MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Life
  • Relationship
  • Kannada Serials: ಗಂಡನ ಸಹಾಯವಿಲ್ಲದೇ ಹೆಂಡ್ತಿ ಬದುಕ್ತಾಳಾ ಅಥ್ವಾ ಅವಳಿಲ್ಲದೇ ಇವನಾ? 2 ಸೀರಿಯಲ್​ಗಳಲ್ಲಿ ಭರ್ಜರಿ ಚಾಲೆಂಜ್​

Kannada Serials: ಗಂಡನ ಸಹಾಯವಿಲ್ಲದೇ ಹೆಂಡ್ತಿ ಬದುಕ್ತಾಳಾ ಅಥ್ವಾ ಅವಳಿಲ್ಲದೇ ಇವನಾ? 2 ಸೀರಿಯಲ್​ಗಳಲ್ಲಿ ಭರ್ಜರಿ ಚಾಲೆಂಜ್​

ಸಂಸಾರದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರಲ್ಲಿ ಯಾರು ಹೆಚ್ಚು ಮುಖ್ಯ ಎಂಬ ಚರ್ಚೆ ಸಹಜ. 'ಕರ್ಣ' ಮತ್ತು 'ಲಕ್ಷ್ಮೀ ನಿವಾಸ' ಧಾರಾವಾಹಿಗಳ ಇತ್ತೀಚಿನ ಕಥಾಹಂದರವನ್ನು ಆಧರಿಸಿ, ಗಂಡನ ಅಹಂಕಾರ ಮತ್ತು ಹೆಂಡತಿಯ ಸ್ವಾಭಿಮಾನದ ನಡುವಿನ ಸಂಘರ್ಷವನ್ನು ಈ ಲೇಖನ ವಿಶ್ಲೇಷಿಸುತ್ತದೆ.

2 Min read
Author : Suchethana D
Published : Aug 12 2026, 02:11 PM IST
Share this Photo Gallery
  • FB
  • TW
  • Linkdin
  • Whatsapp
16
ಗಂಡ ಹೆಂಡತಿ ಎರಡು ಕಣ್ಣುಗಳಂತೆ
Image Credit : Zee Kannada Instagram

ಗಂಡ-ಹೆಂಡತಿ ಎರಡು ಕಣ್ಣುಗಳಂತೆ

ಸಂಸಾರ ಚೆನ್ನಾಗಿ ನಡೆಯಲು ಗಂಡ-ಹೆಂಡತಿ ಎರಡು ಕಣ್ಣುಗಳು ಇದ್ದಂತೆ. ಸಂಸಾರ ಎಂಬ ರಥದ ಎರಡು ಚಕ್ರಗಳಂತೆ. ಇವರಲ್ಲಿ ಒಬ್ಬರು ಸರಿಯಿಲ್ಲದಿದ್ದರೂ ಸಂಸಾರ ಎನ್ನುವ ನೌಕೆ ಅಲ್ಲಿಯೇ ಮುಳುಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ. ಒಂದು ವೇಳೆ ಒಬ್ಬರು ಸರಿ ಇಲ್ಲದಿದ್ದರೆ ಇನ್ನೊಬ್ಬರು ಅದೆಷ್ಟು ಸಹಿಸಿಕೊಂಡು ಹೋಗಬೇಕು, ಅದ್ಯಾವ ಪರಿಯಲ್ಲಿ ಹಿಂಸೆ ಅನುಭವಿಸಬೇಕು ಎನ್ನುವುದನ್ನು ಇದಾಗಲೇ ಹಲವು ಕುಟುಂಬಗಳಲ್ಲಿ ಗಂಡನೋ, ಹೆಂಡತಿಯೋ ಅನುಭವಿಸುತ್ತಿರುವುದು ಇದ್ದೇ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗಂಡೋ, ಹೆಣ್ಣೊ?
Image Credit : pinterest

ಗಂಡೋ, ಹೆಣ್ಣೊ?

ಇದರ ಹೊರತಾಗಿಯೂ ಎಷ್ಟೋ ಸಂದರ್ಭಗಳಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಇಲ್ಲದೇ ಹೋದರೆ, ಸಂಸಾರವನ್ನು ನಿಭಾಯಿಸುವ ಶಕ್ತಿ ಯಾರಿಗಿದೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಪತಿಗೆ ಪತ್ನಿ ಮುಖ್ಯನೋ, ಪತ್ನಿಗೆ ಪತಿ ಮುಖ್ಯನೋ ಎನ್ನುವ ಪ್ರಶ್ನೆ ಆಗ್ಗಾಗ್ಗೆ ಚರ್ಚೆಯ ವಿಷಯವಾಗಿಯೇ ಇರುತ್ತದೆ. ಪ್ರತಿಯೊಬ್ಬರ ಮನೆಯಲ್ಲಿನ ಪರಿಸ್ಥಿತಿ ಒಂದೇ ರೀತಿ ಇರದೇ ಹೋದರೂ, ಸಾಮಾನ್ಯವಾಗಿ ಜನರಲ್​ ಆಗಿ ವಿಷಯಕ್ಕೆ ಬಂದಾಗ ಅಥವಾ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ಸಹಜವಾಗಿ ಬಹುತೇಕರು ಹೇಳುವುದು, ಪತಿ ಇಲ್ಲದೇ ಪತ್ನಿ ಬದುಕಬಲ್ಲಳು. ಒಂದು ವೇಳೆ ಆಕೆಗೆ ಹಣ ಬರದೇ ಹೋದರೂ, ಹೇಗಾದರೂ ಆಕೆ ದುಡಿದು ಸಂಸಾರ ನಿಭಾಯಿಸಬಲ್ಲಳು. ಆದರೆ ದಿನನಿತ್ಯದ ಪ್ರತಿಯೊಂದು ಕೆಲಸಕ್ಕೂ ಪತ್ನಿಯ ಮೇಲೆ ಡಿಪೆಂಡ್​ ಆಗಿರೋ ಗಂಡ ಆಕೆಯಿಲ್ಲದೇ ಸಂಸಾರ ನಿಭಾಯಿಸುವುದು ಬಲು ಕಷ್ಟ ಎನ್ನೋದು. ಪತ್ನಿ ಇಲ್ಲದಿದ್ದರೂ ಮನೆಯಲ್ಲಿ ಅಮ್ಮನೋ, ತಂಗಿನೋ ಒಟ್ಟಿನಲ್ಲಿ ಒಬ್ಬ ಹೆಣ್ಣು ಇರಬೇಕು ಎನ್ನುವುದು.

Related Articles

Related image1
ಪತ್ನಿ ಓಡಿಹೋಗುತ್ತಲೇ ರಾತ್ರೋರಾತ್ರಿ ಫೇಮಸ್​ ಆಗಿರೋ ಈ ನಟ ಯಾರು? ಘಟನೆಗೆ ಬಂತೊಂದು ಸ್ಪಷ್ಟನೆ
Related image2
ಹೊಸ ಸೀರೆ, ಬಳೆ ತೊಟ್ಟು ಲೈವ್​ನಲ್ಲಿ ವಿಶೇಷ ಸುದ್ದಿ ಕೊಟ್ಟ Karna Serial ನಮ್ರತಾ ಗೌಡ
36
ಅದೂ ಸತ್ಯ, ಇದೂ ಸತ್ಯ!
Image Credit : AI Image

ಅದೂ ಸತ್ಯ, ಇದೂ ಸತ್ಯ!

ಮೊದಲೇ ಹೇಳಿದಂತೆ ಒಂದೊಂದು ಮನೆಯ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ. ನಮ್ಮದು ಪುರುಷ ಪ್ರಧಾನ ಸಮಾಜ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ, ಹೆಣ್ಣು ಇರದೇ ಹೋದರೆ ಆ ಮನೆಯ ಸ್ಥಿತಿ ಹೇಗಿರುತ್ತದೆ ಎನ್ನುವುದು. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈಗ ಎರಡು ಸೀರಿಯಲ್​ಗಳು. ಒಂದು ಕರ್ಣ ಸೀರಿಯಲ್​​ ಹಾಗೂ ಇನ್ನೊಂದು ಲಕ್ಷ್ಮೀ ನಿವಾಸ ಸೀರಿಯಲ್​. ಸದ್ಯ ಎರಡೂ ಸೀರಿಯಲ್​ಗಳಲ್ಲಿ ಭರ್ಜರಿ ಟ್ವಿಸ್ಟ್​ ಬಂದಿದೆ. ಗಂಡಿನ ಸಹಾಯವಿಲ್ಲದೇ ಹೆಣ್ಣು ಬದುಕಬಲ್ಲಳೋ ಅಥವಾ ಹೆಣ್ಣಿಲ್ಲದೇ ಗಂಡು ಎನ್ನುವುದು ಇದೀಗ ಭಾರಿ ಚರ್ಚೆಯ ವಿಷಯವಾಗಿದೆ.

