ನಿಮ್ಮ ಲವ್ ಬ್ರೇಕಪ್ ಆಗೋ ಸ್ಥಿತಿಯಲ್ಲಿದ್ಯಾ ? ತಿಳ್ಕೊಳ್ಳೋದು ಹೇಗೆ ?
ಪ್ರೀತಿ (Love)ಯಲ್ಲಿ ಇರೋ ಖುಷಿ (Happy) ಎಷ್ಟೋ ಚೆನ್ನಾಗಿರುತ್ತೋ, ಹಾಗೆಯೇ ಪ್ರೀತಿಯಿಂದ ಹೊರಬರುವ ನೋವು (Pain) ಕೂಡಾ ಅಷ್ಟೇ ಗಾಢವಾಗಿರುತ್ತೆ. ಹೀಗಾಗಿಯೇ ಬ್ರೇಕಪ್ (Breakup) ಆದಾಗ ಮನನೊಂದು ಅದೆಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಳ್ಳುವುದು ಇದೆ. ಪ್ರೀತಿಯಲ್ಲಿ ದೂರವಾಗೋದು ಯಾರಿಗೂ ಇಷ್ಟವಿಲ್ಲದ ವಿಷಯ. ಹಾಗಿದ್ರೆ ನಿಮ್ಮ ಲವ್ ಬ್ರೇಕಪ್ ಆಗೋ ಸ್ಥಿತಿಯಲ್ಲಿದ್ಯಾ ? ತಿಳ್ಕೊಳ್ಳೋದು ಹೇಗೆ ?
ಪ್ರೀತಿ (Love) ಒಂದು ಸುಂದರ ಅನುಬಂಧ. ಹುಡುಗ-ಹುಡುಗಿ ಇಬ್ಬರೂ ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಹೋದ್ದಾಗ ಅದೊಂದು ಸುಮಧುರ ಬಾಂಧವ್ಯವಾಗುತ್ತದೆ. ಭಿನ್ನಾಭಿಪ್ರಾಯಗಳು ಮೂಡಿದಾಗ ಸಂಬಂಧವನ್ನು ಕೊನೆಗೊಳಿಸಿ ಮುಂದೆ ಸಾಗಬೇಕಾಗುತ್ತದೆ. ಕೆಲವರು ಎಷ್ಟು ಬೇಗ ಪ್ರೀತಿಯಲ್ಲಿ ಬೀಳುತ್ತಾರೋ ಅಷ್ಟೇ ಬೇಗ ಅದರಿಂದ ಹೊರಬರುತ್ತಾರೆ. ದೀರ್ಘಾವಧಿಯ ಸಂಬಂಧ (Relationship) ಇರಿಸಿಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಸಂಬಂಧ ದೀರ್ಘ ಕಾಲದಿಂದ ಇರುವಂಥದ್ದಾಗಲೀ, ಕಿರು ಅವಧಿಯದ್ದಾಗಲೀ, ಕೆಲವೊಮ್ಮೆ ಬ್ರೇಕಪ್ (Breakup) ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಸಂಬಂಧವೊಂದು ಇದ್ದಕ್ಕಿದ್ದ ಹಾಗೆ ಕೊನೆಯಾಗಬಹುದು. ಕೆಟ್ಟ ಘಳಿಗೆ, ಕೆಟ್ಟದಾದ ಒಂದು ಜಗಳ, ಸಂಗಾತಿಯ (Partner) ಮೋಸ (Cheat) ಇತ್ಯಾದಿ ಹಲವಾರು ಕಾರಣಗಳಿಂದ ಸಂಬಂಧ ಅಂತ್ಯಗೊಳ್ಳಬಹುದು. ಕಹಿಯಾದ ಸತ್ಯವೆಂದರೆ, ಸಂಬಂಧ ಕೊನೆಯಾಗಲು ಇಬ್ಬರೂ ಕಾರಣರಾಗಬೇಕಿಲ್ಲ. ಒಬ್ಬರ ಹಠ, ಮತ್ತೊಬ್ಬರ ಈಗೋ(Ego)ಗಳಿಂದಲೂ ಸಂಬಂಧ ಮುರಿಯಬಹುದು. ಇನ್ನೊಬ್ಬ ವ್ಯಕ್ತಿಯ ಪಾತ್ರವೇ ಇಲ್ಲದಿದ್ದರೂ, ಅವರಿಗೆ ಈ ಸಂಬಂಧದಲ್ಲಿ ಮುಂದುವರಿಯಲು ಇಷ್ಟವಿದ್ದರೂ ಒಬ್ಬರ ಕಾರಣದಿಂದ ಅದು ಸಾಧ್ಯವಾಗದಿರಬಹುದು. ನಿಮ್ಮ ಲವ್ ಕೂಡಾ ಬ್ರೇಕಪ್ ಆಗೋ ಸ್ಥಿತಿಯಲ್ಲಿದ್ಯಾ ? ಹಾಗಿದ್ರೆ ಅದನ್ನು ತಿಳ್ಕೊಳ್ಳೋದು ಹೇಗೆ ?
