Winter Diet : ಈ ಚಳಿಯಲ್ಲಿ ಉಪಾಹಾರದಲ್ಲಿ ಇದನ್ನು ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ
ಚಳಿಗಾಲದ ಸೀಸನ್ ನಲ್ಲಿ (winter season) ಉಪಾಹಾರದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ, ಶೀತವು ಜೀರ್ಣಕ್ರಿಯೆ ಮತ್ತು ಚಯಾಪಚಯಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ದಿನದ ಆರಂಭದಲ್ಲಿ ಉಪಾಹಾರದಲ್ಲಿ ಕೆಲವು ವಿಶೇಷ ಚಳಿಗಾಲದ ಆಹಾರಗಳನ್ನು ಸೇರಿಸಬೇಕು. ಇದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದಿನವಿಡೀ ಶಕ್ತಿಯನ್ನು ಅನುಭವಿಸುವಂತೆ ಮಾಡುತ್ತದೆ.
ಚಳಿಗಾಲ(Winter)ದಲ್ಲಿ ಈ ಚಳಿಗಾಲದ ಆಹಾರವನ್ನು ತೆಗೆದುಕೊಳ್ಳುವುದು ಅನೇಕ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಕೆಲವೊಂದು ಆಹಾರಗಳು ಚಳಿಗಾಲದ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. ಅಂತಹ ಆಹಾರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಅವುಗಳ ಬಗ್ಗೆ ತಿಳಿಯೋಣ.
ಚಳಿಗಾಲದಲ್ಲಿ ಬೆಳಗಿನ ಉಪಾಹಾರಕ್ಕೆ ಏನು ತಿನ್ನಬೇಕು?
ಆಯುರ್ವೇದ ತಜ್ಞರ ಪ್ರಕಾರ ನೀವು ಈ ಚಳಿಗಾಲದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು.ಸರಿಯಾದ ಆಹಾರ ಕ್ರಮದಿಂದ ಮಾತ್ರ ಉತ್ತಮ ಅರೋಗ್ಯ (better health) ಹೊಂದಿರಲು ಸಾಧ್ಯವಾಗುತ್ತದೆ. ಆದುದರಿಂದ ತಿಂಡಿ, ಹಣ್ಣು ಏನೇ ಇರಲಿ, ತಿನ್ನುವ ಆಹಾರದ ಬಗ್ಗೆ ಗಮನ ಹರಿಸಬೇಕಾಗಿದೆ.
1. ಚಳಿಗಾಲದ ತೂಕ ನಷ್ಟ: ಉಗುರುಬೆಚ್ಚಗಿನ ನೀರು ಮತ್ತು ಜೇನುತುಪ್ಪ
ತಜ್ಞರು ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು ಮತ್ತು ಜೇನುತುಪ್ಪವನ್ನು (honey) ಸೇವಿಸಲು ಶಿಫಾರಸು ಮಾಡುತ್ತಾರೆ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮಾತ್ರವಲ್ಲದೆ ವಿಷವನ್ನು ಹೊರಹಾಕುತ್ತದೆ.
ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬೆಚ್ಚಗಿನ ನೀರು ಮತ್ತು ಜೇನು ತುಪ್ಪ ಉತ್ತಮ ಮಾರ್ಗ. ಜೇನುತುಪ್ಪದೊಂದಿಗೆ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದಲೂ ಸಹ ದೇಹವು ತೇವಾಂಶದಿಂದ ಕೂಡಿರುತ್ತದೆ. ಜೊತೆಗೆ ಜೇನುತುಪ್ಪ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು(immunity power) ಹೆಚ್ಚಿಸುತ್ತದೆ.
2. ಬೆಳಗಿನ ಉಪಾಹಾರಕ್ಕೆ ಪಪ್ಪಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು
ಜೀರ್ಣಕ್ರಿಯೆ ದುರ್ಬಲವಾದಾಗ ಪಪ್ಪಾಯಿ (papaya) ತಿನ್ನುವುದರಿಂದ ತುಂಬಾ ಲಾಭಕಾರಿ. ಇದು ಮಲಬದ್ಧತೆ, ಎದೆಯುರಿಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಇದು ತೂಕ ಇಳಿಸುವ ಅದ್ಭುತ ಆಹಾರವಾಗಿದೆ. ಚಳಿಗಾಲದಲ್ಲಿ ಪಪ್ಪಾಯಿ ತಿನ್ನಲು ಪ್ರಾರಂಭಿಸಿರಿ.
3. ನೆನೆಸಿದ ಬಾದಾಮಿ
ನೆನೆಸಿಟ್ಟ ಬಾದಾಮಿಯನ್ನು (soaked almond) ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗಿನ ಉಪಾಹಾರದ ಸಮಯದಲ್ಲಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದು ವಿಟಮಿನ್ ಇ, ಫೈಬರ್, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ನೆನೆಸಿದ ಬಾದಾಮಿ ಕೂಡ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ರಾತ್ರಿ 5-6 ಬಾದಾಮಿ ನೆನೆಸಿ ಬೆಳಗ್ಗೆ ಉಪಾಹಾರದ ಜೊತೆ ಸೇವಿಸಿ.
4. ಓಟ್ ಮೀಲ್
ಹವಾಮಾನವು ಯಾವುದೇ ಆಗಿರಲಿ, ಓಟ್ ಮೀಲ್ ಗಿಂತ (oat meal) ಉತ್ತಮ ಉಪಾಹಾರವಿಲ್ಲ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಹೊಟ್ಟೆಯನ್ನು ತುಂಬಿರುವಂತೆ ಮಾಡುವುದಲ್ಲದೆ ದಿನವಿಡೀ ಶಕ್ತಿಯನ್ನು ಒದಗಿಸುತ್ತದೆ. ಚಳಿಗಾಲದಲ್ಲಿ ಓಟ್ ಮೀಲ್ ತಿನ್ನುವುದು ಕೊಬ್ಬು ಕಡಿಮೆ ಮಾಡಲು ಈ ಆಹಾರ ಕ್ರಮವು ಸಹಾಯ ಮಾಡುತ್ತದೆ ಮತ್ತು ಕರುಳನ್ನು ಆರೋಗ್ಯಕರವಾಗಿರಿಸುತ್ತದೆ.
5. ನೆನೆಸಿದ ವಾಲ್ ನಟ್ ಗಳು
ಚಳಿಗಾಲದ ಆಹಾರಗಳಲ್ಲಿ ನೆನೆಸಿದ ವಾಲ್ ನಟ್ ಗಳನ್ನು (walnuts) ಸೇರಿಸಿ. ತಣ್ಣನೆಯ ನೆನೆಸಿದ ಬಾದಾಮಿಯೊಂದಿಗೆ ನೆನೆಸಿದ ವಾಲ್ ನಟ್ ಗಳನ್ನು ಸಹ ತಿನ್ನಿ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.