ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ
Sexual Wellness Tips: ಮುಂಜಾನೆ ಎನ್ನೋದೇ ಹಾಗೆ, ಪ್ರೆಶ್ ಮೂಡ್ ದಿನವನ್ನು ಪೂರ್ತಿಯಾಗಿ ಪ್ರೆಶ್ ಆಗಿರಲು ಸಹಾಯ ಮಾಡುತ್ತದೆ. ಮುಂಜಾನೆ ನೀವು ಮಾಡೋ ಕೆಲಸಗಳೇ ನಿಮ್ಮನ್ನು ದಿನವಿಡೀ ಉತ್ತಮ ರೀತಿಯಲ್ಲಿರಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಮುಂಜಾನೆ ಎದ್ದಾಗ, ಆ ಸಮಯವು ತುಂಬಾ ಸಂತೋಷ ಮತ್ತು ರೋಮ್ಯಾಂಟಿಕ್ ಆಗುತ್ತದೆ. ಅನೇಕ ಜನರು ಬೆಳಿಗ್ಗೆ ಕೆಲಸಕ್ಕೆ ಹೋಗಲು ಅವಸರದಲ್ಲಿದ್ದರೂ, ದಂಪತಿಗಳಿಗೆ ಇನ್ನೂ ಮುಂಜಾನೆಯ ಸಮಯವು ತುಂಬಾ ರೋಮ್ಯಾಂಟಿಕ್ ಮತ್ತು ಭಾವೋದ್ರಿಕ್ತವಾಗಿರುತ್ತದೆ.
ಅದು ಬೆಳಗ್ಗಿನ ಚುಂಬನವಾಗಿರಲಿ(Kiss), ಒಬ್ಬರನ್ನೊಬ್ಬರು ತಬ್ಬಿಕೊಳ್ಳಲಿ ಅಥವಾ ಪ್ರೇಮಪೂರಿತ ಮಾತುಗಳೇ ಆಗಿರಲಿ, ಈ ಸಮಯದಲ್ಲಿ ಮಾಡಿದ ಪ್ರೀತಿ ನಿಮ್ಮ ಸಂಬಂಧವನ್ನು ಗಾಢವಾಗಿಸುತ್ತದೆ. ಆದ್ದರಿಂದ ನಿಮ್ಮ ಬಂಧವನ್ನು ಇನ್ನಷ್ಟು ಬಲಪಡಿಸಲು ನೀವು ಪ್ರತಿದಿನ ಬೆಳಿಗ್ಗೆ ನಿಮ್ಮ ಸಂಗಾತಿಯೊಂದಿಗೆ ಏನೇನು ಮಾಡಬಹುದು ತಿಳಿದುಕೊಳ್ಳೋಣ.
ಪರಸ್ಪರ ಗ್ರೀಟ್ ಮಾಡುವ ಮೂಲಕ ಮುಂಜಾನೆ ಪ್ರಾರಂಭಿಸಿ
ಬೆಳಿಗ್ಗೆ ಎದ್ದ ಕೂಡಲೇ ಒಬ್ಬರಿಗೊಬ್ಬರು ಶುಭಾಶಯ ಕೋರುವ ಮೂಲಕ, ಪ್ರತಿಯೊಬ್ಬರೂ ತಮ್ಮ ದಿನಕ್ಕೆ ಉತ್ತಮ ಆರಂಭವನ್ನು ಬಯಸುತ್ತಾರೆ. ನಿಮ್ಮ ಸಂಗಾತಿಗೆ ಒಳ್ಳೆಯ ಮುಗುಳ್ನಗೆಯೊಂದಿಗೆ ಗುಡ್ ಮಾರ್ನಿಂಗ್(Good Morning) ಹೇಳುವುದು ನಿಮ್ಮಿಬ್ಬರ ಬೆಳಿಗ್ಗೆಯನ್ನು ಸಂತೋಷಗೊಳಿಸುತ್ತದೆ.
ಯಾರಿಗಾದರೂ ಶುಭೋದಯವನ್ನು ಹಾರೈಸುವುದು ಅವರಿಗೆ ಗೌರವ ನೀಡುವ ಸಂಕೇತವಾಗಿದೆ. ಈ ಒಳ್ಳೆಯ ಅಭ್ಯಾಸದೊಂದಿಗೆ ದಿನವನ್ನು ಪ್ರಾರಂಭಿಸುವುದು ನಿಮ್ಮ ಸಂಬಂಧವನ್ನು ಸುಂದರವಾಗಿಸುತ್ತದೆ.ನೀವು ದಿನ ಪೂರ್ತಿ ಹ್ಯಾಪಿಯಾಗಿರಲು ಈ ಮುಂಜಾನೆಯ ವಿಶ್ ಗಳು(Wish) ಸಹಾಯ ಮಾಡುತ್ತವೆ.
ಹೊಗಳುವ(Appreciate) ಮೂಲಕ ಸಂತೋಷ ಪಡಿಸಿ
ಸಣ್ಣ ಪುಟ್ಟ ವಿಷಯಗಳಿಗೂ ಸಂಗಾತಿಯನ್ನು ಹೊಗಳುವ, ಅವರಿಗೆ ವಿಶ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಸಂತೋಷದ ಹೊಗಳಿಕೆಗಳನ್ನು ಪಡೆಯುವುದು ನಮ್ಮ ಸಂತೋಷ ಮತ್ತು ಆತ್ಮವಿಶ್ವಾಸ ಎರಡನ್ನೂ ಹೆಚ್ಚಿಸುತ್ತದೆ. ನೀವು ಬೆಳಿಗ್ಗೆ ನಿಮ್ಮ ಸಂಗಾತಿಯನ್ನು ಹೊಗಳಿದರೆ, ಅವರ ದಿನದ ಪ್ರಾರಂಭವು ತುಂಬಾ ಉತ್ತಮವಾಗಿರುತ್ತದೆ ಮತ್ತು ಅವರು ದಿನವಿಡೀ ತಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೊಂದಿರುತ್ತಾರೆ.
ಮುಂಜಾನೆ ತಿಳಿಸಿದ ಅಭಿನಂದನೆಯು ಅವರ ಕೆಲಸ, ಅವರ ಕಠಿಣ ಪರಿಶ್ರಮ, ಅವರ ನೋಟ(Look) ಅಥವಾ ವ್ಯಕ್ತಿತ್ವದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅವರನ್ನು ಅಭಿನಂದಿಸುವ ಮೂಲಕ, ನೀವು ಅವರ ಸಾಮರ್ಥ್ಯಗಳಲ್ಲಿ ಅವರ ವಿಶ್ವಾಸವನ್ನು ಹೆಚ್ಚಿಸಬೇಕು ಮತ್ತು ದಿನವನ್ನು ಉತ್ತಮವಾಗಿ ಪ್ರಾರಂಭಿಸಬೇಕು.
ಪ್ರೀತಿಯ ಮತ್ತನ್ನು ಹೆಚ್ಚಿಸುವ ಕಾಫಿ(Coffee)
ಬೆಳಿಗ್ಗೆ, ಯಾರೂ ಬೆಡ್ ನಿಂದ ಎದ್ದು ಅಡುಗೆಮನೆಗೆ ಹೋಗಲು ಬಯಸುವುದಿಲ್ಲ. ಆದರೆ ನಿಮ್ಮ ಸಂಗಾತಿಯು ಒಟ್ಟಿಗೆ ಇದ್ದರೆ, ಉಪಾಹಾರವನ್ನು ತಯಾರಿಸುವುದು ಸಹ ಮೋಜಿನದಾಗಿರುತ್ತದೆ. ರೊಮ್ಯಾಂಟಿಕ್ ಮನಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಚಹಾ / ಕಾಫಿ ಮತ್ತು ಉಪಾಹಾರವನ್ನು ತಯಾರಿಸಬಹುದು. ಇದು ನಿಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಮನೆಕೆಲಸವನ್ನು ಸಹ ಸುಲಭವಾಗಿಸುತ್ತದೆ.
ಮುಂಜಾನೆ ಜೊತೆಯಾಗಿ ಕುಳಿತು ಕಾಫಿ ಕುಡಿಯಿರಿ ಮತ್ತು ಉಪಾಹಾರವನ್ನು(Breakfast) ಸೇವಿಸಿ. ಇದೆಲ್ಲದಕ್ಕೂ ನಿಮಗೆ ಸಾಕಷ್ಟು ಸಮಯವಿಲ್ಲದಿರಬಹುದು, ಆದರೆ ಕೆಲವೊಮ್ಮೆ ಬೆಳಿಗ್ಗೆ ಸ್ವಲ್ಪ ಬೇಗನೆ ಏಳುವುದು ನಿಮ್ಮ ಸಂಬಂಧದಲ್ಲಿ ಈ ಸುಂದರ ಕ್ಷಣಗಳನ್ನು ಸ್ವಾಗತಿಸಲು ಒಂದು ಮಾರ್ಗವಾಗಿದೆ. ಇದರಿಂದ ಇಬ್ಬರ ಮೂಡ್ ಉತ್ತಮವಾಗಿರುತ್ತದೆ.
ಮೋಜಿನ ಜೋಕ್ ಗಳೊಂದಿಗೆ(Joke) ದಿನವನ್ನು ಪ್ರಾರಂಭಿಸಿ
ನೀವು ಬೆಳಿಗ್ಗೆ ನಗುತ್ತಿದ್ದರೆ, ನಿಮ್ಮ ದಿನವು ಖಂಡಿತವಾಗಿಯೂ ಅತ್ಯುತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ಜೋಕ್ ಗಳನ್ನು ಕೇಳುವ ಮೂಲಕ ಅಥವಾ ಅವರೊಂದಿಗೆ ಮೋಜು ಮಾಡುವ ಮೂಲಕ, ನೀವು ನಿಮ್ಮ ಬೆಳಿಗ್ಗೆಯನ್ನು ಸಂತೋಷ ಮತ್ತು ಉಲ್ಲಾಸದಾಯಕವಾಗಿಸಬಹುದು. ಇದು ನಿಮಗೆ ಇಡೀ ದಿನ ಪಾಸಿಟಿವ್ ಆಗಿರಲು ಸಹಾಯ ಮಾಡುತ್ತದೆ.