ಗಂಡ-ಹೆಂಡ್ತಿ ಮಧ್ಯೆ ಜಗಳ ಆಗೋದು ಇದೇ ಕಾರಣಕ್ಕೆ ! ನೀವೂ ಹೀಗೆ ಮಾಡ್ತಿದ್ದೀರಾ ನೋಡ್ಕೊಳ್ಳಿ
ಪ್ರೀತಿಯಲ್ಲಿ ಬೀಳುವುದಕ್ಕೂ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ ಕಾಲಾನಂತರದಲ್ಲಿ ಅದು ಬದಲಾಗುವ ಸಾಧ್ಯತೆಯಿದೆ. ಸಂಬಂಧದ ಏರಿಳಿತಗಳು ಕ್ರಮೇಣ ಬೆಳಕಿಗೆ ಬರುತ್ತವೆ. ಪ್ರೀತಿಪಾತ್ರರೊಡನೆ ಸಂಬಂಧವನ್ನು ಹೊಂದಲು ಸಾಧ್ಯವೇ ಎಂಬ ಬಗ್ಗೆ ಅನುಮಾನಗಳು ಉಂಟಾಗುತ್ತವೆ, ವಿವಿಧ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಸಂಬಂಧ ಉಳಿಯುತ್ತದೆಯೋ ಇಲ್ಲವೋ, ಅದರ ಸುಳಿವು ಮೊದಲಿನಿಂದಲೂ ಕಂಡುಬರುತ್ತದೆ. ಅವು ಯಾವುವು ಎಂದು ನೋಡೋಣ.
1) ನೀವು ಮೊದಲ ಬಾರಿ ಪ್ರೀತಿಯಲ್ಲಿ ಬಿದ್ದಾಗ ಇರುವಷ್ಟು ಖುಷಿ, ಉತ್ಸಾಹ ನಂತರದ ದಿನಗಳಲ್ಲಿ ಇರುವುದಿಲ್ಲ. ಸಂಬಂಧದಲ್ಲಿರುವ ಗಾಢತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದುದು ಅತೀ ಮುಖ್ಯ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಇದು ತುಂಬಾ ದಿನಗಳ ವರೆಗೆ ಮುಂದುವರೆದರೆ ನಿಮ್ಮ ಸಂಬಂಧ ಬ್ರೇಕಪ್ ಆಗೋ ಹಂತದಲ್ಲಿದೆ ಎಂದರ್ಥ. ಹೀಗಾಗಿ ತಕ್ಷಣ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ.
2) ಅನೇಕ ಜನರು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಸಣ್ಣ ಪುಟ್ಟ ವಿಷಯಕ್ಕೂ ಸಿಟ್ಟುಗೊಳ್ಳುತ್ತಾರೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದಿಲ್ಲ. ಮೊದಲ ದಿನದಿಂದಲೇ ನಿಮ್ಮ ಸಂಗಾತಿಯ ಸೂಕ್ಷ್ಮತೆಯನ್ನು ಗೌರವಿಸಿ. ಅವರನ್ನು ನೋಯಿಸುವ ಮಾತುಗಳನ್ನಾಡದ ಬಗ್ಗೆ ಎಚ್ಚರ ವಹಿಸಿ. ಸಂಗಾತಿಯನ್ನು ಮತ್ತೆ ಮತ್ತೆ ನೋಯಿಸಿದರೆ ಆ ಸಂಬಂಧದ ಪರಿಣಾಮ ಒಳ್ಳೆಯದಾಗಿರುವುದಿಲ್ಲ. ಅಥವಾ ಸಂಗಾತಿಯ ಸಂವೇದನಾಶೀಲತೆಯು ನಿಮ್ಮನ್ನು ಕಾಡುತ್ತಿದ್ದರೆ, ಆ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.
ಈ ರಾಶಿಯ ಹುಡುಗಿಯರು ತಪ್ಪು ಹುಡುಗರ ಆಯ್ಕೆ ಮಾಡೋದೇ ಹೆಚ್ಚು!
3) ಪ್ರೀತಿಯೆಂಬ ಸಂಬಂಧದಲ್ಲಿ ಸುಪೀರಿಯರ್ ಎಂಬ ಕಾಂಪ್ಲೆಕ್ಸ್ ಬರಲೇಬಾರದು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಅಧಿಕಾರ ಸ್ಥಾಪಿಸಲು ಯತ್ನಿಸಿದರೆ ಪ್ರೀತಿಯನ್ನು ಉಳಿಸಿಕೊಳ್ಳುವುದು ಕಷ್ಟ. ಈ ಥರ ನಾನೇ ಮೇಲೆಂಬ ವರ್ತನೆಯಿಂದ ಸಂಗಾತಿ ಕಂಫರ್ಟ್ ಆಗಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಬ್ರೇಕಪ್‌ಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು.
4) ಸಾಮಾನ್ಯವಾಗಿ ಎಲ್ಲದರ ಬಗ್ಗೆ ತಪ್ಪು ತಿಳುವಳಿಕೆ ಇರುತ್ತದೆ. ಆದರೆ ಅವುಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ತಪ್ಪು ತಿಳುವಳಿಕೆ ಹೆಚ್ಚುತ್ತಿದ್ದರೆ, ಅದನ್ನು ಪರಿಹರಿಸಲೂ ಆಗದಿದ್ದರೆ ಅದು ಸೋಲಾಗುತ್ತದೆ. ಇದರಿಂದ ಇಬ್ಬರೂ ಬೇರೆ ಬೇರೆಯಾಗ ಬೇಕಾಗಿ ಬರಬಹುದು.
5) ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ಬಹಳ ಮುಖ್ಯ. ಗೌರವ ನೀಡದಿದ್ದಾಗ ಯಾರೂ ಅಂಥಾ ಪ್ರೀತಿಯಲ್ಲಿರಲು ಇಷ್ಟಪಡುವುದಿಲ್ಲ. ಹಂತ ಹಂತವಾಗಿ ದೂರ ಹೋಗಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೀತಿಯಲ್ಲಿ ಪರಸ್ಪರ ಗೌರವ ನೀಡುತ್ತಿದ್ದೀರೋ ಎಂಬುದನ್ನು ಗಮನಿಸಿಕೊಳ್ಳಿ.