- Home
- Life
- Relationship
- ಮದ್ವೆಯಾಗಿ ಮಕ್ಕಳಾಯ್ತು, ಡಿವೋರ್ಸ್ ಆದಾಗ ಕೈಯಿಂದ ₹20 ಕೋಟಿ ಹೋಯ್ತು, ಕಣ್ಣೀರಿಟ್ಟ ಬಾಲಿವುಡ್ ನಟಿ
ಮದ್ವೆಯಾಗಿ ಮಕ್ಕಳಾಯ್ತು, ಡಿವೋರ್ಸ್ ಆದಾಗ ಕೈಯಿಂದ ₹20 ಕೋಟಿ ಹೋಯ್ತು, ಕಣ್ಣೀರಿಟ್ಟ ಬಾಲಿವುಡ್ ನಟಿ
ಬಾಲಿವುಡ್ ನಟಿ ತಮ್ಮ ವೈಯುಕ್ತಿಕ ಬದುಕು ನೆನೆದು ಕಣ್ಣೀರಿಟ್ಟಿದ್ದಾರೆ. ಒಂದೆಡೆ ಡಿವೋರ್ಸ್,ಮತ್ತೊಂದೆಡೆ ಮಕ್ಕಳ ನೋಡಲು ಅವಕಾಶ ಸಿಗುತ್ತಿಲ್ಲ. ಕೈಯಲ್ಲಿದ್ದ 20 ಕೋಟಿ ರೂ ಆಸ್ತಿಯೂ ಕರಗಿತು ಎಂದಿದ್ದಾರೆ.

ಬಾಲಿವುಡ್ ನಟಿಯ ಕಣ್ಣೀರ ಕತೆ
ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ತಮ್ಮ ಜೀವನದಲ್ಲಿ ಅನುಭವಿಸಿದ ಅಗಾಧ ನೋವು, ಕಣ್ಣೀರು, ಹಿನ್ನಡೆ, ಆತಂಕಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ಪ್ರೀತಿ, ನಂಬಿಕೆ ಹಾಗೂ ಭರವಸೆಯೊಂದಿಗೆ ವೈವಾಹಿಕ ಜೀವನ ಆರಂಭಗೊಳ್ಳುತ್ತದೆ. ಆದರೆ ಮುರಿದು ಬೀಳುವಾಗ ಹಣ, ಆಸ್ತಿ, ಲೆಕ್ಕಾಚಾರ ಮಾತ್ರ ಗಣನೆಗೆ ಬರುತ್ತದೆ. ಅಲ್ಲಿ ಜೊತೆಯಾಗಿ ಸಾಗಿದ ಯಾವುದೇ ಸಂಬಂಧಗಳಿಗೂ ಅರ್ಥವಿರಲ್ಲ ಎಂದಿದ್ದಾರೆ.
20 ಕೋಟಿ ಆಸ್ತಿ ಹೋಯಿತು
ಪತಿ ಪೀಟರ್ ಹಾಗ್ ಹಾಗೂ ನಟಿ ಸೆಲಿನಾ ಜೆಟ್ಲಿ ವಿಚ್ಚೇದನ ಬಾರಿ ಕೋಲಾಹಲ ಎಬ್ಬಿಸಿದ ಪ್ರಕರಣ. ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೋವು ಹೇಳಿಕೊಂಡಿದ್ದಾರೆ. ನನ್ನ ಮದುವೆ ಮುರಿದು ಬಿತ್ತು. ಪತಿ ನನ್ನ 20 ಕೋಟಿ ರೂಪಾಯಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಜೊತೆಯಾಗಿ ನಡೆಯುವಾಗ ನಂಬಿಕೆ ಭರವಸೆ ಮೇಲಿನ ಹೂಡಿಕೆ ಕೊನೆ ನನ್ನನ್ನು ಬೀದಿಪಾಲು ಮಾಡುವಂತೆ ಮಾಡಿತು ಎಂದು ಸೆಲಿನಾ ಜೆಟ್ಲಿ ಹೇಳಿದ್ದಾರೆ. ಮದುವೆಗೂ ಮೊದಲು ನಾನು ಮಾಡಿದ್ದ ಆಸ್ತಿಯಲ್ಲೂ ಹಕ್ಕು ಸಾಧಿಸಿಬಿಟ್ಟರು. ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಸೆಲಿನಾ ಹೇಳಿದ್ದಾರೆ.
ನನ್ನ ಡಿವೋರ್ಸ್ ಮಕ್ಕಳು ಓದಿ ಹೇಳಿದರು.
ಮನಸ್ತಾಪಗಳು, ಜಗಳ ನಡೆಯುತ್ತಿತ್ತು. ಮಾನಸಿಕ ಹಿಂಸೆಯಿಂದ ಕಂಗಾಲಾಗಿದ್ದೆ. ಇದರ ನಡುವೆ 15ನೇ ವೆಡ್ಡಿಂಗ್ ಆ್ಯನಿವರ್ಸರಿ ದಿನ ಡಿವೋರ್ಸ್ ಗಿಫ್ಟ್ ಬಂದಿತ್ತು. ಪತಿ ಪೀಟರ್ ಹಾಗ್ ಜರ್ಮನ್ ಬಾಷೆಯಲ್ಲಿ ಒಂದು ಪತ್ರ ಕಳುಹಿಸಿದ್ದರು. ನನಗೆ ಓದಲು ಸಾಧ್ಯವಾಗದ ಕಾರಣ ಪುಟ್ಟ ಮಕ್ಕಳಲ್ಲಿ ಓದಲು ಹೇಳಿದೆ. ಪೋಷಕರ ಡಿವೋರ್ಸ್ ಪತ್ರವನ್ನು ಮಕ್ಕಳು ಓದುವಂತಾಯಿತು.
ಕಸ ಗುಡಿಸುವ ಕೆಲಸ ಕೊಡಿಸುವುದಾಗಿ ಹೇಳಿದ ಪತಿ
ಪರಿಹಾರ ನನಗೆ ಬೇಡ, ನಾನು ಗಳಿಸಿದ ಆಸ್ತಿ ನನ್ನ ಮಕ್ಕಳನ್ನು ಜಂಟಿ ಕಸ್ಟಡಿ ಮಾಡಿ ಕೊಡುವಂತೆ ಕೇಳಿಕೊಂಡೆ. ಮಕ್ಕಳನ್ನು ನೋಡಬೇಕಾದರೆ ಇಲ್ಲಿ ಮಾರ್ಕೆಟ್‌ನಲ್ಲಿ ಕಸ ಗುಡಿಸುವ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಭಾರತೀಯರ ತರ ಕಸ ಗುಡಿಕುವ ಕೆಲಸವನ್ನು ನಾವು ಕೀಳಾಗಿ ನೋಡುವುದಿಲ್ಲ ಎಂದು ಪೀಟರ್ ಹಾಗ್, ನನ್ನ ಹಾಗೂ ಭಾರತವನ್ನು ಅವಮಾನಿಸಿದರು ಎಂದಿದ್ದಾರೆ.
ಜಟಾಪಟಿ ಜೀವನ
2010ರಲ್ಲಿ ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ಹಾಗೂ ಆಸ್ಟ್ರಿಯಾ ಉದ್ಯಮಿ ಪೀಟರ್ ಹಾಗ್ ಮದುವೆಯಾಗಿದ್ದರು. ಇರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಪತಿ ವಿರುದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ, ಕಿರುಕುಳ ದೂರು ದಾಖಲಿಸಿದ್ದರು. ಭಾರಿ ವಿವಾದಗಳಿಂದ ಕೂಡಿದ ಬದುಕು, ವಿಚ್ಚೇದನ ಬಳಿಕವೂ ಜಟಾಪಟಿಯಿಂದಲೇ ಸಾಗುತ್ತಿದೆ.
ಭಾರತೀಯರಿಗೆ Prenup ಸಲಹೆ
ಮದುವೆಯಾಗುವ ಹೆಣ್ಣುಮಕ್ಕಳು ಮದುವೆಗೂ ಮೊದಲೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲಾ ಮಹಿಳೆಯರು Prenup ಅಗ್ರೀಮೆಂಟ್ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. Prenup ಎಂದರೆ ಮದುವೆಗೂ ಮೊದಲೇ ದಂಪತಿಗಳು ಮಾಡಿಕೊಳ್ಳುವ ಒಪ್ಪಂದ. ಈ ಒಪ್ಪಂದದಲ್ಲಿ ಒಂದು ವೇಳೆ ಮದುವೆ ಮುರಿದು ಬಿದ್ದರೆ ತಮ್ಮ ಆಸ್ತಿ, ಸಂಪಾದನೆ, ಸಂಪತ್ತು, ಬ್ಯಾಂಕ್ ಉಳಿತಾಯ ಹೇಗೆ ಹಂಚಿಕೆ ಅನ್ನೋ ಕುರಿತು ಮೊದಲೇ ಅಗ್ರೀಮೆಂಟ್ ಮಾಡಲಾಗುತ್ತದೆ. ವಿದೇಶಗಲ್ಲಿ ಇದು ಪ್ರಚಲಿತದಲ್ಲಿದೆ. ಇದು ಭಾರತದಲ್ಲೂ ಮಹಿಳೆಯರು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

