MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Graveyard Dating: ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಈ ಹೊಸ ಹುಚ್ಚಾಟದ ಅಸಲಿ ಕಥೆ ಏನು?

Graveyard Dating: ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಈ ಹೊಸ ಹುಚ್ಚಾಟದ ಅಸಲಿ ಕಥೆ ಏನು?

Graveyard Dating: ಕಾಫಿ ಶಾಪ್, ಪಾರ್ಕ್‌ಗಳೆಲ್ಲಾ ಹಳೆಯದಾಯ್ತು. ಈಗಿನ ಹೊಸ ಟ್ರೆಂಡ್ ಗ್ರೇವ್‌ಯಾರ್ಡ್ ಡೇಟಿಂಗ್. ಯುವ ಜೋಡಿಗಳು ಸ್ಮಶಾನಗಳಲ್ಲಿ ಯಾಕೆ ಡೇಟಿಂಗ್ ಮಾಡ್ತಿದ್ದಾರೆ? ಇದರ ಹಿಂದಿನ ಅಸಲಿ ಕಾರಣಗಳೇನು? ಈ ಕುತೂಹಲಕಾರಿ ವಿವರ ಇಲ್ಲಿದೆ.

2 Min read
Author : Govindaraj S
Published : Jun 23 2026, 09:31 PM IST
Share this Photo Gallery
  • FB
  • TW
  • Linkdin
  • Whatsapp
14
ಪ್ರೇಮಕ್ಕಾಗಿ ಸ್ಮಶಾನಕ್ಕೆ.. ಈಗ ಗ್ರೇವ್‌ಯಾರ್ಡ್ ಡೇಟಿಂಗ್ ಟ್ರೆಂಡ್ ನಡೀತಿದೆ.. ಅಸಲಿಗೆ ಏನಿದು?
Image Credit : others

ಪ್ರೇಮಕ್ಕಾಗಿ ಸ್ಮಶಾನಕ್ಕೆ.. ಈಗ ಗ್ರೇವ್‌ಯಾರ್ಡ್ ಡೇಟಿಂಗ್ ಟ್ರೆಂಡ್ ನಡೀತಿದೆ.. ಅಸಲಿಗೆ ಏನಿದು?

ಒಂದು ಕಾಲದಲ್ಲಿ ಡೇಟಿಂಗ್ ಅಂದ್ರೆ ಕಾಫಿ ಶಾಪ್, ರೆಸ್ಟೋರೆಂಟ್ ಅಥವಾ ಸಿನಿಮಾ ಥಿಯೇಟರ್‌ಗಳಿಗೆ ಸೀಮಿತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಯುವಕರ ಆಲೋಚನೆಗಳು ಇನ್ನೂ ವೇಗವಾಗಿ ಬದಲಾಗುತ್ತಿವೆ. ಸದ್ಯ 'ಗ್ರೇವ್‌ಯಾರ್ಡ್ ಡೇಟಿಂಗ್' ಎಂಬ ಹೊಸ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೆಸರು ಕೇಳಿದರೆ ಮೈ ಜುಂ ಎನಿಸಿದರೂ, ಈ ಕಾಲದ ಪ್ರೇಮಿಗಳು ಇದಕ್ಕೆ ಜೈ ಎನ್ನುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಏನಿದು ಗ್ರೇವ್‌ಯಾರ್ಡ್ ಡೇಟಿಂಗ್?
Image Credit : Chatgpt

ಏನಿದು ಗ್ರೇವ್‌ಯಾರ್ಡ್ ಡೇಟಿಂಗ್?

ಡೇಟಿಂಗ್ ಅಂದ ತಕ್ಷಣ ನೆನಪಾಗೋದು ಸುಂದರ ತಾಣಗಳು ಅಥವಾ ಲೈಟಿಂಗ್ಸ್ ಇರುವ ಹೋಟೆಲ್‌ಗಳು. ಆದರೆ ಈ ಟ್ರೆಂಡ್‌ನಲ್ಲಿ ಪ್ರೇಮಿಗಳು ಸ್ಮಶಾನಗಳಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ. ಕೇಳಲು ವಿಚಿತ್ರ ಎನಿಸಿದರೂ, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ತುಂಬಾನೇ ಹರಿದಾಡುತ್ತಿವೆ. ಈಗಾಗಲೇ ಫ್ಲಡ್‌ಲೈಟಿಂಗ್, ಮಂಕಿ ಬ್ಯಾರಿಂಗ್, ಬ್ರೆಡ್‌ಕ್ರಂಬಿಂಗ್‌ನಂತಹ ವಿಚಿತ್ರ ಡೇಟಿಂಗ್ ಟ್ರೆಂಡ್‌ಗಳನ್ನು ನೋಡಿದ್ದೇವೆ. ಈಗ ಇವೆಲ್ಲವನ್ನೂ ಮೀರಿಸಿ ಈ ಗ್ರೇವ್‌ಯಾರ್ಡ್ ಡೇಟಿಂಗ್ ಚರ್ಚೆಯಲ್ಲಿದೆ.

Related Articles

Related image1
Dhanush Dating History: ಮೃಣಾಲ್‌ನಿಂದ ಶ್ರುತಿ ಹಾಸನ್‌ವರೆಗೆ: ಧನುಷ್ ಡೇಟಿಂಗ್ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ?
Related image2
ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!
34
ಸ್ಮಶಾನಕ್ಕೇ ಯಾಕೆ ಹೋಗ್ತಾರೆ?
Image Credit : Chatgpt

ಸ್ಮಶಾನಕ್ಕೇ ಯಾಕೆ ಹೋಗ್ತಾರೆ?

