ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಡೆಲಿವರಿ ಬಾಯ್ ಒಬ್ಬ ರಸ್ತೆಯಲ್ಲಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಕೃತ ಕೃತ್ಯವು, ಮನುಷ್ಯರು ಪ್ರಾಣಿಗಳ ಮೇಲೂ ನಡೆಸುತ್ತಿರುವ ದೌರ್ಜನ್ಯದ ಕರಾಳ ಮುಖವನ್ನು ಬಯಲುಮಾಡಿದೆ.
ಈಗತಾನೇ ಹುಟ್ಟಿದ ಹಸುವಿನಿಂದ ಹಿಡಿದು ವಯೋವೃದ್ಧೆಯವರೆಗೂ ಯಾರೂ ಸೇಫಲ್ಲ ಎನ್ನುವ ಮಾತು ಕೇಳಿಬರುತ್ತಿದ್ದು ಅದೆಷ್ಟೋ ದಶಕಗಳೇ ಕಳೆದುಹೋಗಿವೆ. ಕೊನೆಗೆ ತಮ್ಮ ಸ್ವಂತ ಅಮ್ಮ, ತಂಗಿ, ಅಕ್ಕನನ್ನೂ ಬಿಡದ ಕಾಮುಕರ ವಿಷಯಗಳು ವರದಿಯಾಗುತ್ತಲೇ ಇರುತ್ತವೆ. ಇವರಿಗೆ ಕೇವಲ ವಿಕೃತಕಾಮಿಗಳು ಎಂದರೂ ಸಾಲದು. ಅದಕ್ಕಿಂತಲೂ ಇನ್ನೂ ಅತ್ಯಂತ ಘೋರ ಪದ ಇದ್ದರೆ ಒಳಿತು ಎನ್ನಿಸುತ್ತದೆ. ಹಾಗೆಂದು ಹೆಣ್ಣುಮಕ್ಕಳು ಮಾತ್ರನಾ, ಅಲ್ಲವೇ ಅಲ್ಲ. ಪುರುಷರು ಕೂಡ ಸೇಫಲ್ಲ. ಅದು ಕೂಡ ಪುರುಷರಿಂದಲೇ ಪುರುಷರು ಸೇಫಲ್ಲ ಎನ್ನುವ ಉದಾಹರಣೆಗಳು, ಘಟನೆಗಳೂ ಕೇಳಿಬರುತ್ತಿವೆ.

ವಿಕೃತಕಾ*ಮಿಗಳು
ಆದರೆ, ಮಾವನವ ವಿಕೃತ ಮನಸ್ಸು ಕೇವಲ ಮನುಷ್ಯರ ಮೇಲಷ್ಟೇ ಅಲ್ಲದೇ, ಮನುಷ್ಯರು ಸಿಗದೇ ಹೋದಾಗ ಅಥವಾ ಮನುಷ್ಯರ ಮೇಲೆ ತಮ್ಮ ಕಾಮವನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಅಂಥವರಿಗೆ ಕಾಣಿಸುವುದು ಪ್ರಾಣಿಗಳು. ಇದಾಗಲೇ ನಾಯಿಗಳ ಮೇಲೆ ಲೈಂ*ಗಿಕ ಕ್ರಿಯೆ ನಡೆಸಿರುವ ದೃಶ್ಯಗಳಂತೂ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಸಿಸಿಟಿವಿಗಳು ಇರುವ ಕಡೆಗಳಲ್ಲಿಯೂ ಅಷ್ಟೊಂದು ವಿಡಿಯೋಗಳು ವೈರಲ್ ಆಗುತ್ತಿವೆ ಎಂದರೆ, ಇನ್ನು ನಿರ್ಜನ ಪ್ರದೇಶಗಳಲ್ಲಿ ಅದೆಷ್ಟು ನಾಯಿಗಳು ಈ ವಿಕೃತಕ್ಕೆ ಬಲಿಯಾಗುತ್ತಿವೆಯೋ ಗೊತ್ತಿಲ್ಲ. ಕುರಿ, ಮೇಕೆಗಳನ್ನೂ ಜನರು ಈ ಕೃತ್ಯಕ್ಕೆ ಬಿಟ್ಟಿಲ್ಲ.
ಬೆಂಗಳೂರು ಶಾಕಿಂಗ್
ಇದೀಗ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ರಸ್ತೆಯ ಮೇಲೆ ಮಲಗಿರುವ ಹಸುವಿನ ಮೇಲೆ ಮಧ್ಯರಾತ್ರಿ ಡೆಲವರಿ ಬಾಯ್ ಇಂಥದ್ದೇ ಕೃತ್ಯ ಮಾಡಿದ್ದು ಅದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅತ್ತ ಇತ್ತ ನೋಡುತ್ತಾ ಬರುವ ಈ ಕಾಮುಕ ಕೊನೆಗೆ ಪ್ಯಾಂಟ್ ಸರಿಸಿ, ಅಲ್ಲಿಯೇ ಮಲಗಿದ್ದ ಹಸುವಿನ ಮೇಲೆ ತನ್ನ ತೃಷೆ ತೀರಿಸಿಕೊಳ್ಳುವುದನ್ನು ನೋಡಬಹುದು. ಗ್ರಾಮೀಣ ಭಾಗವನ್ನೂ ಬಿಡದೇ ಹಸುಗಳು ರಾತ್ರೋರಾತ್ರಿ ಕಳ್ಳತನ ಆಗುತ್ತಿರುವುದು ಸರ್ವೇ ಸಾಮಾನ್ಯ ಎನ್ನುವ ಈ ದಿನಗಳಲ್ಲಿ, ಇದೀಗ ಈ ಕೃತ್ಯಗಳೂ ಗೋಮಾತೆಯ ಮೇಲೆ ನಡೆಯುತ್ತಿದೆ.
24 ವರ್ಷದ ಕಾಮುಕ
ಈತನನ್ನು 24 ವರ್ಷದ ಡೆಲಿವರಿ ಬಾಯ್ ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರಿನ ಅಕ್ಕಿಪೇಟೆಯ ಬಳಿ ಈ ಘಟನೆ ನಡೆದಿದೆ. ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಆ ಯುವಕನ ಹಿತದೃಷ್ಟಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಒಟ್ಟಿನಲ್ಲಿ ಕಾಮುಕನ ಹೆಸರನ್ನು ಪೊಲೀಸರು ರಿವೀಲ್ ಮಾಡಲಿಲ್ಲ, ಆದರೆ ವಿಡಿಯೋ ಮಾತ್ರ ವೈರಲ್ ಆಗಿದೆ.