46
ಅವಿವಾಹಿತರ ಮಾತು
Image Credit : Getty

ಅವಿವಾಹಿತರ ಮಾತು

ಹೆಂಡ್ತಿ ಇಲ್ಲದಿದ್ದರೆ ಏನು, ಹೋಟೆಲ್​ ಇಲ್ವಾ ಎಂದು ಕೇಳಬಹುದು. ಆದರೆ ಪ್ರತಿನಿತ್ಯವೂ ಹೋಟೆಲ್​ನಲ್ಲಿ ಮೂರು ಹೊತ್ತು ತಿಂಡಿ, ಊಟ ಮಾಡುವವರ ಪಾಡು ಕೇಳಿದರೆ ಬಹುಶಃ ಇದಕ್ಕೆ ಉತ್ತರ ಸಿಗಬಹುದು. ಇನ್ನು ಅವಿವಾಹಿತರ ಮಾತು ಬೇರೆ. ಅವರು ಮೊದಲೇ ಯಾರ ಮೇಲೂ ಡಿಪೆಂಡ್​ ಆಗದ ಕಾರಣ, ಅವರು ಎಲ್ಲವನ್ನೂ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ ಎನ್ನುವುದು ಬೇರೆಯ ಮಾತು.

56
ಕರ್ಣ ಸೀರಿಯಲ್​ನಲ್ಲಿ ರಮೇಶ್​ ಸ್ಥಿತಿ
Image Credit : Zee Kannada Instagram

ಕರ್ಣ ಸೀರಿಯಲ್​ನಲ್ಲಿ ರಮೇಶ್​ ಸ್ಥಿತಿ

ಇದಾಗಲೇ ಕರ್ಣ ಸೀರಿಯಲ್​ನಲ್ಲಿ (Karna Serial) ರಮೇಶ್​ ಸ್ಥಿತಿ ನೋಡುತ್ತಿದ್ದೀರಿ. ವಿಲನ್​ ಸಹೋದರಿಯ ಮಾತು ಕೇಳಿ ಪತ್ನಿ ಮಾಲತಿಗೆ ಡಿವೋರ್ಸ್​ಗೆ ಸಹಿ ಹಾಕಿರೋ ರಮೇಶ್​, ಏನೂ ಮಾಡಿಕೊಳ್ಳಲು ಬರದೇ ಒದ್ದಾಡುತ್ತಿದ್ದಾನೆ. ಎಲ್ಲದ್ದಕ್ಕೂ ಪತ್ನಿಯ ಮೇಲೆ ಡಿಪೆಂಡ್​ ಆಗಿದ್ದ ಆತ, ತಾನು ಪುರುಷ ಎನ್ನುವ ಅಹಂಕಾರದಿಂದ ದಿನೇ ದಿನೇ ಪತ್ನಿಗೆ ಟಾರ್ಚರ್​ ಕೊಡುತ್ತಿದ್ದ. ಆದರೆ ಇದೀಗ ಅವನ ಇಗೋ ಅವನಿಗೆ ಮುಳುವಾಗಿದೆ. ಹೆಂಡ್ತಿ ಇಲ್ಲದೇ ಉಪವಾಸ ಬೀಳುವಂತಾಗಿದೆ. ಅಲ್ಲಿಗೆ ಗಂಡಿಗೆ ಅದರಲ್ಲಿಯೂ ಎಲ್ಲದ್ದಕ್ಕೂ ಹೆಂಡತಿ ಮೇಲೆ ಡಿಪೆಂಡ್​ ಆಗಿರೋ ಗಂಡನಿಗೆ ಹೇಗೆ ಹೆಣ್ಣು ಮುಖ್ಯ ಎನ್ನುವುದು ಸಾಬೀತಾಗಿದೆ.

66
ಲಕ್ಷ್ಮೀ ನಿವಾಸ ಸೀರಿಯಲ್​
Image Credit : Zee Kannada Instagram

ಲಕ್ಷ್ಮೀ ನಿವಾಸ ಸೀರಿಯಲ್​

ಇದೀಗ ಇನ್ನಷ್ಟು ಕುತೂಹಲ ಇರುವುದು ಲಕ್ಷ್ಮೀ ನಿವಾಸ ಸೀರಿಯಲ್​ದ್ದು (Lakshmi Nivasa). ಇದರಲ್ಲಿ ಪತಿ ಜಯಂತ್​ ಕ್ರೌರ್ಯ ಚಿನ್ನುಮರಿಗೆ ತಿಳಿದಿದೆ. ಸೈಕೋ ಪತಿಯಿಂದ ದೂರವಾಗುವ ಪ್ರಯತ್ನ ಮಾಡುತ್ತಿದ್ದಾಳೆ. ಕ್ರಿಮಿನಲ್​ ಕೇಸ್​ನಲ್ಲಿ ಜೈಲಿಗೆ ಹೋಗಿರೋ ಜಯಂತ್​ ವಾಪಸ್​ ಬಂದು ಪತ್ನಿಗೆ ಕ್ಷಮೆ ಕೋರಿದ್ದಾನೆ. ಆದರೆ, ಜಾಹ್ನವಿ ಆತನನ್ನು ಕ್ಷಮಿಸಲು ರೆಡಿ ಇಲ್ಲ. ಇನ್ನು ನಾವಿಬ್ಬರೂ ಬೇರೆ. ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ ಎನ್ನುತ್ತಾಳೆ. ಆದರೆ ಗಂಡಿನ ಅಹಂಕಾರ ಎಲ್ಲಿ ಹೋಗತ್ತೆ ಹೇಳಿ. ನಾನು ಜಯಂತ್​. ನಾನಿಲ್ಲದೇ ನೀವು ಹೇಗೆ ಬದುಕುತ್ತೀರಿ ಎಂದು ನೋಡುತ್ತೇನೆ ಎಂದು ಜಯಂತ್​ ಪತ್ನಿಗೆ ಸವಾಲು ಎಸೆದಾಗ, ಅದನ್ನು ನಾನು ತೋರಿಸುತ್ತೇನೆ ಎಂದಿದ್ದಾಳೆ ಜಾಹ್ನವಿ. ಹಾಗಿದ್ದರೆ ಇಲ್ಲಿ ಗೆಲುವು ಗಂಡಿನ ಅಹಂಕಾರಕ್ಕೋ, ಹೆಣ್ಣಿನ ಚಾಲೆಂಜ್​ಗೋ ಎನ್ನುವುದನ್ನು ಕಾದು ನೋಡಬೇಕಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ
ಮನರಂಜನಾ ಸುದ್ದಿ
ಸಂಬಂಧಗಳು
ಕನ್ನಡ ಧಾರಾವಾಹಿ
ದಂಪತಿಗಳು
ಗಂಡ
ಪತ್ನಿ

Latest Videos
Recommended Stories
Recommended image1
ಕೌಟುಂಬಿಕ ಜಗಳದಲ್ಲಿ ಮಕ್ಕಳೇ ದಾಳ: ಮಕ್ಕಳ ಸುಪರ್ದಿಗೆ 'ಪೋಕ್ಸೋ' ದುರುಪಯೋಗ ಕುರಿತು ಹೈಕೋರ್ಟ್ ಕಳವಳ!
Recommended image2
Chanakya Niti: ಈ 5 ಜನರು ಜೀವನದಲ್ಲಿ ಸುಲಭವಾಗಿ ಮೋಸ ಹೋಗ್ತಾರೆ! ಈ ಲಿಸ್ಟ್‌ನಲ್ಲಿ ನೀವಿದ್ದೀರಾ?
Recommended image3
ಮದುವೆ ನಂತರ ಅಫೇರ್! ಈ ದೇಶಗಳಲ್ಲೇ ಅತಿ ಹೆಚ್ಚು, ಇಲ್ಲಿದೆ ಟಾಪ್ 10 ಪಟ್ಟಿ!
Related Stories
Recommended image1
ಪತ್ನಿ ಓಡಿಹೋಗುತ್ತಲೇ ರಾತ್ರೋರಾತ್ರಿ ಫೇಮಸ್​ ಆಗಿರೋ ಈ ನಟ ಯಾರು? ಘಟನೆಗೆ ಬಂತೊಂದು ಸ್ಪಷ್ಟನೆ
Recommended image2
ಹೊಸ ಸೀರೆ, ಬಳೆ ತೊಟ್ಟು ಲೈವ್​ನಲ್ಲಿ ವಿಶೇಷ ಸುದ್ದಿ ಕೊಟ್ಟ Karna Serial ನಮ್ರತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved