MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮದುವೆಯಾಗಿ 7 ದಿನವಾಯ್ತು; ನನಗೆ ಗಂಡ ಬೇಡ ಮೈದುನನೇ ಇಷ್ಟವೆಂದ ನವವಿವಾಹಿತೆ!

ಮದುವೆಯಾಗಿ 7 ದಿನವಾಯ್ತು; ನನಗೆ ಗಂಡ ಬೇಡ ಮೈದುನನೇ ಇಷ್ಟವೆಂದ ನವವಿವಾಹಿತೆ!

ಮದುವೆಯಾಗಿ 7 ದಿನಗಳಲ್ಲೇ ಹೊಸ ಸೊಸೆಗೆ ತನ್ನ ಗಂಡನ ತಮ್ಮನ ಮೇಲೆ ಮನಸ್ಸಾಗಿ, ಅವನ ಜೊತೆ ಇರಬೇಕೆಂದು ಹಠ ಹಿಡಿದಿದ್ದಾಳೆ. ಎರಡೂ ಕುಟುಂಬದವರು ಎಷ್ಟು ಬುದ್ಧಿ ಹೇಳಿದರೂ ಕೇಳದಿದ್ದಾಗ ಗಂಡನೇ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾನೆ.

1 Min read
Author : Sathish Kumar KH
Published : May 23 2025, 02:58 PM IST
Share this Photo Gallery
  • FB
  • TW
  • Linkdin
  • Whatsapp
15

ದೊಡ್ಡ ಆಸೆಗಳೊಂದಿಗೆ ಆತ ಆಕೆಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದ. ಆದರೆ ವಿಧಿಗೆ ಬೇರೆಯದ್ದೇ ಇತ್ತು. ಮದುವೆ ಮಾಡಿ ಮನೆಗೆ ಕರೆದುಕೊಂಡು ಬಂದ ಹೆಂಡತಿಗೆ ಗಂಡನ ತಮ್ಮನ ಮೇಲೆ ಆಸೆಯಾಯಿತು. ಅವನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಗಂಡನ ತಮ್ಮನಿಗೂ ಆಕೆಯ ಮೇಲೆ ಪ್ರೀತಿ ಹುಟ್ಟಿತು. ಈ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

25

ಅಂಬೇಡ್ಕರ್ ನಗರದ ಹನ್ಸ್‌ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಹಳ್ಳಿಯಲ್ಲಿ ಮೇ 5 ರಂದು ಒಬ್ಬ ಯುವಕನ ಮದುವೆ ನೆರವೇರಿತು. ಹಳ್ಳಿಯಿಂದ ಕೇವಲ 3 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಅದ್ದೂರಿಯಾಗಿ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದ. ಇಡೀ ಕುಟುಂಬ ಈ ಮದುವೆಯಿಂದ ಸಂತೋಷವಾಗಿತ್ತು. ಆದರೆ ಮನೆಗೆ ಬಂದ ಹೊಸ ಸೊಸೆಗೆ ಗಂಡನ ತಮ್ಮನ ಮೇಲೆ ಕಣ್ಣು ಹೋಯಿತು.

Related Articles

Related image1
ಅಕ್ರಮ ಸಂಬಂಧ ಇಟ್ಕೊಂಡಿರೋ ನಿಂಗೆ ಕರ್ಮ ಬಿಡಲ್ಲ ಅಂದ್ರಿ, ಕಾನೂನು ತೀರ್ಪು ಪಾಲಿಸ್ತೀನಿ: ಜಯಂ ರವಿ ಪ್ರೇಯಸಿ ಕೆನಿಷಾ ಫ್ರಾನ್ಸಿಸ್
Related image2
ತಾಳಿ ಕಟ್ಟುವ ಶುಭ ವೇಳೆ, ಹಾಸನದ ಮಂಟಪದಿಂದ ಎದ್ದು ಹೊರನಡೆದ ವಧು, ವರ-ಪೋಷಕರು ಕಣ್ಣೀರು
35

7 ದಿನಗಳ ನಂತರ ನವವಿವಾಹಿತೆ ತನ್ನ ತವರಿಗೆ ಹೋದಳು. ಆದರೆ ಅಲ್ಲಿ ಆಕೆಯ ಮನಸ್ಸು ಬದಲಾಯಿತು ಮತ್ತು ಗಂಡನನ್ನು ಬಿಟ್ಟು ಗಂಡನ ತಮ್ಮನ ಜೊತೆ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಳು. ಈ ವಿಷಯವನ್ನು ಕುಟುಂಬಕ್ಕೆ ತಿಳಿಸಿದಳು.

45

ಇದರಿಂದ ಎರಡೂ ಕುಟುಂಬಗಳಲ್ಲಿ ಗಲಾಟೆ ಶುರುವಾಯಿತು. ಎರಡೂ ಕುಟುಂಬದವರು ಆಕೆಗೆ ಬುದ್ಧಿ ಹೇಳಲು ಪ್ರಯತ್ನಿಸಿದರು, ಆದರೆ ಆಕೆ ಕೇಳಲಿಲ್ಲ. ಗಂಡನ ತಮ್ಮ ಕೂಡ ಆಕೆಯನ್ನು ಮದುವೆಯಾಗುವುದಾಗಿ ಹಠ ಹಿಡಿದ. ಇದರಿಂದ ಪಂಚಾಯಿತಿ ಕರೆಯಲಾಯಿತು. ಈ ವಿಷಯ ಪೊಲೀಸ್ ಠಾಣೆಗೂ ಹೋಯಿತು. ಆದರೆ ಕೌಟುಂಬಿಕ ವಿಷಯ ಎಂದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

55

ಸಾಕಷ್ಟು ಮಾತುಕತೆಗಳ ನಂತರ ಅವರಿಗೆ ಮದುವೆಯಾಗಲು ಅನುಮತಿ ನೀಡಲಾಯಿತು. ಗಂಡ ಕೂಡ ತನ್ನ ಒಪ್ಪಿಗೆ ನೀಡಿ ತನ್ನ ತಮ್ಮನಿಗೆ ತನ್ನ ಹೆಂಡತಿಯನ್ನೇ ಮದುವೆ ಮಾಡಿಕೊಟ್ಟ. ಮತ್ತೆ ಮದುವೆಯಾಗಿ ಹೊಸ ಸೊಸೆ ಅತ್ತೆ ಮನೆಗೆ ಬಂದಳು. ಆದರೆ ಈ ಬಾರಿ ಬೇರೆ ಕೋಣೆಯಲ್ಲಿ ವಾಸ. ನಿಜಕ್ಕೂ ವಿಚಿತ್ರ ಘಟನೆ. ಮದುವೆಯಾಗಿ 7 ದಿನಗಳಲ್ಲೇ ಮದುವೆ ಮುರಿದುಬಿದ್ದ ವ್ಯಕ್ತಿಯ ಮನಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಬಹುದು. (ಎಲ್ಲಾ ಚಿತ್ರಗಳು ಸಾಂದರ್ಭಿಕ)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸಂಬಂಧಗಳು
ಭಾರತ ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!
Recommended image2
ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು
Recommended image3
VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!
Related Stories
Recommended image1
ಅಕ್ರಮ ಸಂಬಂಧ ಇಟ್ಕೊಂಡಿರೋ ನಿಂಗೆ ಕರ್ಮ ಬಿಡಲ್ಲ ಅಂದ್ರಿ, ಕಾನೂನು ತೀರ್ಪು ಪಾಲಿಸ್ತೀನಿ: ಜಯಂ ರವಿ ಪ್ರೇಯಸಿ ಕೆನಿಷಾ ಫ್ರಾನ್ಸಿಸ್
Recommended image2
ತಾಳಿ ಕಟ್ಟುವ ಶುಭ ವೇಳೆ, ಹಾಸನದ ಮಂಟಪದಿಂದ ಎದ್ದು ಹೊರನಡೆದ ವಧು, ವರ-ಪೋಷಕರು ಕಣ್ಣೀರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved