MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​

ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಲಾವಣ್ಯ ಭಾರಧ್ವಾಜ್, ತಾವು ಹವ್ಯಕ ಬ್ರಾಹ್ಮಣರಲ್ಲ ಎಂಬ ಕಾರಣಕ್ಕೆ ಪತಿ ಶಶಿ ಹೆಗಡೆ ಅವರ ಸಂಬಂಧಿಕರಿಂದ ಮದುವೆಯ ಸಮಯದಲ್ಲಿ ಎದುರಿಸಿದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ

2 Min read
Author : Suchethana D
Published : Jul 13 2026, 07:45 PM IST
Share this Photo Gallery
  • FB
  • TW
  • Linkdin
  • Whatsapp
16
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ..
Image Credit : sumantvkannada Instagram

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ..

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿಯ ಸೊಸೆ ಪೂರ್ಣಿ ಪಾತ್ರಧಾರಿಯಾಗಿದ್ದ ಲಾವಣ್ಯ ಭಾರಧ್ವಾಜ್​ ಮತ್ತು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ತಮ್ಮ ಜೀವನ್​ ಪಾತ್ರವನ್ನು ಕೆಲ ಕಾಲ ನಿರ್ವಹಿಸಿದ್ದ ಶಶಿ ಹೆಗಡೆ ಇಬ್ಬರೂ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ, ಮದುವೆಯಾದ ಹೊಸತರಲ್ಲಿ ಹಾಗೂ ಎಂಗೇಜ್​ಮೆಂಟ್​ ಆದ ಬಳಿಕ ಶಶಿ ಹೆಗಡೆ ಅವರ ಮನೆಯಲ್ಲಿ ಅಂದರೆ ಅವರ ಸಂಬಂಧಿಕರಿಂದ ಆದ ಕೆಲವು ಕಹಿ ಘಟನೆಗಳನ್ನು sumantv kannada entertainment ಚಾನೆಲ್​ನಲ್ಲಿ ನೆನಪಿಸಿಕೊಂಡಿದ್ದಾರೆ ಲಾವಣ್ಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬ್ರಾಹ್ಮಣ ಆದ್ರೂ ಇಷ್ಟ ಆಗಲಿಲ್ಲ
Image Credit : Instagram

ಬ್ರಾಹ್ಮಣ ಆದ್ರೂ ಇಷ್ಟ ಆಗಲಿಲ್ಲ

ನಾನು ಭಾರಧ್ವಾಜ್​. ಅಂದರೆ ನಾನು ಕೂಡ ಬ್ರಾಹ್ಮಣಳೇ. ಆದರೆ ಹವ್ಯಕ ಅಲ್ಲ. ಶಶಿ ಮನೆಯವರು ಹವ್ಯಕರು. ನಾವು ಎಂಗೇಜ್​ಮೆಂಟ್​ ಆದಾಗಲೇ ಶಶಿ ತಂದೆಯವರಿಗೆ ಕೆಲವರು ಕಾಲ್​ ಮಾಡಿ ಯಾಕೆ ಒಪ್ಕೊಂಡೆ. ಹವ್ಯಕ ಹೆಣ್ಣನ್ನೇ ನೋಡಬೇಕಿತ್ತು ಎಂದೆಲ್ಲಾ ಹೇಳಿದ್ರು. ಎಲ್ಲರ ಫ್ಯಾಮಿಲಿಯಲ್ಲಿಯೂ ಇದು ಇದ್ದೇ ಇರುತ್ತೆ ಎಂದು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೊನೆಗೆ ಇದು ವಿಪರೀತ ಆಯ್ತು ಎಂದು ಲಾವಣ್ಯ ನೆನಪಿಸಿಕೊಂಡಿದ್ದಾರೆ.

Related Articles

Related image1
karna Serial ಸಂಜಯ್​ ಹಿಂದೆ ಹೋಗದಂತೆ BMTC ಲೇಡಿ ಕಂಡಕ್ಟರ್​ ರಿಯಾಗೆ ಬುದ್ಧಿಮಾತು
Related image2
ಇನ್ನೊಂದ್ವರ್ಷ ಮಗು ಬಗ್ಗೆ ಕೇಳ್ಬೇಡಿ ಅಂದಿದ್ದೆ, ಮರು ದಿನವೇ ಪ್ರೆಗ್ನೆಂಟ್​! ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
36
ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ!
Image Credit : instagram

ಮದ್ವೆ ಕ್ಯಾನ್ಸಲ್​ ಮಾಡಿ ಅಂದೆ!

ನನ್ನಿಂದಾಗಿ ಶಶಿ ಮನೆಯವರ ಸಂಬಂಧ ಅವರ ಕುಟುಂಬದಲ್ಲಿ ಹಾಳಾಗಬಾರದು ಎನ್ನುವ ಕಾರಣಕ್ಕೆ ನಾನು, ಎಂಗೇಜ್​ಮೆಂಟ್​ ಆದ್ರೂ ಇಷ್ಟೆಲ್ಲಾ ಇದ್ದರೆ ಮದುವೆ ಬೇಡ ಅಂದುಬಿಟ್ಟೆ. ನನ್ನಿಂದ ಯಾಕೆ ಸುಮ್ಮನೇ ಅವರ ಸಂಬಂಧ ಹಾಳಾಗೋದು ಎನ್ನುವುದು ನನ್ನ ಅನಿಸಿಕೆ ಆಗಿತ್ತು. ಆದರೆ ಶಶಿ ಅಪ್ಪ, ನೀನು ನಮಗೆ ಇಷ್ಟ. ಸಂಬಂಧಿಕರ ಮಾತು ಕಟ್ಟಿಕೊಂಡು ಏನಾಗಬೇಕು? ಬಾಳುವುದು ನೀವಿಬ್ಬರೂ, ನೀವಿಬ್ಬರೂ ಚೆನ್ನಾಗಿದ್ದರೆ ಸಾಕು ಎಂದು ಹೇಳಿದ್ದರಿಂದ ಮದುವೆಯಾಯಿತು ಎಂದಿದ್ದಾರೆ.

46
ನೀರು ಕೊಟ್ರೆ ಕುಡಿಯಲಿಲ್ಲ
Image Credit : sumantv kannada entertainment instagram

ನೀರು ಕೊಟ್ರೆ ಕುಡಿಯಲಿಲ್ಲ

ಮದುವೆ ಆದ್ಮೇಲೂ ಇದು ಮುಂದುವರೆಯಿತು. ನಾನು ನೀರು ಕೊಟ್ಟರೂ ಅವರು ಕುಡಿಯುತ್ತಿರಲಿಲ್ಲ. ಫಂಕ್ಷನ್​ ನಡೆಯುತ್ತಿರುವಾಗ ಆಶೀರ್ವಾದ ತೆಗೆದುಕೊಳ್ಳಲು ಹೋದ್ರೆ ಹಿಂದೆ ಸರಿಯೋದು.. ಹೀಗೆ ಏನೇನೋ ಎಕ್ಸ್​ಪೀರಿಯನ್ಸ್​ ಆಯ್ತು. ನಾನು ಬ್ರಾಹ್ಮಿನ್ಸ್​ ಆಗಿದ್ರೂ ಹೀಗೆ ಮಾಡಿದ್ರು ಎಂದು ಘಟನೆ ನೆನಪಿಸಿಕೊಂಡಿದ್ದಾರೆ ಲಾವಣ್ಯ.

56
ತಲೆ ಕೆಡಿಸಿಕೊಳ್ಳಲಿಲ್ಲ
Image Credit : instagram

ತಲೆ ಕೆಡಿಸಿಕೊಳ್ಳಲಿಲ್ಲ

ಮೊದಲೆಲ್ಲಾ ದುಃಖ ಆಗ್ತಿತ್ತು. ಆಮೇಲೆ ಪದೇ ಪದೇ ಆದಾಗ ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ಹವ್ಯಕ ಭಾಷೆ ನನಗೆ ಅರ್ಥ ಆಗ್ತಿರಲಿಲ್ಲ. ಜೋಕ್​ ಮಾಡಿದ್ರೂ ಗೊತ್ತಾಗ್ತಾ ಇರಲಿಲ್ಲ, ಬೈದರೂ ತಿಳೀತಾ ಇರಲಿಲ್ಲ. ಸುಮ್ಮನೇ ತಲೆ ಕೆಡಿಸಿಕೊಳ್ಳೋದು ಯಾಕೆ ಎಂದು ಬಿಟ್ಟುಬಿಟ್ಟೆ ಎಂದಿದ್ದಾರೆ ನಟಿ.

66
ಇಂಟರ್​ಕಾಸ್ಟ್​ ಮ್ಯಾರೇಜ್​
Image Credit : Instagram

ಇಂಟರ್​ಕಾಸ್ಟ್​ ಮ್ಯಾರೇಜ್​

ನಾನೇನೋ ಎಲ್ಲಿಂದಲೋ ಗುಂಡಿಯಿಂದ ಎದ್ದು ಬಂದಿಲ್ಲ. ನನ್ನ ಅಪ್ಪ-ಅಮ್ಮನೂ ನನಗೆ ತುಂಬಾ ಚೆನ್ನಾಗಿ ಸಾಕಿದ್ದಾರೆ. ಆದ್ರೂ ಹೀಗೆ ಮಾಡಿದ್ರು. ನನ್ನ ಅಪ್ಪ-ಅಮ್ಮಂದು ಬೇರೆ ಬೇರೆ ಜಾತಿ ಎನ್ನುವ ಕಾರಣವೂ ಇದಕ್ಕೆ ಸೇರಿತ್ತು ಎಂದು ಕಹಿ ಘಟನೆ ನೆನಪಿಸಿಕೊಂಡಿದ್ದಾರೆ ಲಾವಣ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ
ಮನರಂಜನಾ ಸುದ್ದಿ
ಸಂಬಂಧಗಳು
ಪ್ರೀತಿ
ಮದುವೆ
ಜಾತಿ ತಾರತಮ್ಯ

Latest Videos
Recommended Stories
Recommended image1
Shocking - Celina Jaitly : ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!
Recommended image2
13 ವರ್ಷಗಳ ಮಮತೆಯ ನೆರಳು: ಆ ದಿನಗಳನ್ನು ನೆನೆದು ಸಿಎಂ ಡಿ.ಕೆ. ಶಿವಕುಮಾರ್​ ಭಾವುಕ ಪೋಸ್ಟ್​
Recommended image3
19ನೇ ವಯಸ್ಸಿನಲ್ಲೇ ₹25 ಕೋಟಿ ಆಸ್ತಿ! ಅಪ್ಪ-ಅಮ್ಮನಿಗೆ ಬಿಡಿಗಾಸು ಕೊಡದೇ ಬಾಲ್ಯದ ಗೆಳೆಯನಿಗೆ ವಿಲ್ ಮಾಡಿಟ್ಟ ಯುವಕ!
Related Stories
Recommended image1
karna Serial ಸಂಜಯ್​ ಹಿಂದೆ ಹೋಗದಂತೆ BMTC ಲೇಡಿ ಕಂಡಕ್ಟರ್​ ರಿಯಾಗೆ ಬುದ್ಧಿಮಾತು
Recommended image2
ಇನ್ನೊಂದ್ವರ್ಷ ಮಗು ಬಗ್ಗೆ ಕೇಳ್ಬೇಡಿ ಅಂದಿದ್ದೆ, ಮರು ದಿನವೇ ಪ್ರೆಗ್ನೆಂಟ್​! ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved