- Home
- Life
- Relationship
- ಒಬ್ನೇ ಇರೋ ಖುಷಿನೇ ಬೇರೆ, ಮದ್ವೆ ಯಾಕೆ ಅನ್ನೋದಾ ಗಟ್ಟಿಮೇಳದ ವಿಕ್ರಾಂತ್? ಹುಡುಗಿಯರ ಹಾರ್ಟ್ ಬ್ರೇಕ್ ಮಾಡಿದ ನಟ
ಒಬ್ನೇ ಇರೋ ಖುಷಿನೇ ಬೇರೆ, ಮದ್ವೆ ಯಾಕೆ ಅನ್ನೋದಾ ಗಟ್ಟಿಮೇಳದ ವಿಕ್ರಾಂತ್? ಹುಡುಗಿಯರ ಹಾರ್ಟ್ ಬ್ರೇಕ್ ಮಾಡಿದ ನಟ
'ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.

ಗಟ್ಟಿಮೇಳದ ವಿಕ್ರಾಂತ್
'ಗಟ್ಟಿಮೇಳ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟ ಅಭಿಷೇಕ್ ರಾಮದಾಸ್. ಅಭಿದಾಸ್ ಅಂತಲೇ ಫೇಮಸ್ ಆಗಿರೋ ನಟ ಸದ್ಯ ಸದ್ಯ ‘ನಂದಗೋಕುಲ’ ಸೀರಿಯಲ್ನಲ್ಲಿ ವಲ್ಲಭನಾಗಿ ಮಿಂಚುತ್ತಿದ್ದಾರೆ. ಈಚೆಗೆ ತಮ್ಮ ಸಹೋದರಿಯ ಮದುವೆ ಮಾಡಿರುವ ನಟ, ಸದ್ಯ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ.
ಸಿನಿಮಾದಲ್ಲಿಯೂ ನಟನೆ
ಅಭಿಷೇಕ್ ದಾಸ್ ಅವರು ಗಟ್ಟಿಮೇಳಕ್ಕೂ ಮುನ್ನ ಸರಯೂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಮದ್ವೆ ಬಗ್ಗೆ ಹೇಳಿದ್ದೇನು?
ಇಂತಿಪ್ಪ ನಟ ಇದೀಗ ಮದುವೆಯ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ನನಗೆ ಇದೀ ರೀತಿಯ ಹುಡುಗಿ ಬೇಕೆಂದೇನೂ ಇಲ್ಲ. ಆದರೆ ಮದುವೆಯ ಬಗ್ಗೆ ಸದ್ಯ ಯೋಚನೆಯನ್ನೂ ಮಾಡಲಿಲ್ಲ. ಮುಂದಿನ ಐದು ವರ್ಷ ಹೇಗೆಲ್ಲಾ ದುಡ್ಡು ಸಂಪಾದನೆ ಮಾಡಬಹುದು, ಗುರಿ ಏನಿರಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾನೊಬ್ಬನೇ ಎಂಜಾಯ್ ಮಾಡ್ಬೋದು
ಹಾಗೆಯೇ ಲೈಫ್ನಲ್ಲಿ ಯಾರಾದ್ರೂ ಎಂಟರ್ ಆದ್ರೆ ನೋಡೋಣ. ಆದ್ರೆ ಒಂಟಿ ಇರೋದರಲ್ಲಿ ಇರೋ ಮಜಾ ಮದ್ವೆಯಾದ ಮೇಲೆ ಇರಲ್ಲ. ದುಡಿದದ್ದನ್ನೆಲ್ಲಾ ನಾನೊಬ್ಬನೇ ಎಂಜಾಯ್ ಮಾಡಬಹುದು. ಅದಕ್ಕೆ ಮದ್ವೆ-ಗಿದ್ವೆ ಬಗ್ಗೆ ಸದ್ಯ ತಲೆ ಕೆಡಿಸಿಕೊಳ್ಳಲ್ಲ. ಒಬ್ನೇ ಇರೋದೇ ಇಷ್ಟ ಎಂದಿದ್ದಾರೆ ನಟ.
ತಂಗಿಯ ಮದುವೆ
ಈಚೆಗಷ್ಟೇ ಅಭಿಷೇಕ್ ಅವರು ತಮ್ಮ ತಂಗಿ ಐಶ್ವರ್ಯಾ ರಾಮದಾಸ್ ಮದುವೆ ಮಾಡಿದ್ದರು. ಅಭಿದಾಸ್‌ಗೆ ಒಬ್ಬಳೇ ಒಬ್ಬಳು ತಂಗಿ ಇದ್ದು, ತಾಯಿ - ತಂಗಿನೇ ಇವರ ಪ್ರಪಂಚ. ಐಶ್ವರ್ಯಾ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಸೆಲಿಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಹರ್ಷ ಎಂಬುವವರನ್ನ ವರಿಸಿದ್ದಾರೆ. ಅಪ್ಪನ ಸ್ಥಾನದಲ್ಲಿ ನಿಂತು ಸಹೋದರಿ ಮದುವೆ ಮಾಡಿದ್ದರು ಅಭಿಷೇಕ್ ರಾಮದಾಸ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

