ಅನುಷ್ಕಾ ಶರ್ಮಾ ಪಕ್ಕಾ ಹಳ್ಳಿ ಹೆಂಗಸಾದರೆ ವಿರಾಟ್'ಗೆ ಕಷ್ಟವಾಗುತ್ತಾ ?

First Published 1, Mar 2018, 10:20 PM IST
Bollywood Gossip News
Highlights

ವರುಣ್ ಧವನ್ ಮತ್ತು ಅನುಷ್ಕಾ ಜೊತೆಯಾಗಿ ನಟಿಸುತ್ತಿರುವ ಸೂಯಿ ದಾಗಾಚಿತ್ರದ ಪೋಸ್ಟರ್ ಗಳನ್ನು ಇಬ್ಬರೂ ಪ್ರತ್ಯೇಕವಾಗಿ ಸೋಷಲ್ ಮಿಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅವು ಎಲ್ಲೆಡೆ ಬಾರಿ ಸದ್ದು ಮಾಡಿದ್ದವು ಕೂಡ.

ಒಂದು ತಿಂಗಳ ಹಿಂದೆ ‘ಸೂಯಿ ದಾಗಾ’ ಚಿತ್ರದ ಪೋಸ್ಟರ್‌ನಲ್ಲಿ ಸಿಂಪಲ್‌ಆಗಿ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದ ಅನುಷ್ಕಾ ಶರ್ಮ ಈಗ ಅದೇ ಚಿತ್ರದ ಮತ್ತೆರಡು ಸ್ಟಿಲ್‌ಗಳ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ತಳ್ಳಿದ್ದಾರೆ.

ವರುಣ್ ಧವನ್ ಮತ್ತು ಅನುಷ್ಕಾ ಜೊತೆಯಾಗಿ ನಟಿಸುತ್ತಿರುವ ‘ಸೂಯಿ ದಾಗಾ’ ಚಿತ್ರದ ಪೋಸ್ಟರ್ ಗಳನ್ನು ಇಬ್ಬರೂ ಪ್ರತ್ಯೇಕವಾಗಿ ಸೋಷಲ್ ಮಿಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅವು ಎಲ್ಲೆಡೆ ಬಾರಿ ಸದ್ದು ಮಾಡಿದ್ದವು ಕೂಡ. ಅದಕ್ಕೆ ಕಾರಣ ಅನುಷ್ಕಾ ಸಿಂಪಲ್ ಕಾಸ್ಟೂಮ್. ನೀಲಿ ಬಣ್ಣದ ಸಾಧಾರಣ ಸೀರೆ ತೊಟ್ಟು, ರಸ್ತೆಯಲ್ಲಿ ನಡೆದು ಹೋಗುತ್ತಿರುವ ಅನುಷ್ಕಾಳನ್ನು

ಅಭಿಮಾನಿಗಳು ಅರೆ ಕ್ಷಣ ಕಣ್ಣು ಕಣ್ಣು ಬಿಟ್ಟು ಇವಳೇನಾ ಅನುಷ್ಕಾ ಎನ್ನುವ ಉದ್ಘಾರ ತೆಗೆದಿದ್ದರು.ಈಗ ಮತ್ತದೇ ರೀತಿಯ ಇನ್ನೆರಡು ಚಿತ್ರಗಳು ವೈರಲ್ ಆಗಿವೆ. ಇದರಲ್ಲಿ ಅನುಷ್ಕಾ ಮತ್ತು ವರುಣ್ ಒಟ್ಟಿಗೆ ಕೂತಿದ್ದು, ಅನುಷ್ಕಾ ಪಕ್ಕಾ ಹಳ್ಳಿಯ ಸಾಮಾನ್ಯ ಹೆಂಗಸಿನ ರೀತಿ ಕಾಣಿಸುತ್ತಾಳೆ. ಅಭಿಮಾನಿಗಳು ಇವಳೇನಾ ನಮ್ಮ ಅನುಷ್ಕಾ ಎಂದು ಪಾತ್ರಕ್ಕೆ ತಕ್ಕಂತೆ ಆಗಿರುವ ಬದಲಾವಣೆಗೆ ಫಿದಾ ಆಗಿದ್ದಾರೆ.

loader