Asianet Suvarna News Asianet Suvarna News

ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ನಿಮ್ಮ ಜಾತಕ ಏನನ್ನುತ್ತೆ?

ಸಾಮಾನ್ಯವಾಗಿ ಎಲ್ಲ ಒಂದು ಮದುವೆಯಾಗುತ್ತಾರೆ. ಆದರೆ ಕೆಲವರು ಮಾತ್ರ ಮದುವೆಯಾಗದೆಯೇ ಉಳಿಯುತ್ತಾರೆ. ಮತ್ತೆ ಕೆಲವರು ಎರಡು ಅಥವಾ ಮೂರು ಮದುವೆಯಾಗುವುದೂ ಇದೆ. ಒಬ್ಬರಿಗೆ ಮದುವೆಯ ಯೋಗ ಇದೆಯೇ ಇಲ್ಲವೇ, ಎಷ್ಟು ಮದುವೆ ಯೋಗವಿದೆ ಎಂಬುದನ್ನು ಜಾತಕ ನೋಡಿ ತಿಳಿಯಬಹುದಾಗಿದೆ. 

how many times you get married Horoscope reveals skr
Author
First Published Sep 14, 2022, 3:50 PM IST

ಮದುವೆಯಾಗುವುದು ಎಲ್ಲರ ಕನಸು. ತಮಗೆ ತಾವು ಬಯಸಿದಂತ ಸಂಗಾತಿ ಸಿಗಲಿ, ಅವರು ಸಿಕ್ಕಾಗ ತನ್ನ ಬದುಕು ಹೇಗೆಲ್ಲ ಇರಬಹುದು ಎಂದು ಹಲವರು ಕನಸು ಕಾಣುತ್ತಾರೆ. ಸಾಮಾನ್ಯವಾಗಿ ವಿವಾಹವಾಗುವಾಗ ಹುಡುಗ ಹುಡುಗಿಯ ಜಾತಕ ತೋರಿಸಲಾಗುತ್ತದೆ. ಹೊಂದಾಣಿಕೆ ಇದೆಯೇ ನೋಡಲಾಗುತ್ತದೆ. ಇದ್ದರೆ ಮಾತ್ರ ಮುಂದುವರೆಯಲಾಗುತ್ತದೆ. ಕೆಲವೊಮ್ಮೆ ಈ ಜಾತಕ ನೋಡಿದಾಗ ಅವರಿಬ್ಬರೂ ಮುಂದೆ ಸುಖವಾಗಿರಬಲ್ಲರೇ, ಮದುವೆ ವಿಷಯದಲ್ಲಿ ಜಾತಕ ಸರಿಯಿದೆಯೇ ಎಂದೆಲ್ಲ ಜ್ಯೋತಿಷಿಗಳಿಗೆ ತಿಳಿಯುತ್ತದೆ. ಅವರು ಹೊಂದಾಣಿಕೆ ಇಲ್ಲ ಎಂಬುದಷ್ಟೇ ಹೇಳುತ್ತಾರೆ. ಆದರೆ, ಅಪರೂಪದಲ್ಲಿ ಅವರು ಹೀಗೆ ಹೇಳಲು ಕಾರಣ ಕೆಲವರ ಜಾತಕದಲ್ಲಿ ಎರಡು ಮದುವೆಯ ಯೋಗ ಇರುವುದಾಗಿರಬಹುದು. ಒಬ್ಬರಿಗೆ ಎಷ್ಟು ಮದುವೆಯಾಗುವ ಯೋಗವಿದೆ ಎಂಬುದನ್ನು ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿ ನೋಡಿ ತಿಳಿಯಬಹುದು. 

ಮದುವೆ(Marriage)ಯು ಇಬ್ಬರು ವ್ಯಕ್ತಿಗಳ ಒಕ್ಕೂಟವಾಗಿದೆ, ಆದರೆ ಮದುವೆಗೆ ಪರಿಪೂರ್ಣವಾದ ಜಾತಕ ಹೊಂದಾಣಿಕೆಯು ಈ ಒಕ್ಕೂಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಾತಕವು ಮಾನವ ಜೀವನದ ಎಲ್ಲಾ ಅಂಶಗಳನ್ನು ನಿರ್ವಹಿಸುತ್ತದೆ. ಮದುವೆ ಕುರಿತು ಕೂಡಾ ಜಾತಕ ನೋಡಿ ತಿಳಿಯಬಹುದು. ನಿಮ್ಮ ಜಾತಕ(Horoscope)ವು ಮದುವೆಯ ಬಗ್ಗೆ, ನೀವು ಯಾವಾಗ ಮದುವೆಯಾಗುತ್ತೀರಿ, ಯಾರನ್ನು ಮದುವೆಯಾಗುತ್ತೀರಿ, ಯಾರು ನಿಮಗೆ ಪರಿಪೂರ್ಣ ಆತ್ಮ ಸಂಗಾತಿಯಾಗಬಹುದು, ನಿಮ್ಮ ಜೀವನ ಸಂಗಾತಿಯೊಂದಿಗೆ ಹೊಂದಾಣಿಕೆಯನ್ನು ಹೇಗೆ ಪರಿಶೀಲಿಸಬೇಕು, ನಿಮ್ಮ ಸಂತತಿಯು ಹೇಗಿರುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಹೇಗಿರುತ್ತದೆ ಎಂಬುದನ್ನು ಹೇಳುತ್ತದೆ ಎನ್ನುತ್ತಾರೆ ತಜ್ಞ ಜ್ಯೋತಿಷಿಗಳು. 

ನಿಮ್ಮ Zodiac Sign ಯಾವುದು? ಹೀಗ್ ಲಕ್ಷ್ಮಿ ಪೂಜೆ ಮಾಡಿದರೆ ಹಣ ಹರಿದು ಬರುತ್ತದೆ!

ಹೀಗಿದ್ದರೆ ಒಂದೇ ಮದುವೆ
ನಿಮ್ಮ ಜಾತಕದಲ್ಲಿ 7ನೇ ಮನೆ(7th house of Kundli)ಯು ಮದುವೆಗೆ ಸಂಪರ್ಕ ಹೊಂದಿದೆ. ವಿವಾಹ ಸಂಬಂಧಗಳಿಗೆ ಕಾರಕ ಗ್ರಹ ಗುರುಗ್ರವಾಗಿದೆ. ಹಾಗಾಗಿಯೇ ವಿವಾಹ ಮಾಡುವಾಗ ಗುರುಬಲವಿದೆಯೇ ಎಂದು ನೋಡುವುದು. ಗುರುವಿನ ಜೊತೆ ಇತರ ಗ್ರಹಗಳ ಯುತಿ ಹೇಗಿದೆ ಎಂದು ನೋಡಿದ ಬಳಿಕ ಸ್ತ್ರೀ ಪುರುಷನ ಗುಣಗಳ ಹೊಂದಾಣಿಕೆ ನೋಡಲಾಗುತ್ತದೆ. ಒಂದು ವೇಳೆ ನಿಮ್ಮ ಜಾತಕದ 7ನೇ ಸ್ಥಾನದಲ್ಲಿ ಗುರು ಮತ್ತು ಬುಧ ಗ್ರಹ ಒಟ್ಟಾಗಿ ಇದ್ದರೆ ಅಂಥ ಗಂಡಸರಿಗೆ ಒಂದೇ ಮದುವೆ ಎಂದು ತಿಳಿಯಬಹುದು. ಅಂತೆಯೇ ಸಪ್ತಮದಲ್ಲಿ ಮಂಗಳ ಅಥವಾ ಸೂರ್ಯ ಇದ್ದಾಗಲೂ ಒಂದು ಮದುವೆಯ ಯೋಗ ಎಂದು ತಿಳಿಯಬಹುದು. 

ಜಾತಕ ಹೀಗಿದ್ದರೆ ಎರಡು ಮದುವೆ
ಲಗ್ನದ ಅಧಿಪತಿ ಗ್ರಹ ಮತ್ತು ಸಪ್ತಮ ಸ್ಥಾನದ ಗ್ರಹ, ಈ ಎರಡೂ ಗ್ರಹಗಳು ಜೊತೆಯಾಗಿ ಮೊದಲನೇ ಅಥವಾ ಏಳನೇ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂಥವರಿಗೆ ಎರಡು ಮದುವೆ ಯೋಗವಿರುತ್ತದೆ. ಸಾಮಾನ್ಯವಾಗಿ ಎರಡು ಹೆಂಡತಿಯರು. ಉದಾಹರಣೆಗೆ ಲಗ್ನ  ಸಿಂಹವಾದರೆ ಅದರ ಅಧಿಪತಿ ಗ್ರಹ ಸೂರ್ಯ. ಸಪ್ತಮದಲ್ಲಿ ಅಂದರೆ ಏಳನೇ ಮನೆಯಲ್ಲಿ ಕುಂಭ ರಾಶಿಯ ಅಧಿಪತಿ ಶನಿ ಸ್ಥಿತನಾಗಿದ್ದರೆ ಮತ್ತು ಈ ಎರಡೂ ಗ್ರಹಗಳು ಒಂದನೇ ಮನೆ ಇಲ್ಲವೇ ಏಳನೇ ಮನೆಯಲ್ಲಿದ್ದರೆ ಅಂಥವರಿಗೆ ಎರಡು ಮದುವೆ ಯೋಗವಿದೆ ಎನ್ನಲಾಗುತ್ತದೆ.

ಜಾತಕದ ಏಳನೇ ಮನೆಯ ಅಧಿಪತಿ ಗ್ರಹದ ಜೊತೆಗೆ ಮಂಗಳ, ರಾಹು, ಕೇತು, ಶನಿ ಗ್ರಹಗಳು, ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ, ಅಂಥವರಿಗೆ ಒಂದು ಹೆಂಡತಿಯು ಮರಣ ಹೊಂದಿದ ಕಾರಣಕ್ಕೆ ಇನ್ನೊಂದು ಮದುವೆ ಆಗುತ್ತದೆ. 7ನೇ ಮನೆಯ ಅಧಿಪತಿಯು ದ್ವಿಸ್ವಭಾವ ರಾಶಿಗಳಾದ ಮಿಥುನ, ಕನ್ಯಾ, ಧನು ಅಥವಾ ಮೀನ(Pisces)ದೊಂದಿಗೆ ಇದ್ದರೆ ಅಂತಹ ಜಾತಕದವರಿಗೆ ಎರಡು ವಿವಾಹವಾಗುತ್ತದೆ.

ಲಗ್ನದ ಅಧಿಪತಿ ಗ್ರಹವು ಹನ್ನೆರಡನೇ ಮನೆಯಲ್ಲಿ ಮತ್ತು ದ್ವಿತೀಯ ಮನೆಯ ಅಧಿಪತಿ ಗ್ರಹ  ಮಂಗಳ, ಶನಿ, ರಾಹು, ಕೇತು ಗ್ರಹಗಳು ಜೊತೆಗಿದ್ದು, ಸಪ್ತಮ ಸ್ಥಾನದಲ್ಲಿ ಪಾಪಗ್ರಹವಿದ್ದರೆ ಅಂತಹ ಜಾತಕದವರಿಗೆ ಎರಡು ಮದುವೆ ಯೋಗವಿರುತ್ತದೆ. ಇದಲ್ಲದೆ, 2ನೇ, 7ನೇ ಮತ್ತು 11ನೇ ಮನೆಯಲ್ಲಿ ದೋಷಪೂರಿತ ಗ್ರಹಗಳ ಸಾಮಾನ್ಯ ದೌರ್ಬಲ್ಯ ಮತ್ತು ಉಪಸ್ಥಿತಿಯು ಮರುಮದುವೆಯನ್ನು ಸೂಚಿಸುತ್ತದೆ.

Astrology Remedies: ಪ್ರಾಣಿ ಪಕ್ಷಿಗಳು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲವು! ಇಷ್ಟ್ ಮಾಡಿ ಸಾಕು..

ಇಂಥವರಿಗೆ ಮೂರು ವಿವಾಹ
ಶುಕ್ರ ಗ್ರಹವು ಪಾಪಗ್ರಹದ ಜೊತೆಗೆ ಸ್ಥಿತವಾಗಿದ್ದರೆ ಅಂತಹ ಜಾತಕದವರಿಗೆ ಎರಡು ಮದುವೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧನ ಸ್ಥಾನ ಅಂದರೆ ಎರಡನೇ ಸ್ಥಾನದಲ್ಲಿ ಅನೇಕ ಪಾಪಗ್ರಹಗಳು ಮತ್ತು ದ್ವೀತಿಯ ಮನೆಯ ಅಧಿಪತಿ ಗ್ರಹ ಕೂಡಾ ಪಾಪ ಗ್ರಹಗಳ ಜೊತೆಗೆ ಸ್ಥಿತವಾಗಿದ್ದರೆ ಅಂತಹ ಜಾತಕದವರಿಗೆ ಮೂರು ವಿವಾಹ ಯೋಗವಿರುತ್ತದೆ.

Follow Us:
Download App:
  • android
  • ios