Bro Bro… ಅಂತಾ ಕರೀತಿದ್ದವ್ಳನ್ನ ಪ್ರೀತ್ಸಿ ಮದ್ವೆ… ಇದು ಶಶಿ ಹೆಗ್ಡೆ - ಲಾವಣ್ಯ ಲವ್ ಸ್ಟೋರಿ
ಶಶಿ ಹೆಗ್ಡೆ ಮತ್ತು ಲಾವಣ್ಯ…. ನೀವು ಸೀರಿಯಲ್ ಪ್ರಿಯರಾಗಿದ್ರೆ ಖಂಡಿತವಾಗಿಯೂ ಇವರ ಬಗ್ಗೆ ನಿಮಗೆ ಗೊತ್ತೆ ಇರುತ್ತೆ ಅಲ್ವಾ? ಕಳೆದವರ್ಷವಷ್ಟೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಜೋಡಿಯ ಕ್ಯೂಟ್ ಲವ್ ಸ್ಟೋರಿ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಮಾಧವರ ಪ್ರೀತಿಯ ಸೊಸೆಯಾಗಿ ನಟಿಸುತ್ತಿರುವ ನಟಿ ಲಾವಣ್ಯ ಅವರು ತಮ್ಮ ಲವ್ ಆಫ್ ಲೈಫ್. ಕಿರುತೆರೆ ನಟ ಶಶಿ ಹೆಗ್ಡೆ (Shashidhar Hegde) ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಜೋಡಿಯ ಮುದ್ದಾದ ಲವ್ ಸ್ಟೋರಿ (love story) ಬಗ್ಗೆ ತಿಳಿಯೋಣ.
ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.
‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆದ್ರೂ.
ಲಾವಣ್ಯ ಮತ್ತು ಶಶಿ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ರಂತೆ, ಇಬ್ಬರು ಜೊತೆಯಾಗಿ ಟೂರ್ ಕೂಡ ಹೋಗ್ತಾ ಇದ್ರಂತೆ. ಆದ್ರೆ ಲಾವಣ್ಯ ಅವರಿಗೆ ಶಶಿ ಅವರು ತಮ್ಮನ್ನು ಲವ್ ಮಾಡ್ತಿರೋ ಬಗ್ಗೆ ಕ್ಲೂ ಕೂಡ ಇರಲಿಲ್ವಂತೆ. ಅವರು ಪ್ರಪೋಸ್ (propose) ಮಾಡಿದಾಗ್ಲೆ ಶಶಿ ನನ್ನನ್ನ ಲವ್ ಮಾಡ್ತಿದ್ದಾನೆ ಅಂತ ಶಾಕ್ ಆಗಿತ್ತಂತೆ ಇವರಿಗೆ.
ಇಷ್ಟ ಪಟ್ಟ ಹುಡುಗಿಗೆ ಪ್ರಪೋಸ್ ಮಾಡಿದಾಗ, ಆಕೆ ನಂಗೆ ಟೈಮ್ ಬೇಕು ಅಂದ್ರಂತೆ… ಅಷ್ಟೊಂದು ಕಾಯುವ ತಾಳ್ಮೆ ಶಶಿ ಅವರಿಗೆ ಇಲ್ಲವಾಗಿತ್ತಂತೆ. ಅವರು ನೇರವಾಗಿ ಲಾವಣ್ಯ ಅವರ ಮನೆಗೆ ಹೋಗಿ ಅವರ ಅಮ್ಮನ ಎದುರು ಮದುವೆ ಪ್ರಸ್ತಾಪ ಇಟ್ಟೇ ಬಿಟ್ರಂತೆ. ಅಮ್ಮ ಹೇಗೋ ಒಪ್ಪಿಗೆ ಕೊಡ್ತಾರೆ ಅನ್ನೋದು ಲಾವಣ್ಯಂಗೆ ಗೊತ್ತಿತ್ತು, ಆದ್ರೆ ಅಪ್ಪ ಏನು ಮಾಡ್ತಾರೆ ಅನ್ನೋ ಭಯ ಇತ್ತಂತೆ. ಆದ್ರೆ ಅವರ ಅಪ್ಪ ಕೂಡ ಸಲೀಸಾಗಿ ಒಪ್ಪಿಕೊಂಡಾಗ ಲಾವಣ್ಯ ಅವ್ರಿಗೆ ಶಾಕ್ ಅಗಿತ್ತಂತೆ.
ಇನ್ನು ಲಾವಣ್ಯ (Lavanya) ಅವರು ಶಶಿಗೆ ತಿಳಿಯದಂತೆ ಅವರ ಅಪ್ಪನ ಜೊತೆ ಮಾತನಾಡಿ, ಅಲ್ಲಿಂದಲೂ ಒಪ್ಪಿಗೆ ಪಡೆದರಂತೆ. ಎಲ್ಲಾ ಒಪ್ಪಿಕೊಂಡಾದ್ಮೆಲೆ ಇಬ್ಬರ ಮದ್ವೆಗೆ ಅಡ್ಡಿಯಾದದ್ದು ಕೊರೋನಾ. ಆದ್ರೆ ಇದೇ ಕೊರೋನಾದಿಂದಾಗಿ ಇಬ್ಬರಿಗೂ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುತ್ತೆ ಈ ಜೋಡಿ.
ಮೊದಲ ಬಾರಿ ಶಶಿ ಅವರ ಊರಿಗೆ ಎರಡು ದಿನಕ್ಕಾಗಿ ಅವರ ಕುಟುಂಬದವರ ಭೇಟಿಗೆ ತೆರಳಿದ್ದ ಲಾವಣ್ಯ, ಕೊರೋನಾ ಲಾಕ್ ಡೌನ್ (lock down) ನಿಂದಾಗಿ ಬರೋಬ್ಬರಿ 10 -15 ದಿನ ಶಶಿ ಅವರ ಮನೆಯಲ್ಲೇ ಉಳಿಯುವಂತಾಗಿ ಬಂದಂತೆ. ಹಾಗಾಗಿ ಆ ಮನೆಯ ಸಂಪ್ರದಾಯಗಳೆಲ್ಲಾ ಅಕ್ಚವಾಯ್ತಂತೆ.
ಇನ್ನೂ ಎರಡನೆ ಬಾರಿ ಕೊರೋನಾ ಬಂದಾಗ ಲಾವಣ್ಯ ಅವರಿಗೂ ಕೊರೋನಾ ಸಮಸ್ಯೆ ಕಾಡಿತ್ತಂತೆ. ಈ ಸಮಯದಲ್ಲಿ ಅವರ ಜೊತೆಯಾಗಿ ನಿಂತೋರು ಶಶಿ. 15 ದಿನಗಳ ಕಾಲ ಲಾವಣ್ಯ ಜೊತೆ ಇದ್ದು ಆಕೆಗೆ ಬೇಕಾದ ಬೆಂಬಲ, ಆಹಾರ, ಔಷಧಿ ಎಲ್ಲವನ್ನೂ ಶಶಿ ನೀಡಿದ್ರಂತೆ. ಇದ್ರಿಂದ ಇಬ್ಬರ ಬಾಂಡಿಂಗ್ (bonding) ಹೆಚ್ಚಾಯ್ತಂತೆ.
ಇದೆಲ್ಲಾ ಆಗಿ ಕಳೆದ ವರ್ಷ ಮೇ ತಿಂಗಳಲ್ಲಿ, ಶಶಿ ಅವರ ಊರಲ್ಲಿ, ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿ ಅದ್ಧೂರಿಯಾಗಿ ಶಶಿಧರ್ ಹೆಗ್ಡೆ ಮತ್ತು ಲಾವಣ್ಯ ಮದ್ವೆಯಾಗಿದ್ದಾರೆ. ಸದ್ಯಕ್ಕೆ ಈ ಇಬ್ಬರೂ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಇಬ್ಬರೂ ಸೇರಿ ಯೂಟ್ಯೂಬ್ ಚಾನೆಲ್ ಕೂಡ ಮಾಡಿದ್ದಾರೆ.