ಮೊದಲ ಬಾರಿಗೆ ಮಗಳ ಮುಖ ತೋರಿಸಿದ ರಣಬೀರ್ ಆಲಿಯಾ : ಅಜ್ಜ ರಿಷಿ ಕಪೂರ್‌ಗೆ ಹೋಲಿಸಿದ ಫ್ಯಾನ್ಸ್
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಅವರು ತಮ್ಮ ಮುದ್ದು ಮಗಳನ್ನು ಕೊನೆಗೂ ಜಗತ್ತಿಗೆ ತೋರಿಸಲು ಮುಂದಾಗಿದ್ದು, ಇದೇ ಮೊದಲ ಬಾರಿಗೆ ರಾಹಾಳನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಾರೆ.

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಅವರು ತಮ್ಮ ಮುದ್ದು ಮಗಳನ್ನು ಕೊನೆಗೂ ಜಗತ್ತಿಗೆ ತೋರಿಸಲು ಮುಂದಾಗಿದ್ದು, ಇದೇ ಮೊದಲ ಬಾರಿಗೆ ರಾಹಾಳನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ರಾಹಾ ಒಂದು ವರ್ಷ ಪೂರೈಸಿದ್ದು, ರಾಹಾಳ ಮುದ್ದಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಹಾಳ ಕಣ್ಣುಗಳು ಅತ್ತೆ ಅಂದರೆ ರಣಬೀರ್ ಸೋದರಿ ಕರೀಷ್ಮಾ ಕಪೂರ್‌ರಂತೆ ಬೆಕ್ಕಿನ ಕಣ್ಣನ್ನು ಹೋಲುತ್ತಿದ್ದು, ಅನೇಕರು ಆಕೆಯನ್ನು ಕರೀಷ್ಮಾಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ರಾಹಾಳನ್ನು ಅಜ್ಜ ರಣಬೀರ್ ತಂದೆ ರಿಷಿ ಕಪೂರ್‌ಗೆ ಹೋಲಿಸುತ್ತಿದ್ದಾರೆ.
ವರ್ಷಂ ಪ್ರತಿ ಆಯೋಜಿಸುವ ಕ್ರಿಸ್‌ಮಸ್ ಲಂಚ್‌ಗೆ ಆಗಮಿಸಿದ ರಣಬೀರ್ ಕಪೂರ್ ಹಾಗೂ ಪತ್ನಿ ಆಲಿಯಾ ಭಟ್ ಈ ಬಾರಿ ಜೊತೆಗೆ ತಮ್ಮ ಮಗಳನ್ನು ಕರೆದುಕೊಂಡು ಬಂದಿದ್ದರು.
ಮಗಳಿಗೆ ಬಿಳಿ ಹಾಗೂ ತಿಳಿ ಗುಲಾಬಿ ಫ್ರಾಕ್ ಹಾಕಿಸಿದ್ದು, ಕಾಲಿಗೆ ವೆಲ್ವೆಟ್ ಶೂ ಹಾಕಲಾಗಿತ್ತು, ಎಲ್ಲಾ ಪುಟ್ಟ ಮಕ್ಕಳಂತೆ ರಾಹಾ ಪಾಪಾರಾಜಿಗಳನ್ನು ಕುತೂಹಲದ ಕಣ್ಣುಗಳಿಂದ ದಿಟ್ಟಿಸುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.
ಇದೇ ವೇಳೆ ಆಲಿಯಾ ಕೆಂಪು ಹೂಗಳಿರುವ ಕಪ್ಪು ಒನ್ ಫೀಸ್ ಧರಿಸಿದ್ದರೆ ಅತ್ತ ರಣ್‌ಬೀರ್ ಕಪ್ಪು ಬಣ್ಣದ ಪ್ಯಾಂಟ್ ಕಂದು ಬಣ್ಣದ ಜೀನ್ಸ್ ಜಾಕೆಟ್ ಧರಿಸಿ ಮಗಳೊಂದಿಗೆ ನಗು ನಗುತ್ತಾ ಪಪಾರಾಜಿಗಳಿಗೆ ಫೋಸ್ ನೀಡಿದರು.
ಇನ್ನು ಆಲಿಯಾ ರಣ್ಬೀರ್ ಮಗಳಲ್ಲಿ ಅಜ್ಜ ರಿಷಿ ಕಪೂರ್ ಹೋಲಿಕೆ ಇರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ. ಕಳೆದ ವರ್ಷ ನವೆಂಬರ್ 6 ರಂದ ರಾಹಾ ಜನಿಸಿದ್ದಳು. ಆದರೆ ಇಲ್ಲಿಯವರೆಗೆ ದಂಪತಿ ತಮ್ಮ ಪುತ್ರಿಯ ಫೋಟೋವನ್ನು ಕ್ಲಿಕ್ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ,
Raha
ಬಾಲಿವುಡ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಳೆದ ವರ್ಷ ಏಪ್ರಿಲ್ 14 ರಂದು ಮದುವೆಯಾಗಿದ್ದರು. ಮದುವೆಯಾಗಿ ವರ್ಷ ತುಂಬುವ ಮೊದಲೇ ಮಗಳು ರಾಹಾ ಜನಿಸಿದ್ದಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.