- Home
- Entertainment
- Cine World
- ಅಕ್ರಮ ಸಂಬಂಧ ಇಟ್ಕೊಂಡಿರೋ ನಿಂಗೆ ಕರ್ಮ ಬಿಡಲ್ಲ ಅಂದ್ರಿ, ಕಾನೂನು ತೀರ್ಪು ಪಾಲಿಸ್ತೀನಿ: ಜಯಂ ರವಿ ಪ್ರೇಯಸಿ ಕೆನಿಷಾ ಫ್ರಾನ್ಸಿಸ್
ಅಕ್ರಮ ಸಂಬಂಧ ಇಟ್ಕೊಂಡಿರೋ ನಿಂಗೆ ಕರ್ಮ ಬಿಡಲ್ಲ ಅಂದ್ರಿ, ಕಾನೂನು ತೀರ್ಪು ಪಾಲಿಸ್ತೀನಿ: ಜಯಂ ರವಿ ಪ್ರೇಯಸಿ ಕೆನಿಷಾ ಫ್ರಾನ್ಸಿಸ್
ಆರ್ತಿ ಮತ್ತು ನಟ ಜಯಂ ರವಿ ಮೋಹನ್ ಮಧ್ಯೆ ಮನಸ್ತಾಪ ಇದೆ. ಕೆನಿಷಾ ಫ್ರಾನ್ಸಿಸ್ ಹಾಗೂ ಜಯಂ ರವಿ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ. ಇವರಿಂದಲೇ ಸಂಸಾರ ಹಾಳಾಯ್ತು ಎಂದು ಆರತಿ ಹೇಳಿದ್ದಾರೆ. ಈಗ ಜಯಂ ರವಿ, ಆರತಿ ಅವರು ವಿಚ್ಛೇದನದ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೆಗಳನ್ನು ಕೊಡುತ್ತಿರುವಾಗ, ಕೆನಿಷಾ ಅವರ ಇನ್‌ಸ್ಟಾ ಪೋಸ್ಟ್ ವೈರಲ್ ಆಗಿದೆ.
- FB
- TW
- Linkdin
Follow Us
)
ಕೆನಿಷಾಗೆ ಜೀವ ಬೆದರಿಕೆ
ರವಿ ಮೋಹನ್ ಮತ್ತು ಆರ್ತಿ ರವಿ ಅವರ ವಿಚ್ಛೇದನ ಕಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಆರ್ತಿ ಆರೋಪಗಳನ್ನು ಮಾಡುತ್ತಿರುವಾಗ, ರವಿ ಮೋಹನ್ ತಮ್ಮ ಹೊಸ ಗೆಳತಿ ಕೆನಿಷಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ಮೋಹನ್ ತಮ್ಮ ಹೇಳಿಕೆಯಲ್ಲಿ ಕೆನಿಷಾ ಅವರನ್ನು ತಮ್ಮ ಜೀವನ ಸಂಗಾತಿ ಎಂದು ಹೇಳಿದ್ದಾರೆ.
₹40 ಲಕ್ಷ ಜೀವನಾಂಶ ಕೇಳಿದ ಆರ್ತಿ
ರವಿ ಮೋಹನ್ ಮತ್ತು ಆರ್ತಿ ರವಿ ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರವಿ ಮೋಹನ್ ಮದುವೆ ಮುಂದುವರಿಸಲು ಇಷ್ಟವಿಲ್ಲ ಎಂದಿದ್ದಾರೆ. ಆರ್ತಿ ಮಾತ್ರ ₹40 ಲಕ್ಷ ಜೀವನಾಂಶ ಕೇಳಿದ್ದಾರೆ. ವಿಚ್ಛೇದನ ರದ್ದು ಮಾಡಲು ಆರ್ತಿ ಅರ್ಜಿ ಹಾಕಿದ್ದರು, ಆದರೆ ಕೋರ್ಟ್ ಅದನ್ನು ತಿರಸ್ಕರಿಸಿದೆ. ಜೂನ್ 12ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಆರ್ತಿ ಮಾಡಿದ ಆರೋಪಗಳು
ಮೇ 20 ರಂದು ಆರ್ತಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದರು. ಮೂರನೇ ವ್ಯಕ್ತಿಯಿಂದ ತಮ್ಮ ಸಂಬಂಧ ಹಾಳಾಗಿದೆ ಎಂದು ಆರೋಪಿಸಿದರು. ತಮ್ಮ ಕುಟುಂಬ ತೊಂದರೆ ಕೊಟ್ಟಿದ್ದರೆ ರವಿ ಮೋಹನ್ 10 ವರ್ಷ ಸಹಿಸಿಕೊಳ್ಳುತ್ತಿದ್ದರೇ ಎಂದು ಪ್ರಶ್ನಿಸಿದರು. "ನಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿ ಇದ್ದಾರೆ. ಅವರೇ ಕಾರಣ" ಎಂದರು.
ಕೆನಿಷಾಗೆ ಜೀವ ಬೆದರಿಕೆ
ಆರ್ತಿ ಮತ್ತು ರವಿ ಮೋಹನ್ ಹೇಳಿಕೆಗಳನ್ನು ಕೊಡುತ್ತಿರುವಾಗ, ಕೆನಿಷಾ ಅವರ ಇನ್‌ಸ್ಟಾ ಪೋಸ್ಟ್ ವೈರಲ್ ಆಗಿದೆ. "ನಾನೇ ತಪ್ಪಿತಸ್ಥಳಾದರೆ ನನ್ನನ್ನು ಕಾನೂನು ಮುಂದೆ ನಿಲ್ಲಿಸಿ. ಮೀಡಿಯಾದಲ್ಲಿ ನನ್ನ ವಿರುದ್ಧ ದ್ವೇಷ ಹರಡಬೇಡಿ. ನಾನು ಒಳ್ಳೆಯ ಕುಟುಂಬದಿಂದ ಬಂದವಳು. ನೀವು ಕೊಡುವ ಶಾಪ ಮತ್ತು ಜೀವ ಬೆದರಿಕೆಯಿಂದ ನಾನು ಏನು ಅನುಭವಿಸುತ್ತಿದ್ದೇನೆ ಎಂದು ಯೋಚಿಸಿದ್ದೀರಾ? ಸತ್ಯ ಹೊರಬಂದಾಗ ನಿಮಗೆ ಏನಾಗುತ್ತದೆ ಎಂದು ನಾನು ನೋಡಲು ಬಯಸುವುದಿಲ್ಲ. ಈ ವಿಷಯದಲ್ಲಿ ನಾನು ದೇವರಿಗೆ ಶರಣಾಗಿದ್ದೇನೆ" ಎಂದು ಬರೆದಿದ್ದಾರೆ.
"ನನ್ನ ಸತ್ಯ, ನೋವನ್ನು ನಿಮ್ಮಲ್ಲಿ ಹೆಚ್ಚಿನವರಿಗೆ ಗೊತ್ತೇ ಇಲ್ಲ. ನನ್ನ ಬಗ್ಗೆ ಕೆಟ್ಟ ಪದಗಳನ್ನುಬಳಸೋದು ಸುಲಭ. ನಿಮ್ಮ ಊಹೆಗಳು ನಿಮಗೆ ನೋವು ಕೊಡ್ತಿದೆ ಎಂದು ನಾನು ಬೇಸರ ಮಾಡಿಕೊಳ್ತೀನಿ. ಆದರೆ, ಶೀಘ್ರದಲ್ಲೇ ಸತ್ಯ ಬಹಿರಂಗವಾಗಲಿ ಎಂದು ನಾನು ದೇವರಲ್ಲಿ ಬೇಡುವೆ. ನಾನು ತಪ್ಪು ಮಾಡಿದ್ದರೆ, ಕಾನೂನಿನಿಂದ ಶಿಕ್ಷೆ ಆಗಲಿ, ಅದಕ್ಕೆ ನಾನು ರೆಡಿಯಿದ್ದೇನೆ. ಅಲ್ಲಿಯವರೆಗೆ, ದ್ವೇಷವಿಲ್ಲದೆ ನನಗೆ ಉಸಿರಾಡಲು ಅವಕಾಶ ಸಿಗಲಿ?" ಎಂದು ಅವರು ಪೋಸ್ಟ್ ಮಾಡಿದ್ದಾರೆ.