- Home
- Life
- Relationship
- ದಳಪತಿ ವಿಜಯ್- ಸಂಗೀತಾ ದಂಪತಿ ಡಿವೋರ್ಸ್ ಕೇಸ್ಗೆ ಭಾರಿ ಟ್ವಿಸ್ಟ್: ಇಂದು ನಡೆದದ್ದು ಏನು?
ದಳಪತಿ ವಿಜಯ್- ಸಂಗೀತಾ ದಂಪತಿ ಡಿವೋರ್ಸ್ ಕೇಸ್ಗೆ ಭಾರಿ ಟ್ವಿಸ್ಟ್: ಇಂದು ನಡೆದದ್ದು ಏನು?
ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿದ್ದು, ಇಬ್ಬರೂ ಹಾಜರಾಗಲು ಸೂಚಿಸಿದೆ.

ದಳಪತಿ ವೈಯಕ್ತಿಯ ಜೀವನ
ದಕ್ಷಿಣದ ಸೂಪರ್‌ಸ್ಟಾರ್ ಮತ್ತು ರಾಜಕಾರಣಿ ದಳಪತಿ ವಿಜಯ್ ತಮ್ಮ ಚಿತ್ರಗಳ ಮೂಲಕ ಗಮನಾರ್ಹ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚಿನವರೆಗೂ, ನಟ ತಮ್ಮ ಕೊನೆಯ ಚಿತ್ರ "ಜನ ನಾಯಗನ್" ಬಿಡುಗಡೆಗಾಗಿ ಸುದ್ದಿಯಲ್ಲಿದ್ದರು. ಆದಾಗ್ಯೂ, ನಟನ ವೈಯಕ್ತಿಕ ಜೀವನವೂ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ.
ಡಿವೋರ್ಸ್ ಕೇಸ್ಗೆ ಟ್ವಿಸ್ಟ್
ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ ಆರೋಪ ಹೊರಿಸಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿ ಸದ್ದು ಮಾಡಿದ್ದಾರೆ. ಆದರೆ ಇದೀಗ ಅವರ ಈ ಕೇಸ್ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ.
ಸಂಗೀತಾ ಕೇಸ್
ಫೆಬ್ರವರಿ 24 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಕೇಸ್ ದಾಖಲಿಸಿದ್ದರು. ಕೋರ್ಟ್ ಆದೇಶದ ಪ್ರಕಾರ ಇವತ್ತು (ಏಪ್ರಿಲ್ 20) ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ರಾಜಕೀಯ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ವಿಜಯ್ ಅವರು ಖುದ್ದಾಗಿ ಕೋರ್ಟ್‌ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಕೇಸ್ ಕುತೂಹಲದ ತಿರುವು ಪಡೆದುಕೊಂಡಿದೆ.
ಡಿವೋರ್ಸ್ಗೆ ಇಬ್ಬರ ಒಪ್ಪಿಗೆ
ಅದೇನೆಂದರೆ, ಇಲ್ಲಿಯವರೆಗೆ ಇಬ್ಬರೂ ಪರಸ್ಪರ ಕಾದಾಟ ನಡೆಸಿದ್ದರು. ಆದರೆ ಇದೀಗ ವಿಜಯ್ ಮತ್ತು ಸಂಗೀತಾ ಇಬ್ಬರೂ ಸೇರಿ ಒಂದು ಹೊಸ ಜಂಟಿ ಅರ್ಜಿ (Joint Petition) ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ನಾವು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಇಷ್ಟು ದಿನ ನಡೆಯುತ್ತಿದ್ದ ವಾದ-ಪ್ರತಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಂತಾಗಿದ್ದು, ನ್ಯಾಯಾಧೀಶರು ಪ್ರಕರಣವನ್ನು ಜೂನ್ 15 ಕ್ಕೆ ಮುಂದೂಡಿದ್ದಾರೆ.
ಇಬ್ಬರ ಹಾಜರಿ
ಇಂದು ಸಲ್ಲಿಸಿದ್ದ ಅರ್ಜಿಯಲ್ಲಿ, ಚುನಾವಣಾ ಕೆಲಸದ ಕಾರಣದಿಂದಾಗಿ ವಿಜಯ್ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಈ ವಿಷಯವನ್ನು ಆಲಿಸಲು ಅವಕಾಶ ನೀಡಬೇಕೆಂದು ಕೋರಿದ್ದರು ವಿಜಯ್. ಆದರೆ ಅದನ್ನು ಸದ್ಯ ಕೋರ್ಟ್ ಒಪ್ಪದೇ ಇಬ್ಬರ ಮ್ಯೂಚುವಲ್ ಪಿಟಿಷನ್ ಕೇಸ್ ಅನ್ನು ಜೂನ್ 15 ಕ್ಕೆ ಮುಂದೂಡಿದ್ದು, ಅಂದು ಇಬ್ಬರ ಹಾಜರಿ ಅವಶ್ಯ ಎಂದಿದೆ ಕೋರ್ಟ್.
ಮುಂದೇನು?
ಇನ್ನು ಇಬ್ಬರೂ ಪರಸ್ಪರ ಡಿವೋರ್ಸ್ಗೆ ಒಪ್ಪಿಕೊಂಡಿರುವ ಕಾರಣ, ಮುಂದಿನ ವಿಚಾರಣೆ ವೇಳೆ ಕೋರ್ಟ್ ಪ್ರೊಸೀಜರ್ ನಡೆದು ಇಬ್ಬರ ಒಪ್ಪಿಗೆ ಇರುವುದರಿಂದ ಡಿವೋರ್ಸ್ ನೀಡುವ ನಿರೀಕ್ಷೆ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