ಜನದಟ್ಟಣೆ ಇರುವ ಸ್ಥಳಗಳ ಬದಲು, ಯುವಜನರು ಏಕಾಂತ ಪ್ರದೇಶಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಶಾಂತಿ, ಪ್ರೈವೆಸಿ ಮತ್ತು ಗಂಭೀರ ಸಂಭಾಷಣೆ. ನಗರದ ಟ್ರಾಫಿಕ್ ಗದ್ದಲ, ರೆಸ್ಟೋರೆಂಟ್‌ಗಳ ಕಿರಿಚಾಟ ಇಲ್ಲದೆ ಸ್ಮಶಾನಗಳು ನಿಶ್ಯಬ್ದವಾಗಿರುತ್ತವೆ. ಇಲ್ಲಿ ನಮ್ಮನ್ನು ನೋಡುವವರು, ಡಿಸ್ಟರ್ಬ್ ಮಾಡುವವರು ಯಾರೂ ಇರಲ್ಲ. ಹಾಗಾಗಿ, ಮನಸ್ಸಿನ ಮಾತುಗಳನ್ನು ಧೈರ್ಯವಾಗಿ ಹಂಚಿಕೊಳ್ಳಲು ಇದು ಸರಿಯಾದ ಜಾಗ ಎಂದು ಕೆಲವರು ಭಾವಿಸುತ್ತಾರೆ. ಹಳೆಯ ಸಮಾಧಿಗಳು, ಮರಗಳ ನಡುವೆ ಕುಳಿತಾಗ ಜೀವನ, ಭಯ, ಕನಸುಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ ಎಂದು ವೋಗ್ ಇಂಡಿಯಾದಂತಹ ಪತ್ರಿಕೆಗಳು ಕೂಡ ಹೇಳಿವೆ. ಇದೊಂದು ರೀತಿ ಹೊಂದಾಣಿಕೆ ಪರೀಕ್ಷೆ ಇದ್ದಂತೆ ಎನ್ನುತ್ತಾರೆ ಡೇಟರ್ಸ್.

44
ಭಯ ಆಗೋದಿಲ್ವಾ?
Image Credit : Chatgpt

ಭಯ ಆಗೋದಿಲ್ವಾ?

ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಸ್ಮಶಾನದ ಕಡೆ ಹೋಗಲು ಎಲ್ಲರೂ ಹೆದರುತ್ತಾರೆ. ಆತ್ಮಗಳು ಓಡಾಡುತ್ತವೆ, ದೆವ್ವಗಳಿರುತ್ತವೆ ಎಂಬ ನಂಬಿಕೆಗಳಿವೆ. ಆದರೆ ಈ ಗ್ರೇವ್‌ಯಾರ್ಡ್ ಡೇಟಿಂಗ್ ಮಾಡುವವರಿಗೆ ಪ್ರೀತಿಯ ಮುಂದೆ ಈ ಭಯ ಕಾಣುತ್ತಿಲ್ಲವಂತೆ. ಆದರೆ, ಇದು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ಕೆಲವರಿಗೆ ಇದು ವಿಚಿತ್ರ ಎನಿಸಿದರೆ, ಇನ್ನು ಕೆಲವರು ಇದನ್ನು ಅಸಹ್ಯಕರ ಎಂದು ಭಾವಿಸುತ್ತಾರೆ. ಸತ್ತವರು ಮಲಗುವ ಜಾಗದಲ್ಲಿ ರೊಮ್ಯಾನ್ಸ್ ಏನೂಂತ ಟೀಕಿಸುವವರೂ ಇದ್ದಾರೆ. ಇಂದಿನ ದಿನಗಳಲ್ಲಿ, ಜನರ ಇಷ್ಟಗಳು ಅವರವರ ಆಯ್ಕೆ. ಜೆನ್-ಝಿ ಮತ್ತು ಮಿಲೇನಿಯಲ್‌ಗಳು ತಮ್ಮ ಒತ್ತಡದ ಬದುಕಿನಿಂದ ವಿರಾಮ ಪಡೆಯಲು ಇಂತಹ ನಿಶ್ಯಬ್ದ ಜಾಗಗಳನ್ನು ಹುಡುಕುತ್ತಿದ್ದಾರೆ ಎಂಬ ಅಭಿಪ್ರಾಯಗಳೂ ಇವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಸಂಬಂಧಗಳು
ವೈರಲ್ ಸುದ್ದಿ
ಜೆನ್ ಝಡ್
ಜೀವನಶೈಲಿ

Latest Videos
Recommended Stories
Recommended image1
Viral Trisha Post: ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!
Recommended image2
Bengaluru Landlord: ಮನೆ ಖಾಲಿ ಮಾಡ್ತೀನಿ ಎಂದ ಯುವತಿಗೆ ಓನರ್ ಕೊಟ್ಟ ರಿಪ್ಲೈ ವೈರಲ್! ನೀವೂ ಓದಿ
Recommended image3
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಶನಿವಾರ ಅದೃಷ್ಟದ ದಿನ
Related Stories
Recommended image1
Dhanush Dating History: ಮೃಣಾಲ್‌ನಿಂದ ಶ್ರುತಿ ಹಾಸನ್‌ವರೆಗೆ: ಧನುಷ್ ಡೇಟಿಂಗ್ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ?
Recommended image2
ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved