ನಿಮ್ ಹೆಂಡ್ತಿ ಹೀಗೆಲ್ಲಾ ಮಾಡ್ತಿದ್ರೆ ತಿಳ್ಕೊಳಿ… ಆಕೆ ಖಂಡಿತವಾಗಿಯೂ ಒಳ್ಳೆಯವಳಲ್ಲ
Relationship tips: ನಿಮ್ಮ ಪತ್ನಿ ಪದೇ ಪದೇ ಈ ತಪ್ಪುಗಳನ್ನು ಮಾಡುತ್ತಿದ್ದರೆ, ಆಕೆ ಒಳ್ಳೆಯವಳು ಅಲ್ಲ ಅನ್ನೋದ್ನನು ನೀವು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಮಹಿಳೆಯರು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆ ನೀಡಲಾಗಿದೆ. ಅವುಗಳನ್ನು ನಿಮ್ ಹೆಂಡ್ತಿ ಮಾಡ್ತಿಲ್ಲಾ ತಾನೇ? ಚೆಕ್ ಮಾಡಿ.

ಪತ್ನಿಯ ಗುಣಗಳು
ದಾಂಪತ್ಯ ಜೀವನವು ನಂಬಿಕೆ, ಗೌರವ ಮತ್ತು ಸಂಗಾತಿಯ ಭಾವನೆಗಳಿಗೆ ಬೆಲೆ ನೀಡುವುದರ ಮೇಲೆ ಅವಲಂಬಿತವಾಗಿರುತ್ತದೆ, ಆದರೆ ಪದೇ ಪದೇ ಒಂದೇ ತಪ್ಪನ್ನು ಮಾಡುತ್ತಾ ಬಂದರೆ, ಅದು ಸಂಬಂಧದ ಮೇಲೆ ಗಾಢ ಪರಿಣಾಮ ಬೀರುತ್ತದೆ. ನಿಮ್ಮ ಪತ್ನಿ ಒಂದು ವೇಳೆ ಇದನ್ನೆಲ್ಲಾ ಮಾಡ್ತಿದ್ರೆ, ಆಕೆ ಒಳ್ಲೆಯವಳಲ್ಲ ಅನ್ನೋದನ್ನು ಅರ್ಥ ಮಾಡ್ಕೊಳಿ.
ನಿರಂತರವಾಗಿ ಇತರರನ್ನು ದೂಷಿಸುವುದು
ಪರಿಸ್ಥಿತಿಯು ಇನ್ನೊಬ್ಬರನ್ನು ನಿಂದಿಸುವಂತೆ ಮಾಡಬಹುದು. ಆದರೆ, ಕಾರಣವಿಲ್ಲದೇ ನಿಮ್ಮ ಪತ್ನಿ ಪದೇ ಪದೇ ಇತರರನ್ನು ದೂಷಿಸುತ್ತಿದ್ದರೆ, ಅರ್ಥ ಮಾಡಿಕೊಳ್ಳಿ, ಆಕೆ ನಿಜವಾಗಿಯೂ ಒಳ್ಳೆಯ ಗುಣಗಳನ್ನು ಹೊಂದಿಲ್ಲ ಅನ್ನೋದನ್ನು.
ಸಾರಿ ಕೇಳೋದೆ ಇಲ್ಲ
ಆಕೆ ಸಾರಿ ಕೇಳೋದೆ ಇಲ್ಲ , ಆರ್ಟಿಫಿಶಿಯಲ್ ಅಗಿ ಸಹ ನಾನು ತಪ್ಪು ಮಾಡಿದ್ದೇನೆ ಅನ್ನೋದನ್ನು ಒಪ್ಪೋದಿಲ್ಲ. ನಂತರದ ದಿನಗಳಲ್ಲಿ ಇದರಿಂದ ಅಸಮಾಧಾನ ಮತ್ತು ಭಾವನಾತ್ಮಕ ದೂರವನ್ನು ಉಂಟುಮಾಡುತ್ತದೆ.
ಇಮೋಷನ್ ಜೊತೆ ಆಡೋದು
ಆಕೆ ತನ್ನ ಇಚ್ಛೆಯಂತೆ ನಡೆಯಲು ಅಪರಾಧಿ ಪ್ರಜ್ಞೆ, ಸುಮ್ ಸುಮ್ನೆ ಕಣ್ಣೀರು ಹಾಕುತ್ತಾಳೆ, ಕೆಲವೊಮ್ಮೆ ಮೌನವಾಗಿದ್ದು ಅಥವಾ ಕೋಪವನ್ನು ಪ್ರದರ್ಶಿಸುತ್ತಾತಮ್ಮ ಕೆಲಸ ಸಾಧಿಸಬಹುದು. ಇದರಿಂದಾಗಿ ಜೋಡಿಗಳ ಮಧ್ಯೆ ನಂತರ ಮಾತುಕತೆಯೇ ನಡೆಯದಂತಾಗುತ್ತದೆ.
