ನೀವು ಆಫೀಸ್ colleague ಜೊತೆ ಡೇಟಿಂಗ್ ಮಾಡ್ತಿದೀರಾ? ಹಾಗಿದ್ರೆ ಇದನ್ನ ಓದ್ಲೇಬೇಕು
ಪ್ರೀತಿ ಯಾವಾಗ, ಎಲ್ಲಿ ಮತ್ತು ಯಾರ ಮೇಲೆ ಹುಟ್ಟುತ್ತೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅದೊಂದು ಅದ್ಭುತ ಅನುಭವ. ಈ ಫೀಲಿಂಗ್ ಎಲ್ಲರಿಗೂ ಒಂದಲ್ಲ ಒಂದು ಬಾರಿ ನಡೆಯುತ್ತೆ. ಕಾಲೇಜಿನಲ್ಲಿರಬಹುದು, ಸಂಬಂಧದಲ್ಲಿರಬಹುದು ಹೀಗೆ ಒಂದಲ್ಲ ಒಂದು ಸಂದರ್ಭದಲ್ಲಿ ಯಾರ ಮೇಲಾದರೂ ಲವ್ ಆಗುತ್ತೆ. ಇದೇ ಲವ್ ಆಫೀಸ್ ನಲ್ಲಾದ್ರೆ ಹೆಂಗಿರತ್ತೆ….
ಆಫೀಸ್ ಲವ್ ಒಂಥರ ಥ್ರಿಲ್ ಆಗಿರುತ್ತೆ. ಆಫೀಸ್ ನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಪ್ರೀತಿ ಹುಟ್ಟಿದರೆ, ಅವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್ (Gossip)ಶುರು ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿವೂ ಕೂಡ ನಿಮ್ಮ ಆಫೀಸ್ ಕೊಲಿಗ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ನೀವು ಈ ವಿಷಯಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ, ನೀವು ಕೆಲಸವನ್ನೂ ಕಳೆದುಕೊಳ್ಳುವ ಚಾನ್ಸ್ ಕೂಡ ಹೆಚ್ಚಾಗಿರುತ್ತೆ!
ಆಫೀಸ್(Office) ಅಥವಾ ಕಾಲೇಜು ಎಲ್ಲೆ ಆಗಿರಬಹುದು, ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಮಾತನಾಡಿದರೆ ಸಾಕು. ಅವರ ನಡುವೆ ಏನೂ ಇಲ್ಲದಿದ್ದರೂ.. ಏನೋ ಇದೆ ಎಂದು ಭಾವಿಸುವ ಬಹಳಷ್ಟು ಜನರಿದ್ದಾರೆ. ಅವರಿಬ್ಬರ ನಡುವೆ ಏನಾದರೂ ಇರಬಹುದು.. ಏನೋ.. ಪ್ರೀತಿಗೀತಿ ಇರಬಹುದೇನೋ.. ಹಾಗೇ ಹೀಗೆ ಏನೇನೋ ಹೇಳುತ್ತಾರೆ. ಹೀಗೆ ಇಡೀ ಆಫೀಸ್ ಅವರ ಬಗ್ಗೆ ಗಾಸಿಪ್ ಮಾಡಲು ಸ್ಟಾರ್ಟ್ ಮಾಡುತ್ತದೆ.
ಆಫೀಸ್ ನಲ್ಲಿ ನಿಮ್ಮ ಕೊಲಿಗ್ ನೊಂದಿಗೆ(Colleague) ಡೇಟಿಂಗ್ ಮಾಡುವುದು ಎಷ್ಟು ಒಳ್ಳೆಯದು? ಬಹಳಷ್ಟು ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವರು ಇದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ, ಆದರೆ ಇತರರು ಇದು ತಪ್ಪು ಎಂದು ಭಾವಿಸುತ್ತಾರೆ. ಹಾಗಿದ್ರೆ ಆಫೀಸ್ ಸಹದ್ಯೋಗಿ ಜೊತೆ ಡೇಟಿಂಗ್ ಸರೀನಾ? ತಪ್ಪಾ? ನೋಡೋಣ…
ನೀವು ಕಚೇರಿಯಲ್ಲಿ ನಿಮ್ಮ ಕೊಲಿಗ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ನೀವು ತುಂಬಾ ಜಾಗರೂಕರಾಗಿರಬೇಕು. ವಿಶೇಷವಾಗಿ ಈ ಸಮಯದಲ್ಲಿ ಏನಾದರೂ ತಪ್ಪಾದರೆ ಅದು ನಿಮ್ಮ ಕರಿಯರ್ ಗೆ(Career) ಮುಳುವಾಗಬಹುದು ಅನ್ನೋದು ನೆನಪಿರಲಿ. ಕೆಲವೊಮ್ಮೆ ನೀವು ನಿಮ್ಮ ಕೆಲಸವನ್ನು ಸಹ ಕಳೆದುಕೊಳ್ಳಬಹುದು. ಆದ್ದರಿಂದ ಆಫೀಸ್ ನಲ್ಲಿ ಕೊಲಿಗ್ ಜೊತೆ ಡೇಟಿಂಗ್ ಮಾಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಅನ್ನೋದನ್ನು ನೋಡೋಣ.
ಆಫೀಸ್ ನಲ್ಲಿ ಪ್ರೊಫೇಶನಲ್(Professional) ಆಗಿರಬೇಕು
ಕಚೇರಿಯ ಹೊರಗೆ ಒಬ್ಬರಿಗೊಬ್ಬರು ಎಷ್ಟು ಸಮಯ ಕಳೆದರೂ ಪರವಾಗಿಲ್ಲ. ನೀವು ಕಚೇರಿಯೊಳಗೆ ಪ್ರೊಫೇಶನಲ್ ಆಗಿರಬೇಕು. ನಿಮ್ಮಿಬ್ಬರ ನಡುವೆ ನಡೆದ ಯಾವುದೇ ವಿಷ್ಯಗಳನ್ನು ಕೆಲಸದ ಮಧ್ಯ ತರಲೇಬಾರದು. ಏಕೆಂದರೆ ನಿಮ್ಮ ವಿಷಯಗಳು ಕಚೇರಿ ಕೆಲಸದ ಮೇಲೆ ಪರಿಣಾಮ ಬೀರುತ್ತವೆ. ಆಗ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ಆಫೀಸ್ ನಲ್ಲಿ ನಿಮ್ಮ ಮೇಲೆ ನೆಗೆಟಿವ್ ಎಫೆಕ್ಟ್ ಬೀರುವಂತೆ ಮಾಡುತ್ತೆ.
ಜಗಳಗಳ (Fight) ಬಗ್ಗೆ ಯಾರಿಗೂ ಹೇಳಬೇಡಿ
ಯಾವುದೇ ಸಂಬಂಧವಿರಲಿ ಪ್ರೀತಿಯ ಜೊತೆಗೆ ಡಿಫರೆನ್ಸಸ್ ಗಳೂ ಇರುತ್ತವೆ. ಪ್ರೀತಿ ಇರುವಲ್ಲಿ, ಜಗಳ ಮತ್ತು ಸಂಘರ್ಷ ಇರೋದು ಸಾಮಾನ್ಯ. ನೀವು ನಿಮ್ಮ ಕಲೀಗ್ ಜೊತೆ ಡೇಟಿಂಗ್ ಮಾಡುತ್ತಿರುವಾಗ ಜಗಳವಾದರೆ, ಇದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ವಿಶೇಷವಾಗಿ ಆಫೀಸ್ ನಲ್ಲಿ ಇದನ್ನು ಹೇಳಲೇಬೇಡಿ. ನಿಮ್ಮಿಬ್ಬರ ನಡುವೆ ನಡೆದದ್ದನ್ನು ಇತರರೊಂದಿಗೆ ಹಂಚಿಕೊಂಡರೆ ನಿಮ್ಮ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತೆ. ಅದಕ್ಕಾಗಿಯೇ ನಿಮ್ಮ ಪರ್ಸನಲ್ ವಿಷ್ಯಗಳನ್ನು ಆಫೀಸ್ ನಿಂದ ದೂರ ಇರಿಸಿ.
ನಿಮ್ಮ ಸಂಬಂಧದ ಬಗ್ಗೆ ಇತರರಿಗೆ ಹೇಳಬೇಡಿ.
ಸಾಮಾನ್ಯವಾಗಿ, ಯಾರಾದರೂ ಪ್ರೀತಿಯಲ್ಲಿದ್ದಾಗ, ಅವರು ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದು ಒಳ್ಳೆಯ ವಿಷಯವಾಗಿದ್ದರೂ ಸಹ.. ನಿಮ್ಮ ಆಫೀಸ್ ನ ಹುಡುಗಿಯನ್ನೇ ನೀವು ಪ್ರೀತಿಸುತ್ತಿದ್ದರೆ, ಕಚೇರಿಯಲ್ಲಿ ಈ ವಿಷಯ ಮತ್ತು ಡೇಟಿಂಗ್ (Dating)ಬಗ್ಗೆ ಸಾಧ್ಯವಾದಷ್ಟು ಚರ್ಚಿಸದಿರುವುದು ಉತ್ತಮ. ಯಾಕಂದ್ರೆ ಇದೇ ಮುಂದೆ ನಿಮ್ಮ ಕರಿಯರ್ ಮೇಲೆ ಪರಿಣಾಮ ಬೀರಬಹುದು, ಅಥವಾ ಕರಿಯರ್ ಗೆ ಮುಳುವಾಗುವಂತೆ ಇತರರು ಮಾಡಬಹುದು, ಆದುದರಿಂದ ಇದನ್ನು ಅವಾಯ್ಡ್ ಮಾಡಿ.
ಮೆಸೇಜ್ (Message) ಕಳುಹಿಸಲು ಮರೆಯಬೇಡಿ
ನೀವು ಡೇಟಿಂಗ್ ಮಾಡುತ್ತಿದ್ದರೆ. ನಿಮ್ಮ ಆಫೀಸ್ ನಲ್ಲೂ ಸಹ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದನ್ನು ಬಿಡಲಾರಿರಿ. ಆಗ ಒಂದು ಸಣ್ಣ ಮೆಸೇಜ್ ಅನ್ನು ಕಳುಹಿಸಿ. ಆಫೀಸ್ ನ ಎಲ್ಲಾ ಒತ್ತಡವೂ ಹೊರಟುಹೋಗುತ್ತದೆ.. ಸಂತೋಷ ಸಿಗುತ್ತದೆ. ಅವರೊಂದಿಗೆ ಮಾತನಾಡಲು ಕಚೇರಿ ಮೇಲ್ ಅನ್ನು ಬಳಸಬೇಡಿ. ಇದರಿಂದ ನಿಮ್ಮ ಮೇಲೆ ಮತ್ತೊಬ್ಬರು ಕಣ್ಣಿಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಈಗ ಯೋಚಿಸಿ, ಆಫೀಸ್ ಕಲೀಗ್ ಜೊತೆ ಡೇಟಿಂಗ್ ಮಾಡ್ತಾ ಇದ್ರೆ ಏನು ಮಾಡ್ಬೇಕು ತಿಳ್ಕೊಳಿ...