MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Parenting: ಗಂಡು ಮಕ್ಕಳ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ 5 ಪ್ರಮುಖ ಸತ್ಯಗಳಿವು!

Parenting: ಗಂಡು ಮಕ್ಕಳ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ 5 ಪ್ರಮುಖ ಸತ್ಯಗಳಿವು!

Parenting boys: ಮಕ್ಕಳನ್ನು ಬೆಳೆಸುವುದು ತುಂಬಾನೇ ಜವಾಬ್ದಾರಿಯುತ ಕೆಲಸ. ಅದರಲ್ಲೂ ಗಂಡು ಮಕ್ಕಳ ಆಲೋಚನೆ ಮತ್ತು ನಡವಳಿಕೆ, ಹೆಣ್ಣು ಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಹಾಗಾಗಿ, ಗಂಡು ಮಕ್ಕಳ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ 5 ಪ್ರಮುಖ ಸತ್ಯಗಳ ಬಗ್ಗೆ ಇಲ್ಲಿ ನೋಡೋಣ.

2 Min read
Author : Ashwini HR
Published : Jul 31 2026, 06:35 PM IST
Share this Photo Gallery
  • FB
  • TW
  • Linkdin
  • Whatsapp
16
ಆ ವಿಷಯಗಳು ಯಾವುವು?
Image Credit : Getty

ಆ ವಿಷಯಗಳು ಯಾವುವು?

ಆ ವಿಷಯಗಳು ಯಾವುವು?
ಪ್ರತಿಯೊಂದು ಮಗುವು ವಿಶೇಷ. ತಜ್ಞರ ಪ್ರಕಾರ, ಹುಡುಗರು ಮತ್ತು ಹುಡುಗಿಯರ ಬೆಳವಣಿಗೆಯಲ್ಲಿ ಕೆಲವು ಸಾಮಾನ್ಯ ವ್ಯತ್ಯಾಸಗಳಿವೆ. ಮಕ್ಕಳ ನಡವಳಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಅಂಶಗಳು ಸಹಾಯ ಮಾಡುತ್ತವೆ. ವಿಶೇಷವಾಗಿ ಗಂಡು ಮಕ್ಕಳನ್ನು ಬೆಳೆಸುವ ಪೋಷಕರು ಈ ಐದು ವಿಷಯಗಳನ್ನು ತಿಳಿದುಕೊಂಡರೆ, ಅವರನ್ನು ಹೆಚ್ಚು ಪ್ರೀತಿಯಿಂದ ಮತ್ತು ಸರಿಯಾದ ರೀತಿಯಲ್ಲಿ ಬೆಳೆಸಲು ಇದು ಸಹಕಾರಿಯಾಗುತ್ತದೆ. ಆ ವಿಷಯಗಳು ಯಾವುವು ಎಂದು ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತುಂಟತನ, ಆತುರದ ನಿರ್ಧಾರ
Image Credit : Getty

ತುಂಟತನ, ಆತುರದ ನಿರ್ಧಾರ

ತುಂಟತನ, ಆತುರದ ನಿರ್ಧಾರ
ತಜ್ಞರ ಪ್ರಕಾರ, ಹುಡುಗಿಯರಿಗೆ ಹೋಲಿಸಿದರೆ ಹುಡುಗರ ಮೆದುಳಿನ ಬೆಳವಣಿಗೆಯ ವೇಗದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ನಿರ್ಧಾರ ತೆಗೆದುಕೊಳ್ಳುವುದು, ಭಾವನೆಗಳನ್ನು ನಿಯಂತ್ರಿಸುವುದು ಮತ್ತು ದೂರದೃಷ್ಟಿಯಿಂದ ಯೋಚಿಸುವಂತಹ ಕೆಲಸಗಳಿಗೆ ಬಳಕೆಯಾಗುವ ಮೆದುಳಿನ ಭಾಗಗಳು ಹುಡುಗರಲ್ಲಿ ಸ್ವಲ್ಪ ತಡವಾಗಿ ಪಕ್ವವಾಗುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಇದೇ ಕಾರಣಕ್ಕೆ ಅವರು ಕೆಲವೊಮ್ಮೆ ಹೆಚ್ಚು ತುಂಟತನ ಮಾಡುವುದು, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಥವಾ ಗಮನಹರಿಸದಿರುವುದು ಕಂಡುಬರಬಹುದು. ಇದನ್ನು ಹಠಮಾರಿತನ ಅಥವಾ ತಿಳಿಗೇಡಿತನ ಎಂದು ಭಾವಿಸದೆ, ಅವರ ಬೆಳವಣಿಗೆಯ ಸಹಜ ಹಂತವೆಂದು ಅರ್ಥಮಾಡಿಕೊಳ್ಳುವುದು ಉತ್ತಮ.