ವೈಯಕ್ತಿಕ ಮಿತಿಗಳನ್ನು ನಿರ್ಲಕ್ಷಿಸುವುದು
ನಿಮ್ಮ ಪ್ರೈವೆಸಿ, ಕಂಫರ್ಟೇಬಲ್ ಅಥವಾ ಮಿತಿಗಳನ್ನು ಆಕೆಯ ಆಸೆಗಳಿಗಾಗಿ ಬಲಿ ಮಾಡೋದು. ಆರೋಗ್ಯಕರ ಬೌಂಡರೀಗಳನ್ನು ಅವಶ್ಯಕತೆಗಳೆಂದು ಎಂದು ಪರಿಗಣಿಸದೇ, ತನ್ನಿಚ್ಚೆಯಂತೆ ನಡೆಯುವ ಹೆಂಡ್ತಿ ಉತ್ತಮಳು ಅಲ್ವೇ ಅಲ್ಲ.
ನಿರಂತರ ಟೀಕೆ
ನೀವು ಏನೇ ಮಾಡಿದರೂ ಆಕೆಗೆ ಇಷ್ಟವಾಗೋದೇ ಇಲ್ಲ. ಪ್ರತಿಯೊಂದಕ್ಕೂ ಆಕೆ ನಿರಂತರವಾಗಿ ಅಸಮ್ಮತಿ ಸೂಚಿಸುವ ಮೂಲಕ ನಿಮ್ಮ ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಸುರಕ್ಷತೆಯನ್ನು ಕುಗ್ಗಿಸುವ ಪತ್ನಿ ಒಳ್ಳೆಯವಳು ಅಲ್ಲ.
ಜವಾಬ್ಧಾರಿ ತೆಗೆದುಕೊಳ್ಳೋದೆ ಇಲ್ಲ
ಹೊಣೆಗಾರಿಕೆ ಇಲ್ಲದಿದ್ದರೆ, ನಿಜವಾದ ಬದಲಾವಣೆ ಎಂದಿಗೂ ಸಾಧ್ಯವಿಲ್ಲ. ನಿಮ್ಮ ಸಂಗಾತಿ ತಾನು ಯಾವ ಜವಾಬ್ಧಾರಿಯನ್ನೂ ತೆಗೆದುಕೊಳ್ಳದೇ, ಎಲ್ಲಾದಕ್ಕೂ ನಿಮ್ಮ ಹೊಣೆಯಾಗಿಸಿದರೆ, ಆಕೆ ಕೆಟ್ಟವಳೇ ಆಗುತ್ತಾಳೆ.
ಪದೇ ಪದೇ ವಿಕ್ಟಿಮ್ ಕಾರ್ಡ್ ಪ್ಲೇ ಮಾಡೋದು
ಬಹುತೇಕ ಪ್ರತಿಯೊಂದು ವಿಷ್ಯದಲ್ಲೂ ಆಕೆ ತನ್ನ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾಳೆ. ಇದರಿಂದ ಪತಿಯ ಮೇಲೆ ಅನ್ಯಾಯವಾಗಿ ಆರೋಪ ಮಾಡಿದಂತಾಗುತ್ತದೆ. ಇದರಿಂದ ಸಂಬಂಧಗಳು ದೂರವಾಗುತ್ತವೆ.
ಪ್ರೀತಿಯನ್ನು ವ್ಯಕ್ತಪಡಿಸದೇ ಇರೋದು
ಗಂಡ- ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಅಲ್ಲಿ ಪ್ರೀತಿ, ನಂಬಿಕೆ ಇರಬೇಕು. ಆದರೆ ಆ ಪ್ರೀತಿಯನ್ನೇ ಶಿಕ್ಷೆಯಾಗಿ ಪತ್ನಿ ಬದಲಾಯಿಸಿದರೆ, ಸಂಬಂಧ ಉಸಿರುಕಟ್ಟಿಸಿದಂತಾಗುತ್ತದೆ.
ನಿಮ್ಮ ಪ್ರೀತಿಪಾತ್ರರನ್ನು ಅವಮಾನಿಸುವುದು
ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಬಗ್ಗೆ ಆಕೆ ನಿರಂತರವಾಗಿ ನಕಾರಾತ್ಮಕ ವಿಷಯಗಳನ್ನು ಹೇಳುತ್ತಿರುತ್ತಾಳೆ. ಪದೇ ಪದೇ ನಿಮ್ಮವರನ್ನು ಅವಮಾನ ಮಾಡುವವರು ಖಂಡಿತವಾಗಿಯೂ ಪ್ರೀತಿಗೆ ಅರ್ಹರಲ್ಲ.
ಅರ್ಥಪೂರ್ಣ ಸಂಭಾಷಣೆ ಇಲ್ಲವೇ ಇಲ್ಲ
ಇಬ್ಬರ ಮಧ್ಯೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಪರಿಹರಿಸಲು, ಆ ಕುರಿತು ಚರ್ಚಿಸಲು, ಮಾತನಾಡಿ ಬಗೆಹರಿಸಲು ಆಕೆ ತಯಾರಾಗಿಯೇ ಇರೋದಿಲ್ಲ. ಎಲ್ಲಾದಕ್ಕೂ ನಿಮ್ಮನ್ನೆ ಹೊಣೆಯಾಗಿಸಿ ಸುಮ್ಮನ್ನಿದ್ದು ಬಿಡುವ ಸಂಗಾತಿ ಯಾವತ್ತಿದ್ರೂ ಹೊರೆಯಾಗುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

