MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪ್ರೀತಿಯಲ್ಲಿ ಬಿದ್ದಿರುವ GenZ ಹುಡುಗಿಯರೇ.. ಇಂಥ ಹುಡುಗರ ಹಿಂದೆ ಹೋದ್ರೆ ಕೈಗೆ ಸಿಗುತ್ತೆ ಚಿಪ್ಪು

ಪ್ರೀತಿಯಲ್ಲಿ ಬಿದ್ದಿರುವ GenZ ಹುಡುಗಿಯರೇ.. ಇಂಥ ಹುಡುಗರ ಹಿಂದೆ ಹೋದ್ರೆ ಕೈಗೆ ಸಿಗುತ್ತೆ ಚಿಪ್ಪು

ಪ್ರೀತಿ ಒಂದು ಸುಂದರವಾದ ಭಾವನೆ, ಆದರೆ ಅದರೊಳಗೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅತ್ಯಗತ್ಯ. ಈ GenZ ಹುಡುಗಿಯರು ಸುಲಭದಲ್ಲಿ ಪ್ರೀತಿ ಮಾಡಿ ಬಳಿಕ ಮೋಸ ಹೋಗುತ್ತಾರೆ. ಆದರೆ ನೀವು ಎಂಥಹ ಹುಡುಗನ ಸ್ನೇಹದಿಂದ ದೂರ ಉಳಿಯಬೇಕು ನೋಡೋಣ.

1 Min read
Author : Pavna Das
Published : Apr 14 2026, 02:24 PM IST
Share this Photo Gallery
  • FB
  • TW
  • Linkdin
  • Whatsapp
16
GenZ ಹುಡುಗಿಯರಿಗೆ ಕಿವಿ ಮಾತು
Image Credit : Gemini AI

GenZ ಹುಡುಗಿಯರಿಗೆ ಕಿವಿ ಮಾತು

ಪ್ರೀತಿ ಮಾಡೋದು ತಪ್ಪಲ್ಲ. ಆದರೆ ಪ್ರೀತಿಯ ಆಯ್ಕೆ ಮಾಡುವ ಸರಿಯಾಗಿ ಆಯ್ಕೆ ಮಾಡೋದು ಮುಖ್ಯ. ಇಲ್ಲವಾದರೆ ಜೀವನವೇ ತಪ್ಪಾಗಿ ಹೋಗುತ್ತದೆ. ಈಗಿನ GenZ ಹುಡುಗಿಯರು ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಬಳಿಕ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. GenZ ಹುಡುಗಿಯರು ಎಂತರ ಹುಡುಗರ ಪ್ರೀತಿಯಿಂದ ದೂರ ಉಳಿಯುವುದೇ ಉತ್ತಮ ಎನ್ನುವುದನ್ನು ನೋಡೋಣ.

26
ಅನೇಕ ಮಹಿಳಾ ಸ್ನೇಹಿತರನ್ನು ಹೊಂದಿರುವ ಪುರುಷ
Image Credit : Gemini AI

ಅನೇಕ ಮಹಿಳಾ ಸ್ನೇಹಿತರನ್ನು ಹೊಂದಿರುವ ಪುರುಷ

ಹೆಚ್ಚಿನ ಸಂಖ್ಯೆಯ ಮಹಿಳಾ ಸ್ನೇಹಿತರನ್ನು ಹೊಂದಿರುವ ಪುರುಷರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಮಹಿಳಾ ಸ್ನೇಹಿತರನ್ನು ಹೊಂದಿರುವ ಪ್ರತಿಯೊಬ್ಬ ಪುರುಷನೂ ಸಮಸ್ಯೆಯನ್ನು ಉಂಟುಮಾಡುವುದಿಲ್ಲವಾದರೂ, ಈ ಸ್ನೇಹದಿಂದ ಮುಂದೆ ತೊಂದರೆಯಾಗುವ ಸಾಧ್ಯತೆ ಇದೆ

Related Articles

Related image1
Situationship: ಹೊಸ ಟ್ರೆಂಡ್ ಸಿಚುಯೇಷನ್‌ಶಿಪ್‌ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!
Related image2
ಸೇರಿ 15 ದಿನಗಳಲ್ಲಿ ಕೆಲಸ ಬಿಡೋ ಸ್ವಭಾವ! ತಲೆನೋವಾಗಿದೆ Gen Z ಮನೋಭಾವ!
36
ತನ್ನ ಮಾಜಿ ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಹುಡುಗ
Image Credit : Gemini AI

ತನ್ನ ಮಾಜಿ ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಹುಡುಗ

ತನ್ನ ಮಾಜಿ ಸಂಗಾತಿಯ ಬಗ್ಗೆ ಕಹಿಯಾಗಿ ಮಾತನಾಡುವ, ತನ್ನ ಪ್ರಸ್ತುತ ಸಂಗಾತಿಯನ್ನು ಅಪಹಾಸ್ಯ ಮಾಡುವ ಅಥವಾ ನಿರಂತರವಾಗಿ ತನ್ನನ್ನ ತಾನು ವಿಕ್ಟಿಮ್ ಎನ್ನುವಂತೆ ತೋರಿಸಿಕೊಳ್ಳುವ ವ್ಯಕ್ತಿ ಪ್ರಾಮಾಣಿಕ ಪುರುಷನಲ್ಲ. ಅಂತಹ ಪುರುಷರಿಂದ ದೂರವಿರಬೇಕು.

46
ಕೆಲವೊಮ್ಮೆ ಹತ್ತಿರ ಮತ್ತು ಕೆಲವೊಮ್ಮೆ ದೂರ ಉಳಿಯುವ ವ್ಯಕ್ತಿ
Image Credit : Gemini AI

ಕೆಲವೊಮ್ಮೆ ಹತ್ತಿರ ಮತ್ತು ಕೆಲವೊಮ್ಮೆ ದೂರ ಉಳಿಯುವ ವ್ಯಕ್ತಿ

ಕೆಲವು ವ್ಯಕ್ತಿಗಳು ಹೇಗಿರುತ್ತಾರೆ ಅಂದ್ರೆ, ಕೆಲವೊಮ್ಮೆ ತುಂಬಾನೆ ಕ್ಲೋಸ್ ಆಗಿರುತ್ತಾರೆ. ಮತ್ತೆ ಕೆಲವೊಮ್ಮೆ ನಿಮ್ಮಿಂದ ದೂರ ಉಳಿಯುತ್ತಾರೆ. ಆದರೆ ಕಾರಣ ಏನು ಅನ್ನೋದು ನಿಮಗೆ ಗೊತ್ತಿರೋದಿಲ್ಲ. ಅಂದರೆ ನಿಮ್ಮನ್ನು ಬೇಕಾದ ಹಾಗೆ ಬಳಕೆ ಮಾಡಿ, ನಂತರ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಹಾಗಾಗಿ ಹುಡುಗಿಯರೇ ಅಂತಹ ಹುಡುಗರಿಂದ ದೂರ ಉಳಿಯಲು ಪ್ರಯತ್ನಿಸಿ.

56
ಎಲ್ಲವನ್ನೂ ಮುಂದಕ್ಕೆ ದೂಡುವ ವ್ಯಕ್ತಿ
Image Credit : chatgpt

ಎಲ್ಲವನ್ನೂ ಮುಂದಕ್ಕೆ ದೂಡುವ ವ್ಯಕ್ತಿ

ನೀವು ಇಷ್ಟಪಟ್ಟಿರುವ ವ್ಯಕ್ತಿ ನೀವು ಏನೇ ಜೊತೆಯಾಗಿ ಮಾಡುವ ಕುರಿತು ಯೋಚನೆ ಮಾಡಿದರು, ಅದನ್ನು ಮುಂದಕ್ಕೆ ದೂಡುತ್ತಿದ್ದರೆ, ನಿಮ್ಮ ಜೊತೆ ಯಾವುದೇ ಫ್ಯೂಚರ್ ಪ್ಲ್ಯಾನ್ ಮಾಡಲು ಅವರು ಇಷ್ಟ ಪಡದೇ ಇದ್ದರೆ ಅವರು ನಿಮ್ಮ ಜೊತೆ ಇರಲು ಇಷ್ಟ ಪಡುವವರು ಅಲ್ಲ, ಟೈಮ್ ಪಾಸ್ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರಲಿ.

66
ಆರಂಭದಲ್ಲಿ ನಿಮ್ಮನ್ನು ಪೂಜಿಸಿ, ಮತ್ತೆ ಕೆಟ್ಟದಾಗಿ ನಡೆಸಿಕೊಳ್ಳುವವರು
Image Credit : freepik

ಆರಂಭದಲ್ಲಿ ನಿಮ್ಮನ್ನು ಪೂಜಿಸಿ, ಮತ್ತೆ ಕೆಟ್ಟದಾಗಿ ನಡೆಸಿಕೊಳ್ಳುವವರು

ಕೆಲವು ವ್ಯಕ್ತಿಗಳು ಹೇಗಿರುತ್ತಾರೆ ಅಂದರೆ, ನೀವು ಸಿಕ್ಕ ಆರಂಭದಲ್ಲಿ, ಅಂದರೆ, ಪ್ರೀತಿ ಶುರುವಾದಾಗ, ನಿಮ್ಮನ್ನು ದೇವತೆಯಂತೆ ಪೂಜಿಸುತ್ತಾರೆ. ಆದರೆ ದಿನ ಕಳೆದಂತೆ ಅವರು ಬದಲಾಗುತ್ತಾರೆ. ಆದರೆ ಅವರು ನಿಜವಾಗಿಯೂ ಕೆಟ್ಟ ವ್ಯಕ್ತಿಗಳೆ ಅಗಿರುತ್ತಾರೆ. ಆದರೆ ನಿಮ್ಮ ಪ್ರೀತಿಯನ್ನು ಪಡೆಯಲು ಮಾತ್ರ. ನಂತರ ಅವರು ಕೆಟ್ಟದಾಗಿ ನಿಮ್ಮ ಜೊತೆ ವ್ಯವಹರಿಸಿದರೆ, ಶೀಘ್ರದಲ್ಲೇ ಅಂತಹ ಸಂಬಂಧದಿಂದ ಹೊರಬನ್ನಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಬಂಧಗಳು
ಪ್ರೀತಿ
ಜೆನ್ ಝಡ್
ಜೀವನಶೈಲಿ

Latest Videos
Recommended Stories
Recommended image1
Kannada Actresses: ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು!
Recommended image2
ವಯಸ್ಸು 41, ಅಮ್ಮನಾಗುವ ಆಸೆ ನನಗಿಲ್ಲ; ಅಂಥಾ ಹುಡುಗ್ರು ನನ್ನ ಜೀವನದಲ್ಲಿ ಬೇಡ ಎಂದ ಡ್ಯಾನ್ಸರ್
Recommended image3
ಬೀದಿ ಕಾಳಗದ ವೇಳೆ ಗನ್ ಹೊರತೆಗೆದು ಅಪ್ಪನ ರಕ್ಷಿಸಿದ ಪುಟ್ಟ ಮಗಳು: ವೀಡಿಯೋ ಭಾರಿ ವೈರಲ್
Related Stories
Recommended image1
Situationship: ಹೊಸ ಟ್ರೆಂಡ್ ಸಿಚುಯೇಷನ್‌ಶಿಪ್‌ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!
Recommended image2
ಸೇರಿ 15 ದಿನಗಳಲ್ಲಿ ಕೆಲಸ ಬಿಡೋ ಸ್ವಭಾವ! ತಲೆನೋವಾಗಿದೆ Gen Z ಮನೋಭಾವ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved