- Home
- Life
- Relationship
- ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
Marriage annulment reasons: ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹುಡುಗನನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಆತ…

ಶಾಕ್ ಆದ ನವ ವಧು
ನವ ವಧುವಿನ ಜೀವನ ಕೇವಲ ಮೂರೇ ದಿನದಲ್ಲಿ ಬದಲಾಗಿದೆ. ಮದುವೆಯ ನಂತರ ಅಂದರೆ ಮೊದಲನೆಯ ರಾತ್ರಿಯೇ ನವ ವರನು ತಾನು ದೈಹಿಕವಾಗಿ ಸದೃಢವಾಗಿಲ್ಲ ಎಂದು ಆಕೆಗೆ ಹೇಳಿದ್ದಾನೆ. ಇದನ್ನು ಕೇಳಿ ವಧು ಆಘಾತಕ್ಕೊಳಗಾಗಿದ್ದಾಳೆ. ಕೊನೆಗೇನಾಯ್ತು? ಮುಂದೆ ಓದಿ...
ಡೀವೋರ್ಸ್ ಪತ್ರದಲ್ಲಿ ಏನಿತ್ತು?
ಇದನ್ನು ಕೇಳಿ ಶಾಕ್ ಆದ ವಧು ತನ್ನ ತವರು ಮನೆಗೆ ಹಿಂತಿರುಗಿ ನಾಲ್ಕನೇ ದಿನಕ್ಕೆ ಗಂಡನಿಗೆ ಡೀವೋರ್ಸ್ ನೀಡಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರುವುದು ಗೋರಖ್‌ಪುರದಲ್ಲಿ. ಡೀವೋರ್ಸ್ ಪತ್ರದಲ್ಲಿ "ಮದುವೆಯ ಮುನ್ನ ನಿಜವಾದ ಸಮಸ್ಯೆಯನ್ನು ಮರೆಮಾಡಿದ ವ್ಯಕ್ತಿಯೊಂದಿಗೆ ನನ್ನ ಜೀವನವನ್ನು ಕಳೆಯಲು ಬಯಸುವುದಿಲ್ಲ." ಎಂದಿದೆ.
ಇದು ಎರಡನೇ ಮದುವೆ
ವಿಚ್ಛೇದನ ನೋಟಿಸ್ ಸ್ವೀಕರಿಸಿದ ನಂತರ, ಎರಡೂ ಕುಟುಂಬಗಳು ಬೆಲಿಪರ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಒಟ್ಟುಗೂಡಿದವು. ಸುಮಾರು ನಾಲ್ಕು ಗಂಟೆಗಳ ಕಾಲ ಪಂಚಾಯತ್ ಸಭೆ ನಡೆಯಿತು. ಈ ಸಮಯದಲ್ಲಿ ಹುಡುಗಿಯ ಕಡೆಯವರು ಗಂಭೀರ ಆರೋಪಗಳನ್ನು ಮಾಡಿದರು. "ಹುಡುಗನಿಗೆ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಆದರೆ ಆ ಹುಡುಗಿಯೂ ಒಂದು ತಿಂಗಳ ನಂತರ ಅಲ್ಲಿಂದ ಆಚೆ ಬಂದಳು. ಆಗಲೂ ಹುಡುಗ ದೈಹಿಕವಾಗಿ ಅಸಮರ್ಥ ಎಂಬ ವಿಚಾರ ಬಹಿರಂಗಗೊಂಡಿತ್ತು. ಆದರೆ ಕುಟುಂಬವು ಈ ಸಂಗತಿಯನ್ನು ಮರೆಮಾಚಿ ಎರಡನೇ ಮದುವೆಯನ್ನು ಏರ್ಪಡಿಸಿತು" ಎಂದು ದೂರಿದ್ದಾರೆ.
ವೈದ್ಯಕೀಯ ಪರೀಕ್ಷೆಯಿಂದ ಬಗೆಹರಿದ ಸಮಸ್ಯೆ
ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹುಡುಗನನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಆತ ತಂದೆಯಾಗಲು ಸಮರ್ಥನಲ್ಲ ಎಂದು ತಿಳಿಸಿದರು. ಈ ವರದಿಯನ್ನು ಸ್ವೀಕರಿಸಿದ ನಂತರ ಹುಡುಗಿಯ ಕುಟುಂಬ ಮಾಡಿದ ಆರೋಪ ದೃಢವಾಯಿತು.
ಕುಟುಂಬದ ಏಕೈಕ ಉತ್ತರಾಧಿಕಾರಿ
25 ವರ್ಷದ ನವ ವರ ಸಹಜನ್ವಾನ್‌ನ ಶ್ರೀಮಂತ ಕೃಷಿ ಕುಟುಂಬದ ಏಕೈಕ ಪುತ್ರ. ಬಿ.ಟೆಕ್ ಮುಗಿಸಿದ ನಂತರ ಜಿಐಡಿಎಯ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸಂಬಂಧಿಕರು ಬೆಲಿಪರ್‌ನಲ್ಲಿ ವಾಸಿಸುತ್ತಿದ್ದು, ಅವರ ಮೂಲಕವೇ ಮದುವೆಯನ್ನು ಏರ್ಪಡಿಸಲಾಯಿತು. ಹುಡುಗಿಯ ಕುಟುಂಬವು ವರನ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಸಂತೋಷಪಟ್ಟಿತು. ನವೆಂಬರ್ 28 ರಂದು ವಿವಾಹವು ಬಹಳ ವೈಭವದಿಂದ ನಡೆಯಿತು ಮತ್ತು ವಧುವನ್ನು ನವೆಂಬರ್ 29 ರಂದು ಅವರ ಅತ್ತೆಯ ಮನೆಗೆ ಕಳುಹಿಸಲಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