Related Articles

Related image1
ಹೆಂಡತಿ ಗಂಡನಿಗಿಂತ ಹೆಚ್ಚು ಸಂಪಾದಿಸಿದರೆ ಗಂಡನ ಮನಸ್ಥಿತಿ ಹೇಗಿರುತ್ತೆ? ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!
Related image2
Relationship tips: ಸಂಗಾತಿಯೊಂದಿಗೆ ಜಗಳವಾದಾಗ ಮರೆತೂ ಈ 5 ತಪ್ಪು ಮಾಡ್ಬೇಡಿ
36
ದೈಹಿಕ ಆಟಗಳ ಪಾತ್ರ
Image Credit : Getty

ದೈಹಿಕ ಆಟಗಳ ಪಾತ್ರ

ದೈಹಿಕ ಆಟಗಳ ಪಾತ್ರ
ಮಕ್ಕಳ ಬೆಳವಣಿಗೆಯಲ್ಲಿ ದೈಹಿಕ ಆಟಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಹುಡುಗರಿಗೆ ಓಡುವುದು, ಹತ್ತುವುದು, ಜಿಗಿಯುವುದು, ಚೆಂಡಾಟ ಆಡುವುದು ಮುಂತಾದ ಚಟುವಟಿಕೆಗಳು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇಂತಹ ಆಟಗಳು ಅವರ ದೈಹಿಕ ಸದೃಢತೆಯನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಸೋಲನ್ನು ಒಪ್ಪಿಕೊಳ್ಳುವುದು ಮತ್ತು ನಾಯಕತ್ವದಂತಹ ಅನೇಕ ಕೌಶಲ್ಯಗಳನ್ನು ಬೆಳೆಸುತ್ತವೆ.

46
ತಾಯಿಯ ಬಳಿಯೇ ಹೋಗುವುದೇಕೆ?
Image Credit : Getty

ತಾಯಿಯ ಬಳಿಯೇ ಹೋಗುವುದೇಕೆ?

ತಾಯಿಯ ಬಳಿಯೇ ಹೋಗುವುದೇಕೆ?
ಹೆಚ್ಚಿನ ಗಂಡು ಮಕ್ಕಳು ತಾಯಿಯ ಬಳಿ ಹೆಚ್ಚು ಸುರಕ್ಷಿತವಾಗಿರುತ್ತಾರೆ. ದುಃಖವಾದಾಗ, ಭಯವಾದಾಗ ಅಥವಾ ಅನಾರೋಗ್ಯ ಕಾಡಿದಾಗ ಅವರು ಮೊದಲು ಅಮ್ಮನ ಬಳಿಗೇ ಹೋಗುತ್ತಾರೆ. ತಾಯಿಯ ಪ್ರೀತಿ, ಸ್ಪರ್ಶ ಮತ್ತು ಸಮಾಧಾನ ಮಕ್ಕಳಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಿಸುತ್ತದೆ. ಈ ಸುರಕ್ಷಿತ ಸಂಬಂಧವೇ ಮಕ್ಕಳಲ್ಲಿ ಆತ್ಮವಿಶ್ವಾಸಕ್ಕೆ ಅಡಿಪಾಯವಾಗುತ್ತದೆ. ಆದರೆ, ಇದರರ್ಥ ತಂದೆಯ ಅವಶ್ಯಕತೆ ಇಲ್ಲವೆಂದಲ್ಲ. ಪೋಷಕರಿಬ್ಬರ ಪ್ರೀತಿ, ಸಮಯ ಮತ್ತು ಆರೈಕೆ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಸಮಾನವಾಗಿ ಬೇಕು.

56
ತಂದೆಯನ್ನು ಅನುಸರಿಸುತ್ತಾರೆ
Image Credit : Getty

ತಂದೆಯನ್ನು ಅನುಸರಿಸುತ್ತಾರೆ

ತಂದೆಯನ್ನು ಅನುಸರಿಸುತ್ತಾರೆ
ಮಕ್ಕಳು ಕೇವಲ ಮಾತುಗಳನ್ನು ಕೇಳಿ ಕಲಿಯುವುದಿಲ್ಲ, ನೋಡಿಯೂ ಕಲಿಯುತ್ತಾರೆ. ವಿಶೇಷವಾಗಿ ತಂದೆ ತನ್ನ ಕುಟುಂಬದೊಂದಿಗೆ ಹೇಗೆ ವರ್ತಿಸುತ್ತಾನೆ, ತನ್ನ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾನೆ ಮತ್ತು ಇತರರೊಂದಿಗೆ ಹೇಗೆ ಮಾತನಾಡುತ್ತಾನೆ ಎಂಬುದನ್ನು ಗಂಡು ಮಕ್ಕಳು ಗಮನಿಸುತ್ತಿರುತ್ತಾರೆ. ಸಮಯಪ್ರಜ್ಞೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಕುಟುಂಬ ಸದಸ್ಯರನ್ನು ಗೌರವಿಸುವಂತಹ ಮೌಲ್ಯಗಳು ತಂದೆಯ ನಡವಳಿಕೆಯಿಂದ ಮಕ್ಕಳಲ್ಲಿ ಬಲವಾಗಿ ಬೇರೂರುತ್ತವೆ. ತಂದೆ ಮಕ್ಕಳೊಂದಿಗೆ ಕಳೆಯುವ ಗುಣಮಟ್ಟದ ಸಮಯ ಅವರ ವ್ಯಕ್ತಿತ್ವ ವಿಕಸನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ.

66
ಕೊನೆಯದಾಗಿ ತಜ್ಞರ ಸಲಹೆಯೇನು?
Image Credit : Getty

ಕೊನೆಯದಾಗಿ ತಜ್ಞರ ಸಲಹೆಯೇನು?

ಕೊನೆಯದಾಗಿ ತಜ್ಞರ ಸಲಹೆಯೇನು?
ಕೆಲವು ಗಂಡು ಮಕ್ಕಳು ತಮ್ಮ ಪ್ರೀತಿಯನ್ನು ಮಾತುಗಳಲ್ಲಿ ಹೇಳುವುದಕ್ಕಿಂತ ಕೃತಿಯಲ್ಲಿ ತೋರಿಸಲು ಇಷ್ಟಪಡುತ್ತಾರೆ. ಅಮ್ಮನಿಗೆ ಸಹಾಯ ಮಾಡುವುದು, ಅಪ್ಪನೊಂದಿಗೆ ಸೇರಿ ಕೆಲಸ ಮಾಡುವುದು, ತಂಗಿಯನ್ನು ರಕ್ಷಿಸುವುದು ಅಥವಾ ಕುಟುಂಬ ಸದಸ್ಯರಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುವುದರ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಆದರೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ತಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣವನ್ನು ಪೋಷಕರು ಕಲ್ಪಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸಂಬಂಧಗಳು
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಬೇಕಿರೋದು ಏನೆಂದು ತೋರಿಸ್ತಿದೆ Amruthadhaare Serial
Recommended image2
Bigg Boss ಗಿಲ್ಲಿ ನಟನಿಂದ ಜೀವನಪರ್ಯಂತದ ಒಂದು ಗಿಫ್ಟ್​ ಬೇಡಿದ ರಕ್ಷಿತಾ ಶೆಟ್ಟಿ: ಅಂಥದ್ದೇನು ಕೇಳಿದ್ರು ನೋಡಿ
Recommended image3
'ಅಮ್ಮನಿಗೆ ಬೆಲೆ ಕೊಡದವನು ನಮಗೂ ಬೇಡ', ಮಗನನ್ನು ಕೆಲಸದಿಂದ ತೆಗೆದು ತಾಯಿಗೇ ಆಫರ್ ಕೊಟ್ಟ ಬಾಸ್
Related Stories
Recommended image1
ಹೆಂಡತಿ ಗಂಡನಿಗಿಂತ ಹೆಚ್ಚು ಸಂಪಾದಿಸಿದರೆ ಗಂಡನ ಮನಸ್ಥಿತಿ ಹೇಗಿರುತ್ತೆ? ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!
Recommended image2
Relationship tips: ಸಂಗಾತಿಯೊಂದಿಗೆ ಜಗಳವಾದಾಗ ಮರೆತೂ ಈ 5 ತಪ್ಪು ಮಾಡ್ಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved