- Home
- Life
- Relationship
- ಇನ್ನೊಂದ್ವರ್ಷ ಮಗು ಬಗ್ಗೆ ಕೇಳ್ಬೇಡಿ ಅಂದಿದ್ದೆ, ಮರು ದಿನವೇ ಪ್ರೆಗ್ನೆಂಟ್! ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್
ಇನ್ನೊಂದ್ವರ್ಷ ಮಗು ಬಗ್ಗೆ ಕೇಳ್ಬೇಡಿ ಅಂದಿದ್ದೆ, ಮರು ದಿನವೇ ಪ್ರೆಗ್ನೆಂಟ್! ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್
'ಶ್ರೀರಸ್ತು ಶುಭಮಸ್ತು' ಖ್ಯಾತಿಯ ನಟಿ ಲಾವಣ್ಯ ಭಾರಧ್ವಾಜ್ ಮತ್ತು ಪತಿ ಶಶಿ ಹೆಗ್ಡೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಸದ್ಯಕ್ಕೆ ಬೇಡ ಎಂದು ಹೇಳಿದ ಮರುದಿನವೇ ತಾವು ಗರ್ಭಿಣಿ ಎಂದು ತಿಳಿದುಬಂದ ಅಚ್ಚರಿಯ ಹಾಗೂ ತಮಾಷೆಯ ಘಟನೆಯನ್ನು ಈ ಜೋಡಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ
ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ತುಳಸಿಯ ಸೊಸೆ ಪೂರ್ಣಿಯ ಪಾತ್ರಧಾರಿ ಲಾವಣ್ಯ ಭಾರಧ್ವಾಜ್ ಹಾಗೂ ಅಮೃತಧಾರೆಯಲ್ಲಿ ಕೆಲ ತಿಂಗಳು ಜೀವ ಪಾತ್ರ ಮಾಡಿದ್ದ ಶಶಿ ಹೆಗ್ಡೆ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸದಾಕಾಲ ರೀಲ್ಸ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ಜೋಡಿ ಕೆಲ ತಿಂಗಳ ಹಿಂದೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ, ಇನ್ನೊಂದು ವರ್ಷ ತಾವು ಗರ್ಭಿಣಿಯಾಗಲ್ಲ ಎಂದ ಮರುದಿನವೇ ಪ್ರೆಗ್ನೆಂಟ್ ಆಗಿರೋದು ತಿಳಿದ ಕುತೂಹಲದ ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದಾರೆ..
ಮಗು ಬೇಡ ಅಂದಿದ್ದೆ
sumantvkannada ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಲಾವಣ್ಯ ಮತ್ತು ಶಶಿ ಅವರು ಆ ದಿನದ ಮೆಲುಕು ಹಾಕಿದ್ದಾರೆ. ನಾನು ಹಿಂದಿನ ರಾತ್ರಿ ಶಶಿಗೆ ಮತ್ತು ನಮ್ಮ ಅವರ ಅಪ್ಪ-ಅಮ್ಮ ಎಲ್ಲರಿಗೂ ಇನ್ನೊಂದು ವರ್ಷ ಮಗುವಿನ ಬಗ್ಗೆ ನನಗೆ ಕೇಳಬೇಡಿ. ಕರಿಯರ್ ಸದ್ಯ ಇಂಪಾರ್ಟೆಂಟ್. ಏನೇನೋ ಪ್ರಾಜೆಕ್ಟ್ ತೆಗೆದುಕೊಳ್ಳುವ ಆಸೆ ಇದೆ. ಪ್ಲೀಸ್ ಮಗು ಬಗ್ಗೆ ಫೋರ್ಸ್ ಮಾಡಬೇಡಿ ಎಂದು ಹೇಳಿದ್ದೆ ಎಂದು ಲಾವಣ್ಯ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಪ್ರೆಗ್ನೆನ್ಸಿ ಕಿಟ್ನಲ್ಲಿ ಕನ್ಫರ್ಮ್!
ಮರುದಿನ ಡೌಟ್ ಬಂದು ಪ್ರೆಗ್ನೆನ್ಸಿ ಕಿಟ್ನಲ್ಲಿ ಟೆಸ್ಟ್ ಮಾಡಿದಾಗ ಡಬಲ್ ಲೈನ್ ಬಂದೋಯ್ತು. ಅಳಬೇಕೋ, ನಗಬೇಕೋ ಗೊತ್ತಾಗ್ತಿಲ್ಲ. ಅಮ್ಮ ಆಗ್ತಿರೋ ಖುಷಿ ಒಂದು ಕಡೆ, ನಿನ್ನೆಯಷ್ಟೇ ಮಗು ಬೇಡ ಅಂದಿದ್ನಲ್ಲಾ ಎನ್ನುವ ಯೋಚನೆ ಬೇರೆ. ಏನು ಮಾಡಬೇಕು ಎಂದೇ ಗೊತ್ತಾಗಲಿಲ್ಲ. ಜೋರಾಗಿ ಅಳತೊಡಗಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.
ಅಳುತ್ತಲೇ ಕಾಲ್ ಮಾಡಿದೆ
'ಆ ಟೈಮ್ನಲ್ಲಿ ಶಶಿ ಜಿಮ್ಗೆ ಹೋಗಿದ್ದ. ನಾನು ಜೋರಾಗಿ ಅಳುತ್ತಲೇ ಅವನಿಗೆ ಕಾಲ್ ಮಾಡಿ ಕೂಡಲೇ ಮನೆಗೆ ಬಾ ಅಂದೆ. ಏನೂ ಅಂತ ಹೇಳಲಿಲ್ಲ. ಅವನು ಸಿಕ್ಕಾಪಟ್ಟೆ ಗಾಬರಿಗೊಂಡು ಏನಾಯ್ತು ಎಂದು ಕೇಳಿದ. ಡಬಲ್ ಟಿಕ್ ಬಂದಿದೆ ಅಂದೆ ಅಷ್ಟೇ. ಅವನಿಗೆ ಏನಾಯ್ತು, ಏನು ಟಿಕ್ ಎನ್ನೋದು ತಿಳಿಯಲಿಲ್ಲ. ನಾನು ಅಳೋದು ನೋಡಿ ಗಾಬರಿ ಆಗಿತ್ತು. ಬೇಗ ಬಾ ಅಂತಷ್ಟೇ ಅಂದೆ' ಎಂದರು ಲಾವಣ್ಯ.
ಪತಿ ಶಶಿಗೆ ಶಾಕ್
ಇದಕ್ಕೆ ಶಶಿ ಹೆಗ್ಡೆ ಅವರು, ಮೊದಲಿಗೆ ನನಗೆ ಭಯ ಆಯ್ತು. ಕೊನೆಗೆ ಒಹ್ ಇದೇ ವಿಷ್ಯ ಇರಬಹುದೇನೋ ಅನ್ನಿಸಿತು. ಆದರೂ ಏನು ಎಂದು ಸ್ಪಷ್ಟವಾಗಲಿಲ್ಲ. ಕೈನಡುಗುತ್ತಿತ್ತು. ಆದರೂ ಮಗುವಿನ ವಿಷಯವೇ ಇರಬೇಕು ಎಂದು ತುಂಬಾ ಖುಷಿನೂ ಆಗಿ ಮನೆಗೆ ಬಂದಾಗ ವಿಷ್ಯ ತಿಳಿದು ತುಂಬಾ ಖುಷಿ ಆಯ್ತು ಎಂದಿದ್ದಾರೆ.
ಆ ದಿನ ನೆನೆದ ದಂಪತಿ
ನಿನಗೆ ಮಗು ಓಕೆನಾ, ನೀನು ಇದಕ್ಕೆ ರೆಡಿನಾ ಎಂದು ನನ್ನನ್ನು ಶಶಿ ವಿಚಾರಿಸಿದ. ಎಲ್ಲದಕ್ಕೂ ನಾನು ಓಕೆ ಎಂದ ಮೇಲೆ ಮುಂದಿನ ನಿರ್ಧಾರ ಮಾಡಿದ್ವಿ. ಆದರೂ ಮಗು ಬೇಡ ಎಂದ ಮರುದಿನವೇ ಹೀಗೆ ಆಗಿದ್ದು ಮಾತ್ರ ನೆನಪಿಸಿಕೊಂಡ್ರೆ ನಗು ಬರುತ್ತೆ ಎಂದು ಜೋಡಿ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

