಕಣ್ಣು ಬಿದ್ದಿರುತ್ತದೆ. ಅವರ ಸಣ್ಣ ಸಣ್ಣ ಚಟುವಟಿಕೆಗಳನ್ನು ಅವರ ಅಭಿಮಾನಿಗಳು ದುರ್ಬಿನ್ ಹಿಡಿದು ನೋಡುವಂತೆ ಗಮನಿಸುತ್ತಿರುತ್ತಾರೆ. ಹಾಗೆಯೇ ಈಗ ವಿರಾಟ್ ಕೊಹ್ಲಿ ಅವರನ್ನು ಅವರ ಅಭಿಮಾನಿಗಳು ಅದೇ ರೀತಿ ಹದ್ದಿನ ಕಣ್ಣಿಟ್ಟು ನೋಡುತ್ತಿದ್ದು, ಅವರು ಸಾರ್ವಜನಿಕ ವೇದಿಕೆಗಳು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಏನೇ ಮಾಡಿದರು ಅದು ದೊಡ್ಡ ಸುದ್ದಿಯಾಗುತ್ತಿದೆ.

Related Articles

Related image1
ಅನುಷ್ಕಾ ಶರ್ಮಾ ಪಕ್ಕಾ ಹಳ್ಳಿ ಹೆಂಗಸಾದರೆ ವಿರಾಟ್'ಗೆ ಕಷ್ಟವಾಗುತ್ತಾ ?
Related image2
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
36
ವಿರಾಟ್ ಜೊತೆ ತಳುಕು ಹಾಕಿದ್ದಕ್ಕೆ ಗರಂ ಆದ ಮಾಜಿ ಗೆಳತಿ
Image Credit : Google

ವಿರಾಟ್ ಜೊತೆ ತಳುಕು ಹಾಕಿದ್ದಕ್ಕೆ ಗರಂ ಆದ ಮಾಜಿ ಗೆಳತಿ

ಅದೇ ರೀತಿ ಈಗ ಅವರು ಜರ್ಮನ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಲಿಜಲಾಜ್ ಅವರ ಪೋಸ್ಟ್‌ಗೆ ಒತ್ತಿದ ಲೈಕ್ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಈ ವಿಚಾರಕ್ಕೆ ಸಂಬಂಧಿಸಿದ ಟ್ರೋಲ್ ಒಂದಕ್ಕೆ ವಿರಾಟ್ ಕೊಹ್ಲಿ ಅವರ ಮಾಜಿ ಗೆಳತಿ ಇಜಬೆಲ್ಲೆ ಲೈಟ್ ಅವರು ಕೂಡ ಪ್ರತಿಕ್ರಿಯಿಸಿದ್ದು ಇದು ಸಾಕಷ್ಟು ಗಮನ ಸೆಳೆದಿದೆ. ಹಾಗಿದ್ರೆ ವಿರಾಟ್‌ ಕೊಹ್ಲಿಗೆ ಸಂಬಂಧಿಸಿದ ಟ್ರೋಲ್‌ ಬಗ್ಗೆ ಇಜೆಬೆಲ್ಲೆ ಹೇಳಿದ್ದೇನು?

ಇಜಾಬೆಲ್ಲೆ, ಅನುಷ್ಕಾ ಶರ್ಮಾ, ಜರ್ಮನ್ ಪ್ರಭಾವಿ ಲಿಜ್‌ಲಾಜ್ ಮತ್ತು ಅವ್ನೀತ್ ಕೌರ್ ಅವರು ಇರುವ ಕೊಲಾಜ್ ಅನ್ನು ಇನ್‌ಸ್ಟಾಗ್ರಾಮ್ ಪೇಜ್‌ವೊಂದು ಹಂಚಿಕೊಂಡಾಗ ವಿರಾಟ್ ಕೊಹ್ಲಿ ಅವರ ಟೇಸ್ಟ್ ಬಗ್ಗೆ ಚರ್ಚೆ ಶುರುವಾಗಿದ್ದು, ಇದಕ್ಕೆ ವಿರಾಟ್ ಮಾಜಿ ಗೆಳತಿ ಇಜಾಬೆಲ್ಲೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

46
ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?
Image Credit : Instagram

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?

ಇವರಲ್ಲಿ ಇಜಾಬೆಲ್ಲೆ ವಿರಾಟ್ ಕೊಹ್ಲಿ ಮಾಜಿ ಗರ್ಲ್‌ಫ್ರೆಂಡ್, ಅನುಷ್ಕಾ ಶರ್ಮಾ ಪತ್ನಿ, ಅವ್ನಿತ್ ಕೌರ್ ನಟಿಯಾಗಿದ್ದು, ಇವರ ಫೋಟೋವನ್ನು ಹಿಂದೊಮ್ಮೆ ವಿರಾಟ್ ಕೊಹ್ಲಿ ಲೈಕ್ ಮಾಡಿದ ಕಾರಣಕ್ಕೆ ಭಾರಿ ಸುದ್ದಿಯಾಗಿತ್ತು. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿ ಇದು ಇನ್ಸ್ಟಾಗ್ರಾಮ್ ಅಲ್ಗೋರಿತಮ್‌ನಿಂದ ಉಂಟಾದ ದೋಷದಿಂದ ಲೈಕ್ ಒತ್ತಿ ಹೋಗಿದ್ದು ಎಂಬ ಸ್ಪಷ್ಟನೆ ನೀಡಿ ಸುದ್ದಿಯಾಗಿದ್ದರು. ಕಳೆದ ವರ್ಷ ಈ ಘಟನೆ ನಡೆದಿದ್ದು, ಈಗ ಮತ್ತೆ ಅವರ ಖಾತೆಯಿಂದ ಜರ್ಮನಿ ಇನ್‌ಫ್ಲುಯೆನ್ಸರ್ ಲಿಜಾಲಾಜ್ ಅವರ ಫೋಟೋಗೆ ಲೈಕ್ ಬಂದಿದೆ. ಹೀಗಾಗಿ ಈ ನಾಲ್ವರ ಫೋಟೋಗಳನ್ನು ಜೊತೆಗೆ ಕೊಲಾಜ್ ಮಾಡಿ ಹಾಕಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ವಿರಾಟ್ ಮಾಜಿ ಗೆಳತಿ ಈ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

56
ಇಜಾಬೆಲ್ಲೆ ಲೈಟ್ ನಿಂದ ಅನುಷ್ಕಾ ಶರ್ಮಾ ವರೆಗೆ...
Image Credit : insta

ಇಜಾಬೆಲ್ಲೆ ಲೈಟ್ ನಿಂದ ಅನುಷ್ಕಾ ಶರ್ಮಾ ವರೆಗೆ...

ವಿರಾಟ್ ಕೊಹ್ಲಿ ಜೊತೆ ಯಾವುದೋ ಕಾರಣಕ್ಕೆ ಸಂಬಂಧ ಹೊಂದಿರುವ ನಾಲ್ವರು ಮಹಿಳೆಯ ಫೋಟೋವನ್ನು ಕೊಲಾಜ್ ಮಾಡಿ ಹೀಗೆ ಬರೆಯಲಾಗಿದೆ. ವಿರಾಟ್ ಕೊಹ್ಲಿ ಬಗ್ಗೆ ಒಂದು ವಿಷಯ ಆ ವ್ಯಕ್ತಿ ಮೈದಾನದ ಒಳಗೆ ಅಥವಾ ಹೊರಗೆ ಸ್ಪಷ್ಟವಾಗಿ ತಪ್ಪಿಸಿಕೊಳ್ಳುವುದಿಲ್ಲ. ಇಜಾಬೆಲ್ಲೆ ಲೈಟ್ ನಿಂದ ಅನುಷ್ಕಾ ಶರ್ಮಾ ವರೆಗೆ... ವಿರಾಟ್ ಗಣ್ಯ ಅಭಿರುಚಿಯು ಬ್ರ್ಯಾಂಡ್‌ನ ಒಂದು ಭಾಗ ಮಾತ್ರ ಎಂದು ಬರೆಯಲಾಗಿದೆ. ಇದಕ್ಕೆ ಇಜಾಬೆಲ್ಲೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದು, ಇದಾಗಿ 12 ವರ್ಷಗಳೇ ಕಳೆದಿವೆ ಆದರೂ ಯಾಕೆ ಜನರು ಇದರಿಂದ ಹೊರಬರುತ್ತಿಲ್ಲ ಎಂದು ಅವರು ತಮ್ಮ ಫೋಟೋ ಬಳಸಿ ವಿರಾಟ್ ಕಾಲೆಳೆದಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಕೂಡಲೇ ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ಯುವತಿಯನ್ನೂ ಸಾಯಿಸಲು ಯತ್ನಿಸಿ ತಾನು ಸಾವಿಗೆ ಶರಣಾದ ಕಿರಣ್: ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಿಗಳ ನಡುವೆ ಆಗಿದ್ದೇನು?

66
ಅವ್ನಿತ್ ಕೌರ್ ಫೋಟೊ ಲೈಕ್ ಮಾಡಿದ್ದ ವಿರಾಟ್
Image Credit : Google

ಅವ್ನಿತ್ ಕೌರ್ ಫೋಟೊ ಲೈಕ್ ಮಾಡಿದ್ದ ವಿರಾಟ್

ವಿರಾಟ್ ಕೊಹ್ಲಿ ಅವರ ಸೋಶಿಯಲ್‌ ಮಿಡಿಯಾ ಚಟುವಟಿಕೆಗಳನ್ನು ಜನ ಮೈಕ್ರೋಸ್ಕೋಪ್‌ನಲ್ಲಿ ಇಟ್ಟಂತೆ ಗಮನಿಸುತ್ತಿದ್ದಾರೆ. ಕಳೆದ ವರ್ಷ, ಅವರ ಅಭಿಮಾನಿಗಳು ಅವರು ಅವ್ನೀತ್ ಕೌರ್ ಅವರ ಫೋಟೋ ಇಷ್ಟಪಟ್ಟಿದ್ದನ್ನು ಗಮನಿಸಿದರು. ಅದರ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದ್ದಂತೆ ವಿರಾಟ್ ಸ್ಪಷ್ಟೀಕರಣವನ್ನು ನೀಡಿದರು, ಅದನ್ನು ಅಲ್ಗಾರಿದಮ್ ದೋಷ ಎಂದು ಕರೆದರು. ಇದಾಗಿ ವರ್ಷದ ನಂತರ ಮತ್ತೆ ಇದೇ ರೀತಿಯ ಕಾರಣಕ್ಕೆ ವಿರಾಟ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಜರ್ಮನ್ ವ್ಲಾಗರ್ ಲಿಜ್‌ಲಾಜ್ ಅವರ ಪೋಸ್ಟ್‌ಗೆ ವಿರಾಟ್ ಲೈಕ್ ಬಂದಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹದ ನಂತರ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರವಾದ ತಾಯಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ
ಸಂಬಂಧಗಳು

Latest Videos
Recommended Stories
Recommended image1
ಪಿತೃತ್ವದ ಬಗ್ಗೆ ಹೆಚ್ಚುತ್ತಿದೆ ಅನುಮಾನ, ಅಹಮದಾಬಾದ್‌ನಲ್ಲಿ ವರ್ಷಕ್ಕೆ 550 ಡಿಎನ್‌ಎ ಪರೀಕ್ಷೆ!
Recommended image2
ಚಾಣಕ್ಯ ನೀತಿ: ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ
Recommended image3
ಬೆಡ್‌ರೂಮ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ, ಹುಡುಕಿದ್ರೂ ಸಿಗ್ತಿಲ್ಲ ಕಾಂಡೋಮ್‌, ಭಾರೀ ಬೆಲೆ ಏರಿಕೆಗೆ ಸಜ್ಜಾದ ಕಂಪನಿ!
Related Stories
Recommended image1
ಅನುಷ್ಕಾ ಶರ್ಮಾ ಪಕ್ಕಾ ಹಳ್ಳಿ ಹೆಂಗಸಾದರೆ ವಿರಾಟ್'ಗೆ ಕಷ್ಟವಾಗುತ್ತಾ ?
Recommended image2
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved