ಮದುವೆ ಮುಗಿಸಿ ಫಸ್ಟ್‌ನೈಟ್‌ಗೆ ಹೊರಟಾಗ 'ನಾನು ನೀನು ಅಣ್ಣ-ತಂಗಿ' ಎಂದ ವಧು; ವರ ಫುಲ್ ಶಾಕ್!
ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದಿವೆ. ಇನ್ನು ವರ ಮನೆಯಲ್ಲಿ ಮೊದಲ ರಾತ್ರಿಗೆ ಸಿದ್ಧಪಡಿಸಲು ಹೇಳಿ ವಧುವನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೊರಟಿದ್ದಾನೆ. ಆಗ, ನಾನು ನೀನು ಅಣ್ಣತಂಗಿಯಂತೆ ಇರೋಣ ಎಂದು ಹೇಳಿದ್ದಾಳೆ. ಇದಕ್ಕೆ ಕಾರಣ ಕೇಳಿದರೆ ನೀವೂ ಶಾಕ್ ಆಗುತ್ತೀರಿ..

ಮದುವೆಯಾದ ನಂತರ ವಧು ಪತ್ನಿಯಾಗಲು ನಿರಾಕರಣೆ: ಅನೇಕ ಬಾರಿ, ವಿವಾಹಗಳು ಹುಡುಗ ಮತ್ತು ಹುಡುಗಿ ಇಬ್ಬರಿಗೂ ಭಾರೀ ಹೊರೆಯಾಗುತ್ತವೆ. ಈ ಸುದ್ದಿಯಲ್ಲಿ ವಧುವೊಬ್ಬಳು ಮದುವೆಯ ನಂತರ ವರನ ಪತ್ನಿಯಾಗಲು ನಿರಾಕರಿಸುತ್ತಾಳೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನಿಗೆ ಆಘಾತ:
ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನ ಮಾತು ಕೇಳಿ ವರನ ಕನಸುಗಳು ನುಚ್ಚು ನೂರಾಗಿವೆ. ತಾನು ಪತ್ನಿಯನ್ನಾಗಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವಧು, ದಾರಿಯಲ್ಲಿ ಶಾಕ್ ಆಗುವಂತಹ ಬಾಂಬ್ ಸಿಡಿಸಿದಳು. ಅದರಿಂದ ಅವನು ಮದುವೆಯನ್ನು ಮುರಿಯಬೇಕಾಯಿತು.
ವಧು ಪತ್ನಿಯಾಗಲು ನಿರಾಕರಿಸಿದ್ದಾಳೆ:
ಈ ಕಥೆ ಮಧ್ಯಪ್ರದೇಶದ ಸಾಗರ ಜಿಲ್ಲೆಗೆ ಸಂಬಂಧಿಸಿದೆ. ಅಲ್ಲಿ ವಧುವೊಬ್ಬಳು ಮದುವೆಯ ನಂತರ ತನ್ನ ತವರು ಮನೆಯಿಂದ ಗಂಡನ ಮನೆಗೆ ಹೊರಟಳು. ಆದರೆ, ಗಂಡನ ಮನೆಗೆ ಹೋಗುವ ಮೊದಲೇ ಆತನ ಪತ್ನಿಯಾಗಲು ನಿರಾಕರಿಸಿದಳು.
ಸಾಗರ ಜಿಲ್ಲೆಯ ಒಬ್ಬ ಹುಡುಗನಿಗೆ ಲಲಿತಾಪುರದ ಹುಡುಗಿಯೊಂದಿಗೆ ಮದುವೆಯಾಗಿದೆ. ಭೋಪಾಲ್ ರಸ್ತೆಯಲ್ಲಿರುವ ದೊಡ್ಡ ರೆಸಾರ್ಟ್‌ನಲ್ಲಿ ಮದುವೆ ಸಮಾರಂಭ ನಡೆಯಿತು. ಎರಡೂ ಕುಟುಂಬಗಳು ಸಂತೋಷವಾಗಿದ್ದವು. ಅದ್ಧೂರಿಯಾದ ಮದುವೆಯನ್ನು ನೋಡಿ ಎಲ್ಲರೂ ಸಂಭ್ರಮಿಸಿದರು.
ಎಲ್ಲರೂ ಮದುವೆಗೆ ಬಂದು ವಧು-ವರರಿಗೆ ನೂರು ಕಾಲ ಜೊತೆಯಾಗಿ, ಸುಖ-ಸಂತೋಷದಿಂದ ಬಾಳುವಂತೆ ಆಶೀರ್ವಾದ ಮಾಡಿ ಹೋದರು. ವರನು ವಧುವನ್ನು ತನ್ನ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋದನು. ಸ್ವಲ್ಪ ದೂರ ಹೋದ ನಂತರ, ವಧು ವರನಿಗೆ ಈ ಮದುವೆ ತನ್ನ ಇಚ್ಛೆಗೆ ವಿರುದ್ಧವಾಗಿದೆ ಎಂದು ಹೇಳಿದಳು. ಜೊತೆಗೆ, ತಾನು ಇನ್ನೊಬ್ಬರನ್ನು ಈಗಾಗಲೇ ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ಅಣ್ಣ-ತಂಗಿಯಂತೆ ಇರೋಣ:
ನಾನು ಇನ್ನೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ನಾನು ನಿನ್ನ ನಿನ್ನ ಪತ್ನಿಯಾಗಲು ಸಾಧ್ಯವಿಲ್ಲ. ನಿಮ್ಮ (ವರ) ಮನೆಯಲ್ಲಿ ನಾನು ನಿನ್ನ ಸಹೋದರಿಯಂತೆ ಇರುತ್ತೇನೆ. ಅಂದರೆ ನಾನು ನೀನು ಅಣ್ಣ-ತಂಗಿಯಂತೆ ಇರೋಣ. ನಮ್ಮ ಸಂಬಂಧ ಸಹೋದರ-ಸಹೋದರಿಯರಂತೆ ಇರುತ್ತದೆ ಎಂದು ಹೇಳಿದಳು.
ಮದುವೆ ಮಾಡಿಕೊಂಡು ಕೆಲವೇ ಕ್ಷಣಗಳು ಕಳೆದಿವೆ. ನಮ್ಮ ಮೊದಲ ರಾತ್ರಿಯನ್ನೂ ಆಚರಣೆ ಮಾಡಿಕೊಳ್ಳುವ ಮುನ್ನ ವಧುವಿನ ಮಾತು ಕೇಳಿದ ತಕ್ಷಣ ವರ, ಎಲ್ಲವನ್ನೂ ಕುಟುಂಬಕ್ಕೆ ತಿಳಿಸಿದನು. ಜೊತೆಗೆ, ಮನೆಗೆ ಹೋಗುತ್ತಿದ್ದ ಕಾರನ್ನು ವಾಪಸ್ ಮದುವೆ ಮಂಟಪಕ್ಕೆ ತಿರುಗಿಸಿಕೊಂಡು ಮರಳಿಬಂದನು. ಅಲ್ಲಿ ವಧುವಿನ ಕುಟುಂಬ ಇನ್ನೂ ಇತ್ತು. ಅಲ್ಲಿ ಅವಳ ಪ್ರೇಮ ಸಂಬಂಧದ ಬಗ್ಗೆ ತಿಳಿಸಲಾಯಿತು.
ಮುದುವೆ ಮುರಿದುಕೊಂಡು ಹೋದ ವಧು-ವರ:
ಎರಡೂ ಕುಟುಂಬಗಳು ಇದರ ಬಗ್ಗೆ ಮಾತನಾಡಿದವು. ನಂತರ ಮದುವೆಯನ್ನು ಮುರಿಯಲು ನಿರ್ಧರಿಸಿದವು. ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನ ಹೃದಯ ಮುರಿದುಹೋಯಿತು. ಆದರೆ ಬಲವಂತದ ಸಂಬಂಧ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ತಾನೇ ಸಮಾಧಾನ ಮಾಡಿಕೊಂಡಿದ್ದಾನೆ.