MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • 70ರ ರಾಜಕಾರಣಿಯ ವರಿಸಿದ 20ರ ಚೆಲುವೆ: ಒಂದು ಡಜನ್​ ಮಕ್ಕಳ ತಂದೆಯ 4ನೇ ಮದ್ವೆ ಸ್ಟೋರಿ ಕೇಳಿ

70ರ ರಾಜಕಾರಣಿಯ ವರಿಸಿದ 20ರ ಚೆಲುವೆ: ಒಂದು ಡಜನ್​ ಮಕ್ಕಳ ತಂದೆಯ 4ನೇ ಮದ್ವೆ ಸ್ಟೋರಿ ಕೇಳಿ

70 ವರ್ಷದ ಸಮಾಜವಾದಿ ಪಕ್ಷದ ನಾಯಕ ಹಾಜಿ ಖಲೀಲ್, 20 ವರ್ಷದ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಆಸ್ತಿಗಾಗಿ ತನ್ನನ್ನು ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಎರಡನೇ ಪತ್ನಿ ನಜ್ರೀನ್ ಪೊಲೀಸರಿಗೆ ದೂರು ನೀಡಿದ್ದಾರೆ.

2 Min read
Author : Suchethana D
Published : May 16 2026, 01:03 PM IST
Share this Photo Gallery
  • FB
  • TW
  • Linkdin
  • Whatsapp
15
ನಾಲ್ಕನೇ ಮದ್ವೆ ವಿವಾದ
Image Credit : Social Media

ನಾಲ್ಕನೇ ಮದ್ವೆ ವಿವಾದ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕೈಲಾ ಭಟ್ಟ ಪ್ರದೇಶದಲ್ಲಿ ವಾಸಿಸುವ ಸಮಾಜವಾದಿ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಹಾಜಿ ಖಲೀಲ್ ಅವರ ನಾಲ್ಕನೇ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಸೃಷ್ಟಿಸಿದೆ. ಇದು ನಾಲ್ಕನೇ ಮದುವೆ ಎನ್ನುವ ಬಗ್ಗೆ ಅಲ್ಲ. ಬದಲಿಗೆ ಅವರಿಗೆ ಈಗ 70 ವರ್ಷ ವಯಸ್ಸು. ಹೆಂಡತಿಯ ವಯಸ್ಸು 20. ಹೀಗೆ ಗುಟ್ಟಾಗಿ ಎಷ್ಟು ಮದುವೆಗಳು ನಡೆಯುತ್ತವೆಯೋ ಗೊತ್ತಿಲ್ಲ. ಆದರೆ ಈ ನಾಯಕನ ವಿಷ್ಯ ಇಷ್ಟೊಂದು ಸದ್ದು ಮಾಡಲು ಕಾರಣ, ಹಾಜಿ ಖಲೀಲ್​ ಅವರ ಎರಡನೇ ಪತ್ನಿ ನಜ್ರೀನ್ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ. ನಜ್ರೀನ್ ತಮ್ಮ ಮಗನೊಂದಿಗೆ ಆಯುಕ್ತರ ಕಚೇರಿಗೆ ಆಗಮಿಸಿ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದು, ಪ್ರತಿ ಹೆಂಡತಿಗೆ ಮಗುವಾದ ನಂತರ ತನ್ನ ಪತಿ ತನ್ನನ್ನು ಕೈಬಿಡುತ್ತಾನೆ ಅಥವಾ ಮನೆಯಿಂದ ಹೊರಗೆ ಹಾಕುತ್ತಾನೆ ಎಂದು ಅವರು ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred
25
2ನೇ ಪತ್ನಿ ದೂರು
Image Credit : Social Media

2ನೇ ಪತ್ನಿ ದೂರು

2ನೇ ಪತ್ನಿ ನೀಡಿರುವ ದೂರಿನಲ್ಲಿ, ಈಗ ನನ್ನ ಗಂಡ ನಾಲ್ಕನೆಯ ಮದುವೆ ಆಗುತ್ತಿದ್ದಾರೆ. ಅದೂ 20 ವರ್ಷದ ಯುವತಿಯ ಜೊತೆ. ಮೊದಲ ಪತ್ನಿಯರು ಇದನ್ನು ಪ್ರತಿಭಟಿಸಿದಾಗ, ನಮಗೆಲ್ಲಾ ಜೀವ ಬೆದರಿಕೆ ಹಾಕಲಾಯಿತು. 1991 ರಲ್ಲಿ ಹಾಜಿ ಖಲೀಲ್ ಅವರನ್ನು ನಾನು ವಿವಾಹವಾಗಿದ್ದೆ. ಆದರೆ ಆ ಸಮಯದಲ್ಲಿ, ಅವರಿಗೆ ಮೊದಲೇ ಒಂದು ಮದುವೆಯಾಗಿ ಮಕ್ಕಳು ಇದ್ದುದು ನನಗೆ ಗೊತ್ತಿರಲಿಲ್ಲ. ನನ್ನ ಬಳಿ ಸುಳ್ಳು ಹೇಳಿ ಮದುವೆಯಾಗಿದ್ದಾರೆ. ಮೊದಲ ಪತ್ನಿಯಿಂದ ಅವರಿಗೆ ಎಂಟು ಮಕ್ಕಳಿದ್ದಾರೆ, ಬಳಿಕ ಆಕೆಯನ್ನು ಗಂಡ ತ್ಯಜಿಸಿದ್ದಾರೆ ಎಂದು ಅವರಿಗೆ ತಿಳಿದುಬಂದಿತು. ಖಲೀಲ್ ಅವರಿಗೆ ನಜ್ರೀನ್ ಅವರೊಂದಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಸೇರಿದಂತೆ ಮೂವರು ಮಕ್ಕಳಿದ್ದಾರೆ.

Related Articles

Related image1
ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ: ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ
Related image2
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್​ ನಟಿ ಭಾರತಿ: ಕ್ಯೂಟ್​ ಫೋಟೋಸ್​ ಇಲ್ಲಿವೆ
35
ಒಂದು ಡಜನ್​ ಮಕ್ಕಳು
Image Credit : Social Media

ಒಂದು ಡಜನ್​ ಮಕ್ಕಳು

ಅವರ ಮೂರನೇ ಪತ್ನಿ ಮಗುವನ್ನು ಪಡೆಯಲು ವಿಫಲವಾದ ನಂತರ, ಅವರು ನಾಲ್ಕನೇ ಬಾರಿಗೆ ವಿವಾಹವಾದರು. ಮೊದಲ ಇಬ್ಬರು ಪತ್ನಿಯರಿಂದ ಒಂದು ಡಜನ್​ ಮಕ್ಕಳು ಇದ್ದಾರೆ. ನನಗೆ ಮಗುವಾದ ಮೇಲೆ 3ನೇ ಮದ್ವೆಯಾದರು. 2010 ರಲ್ಲಿ ಈ ಮದುವೆ ಆಗಿತ್ತು. ಆದರೆ ಮಕ್ಕಳಿಲ್ಲದ ಕಾರಣ, ತ್ರಿವಳಿ ತಲಾಖ್ ಮೂಲಕ ಡಿವೋರ್ಸ್​ ಕೊಟ್ಟರು. ಇದೀಗ ನಾಲ್ಕನೆಯವಳಾದ 20 ವರ್ಷದ ಯಾಸ್ಮೀನ್ ಎಂಬ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂದಿದ್ದಾರೆ ನಜ್ರೀನ್.

45
ಆಸ್ತಿ ಮೇಲೆ ಕಣ್ಣು
Image Credit : Social Media

ಆಸ್ತಿ ಮೇಲೆ ಕಣ್ಣು

ಈ ಹೊಸ ಹೆಂಡತಿಗೆ ಅವರ ಆಸ್ತಿಯ ಮೇಲೆ ಕಣ್ಣಿದೆ. ಖಲೀಲ್ ತನ್ನ ಆಸ್ತಿಯನ್ನು ಆಕೆಗೆ ವರ್ಗಾಯಿಸಲು ಯೋಜಿಸುತ್ತಿದ್ದಾರೆ. ನಾವು ಪ್ರತಿಭಟಿಸಿದಾಗ, ನನ್ನನ್ನು ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಲಾಯಿತು ಎಂದಿದ್ದಾರೆ. ಸದ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು ದೂರನ್ನು ಸ್ವೀಕರಿಸಿದ್ದಾರೆ ಮತ್ತು ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪೊಲೀಸರು ಎಲ್ಲಾ ಸಂಗತಿಗಳನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.

55
30 ಕೋಟಿ ರೂ. ಅಕ್ರಮ
Image Credit : Social Media

30 ಕೋಟಿ ರೂ. ಅಕ್ರಮ

ಹಾಜಿ ಖಲೀಲ್ ಈ ಹಿಂದೆ 1995 ಮತ್ತು 2000 ರಲ್ಲಿ ಇಸ್ಲಾಂನಗರ ವಾರ್ಡ್‌ನಿಂದ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಅವರು ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಪುರಸಭೆಯ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿದ ಆರೋಪವನ್ನೂ ಹೊಂದಿದ್ದಾರೆ. ಈ ಭೂಮಿಯಲ್ಲಿ ಮದರಸಾ, ಮಸೀದಿ ಮತ್ತು ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪುರಸಭೆಯ ತನಿಖೆಯ ನಂತರ, ನೋಟಿಸ್‌ಗಳನ್ನು ನೀಡಲಾಯಿತು ಮತ್ತು ಕೆಲವು ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲಾಯಿತು. ಪ್ರಸ್ತುತ, ನಾಲ್ಕನೇ ಮದುವೆಯ ಸುತ್ತಲಿನ ವಿವಾದವು ಈ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ ಮತ್ತು ಪೊಲೀಸ್ ತನಿಖೆಯ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಾಜಕೀಯ ಸುದ್ದಿ
ಸಂಬಂಧಗಳು
ಪ್ರೀತಿ
ಮದುವೆ
ಕ್ರೈಮ್ ನ್ಯೂಸ್
ಮುಸ್ಲಿಂ

Latest Videos
Recommended Stories
Recommended image1
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್​ ನಟಿ ಭಾರತಿ: ಕ್ಯೂಟ್​ ಫೋಟೋಸ್​ ಇಲ್ಲಿವೆ
Recommended image2
ಮೊದಲೇ ಮದುವೆಯಾಗಿದ್ದು ಮಗು ಹೋಯ್ತು, ಈಗ ನಾನು ಬೇರೆ ಮನೆ ಮುರಿದಿಲ್ಲ: Actor Ravi Mohan ಪ್ರೇಯಸಿ ಕೆನಿಷಾ
Recommended image3
ದಳಪತಿಗೆ ನಾವು ಕೇಳಿದ್ದೀವಿ ಅಂತಾ ಹೇಳಿ: ಫ್ಯಾನ್ಸ್ ಪ್ರಶ್ನೆಗೆ ತ್ರಿಷಾ ಅಚ್ಚರಿ ಉತ್ತರ
Related Stories
Recommended image1
ಕುಂಕುಮವಿಟ್ಟು ಬಂಗಾಳದಲ್ಲಿ ಮುಸ್ಲಿಂ ಮಹಿಳೆ ಕಾಳಿ ದರ್ಶನ: ಬಾಂಗ್ಲಾದೇಶದಲ್ಲಿ ಅಲ್ಲೋಲ ಕಲ್ಲೋಲ
Recommended image2
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್​ ನಟಿ ಭಾರತಿ: ಕ್ಯೂಟ್​ ಫೋಟೋಸ್​ ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved