Asianet Suvarna News Asianet Suvarna News

ವೃತ್ತಿ ಜೀವನ ಮತ್ತು ವೈಯುಕ್ತಿಕ ಜೀವನ, ಬ್ಯಾಲೆನ್ಸ್ ಮಾಡುವುದು ಹೇಗೆ ?

ಪ್ರೊಫೆಶನಲ್ (Professional) ಮತ್ತು ಪರ್ಸನಲ್‌ ಲೈಫ್ (Personal Life) ಬ್ಯಾಲೆನ್ಸ್ ಮಾಡುವುದು ಹಲವರಿಗೆ ತಿಳಿಯದ ವಿಷಯ. ಆಫೀಸಿ (Office)ನಲ್ಲಿ ದಿನವಿಡೀ ಕೆಲಸ ಮಾಡುತ್ತಾರೆ. ಮನೆಗೆ ಬಂದು ರೇಗುತ್ತಾರೆ. ಹೆಂಡ್ತಿ ಮಾತನಾಡಿದ್ರೆ ನಾನಿಷ್ಟೆಲ್ಲಾ ಮಾಡೋದು ಯಾರಿಗಾಗಿ ಅಂದುಬಿಡುತ್ತಾರೆ. ಹೀಗಂದ ತಕ್ಷಣ ಎಲ್ಲವೂ ಸರಿಹೋಗುವುದಿಲ್ಲ. ಹಾಗಿದ್ರೆ ಉದ್ಯೋಗ (Job) ಮತ್ತು ವೈವಾಹಿಕ ಜೀವನ (Married Life) ಸರಿಯಾಗಿರುವಂತೆ ನೋಡಿಕೊಳ್ಳುವುದು ಹೇಗೆ?

How To Balance Your Relationship And Your Career Vin
Author
Bengaluru, First Published Apr 17, 2022, 6:26 PM IST

ಜೀವನ (Life) ಚೆನ್ನಾಗಿರಬೇಕೆಂದರೆ ವೈವಾಹಿಕ ಜೀವನದ (Married Life) ಜೊತೆ ಔದ್ಯೋಗಿಕ ಜೀವನವೂ (Professional Life) ಚೆನ್ನಾಗಿರಬೇಕಾದುದು ತುಂಬಾ ಮುಖ್ಯ. ಆದರೆ ತುಂಬಾ ಮಂದಿಗೆ ಇವೆರಡನ್ನೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆಫೀಸಿನ ಕಡೆ ಹೆಚ್ಚು ಗಮನಹರಿಸಿದರೆ ಮನೆಯಲ್ಲಿ ಜಗಳ, ಮನೆಯ ಕಡೆ ಹೆಚ್ಚು ಗಮನ ಹರಿಸಿದರೆ ಆಫೀಸ್ ಕಿರಿಕಿರಿ ಕೇಳಬೇಕಾಗಿ ಬರುತ್ತದೆ. ಹಾಗಂತ ಜೀವದನಲ್ಲಿ ಉದ್ಯೋಗ, ವೈವಾಹಿಕ ಜೀವನ ಇವೆರಡನ್ನೂ ಕಡೆಗಣಿಸುವಂತಿಲ್ಲ. ಆದರೆ ಇವತ್ತಿನ ದಿನಗಳಲ್ಲಿ ಜನರ ಜೀವನಶೈಲಿ ಹೇಗಿರುತ್ತದೆಯೆಂದರೆ ಗಂಡ ಒಂದು ಶಿಫ್ಟ್ ಆದರೆ, ಹೆಂಡತಿ ಇನ್ನೊಂದು ಶಿಫ್ಟ್. ಪರಸ್ಪರ ಮಾತನಾಡಲು ಸಮಯವಿರುವುದಿಲ್ಲ. ಹೀಗಿದ್ದಾಗ ವೃತ್ತಿಜೀವನದೊಂದಿಗೆ ಪ್ರೀತಿಯನ್ನು ಸಮತೋಲನಗೊಳಿಸುವುದು ಕಷ್ಟಕರವಾಗಿರುತ್ತದೆ. ಹೀಗಾದಾಗ ಏನ್ಮಾಡೋದು ? ಪ್ರೀತಿ ಹಾಗೂ ಉದ್ಯೋಗವನ್ನು ಬ್ಯಾಲೆನ್ಸ್ (Balance) ಮಾಡೋದು ಹೇಗೆ ?

1. ಆಫೀಸ್‌, ಮನೆಗಾಗಿ ನಿರ್ಧಿಷ್ಟ ಸಮಯ ಪಾಲಿಸಿ: ಆಫೀಸಿನ ಸಮಯವನ್ನು ಆಫೀಸಿನಲ್ಲಿ ಮತ್ತು ಮನೆಯ ಸಮಯವನ್ನು ಮನೆಯಲ್ಲಿ ಕಳೆಯಿರಿ. ಲೇಟಾಗಿ ಆಫೀಸಿಗೆ ಹೊರಡುವುದು, ಮನೆಗೆ ಬೇಗ ಬರುವುದು ಇಂಥದ್ಯಾವುದೂ ಮಾಡಬೇಡಿ. ಬದಲಿಗೆ ಸರಿಯಾದ ಸಮಯಕ್ಕೆ ಆಫೀಸಿಗೆ ತೆರಳಿ ಕೆಲಸ ಮಾಡಿ ಮತ್ತು ಸರಿಯಾದ ಸಮಯಕ್ಕೆ ಮನೆಗೆ ಮರಳಿ ಬನ್ನಿ. ಇದರಿಂದ ನಿಮ್ಮ ಸಂಗಾತಿಯೊಂದಿಗೂ ಸಮಯ ಕಳೆಯಲು ಸಾಧ್ಯವಾಗುತ್ತದೆ. ಮನೆಗೆ ಬಂದ ಮೇಲೂ ಲ್ಯಾಪ್‌ಟಾಪ್, ಮೊಬೈಲ್ ಚೆಕ್‌ ಮಾಡೋದನ್ನು ಆದಷ್ಟು ಕಡಿಮೆ ಮಾಡಿ. 

Relationship Tips : ಅಪ್ಪಿತಪ್ಪಿಯೂ ಸಂಗಾತಿಗೆ ಈ ಸಂದೇಶ ಕಳಿಸ್ಬೇಡಿ

2. ಹಣಕಾಸಿನ ಬಗ್ಗೆ ಆಗಾಗ ಮಾತನಾಡಿ: ದಂಪತಿಗಳ ಮಧ್ಯೆ ಆಗಾಗ ಹಣಕಾಸಿನ ವಿಷಯದ ಬಗ್ಗೆ ಚರ್ಚೆಯಾಗುತ್ತದೆ. ಖರ್ಚು ಮಾಡಿರುವ ಮೊತ್ತ, ಉಳಿದ ಹಣವೆಲ್ಲಿ ಹೋಯಿತು ಎಂಬ ಬಗ್ಗೆ ಪತಿ-ಪತ್ನಿಯಿಬ್ಬರೂ ಜಗಳವಾಡುತ್ತಾರೆ. ಆದ್ದರಿಂದ ಕೆಲಸವು ಕಳೆದುಹೋದರೆ ಅಥವಾ ಹೊಸ ವೃತ್ತಿಜೀವನದ ನಿರ್ಧಾರ ಮಾಡುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಯು ಇನ್ನೊಬ್ಬರನ್ನು ಬೆಂಬಲಿಸಲು ಸಿದ್ಧರಿದ್ದಾರೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಸಂಗಾತಿಯು ಕೆಲಸಕ್ಕೆ ರಾಜೀನಾಮೆ ನೀಡಿದರೆ ಜೀವನಶೈಲಿ ಹೇಗೆ ಬದಲಾಗುತ್ತದೆ. ಎಲ್ಲವನ್ನೂ ಒಬ್ಬರೇ ನಿರ್ವಹಿಸಲು ಸಾಧ್ಯವಾಗುತ್ತದಾ ಎಂಬುದನ್ನು ಗಮನಿಸಿಕೊಳ್ಳಬೇಕು. ನೀವು ಮನೆಯಲ್ಲಿ ಮತ್ತು ಕೆಲಸಕ್ಕಾಗಿ ಹಣವನ್ನು ಹೇಗೆ ನಿಯೋಜಿಸುತ್ತೀರಿ ಎಂಬುದನ್ನು ನಿರ್ಧರಿಸಿ.

3. ಪರಸ್ಪರ ಜೊತೆಯಾಗಿ ಸಮಯವನ್ನು ಕಳೆಯಿರಿ: ಆಫೀಸಿನ ಕೆಲಸ ಸಿಕ್ಕಾಪಟ್ಟೆಯಿದೆ ಎಂಬ ಕಾರಣಕ್ಕೆ ಕೆಲವೊಬ್ಬರು ಮನೆಯತ್ತ ಗಮನ ಕೊಡುವುದನ್ನೇ ಬಿಟ್ಟು ಬಿಡುತ್ತಾರೆ. ಇದು ಗಂಡ-ಹೆಂಡತಿಯ ಮಧ್ಯೆ ಅಂತರ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಪತಿ-ಪತ್ನಿಯ ಸಂಬಂಧ ಚೆನ್ನಾಗಿರಲು ಇಬ್ಬರೂ ಜತೆಯಾಗಿ ಸಮಯ ಕಳೆಯುವುದು ಮುಖ್ಯವಾಗಿದೆ. ಸಮಯ ಸಿಕ್ಕಾಗಲೆಲ್ಲಾ ಜೊತೆಯಾಗಿ ಸಮಯ ಕಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಒಟ್ಟಿಗೆ ಅಡುಗೆ ಮಾಡುವುದು, ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು ಮೊದಲಾದ ಅಭ್ಯಾಸಗಳು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.

Relationship Tips : ಡಾನ್ಸ್ ಮಾಸ್ಟರ್ ಪ್ರೀತಿಗೆ ಬಿದ್ದು ಪತಿಗೆ ಕೈಕೊಟ್ಟ ಪತ್ನಿ..!

4. ಕೋಪದಿಂದ ಮಲಗಬೇಡಿ: ವೈವಾಹಿಕ ಜೀವನದಲ್ಲಿ ಹಲವರು ಮಾಡುವ ತಪ್ಪು ಇದು. ಔದ್ಯೋಗಿಕ ಸಮಸ್ಯೆಯನ್ನು ಮನೆಯೊಳಗೂ, ಮನೆಯ ಸಮಸ್ಯೆಯನ್ನು ಆಫೀಸಿಗೂ ತಂದುಬಿಡುತ್ತಾರೆ. ಇದರಿಂದ ತೊಂದರೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಹೀಗಾಗಿ ಆಫೀಸಿನ ಕಿರಿಕಿರಿಯನ್ನು ಆಫೀಸಿನಲ್ಲಿ, ಮನೆಯ ಜಗಳವನ್ನು ಮನೆಯಲ್ಲೇ ಬಿಟ್ಟು ಬಿಡಿ. ಬೆಳಗ್ಗೆ ನೀವು ಕೋಪದಿಂದ ಎಚ್ಚರಗೊಂಡರೆ, ನೀವು ಹಿಂದಿನ ರಾತ್ರಿಯಿಂದ ಅಮೂಲ್ಯವಾದ ನಿದ್ರೆಯನ್ನು ಕಳೆದುಕೊಂಡಿರುವುದಲ್ಲದೆ, ಬೆಳಗ್ಗೆ ನಕಾರಾತ್ಮಕ ಆರಂಭವನ್ನು ಸಹ ಪಡೆಯುತ್ತೀರಿ. ಅದು ದಿನವಿಡೀ ನಿಮ್ಮ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಬಂಧ ಮತ್ತು ನಿಮ್ಮ ವೃತ್ತಿಜೀವನದ ಒಳಿತಿಗಾಗಿ ಮಲಗುವ ಮೊದಲು ಸಮಸ್ಯೆಗಳನ್ನು ಬಗೆಹರಿಸಿ, ನೆಮ್ಮದಿಯಿಂದ ಮಲಗಿ

5. ಪತಿ-ಪತ್ನಿಯರಲ್ಲಿ ಹೊಂದಾಣಿಕೆ: ಪತಿ-ಪತ್ನಿಯರಲ್ಲಿ ಒಬ್ಬರು ಅಥವಾ ಇನ್ನೊಬ್ಬರು ಉನ್ನತ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, ಆ ವೃತ್ತಿಜೀವನದ ಒಳಿತಿಗಾಗಿ ಒಬ್ಬರು ತ್ಯಾಗವನ್ನು ಮಾಡಬೇಕಾಗುತ್ತದೆ ಎಂಬುದು ಬಹುತೇಕ ಗ್ಯಾರಂಟಿ. ಹೀಗಾಗಿ ಗಂಡ-ಹೆಂಡತಿಯ ಮಧ್ಯೆ ಹೊಂದಾಣಿಕೆಯಿರುವಂತೆ ನೋಡಿಕೊಳ್ಳಿ. ಇಂಥಾ ಸಂದರ್ಭದಲ್ಲಿ ಕಿರುಚಾಡುವುದು, ರೇಗಾಡುವುದು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿಮ್ಮ ವೃತ್ತಿಜೀವನವನ್ನು ಹೆಚ್ಚಿಸಲು ನಿಮ್ಮ ಸಂಗಾತಿಯ ತ್ಯಾಗದ ಪ್ರಾಮುಖ್ಯತೆಯನ್ನು ಸ್ವೀಕರಿಸಿ. ಮತ್ತು ಅಂಗೀಕರಿಸಿ ಮತ್ತು ಭವಿಷ್ಯದಲ್ಲಿ ಅವರ ಕನಸುಗಳಿಗಾಗಿ ಅದೇ ರೀತಿ ಮಾಡಲು ಸಿದ್ಧರಾಗಿರಿ.

6. ಬೆಂಬಲವನ್ನು ತೋರಿಸಿ: ನಿಮ್ಮ ಸ್ವಂತ ಸುದೀರ್ಘ ದಿನದ ಕೆಲಸದ ನಂತರ ನಿಮ್ಮ ಸಂಗಾತಿಯ ವೃತ್ತಿಜೀವನದಲ್ಲಿ ಆಸಕ್ತಿ ತೋರಿಸಲು ಕಷ್ಟವಾಗಬಹುದು. ಅವರ ಮಾತುಗಳನ್ನು ಕೇಳುವುದು ಕಷ್ಟವಾಗಬಹುದು. ಹೀಗಾಗಿ ಅವರು ಮಾತನಾಡಿದಾಗ ನಿರಾಸಕ್ತಿ ತೋರದಿರಿ. ಬದಲಿಗೆ ಅವರ ಮಾತುಗಳನ್ನು ಆಲಿಸಿ, ಅಗತ್ಯ ಸಲಹೆಗಳನ್ನು ಕೊಡುವುದು ಮುಖ್ಯವಾಗಿದೆ. 

Follow Us:
Download App:
  • android
  • ios