MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಬ್ರೇಕಪ್‌ ಆಗಿ ದೂರವಾದ್ರೂ ಮಾಜಿ ಸಂಗಾತಿ ನೆನಪು ಕಾಡೋದೇಕೇ? ಏನಿದು ಮನೋವಿಜ್ಞಾನ? ಇದರಿಂದ ದೂರ ಬರೋದೇಗೆ?

ಬ್ರೇಕಪ್‌ ಆಗಿ ದೂರವಾದ್ರೂ ಮಾಜಿ ಸಂಗಾತಿ ನೆನಪು ಕಾಡೋದೇಕೇ? ಏನಿದು ಮನೋವಿಜ್ಞಾನ? ಇದರಿಂದ ದೂರ ಬರೋದೇಗೆ?

Mental Health and Relationships: ಮುರಿದ ಸಂಬಂಧದ ನಂತರ ಹಳೆಯ ನೆನಪುಗಳು ಕಾಡುವುದು ಸಹಜ. ಈ ನೆನಪುಗಳಿಂದ ಹೊರಬಂದು ಹೊಸ ಜೀವನ ನಡೆಸುವುದು ಹೇಗೆ ಎಂಬುದನ್ನು ತಿಳಿಯಿರಿ. 

2 Min read
Mahmad Rafik
Published : Jul 26 2025, 06:59 PM IST| Updated : Jul 26 2025, 07:08 PM IST
Share this Photo Gallery
  • FB
  • TW
  • Linkdin
  • Whatsapp
16
ಮಾಜಿ ಗೆಳತಿ ಅಥವಾ ಗೆಳೆಯನ ಹಳೆ ನೆನಪು
Image Credit : AI meta

ಮಾಜಿ ಗೆಳತಿ ಅಥವಾ ಗೆಳೆಯನ ಹಳೆ ನೆನಪು

ಕೆಲವು ಸಂಬಂಧಗಳಲ್ಲಿ (Relationship) ಪದೇ ಪದೇ ಅಸಮಾಧಾನ, ಸಣ್ಣ ಪುಟ್ಟ ಕಾರಣಕ್ಕೂ ಕಲಹ ಆಗುತ್ತಿರುತ್ತದೆ. ಈ ರೀತಿಯ ಮನಸ್ತಾಪ ಇಬ್ಬರ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತದೆ. ಇಂತಹ ಸಂಬಂಧಗಳು ಮುರಿದು ಬಿದ್ರೂ, ಹಳೆಯ ನೆನಪುಗಳು (Old Memories) ನಿಮ್ಮ ಸುತ್ತವೇ ಸುತ್ತುತ್ತಿರುತ್ತವೆ. ಈ ನೆನಪುಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ. ಮಾಜಿ ಗೆಳತಿ ಅಥವಾ ಗೆಳೆಯನ ಹಳೆ ನೆನಪುಗಳಿಂದ ಹೊರ ಬಂದು ಹೊಸ ಜೀವನ ಸಾಗಿಸಬೇಕಾಗುತ್ತದೆ.

26
ಮನಸ್ಸು ಶಾಂತಿ
Image Credit : Getty

ಮನಸ್ಸು ಶಾಂತಿ

ಇಂತಹ ಸಂಘರ್ಷದ ಹೊರ ಬಂದಾಗ ಮನಸ್ಸು ಶಾಂತಿಯನ್ನು ಬಯಸುತ್ತದೆ. ಒಂದು ಸಮಯದಲ್ಲಿ ಸಂಬಂಧದಿಂದ ದೂರವಾಗಿದ್ದಕ್ಕೆ ಸಂತೋಷದಿಂದ (After Breakup) ಕುಣಿದು ಕುಪ್ಪಳಿಸಬೇಕು ಅಂತ ಅನ್ನಿಸುತ್ತದೆ. ನಂತರ ಜೀವನದ ಏರಿಳಿತ ಹಳೆಯ ಸಂಬಂಧ ನೆನಪುಗಳನ್ನು ಕಣ್ಮುಂದೆ ತರಲು ಆರಂಭಿಸುತ್ತದೆ. ಸಂಬಂಧ ಕೊನೆಗೊಂಡರೂ ಈ ಬಂಧದಿಂದಾಗಿ ಆ ವ್ಯಕ್ತಿಯನ್ನು ಮರೆಯುವುದು ನಮಗೆ ತುಂಬಾ ಕಷ್ಟಕರವಾಗಿರುತ್ತದೆ. ಇಂತಹ ನೆನಪುಗಳು ಹಳೆ ಸಂಬಂಧದ ಸಖ್ಯ ಬಯಸಲು ಆರಂಭಿಸುವ ಮೂಲಕ ಆ ಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

Related Articles

Related image1
ಒಳ್ಳೆ ಗಂಡನನ್ನ ಪಡೆಯಲು ಶಕ್ತಿಶಾಲಿ ಮಂತ್ರ ಪಠಿಸಿ: ಕಂಕಣ ಭಾಗ್ಯಕ್ಕೆ ಪರಿಣಾಮಕಾರಿ ಮಂತ್ರ
Related image2
ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿದಾಗಲೇ ನಿಲ್ಲಿಸಿದ್ಳು ಗಂಡನ ಉಸಿರು; ಏನಿದು ಫರ್ಜಾನಾಳ ವಿರಹದ ಕಥೆ?
36
ಹಳೆ ಸಂಬಂಧದ ನೆನಪುಂಟು ಮಾಡುವ ಕ್ಷಣ
Image Credit : Getty

ಹಳೆ ಸಂಬಂಧದ ನೆನಪುಂಟು ಮಾಡುವ ಕ್ಷಣ

ಬೇರ್ಪಟ್ಟ ನಂತರವೂ ಕೆಲವು ಹಳೆ ಸಂಬಂಧ ನೆನಪು ಮತ್ತು ಕೆಲವು ಕ್ಷಣಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಉಡುಗೊರೆಯಾಗಿ ನೀಡಿದ ವಸ್ತುಗಳು, ಆತ್ಮೀಯವಾಗಿ ಕಳೆದ ಕ್ಷಣದ ಫೊಟೋ ಅಥವಾ ವಿಡಿಯೋಗಳನ್ನು ಉಳಿಸಿಕೊಳ್ಳುತ್ತಾರೆ. ಇದರಿಂದಾಗಿ ಹಳೆ ಸಂಬಂಧದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಳೆ ಸಂಬಂಧದ (Old Relationship) ನೆನಪುಂಟು ಮಾಡುವ ಕ್ಷಣ, ವಸ್ತುಗಳಿರೋದರಿಂದ ಇದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಇಂತಹ ಒಳ್ಳೆಯ ನೆನಪುಗಳು ಹಳೆ ಸಂಬಂಧದ ಕಹಿ ವಿಷಯಗಳನ್ನು ಮರೆ ಮಾಡುತ್ತವೆ.

46
ಮತ್ತೆ ಆಕರ್ಷಣೆ
Image Credit : Getty

ಮತ್ತೆ ಆಕರ್ಷಣೆ

ಸಂಬಂಧ ದೂರವಾದ ಬಳಿಕ ಯಾಕೆ ಬೇರೆಯಾದೆವು ಎಂಬ ಕಾರಣ ತಿಳಿಯದಿದ್ದಾಗ ಮನಸ್ಸು ಗೊಂದಲದಲ್ಲಿ ಸಿಲುಕುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಕೊಂಡುಕೊಳ್ಳಲು ಹೋದಾಗ ಮಾಜಿ ಗೆಳೆಯ ಅಥವಾ ಗೆಳತಿ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ನಿಮಗೆ ಆ ವ್ಯಕ್ತಿಯೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳು ಕಣ್ಮುಂದೆ ಬರುತ್ತವೆ. ಹೀಗಾದಾಗ ಮಾಜಿ ಸಂಗಾತಿಯತ್ತ ಮತ್ತೆ ಆಕರ್ಷಣೆಗೆ ಒಳಗಾಗುತ್ತೀರಿ. ಇದರಿಂದ ಹಳೆ ಸಂಬಂಧದಿಂದ ಹೊರ ಬರಲು ಸಾಧ್ಯವಾಗಲ್ಲ.

56
ಮಾಜಿ ಸಂಗಾತಿ ಹೊಂದಿದ್ದ ಮಹತ್ವಾಕಂಕ್ಷೆ
Image Credit : Getty

ಮಾಜಿ ಸಂಗಾತಿ ಹೊಂದಿದ್ದ ಮಹತ್ವಾಕಂಕ್ಷೆ

ಮಾಜಿ ಸಂಗಾತಿ ಜೊತೆಯಲ್ಲಿದ್ದಾಗ ಆರಂಭಿಸಿದ ಕೆಲಸಗಳು ಕೆಲವೊಮ್ಮೆ ಅರ್ಧಕ್ಕೆ ಸ್ಥಗಿತಗೊಂಡಿರುತ್ತವೆ. ಈ ಕೆಲಸಗಳನ್ನು ಪೂರ್ಣಗೊಳಿಸಲು ಮುಂದಾದ್ರೆ ಮಾಜಿ ಸಂಗಾತಿಯ ನೆನಪು ಬರುತ್ತದೆ. ಆ ಕೆಲಸದ ಬಗ್ಗೆ ಮಾಜಿ ಸಂಗಾತಿ ಹೊಂದಿದ್ದ ಮಹತ್ವಾಕಂಕ್ಷೆಗಳು ನಿಮ್ಮ ಕೋಪವನ್ನು ತಣಿಸುವಂತೆ ಮಾಡುತ್ತವೆ. ಇಂತಹ ಘಟನೆಗಳು ನಿಮ್ಮನ್ನು ಮಾಜಿ ಸಂಗಾತಿಯತ್ತ ಹೋಗುವಂತೆ ಮಾಡುತ್ತವೆ.

66
ಒಂಟಿ ಜೀವನಕ್ಕೆ ಆಸರೆ
Image Credit : Getty

ಒಂಟಿ ಜೀವನಕ್ಕೆ ಆಸರೆ

ಸಂಬಂಧದಲ್ಲಿರುವಾಗ, ಗೆಳೆಯ/ಗೆಳತಿ ಒಳ್ಳೆಯ ಗೆಳೆಯ/ಗೆಳತಿ, ನಂಬಿಕಸ್ತ ವ್ಯಕ್ತಿ ಮತ್ತು ಆಸರೆಯಾಗಿರುತ್ತಾರೆ. ಬೇರ್ಪಟ್ಟಾಗ ಈ ಆಸರೆಯನ್ನು ಕಳೆದುಕೊಳ್ಳುತ್ತೇವೆ. ಈ ಶೂನ್ಯವನ್ನು ತುಂಬಲು ಸಾಧ್ಯವಾಗದೆ ಚಡಪಡಿಸುವಾಗ, ಮನಸ್ಸು ಹಳೆಯ ನೆನಪುಗಳನ್ನು ಹುಡುಕುತ್ತದೆ. ಒಂಟಿಯಾಗಿದ್ದಾಗ ಜೊತೆಗೆ ಆಸರೆಯನ್ನು ಹುಡುಕುತ್ತದೆ. ಹೊಸ ದಾರಿ ಸಿಗೋವರೆಗೂ ಮೊದಲಿದ್ದ ಆಸರೆಯನ್ನೇ ಮನಸ್ಸು ಬಯಸುತ್ತದೆ ಮತ್ತು ಅದಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂಬಂಧಗಳು
ಪ್ರೀತಿ
ದಂಪತಿಗಳು
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved