ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ಗೋವಿಂದಾ ಜೊತೆ ಹುಡುಗಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗ್ತಿದ್ದಂತೆ ಅಫೇರ್ ಚರ್ಚೆ ಮತ್ತೆ ಶುರುವಾಗಿದೆ. ಇದಕ್ಕೆ ಸುನೀತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ಹಿರಿಯ ನಟ ಗೋವಿಂದಾ ಅವರ ವೈಯಕ್ತಿಕ ಜೀವನ ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅವರ ಪತ್ನಿ ಸುನೀತಾ ಅಹುಜಾ, ಗೋವಿಂದಾ, ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಪದೇ ಪದೇ ಆರೋಪಿಸಿದ್ದರು. ಈಗ ಗೋವಿಂದಾ ಜೊತೆ ಹುಡುಗಿಯೊಬ್ಬರು ಕಾಣಿಸಿಕೊಂಡಿದ್ದು, ಅದು ಚರ್ಚಗೆ ಕಾರಣವಾಗಿದೆ.

ಗೋವಿಂದಾ ಜೊತೆ ಕಾಣಿಸಿಕೊಂಡವರು ಯಾರು?

ಇತ್ತೀಚಿಗೆ ವಿಮಾನ ನಿಲ್ದಾಣದಲ್ಲಿ ಗೋವಿಂದಾ ಜೊತೆ ಕೋಮಲ್ ಸ್ವರ್ಣಕರ್ ಕಾಣಿಸಿಕೊಂಡಿದ್ದಾರೆ. ಕೋಮಲ್, ಗೋವಿಂದಾ ಅವರ ಗರ್ಲ್ ಫ್ರೆಂಡ್ ಎನ್ನಲಾಗ್ತಿದೆ. ಗೋವಿಂದಾ ಅಥವಾ ಕೋಮಲ್ ಈ ವಿಷ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಡೇಟಿಂಗ್ ವದಂತಿಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಅದೇನೇ ಇರಲಿ, ಗೋವಿಂದಾ ಜೊತೆ ಕಾಣಿಸಿಕೊಂಡಿರುವ ಕೋಮಲ್ ರಾಣಿ ಸ್ವರ್ಣಕರ್ ಯಾರು ಎನ್ನುವ ಕುತೂಹಲ ಎಲ್ಲರನ್ನು ಕಾಡ್ತಿದೆ. ಕೋಮಲ್ ಒಬ್ಬ ಉದಯೋನ್ಮುಖ ನಟಿ. ಅವರು ಪ್ರಸ್ತುತ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ತಯಾರಿ ನಡೆಸುತ್ತಿದ್ದಾರೆ. ಗೋವಿಂದಾ ಅವರ ಮುಂಬರುವ ಸಿನಿಮಾ, ರೂಪ ನಲ್ಲಿ ಕೋಮಲ್ ಕಾಣಿಸಿಕೊಳ್ತಿದ್ದಂತೆ ಸುದ್ದಿಗೆ ಬಂದಿದ್ದಾರೆ. ಕೋಮಲ್ ಹಿಂದಿ ಸಿನಿಮಾ ದುನಿಯಾಕ್ಕೆ ಹೊಸಬರು. ಉತ್ತರ ಪ್ರದೇಶದ ಕೋಮಲ್ ಅವರ ವೈಯಕ್ತಿಕ ಜೀವನ, ಶಿಕ್ಷಣ ಅಥವಾ ಕುಟುಂಬದ ಹಿನ್ನೆಲೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಅವರಿಗೆ ವಯಸ್ಸೆಷ್ಟು ಎನ್ನುವ ಮಾಹಿತಿ ಕೂಡ ಲಭ್ಯವಿಲ್ಲ.

ನಾಲ್ಕು ವರ್ಷಗಳಿಂದಿದೆ ಅಫೇರ್ ?

ಇತ್ತೀಚೆಗೆ, ಗೋವಿಂದ ಮತ್ತು ಕೋಮಲ್ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರ. ಅವರಿಬ್ಬರೂ ಒಟ್ಟಿಗೆ ಇರುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಗೋವಿಂದ ಮತ್ತು ಕೋಮಲ್ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳಿಗೆ ಇದು ಪುಷ್ಠಿ ನೀಡಿದೆ. ಇಬ್ಬರೂ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ.

ಸುನೀತಾ ಪ್ರತಿಕ್ರಿಯೆ ಏನು?

ಗೋವಿಂದ ಮತ್ತು ಕೋಮಲ್ ಸುತ್ತ ನಡೆಯುತ್ತಿರುವ ಊಹಾಪೋಹಗಳಿಗೆ ಸುನೀತಾ ಅಹುಜಾ ಕೂಡ ಪ್ರತಿಕ್ರಿಯಿಸಿದ್ದಾರೆ. ಕೋಮಲ್ ಜೊತೆ ಗೋವಿಂದಾ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುನೀತಾ ವಿನಾಶ ಕಾಲೇ ವಿಪರೀತ ಬುದ್ದಿ. ಅವರ ಬುದ್ಧಿ ಭ್ರಮಣೆಗೊಂಡಿದೆ. ಅದಕ್ಕಾಗಿ ಅವರು ಹೀಗೆಲ್ಲ ಮಾಡ್ತಿದ್ದಾರೆ. ನಾನು ಈಗ ಏನು ಹೇಳಲಿ ಅಂತ ಸುನೀತಾ ಪ್ರಶ್ನೆ ಮಾಡಿದ್ದಾರೆ.