- Home
- Life
- Relationship
- ಮದ್ವೆಯಾಗೋದ್ರಲ್ಲಿಯೇ ಡಿವೋರ್ಸ್ ಕೊಡೋದ್ಯಾಕೆ? ದಂಪತಿಗೆ ಕಾಡುವ ಅತೃಪ್ತಿ ಏನು? ಇದಕ್ಕೆ ಪರಿಹಾರಗಳೇನು?
ಮದ್ವೆಯಾಗೋದ್ರಲ್ಲಿಯೇ ಡಿವೋರ್ಸ್ ಕೊಡೋದ್ಯಾಕೆ? ದಂಪತಿಗೆ ಕಾಡುವ ಅತೃಪ್ತಿ ಏನು? ಇದಕ್ಕೆ ಪರಿಹಾರಗಳೇನು?
ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚುತ್ತಿವೆ. ಈ ಬಗ್ಗೆ ತಜ್ಞರು ನಾನಾ ಕಾರಣಗಳನ್ನು ಪತ್ತೆ ಮಾಡಿದ್ದಾರೆ. ಕೌನ್ಸೆಲಿಂಗ್ ಮಾಡಿರೋದನ್ನು ನೋಡಿದ್ರೆ ಬಹುತೇಕ ದಾಂಪತ್ಯ ಒಡಕಿಗೆ ಒಂದೇ ಒಂದು ಸ್ಪೆಸಿಫಿಕ್ ಕಾರಣ ಹೇಳುತ್ತಾರೆ. ಏನದು?

ಈಗಿನ ಯುವಜನರು ಮದ್ವೆಯಾಗಿ ಒಂದೆರಡು ತಿಂಗಳೊಳಗೆ ಡಿವೋರ್ಸ್‌ಗೆ ಅಪ್ಲೈ ಮಾಡುವುದನ್ನು ನೋಡುತ್ತಿದ್ದೇವೆ. ಬರ್ತಾ ಬರ್ತಾ ಈ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಅಷ್ಟಕ್ಕೂ ದಾಂಪತ್ಯ ಬಿರುಕಿಗೇನು ಕಾರಣ? ದಂಪತಿ ಬೇರಾಗುವ ಮುನ್ನ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಕೌನ್ಸೆಲಿಂಗ್ ಮಾಡಿದ ತಜ್ಷರು ನೀಡಿದ ಮಾಹಿತಿಗಳೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಕೌಟುಂಬಿಕ ನ್ಯಾಯಾಲಯದ (Family Court) ಮಾಹಿತಿ ಪ್ರಕಾರ ಹೆಚ್ಚಿನದಾಗಿ ದಂಪತಿಯಲ್ಲಿ, ಅಥವಾ ಇಬ್ಬರಲ್ಲೊಬ್ಬರು ಅನುಭವಿಸುವ ಲೈಂಗಿಕ ಅತೃಪ್ತಿ ಈ ಡೈವೋರ್ಸ್‌ಗಳಿಗೆ ಮೊದಲ ಕಾರಣವಂತೆ. ಇನ್ನುಮುಂದೆಯಾದರೂ ಮದುವೆಯಾಗೋರು ತಮ್ಮ ಹಾಗೂ ಸಂಗಾತಿಯ ಲೈಂಗಿಕ ತೃಪ್ತಿಯನ್ನು ಮುಖ್ಯವಾಗಿ ಪರಿಗಣಿಸಿದರೆ ಸಂಬಂಧ ಸುಧಾರಿಸಿಕೊಳ್ಳಬಹುದು.
ಯಾಕೆ ಈ ಅತೃಪ್ತಿ?
1. ಕೆಲಸದ ಒತ್ತಡ. ಇಬ್ಬರೂ ಉದ್ಯೋಗಕ್ಕೆ ಹೋಗುವವರಾದರೆ, ಇಬ್ಬರಿಗೂ ಕೆಲಸದ ವೇಳೆ ಬೇರೆ ಬೇರೆಯಾಗಿದ್ದರೆ ಗಂಡ-ಹೆಂಡ್ತಿ ಭೇಟಿಯಾಗುವುದೇ ಅಪರೂಪವಾಗುತ್ತದೆ. ನವವಿವಾಹಿತರು ಈ ಹಿಂದೆ ಪ್ರತಿದಿನ ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದರು. ಈ ಸಮಯವು ಇಬ್ಬರ ನಡುವಿನ ಸಾಮರಸ್ಯ, ಪರಿಚಯವನ್ನು ಗಾಢವಾಗಿಸುತ್ತಿತ್ತು. ಆದರೀಗ ಕೂರುವುದಿರಲಿ, ಒಟ್ಟಿಗೆ ಮಲಗುವುದೇ ಕಡಿಮೆಯಾಗುತ್ತಿದೆ. ನವವಿವಾಹಿತರೂ ವಾರಕ್ಕೊಮ್ಮೆ ಅಥವಾ ವಾರಕ್ಕೆ ಕೇವಲ ಎರಡು ಬಾರಿ ಸೇರುತ್ತಾರಷ್ಟೇ. ಅಷ್ಟೊಂದು ಕೆಲಸದ ಒತ್ತಡ ಕಾಡುತ್ತಿದೆ. ಬೆಡ್‌ರೂಮಿನ ಒಳಗೂ ಕಾಲಿಡುತ್ತಿರುವ ಉದ್ಯೋಗದ ಒತ್ತಡದಿಂದ ಸರಸ ಸಲ್ಲಾಪದಲ್ಲಿ ಮನಸ್ಸು ಮತ್ತು ದೇಹ ತೊಡಗುವುದೇ ಅಸಾಧ್ಯವಾಗುತ್ತಿದೆ.
ಪರಿಹಾರ ಕ್ರಮಗಳು: ಕೆಲಸದ ನಡುವೆ ಬಿಡುವು ಮಾಡಿಕೊಳ್ಳಬೇಕು. ಇನ್ನು ಕೆಲಸ ಮಾಡುವ ಕಚೇರಿಗಳು ಮನೆಗೆ ಹತ್ತಿರವಿದ್ದರೊಳಿತು. ಇಬ್ಬರೂ ಕೆಲಸದಿಂದಾಚೆಗೆ ವಿಭಿನ್ನ ಹವ್ಯಾಸಗಳಿಗೆ, ಇಬ್ಬರ ಅಭಿರುಚಿಗಳನ್ನು ಪೋಷಿಸುವ ಕಡೆಗೆ ಗಮನ ಹರಿಸಬೇಕು. ಇಬ್ಬರೂ ಜೊತೆಗೂಡಿ ಅಡುಗೆ ಮಾಡಿ, ಇದರಿಂದಲೂ ಸಾಂಗತ್ಯ ಬೆಳೆಯುತ್ತದೆ.
2. ಲೈಂಗಿಕತೆಯಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಗಂಡನ ಲೈಂಗಿಕ ತೃಷೆಗೆ ಅಥವಾ ಆಸಕ್ತಿಗಳಿಗೆ ಹೆಂಡತಿ ಸ್ಪಂದಿಸದೇ ಇರೋದು, ಪತ್ನಿಯ ಲೈಂಗಿಕ ಆಸೆಗಳಿಗೆ ಗಂಡ ಗಮನ ಕೊಡದಿರುವುದು ಈ ಅಪಾಯವನ್ನು ಹೆಚ್ಚಿಸುತ್ತಿದೆ. ಈ ಬಗ್ಗೆ ಹಲವು ವರ್ಷಗಳಿಂದಲೂ ಸಂಬಂಧಪಟ್ಟ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ದಾಂಪತ್ಯದಲ್ಲಿ ಗಂಡು ಪ್ರತೀ ಬಾರಿ ಸುಖದ ಉತ್ತುಂಗ ತಲುಪಿದರೂ, ಪತ್ನಿಗೆ ತಾನು ಪಡೆದ ಸುಖವನ್ನು ನೀಡಲು ವಿಫಲನಾಗುತ್ತಾನೆ. ಹೀಗೆ, ಹತಾಶೆ ಅನುಭವಿಸುವ ಪತ್ನಿಯರ ಪ್ರಮಾಣವೂ ಶೇ.60ಕ್ಕಿಂತಲೂ ಅಧಿಕವಾಗಿದೆ. ಹಾಗೆಂದು ಪತಿಗೆೇನೂ ಹೆಂಡತಿ ವಂಚಿಸುವುದಿಲ್ಲ. ಪತಿಯಿಂದ ಅದನ್ನು ಪಡೆಯಲು ತನಗೆ ಆಗುವಂತೆ ಯತ್ನಿಸುತ್ತಾರೆ. ಆದರೆ, ಇದು ಸಾಧ್ಯವೇ ಇಲ್ಲವೆಂದಾಗ ದೂರ ಹೋಗಲು ನಿರ್ಧರಿಸುತ್ತಾಳೆ.
ಏನು ಮಾಡಬಹುದು:- ಸಂಗಾತಿಯ ಲೈಂಗಿಕ ತೃಪ್ತಿಯ ಬಗ್ಗೆಯೂ ಯುವಕರು ಹೆಚ್ಚು ಅರಿವು ಬೆಳೆಸಿಕೊಳ್ಳಬೇಕು. ತಾವು ಸುಖ ಪಡೆಯುವ ಜೊತೆಗೆ, ಸಂಗಾತಿಗೂ ಸುಖ ನೀಡುವುದು ಹೇಗೆಂಬುದನ್ನು ಆಲೋಚಿಸಬೇಕು.
3. ವೈವಿಧ್ಯತೆಯ ಕೊರತೆ: ಹೆಚ್ಚಿನ ಸತಿ-ಪತಿಯರು ತಮ್ಮ ಲೈಂಗಿಕತೆಯಲ್ಲಿ ಹೊಸತನವನ್ನು ತರಲು ಯತ್ನಿಸುವುದೇ ಇಲ್ಲ. ಹೊಸತನವೆಂದರೆ ಹೊಸ ಸ್ಥಳಕ್ಕೆ ಪ್ರವಾಸ ಹೋಗಿ ಏಕಾಂತದಲ್ಲಿರೋದು. ಮನೆಯಲ್ಲಿದ್ದರೂ ಹೊಸ ಜಾಗಗಳಲ್ಲಿ ಸುಖ ಹುಡುಕುವುದು. ದಿನನಿತ್ಯ ಅಭ್ಯಾಸವಾದ ಭಂಗಿ ಬದಲಾಯಿಸಿ ಹೊಸ ಭಂಗಿಗಳನ್ನು ಪ್ರಯತ್ನಿಸುವುದು. ಹೀಗೆ ಲೈಂಗಿಕತೆಯಲ್ಲಿ ವೈವಿಧ್ಯವು ದಂಪತಿ ಜೀವನೋತ್ಸಾಹ ಹೆಚ್ಚಿಸುತ್ತದೆ.
4. ಲೈಂಗಿಕ ವಂಚನೆ: ಕೆಲವು ಗಂಡಸರು ತಮ್ಮ ಲೈಂಗಿಕ ಅಶಕ್ತತೆಯನ್ನು ಮುಚ್ಚಿಟ್ಟು ಮದುವೆಯಾಗಿರುತ್ತಾರೆ. ಹೆಂಡತಿಯರೂ ಫ್ರಿಜಿಡಿಟಿ ಅಥವಾ ಲೈಂಗಿಕ ಸ್ಪಂದನವಿಲ್ಲದಿರುವಿಕೆಯನ್ನು ಮುಚ್ಚಿಟ್ಟಿರಬಹುದು. ಮದುವೆಯಾದ ಬಳಿಕವಷ್ಟೇ ಇಂಥ ಸಂಗತಿಗಳು ಪರಸ್ಪರರ ಅರಿವಿಗೆ ಬರುತ್ತದೆ. ಇದು ಸಂಗಾತಿಯ ದೊಡ್ಡ ನಿರಾಶೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಡ ಅನ್ಯ ಗಂಡಸಿನಲ್ಲಿಯೂ, ಪತ್ನಿ ಅನ್ಯ ಸ್ತ್ರೀಯಲ್ಲಿಯೂ ಅನುರಕ್ತರಾಗುವ ಸ್ವಭಾವ ಹೊಂದಿರಬಹುದು. ಹಾಗಾದರೂ ಇಬ್ಬರ ಲೈಂಗಿಕ ಆಯ್ಕೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ.
ಏನು ಮಾಡಬಹುದು:- ಮದುವೆಗೆ ಮುನ್ನವೇ ತಮ್ಮ ಲೈಂಗಿಕ ಪ್ರವೃತ್ತಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿಕೊಂಡರೆ ಕೆಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.