MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Romantic Hero ಯಾರು? 71ರ ರೇಖಾ ಉತ್ತರಕ್ಕೆ ಬಾಲಿವುಡ್​ ತತ್ತರ! ಅಂದ್ಕೊಂಡಿದ್ದೇ ಒಂದು, ಹೇಳಿದ್ದೇ ಇನ್ನೊಂದು

Romantic Hero ಯಾರು? 71ರ ರೇಖಾ ಉತ್ತರಕ್ಕೆ ಬಾಲಿವುಡ್​ ತತ್ತರ! ಅಂದ್ಕೊಂಡಿದ್ದೇ ಒಂದು, ಹೇಳಿದ್ದೇ ಇನ್ನೊಂದು

71ರ ಹರೆಯದಲ್ಲೂ ಸೌಂದರ್ಯದಿಂದ ಮಿಂಚುತ್ತಿರುವ ನಟಿ ರೇಖಾ, ಅಮಿತಾಭ್ ಬಚ್ಚನ್ ಮೇಲಿನ ತಮ್ಮ ಪ್ರೀತಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕೇಳಿದ ಪ್ರಶ್ನೆಗೆ ಅಮಿತಾಭ್ ಹೆಸರನ್ನು ಹೇಳದೆ ಉತ್ತರಿಸಿದರೂ, ಅವರ ಪ್ರತಿಕ್ರಿಯೆ ಹಳೆಯ ಪ್ರೀತಿಯನ್ನು ನೆನಪಿಸಿತು.

2 Min read
Author : Suchethana D
Published : Apr 25 2026, 07:44 PM IST
Share this Photo Gallery
  • FB
  • TW
  • Linkdin
  • Whatsapp
16
71ರ ಸುಂದರಿ
Image Credit : Social Media

71ರ ಸುಂದರಿ

ಬಾಲಿವುಡ್‌ನ ಎವರ್​ಗ್ರೀನ್​ ತಾರೆ ರೇಖಾ ಅವರಿಗೆ ಈಗ 71 ವರ್ಷ ವಯಸ್ಸು. ಆದರೆ ಇಂದಿಗೂ ಅವರು ಸುಂದರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ನಟಿ ರೇಖಾ, ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ನಿರಂತರ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲಿಯೂ ಯಾರಾದರೂ ಸರಿ, ಮೊದಲಿನ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲವಲ್ಲ, ಅದು ರೇಖಾ ಬಾಳಲ್ಲಿ ಅಕ್ಷರಶಃ ನಿಜವಾಗಿದೆ. ಅಮಿತಾಭ್​ ಮೋಸ ಮಾಡಿರುವುದಾಗಿ ಹೇಳಿಕೊಂಡಿರುವ ನಟಿ, ಇನ್ನೂ ಅವರ ಮೇಲಿನ ಪ್ರೀತಿಯಿಂದ ಹೊರಬಂದಂತೆ ಕಾಣುತ್ತಿಲ್ಲ.

26
ರೇಖಾ ಮತ್ತು ಅಮಿತಾಭ್​
Image Credit : instagram

ರೇಖಾ ಮತ್ತು ಅಮಿತಾಭ್​

ಅಷ್ಟಕ್ಕೂ ಅಮಿತಾಭ್​ ಬಚ್ಚನ್ ಅವರೊಂದಿಗಿನ ರೇಖಾ ಅವರ ಪ್ರೇಮಕಥೆಯು ಬಾಲಿವುಡ್‌ನ ಅತ್ಯಂತ ಚರ್ಚಾಸ್ಪದ ಗಾಸಿಪ್‌ಗಳಲ್ಲಿ ಒಂದಾಗಿದೆ. ಅಮಿತಾಭ್​ ಮೇಲಿನ ಅವರ ಪ್ರೀತಿಯ ಬಗ್ಗೆ ಕೇಳಿದಾಗ, ರೇಖಾ, "ಯಾರು ಇಷ್ಟಪಡುವುದಿಲ್ಲ?" ಎಂದು ಕೇಳಿದರು, ಇಡೀ ಜಗತ್ತು ಅವರನ್ನು ಪ್ರೀತಿಸುತ್ತದೆ, ಹಾಗಾದರೆ ನಾನು ಏಕೆ ಮಾಡಬಾರದು ಎಂದು ಹೇಳಿದ್ದರೂ, ರೇಖಾ ಇಂದಿಗೂ ಅದೇ ಪ್ರೀತಿಯನ್ನು ಉಳಿಸಿಕೊಂಡವರು. ಇದೇ ಕಾರಣಕ್ಕೆ ಇಂದು ಕೂಡ ಜಯಾ ಬಚ್ಚನ್​, ರೇಖಾ ಅವರನ್ನು ನೋಡಿದಾಗ ಉರಿದುಕೊಳ್ಳುವುದು ಇದೆ!

Related Articles

Related image1
ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ: ತರ್ಲೆ ದಿನಗಳ ನೆನೆದ ನಟ ಚಂದನ್
Related image2
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
36
ಪುಸ್ತಕದಲ್ಲಿ ಅನಾವರಣ
Image Credit : instagram

ಪುಸ್ತಕದಲ್ಲಿ ಅನಾವರಣ

ಯಾಸಿರ್ ಉಸ್ಮಾನ್ ಅವರು ನಟಿ ರೇಖಾ ಕುರಿತು ಬರೆದ ಪುಸ್ತಕವು ಅವರ ವೈಯಕ್ತಿಕ ಜೀವನವನ್ನು ಚರ್ಚಿಸುತ್ತದೆ. ರೇಖಾ ದೈಹಿಕ ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಹ ಇದರಲ್ಲಿ ವ್ಯಕ್ತಪಡಿಸಿದ್ದಾರೆ. "ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದುವುದರಲ್ಲಿ ಏನು ಹಾನಿ? ನೀವು ಪ್ರೀತಿಸುವ ವ್ಯಕ್ತಿಗೆ ಮಾತ್ರ ಹತ್ತಿರವಾಗಬಹುದು, ಮತ್ತು ನೀವು ಪ್ರೀತಿಸುವ ವ್ಯಕ್ತಿಗೆ ಹತ್ತಿರವಾಗಲು ಇದು ಏಕೈಕ ಮಾರ್ಗವಾಗಿದೆ" ಎಂದು ರೇಖಾ ಹೇಳಿದ್ದಾರೆ.

46
ಶಾರುಖ್ ಪ್ರಶ್ನೆ
Image Credit : Asianet News

ಶಾರುಖ್ ಪ್ರಶ್ನೆ

ಇದೀಗ, ರೇಖಾ ಅವರು ಫಂಕ್ಷನ್​ ಒಂದಕ್ಕೆ ಹಾಜರಾಗಿದ್ದರು. ಅಲ್ಲಿ ಶಾರುಖ್​ ಖಾನ್​ ಅವರಿಗೆ ನಿಮ್ಮ ನೆಚ್ಚಿನ ರೊಮಾಂಟಿಕ್ ನಾಯಕ ಯಾರು ಎಂದು ಪ್ರಶ್ನಿಸಿದ್ದಾರೆ. ಎಲ್ಲರೂ ರೇಖಾ ಮೊದಲಿಗೆ ಅಮಿತಾಭ್ ಹೆಸರೇ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದರು. ಆದರೆ ರೇಖಾ ಮಾತ್ರ ಎಷ್ಟು ಜಾಣ್ಮೆಯಿಂದ ಉತ್ತರಿಸಿದರು ಎಂದರೆ, ತಮ್ಮ ಕಾಲದ ಎಲ್ಲಾ ನಾಯಕರ ಹೆಸರನ್ನು ಹೇಳಿದರೂ ಅಪ್ಪಿತಪ್ಪಿಯೂ ಅಮಿತಾಭ್​ ಹೆಸರನ್ನು ಹೇಳಲಿಲ್ಲ.

56
ಯಾರನ್ನೂ ಮರೆತಿಲ್ವಾ?
Image Credit : ANI

ಯಾರನ್ನೂ ಮರೆತಿಲ್ವಾ?

ಕೊನೆಗೆ ಶಾರುಖ್​ ಖಾನ್​, ನೀವು ಯಾರನ್ನೂ ಮರೆತಿಲ್ವಾ ಎಂದು ಪ್ರಶ್ನಿಸಿದರು. ಅಸಲಿಗೆ ಶಾರುಖ್ ಅವರು ಹಾಗೆ ಹೇಳಲು ಕಾರಣವಿತ್ತು. ತಾವೇ ರೊಮಾಂಟಿಕ್​ ಹೀರೋ ಎಂದು ರೇಖಾ ಹೇಳಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ, ರೇಖಾ ಅವರು ಬೇರೆಯವರ ಹೆಸರು ಎಂದಾಕ್ಷಣ ಬಹುಶಃ ಅವರ ಎದುರಿಗೆ ಬಂದದ್ದು ಅಮಿತಾಭ್​. ಆದ್ದರಿಂದ ಅವರ ಮುಖ ಸಣ್ಣಗಾಗಿ ಹೋಯಿತು. ಒಟ್ಟಿನಲ್ಲಿ ರೇಖಾ ಅಮಿತಾಭ್​ ಅವರನ್ನು ಇನ್ನೂ ಮರೆತಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ.

66
ಗರ್ಭಿಣಿಯಾಗದಿರುವುದು ಕೇವಲ ಕಾಕತಾಳೀಯ
Image Credit : ieentertainment Instagram

ಗರ್ಭಿಣಿಯಾಗದಿರುವುದು ಕೇವಲ ಕಾಕತಾಳೀಯ

ಈ ಹಿಂದೆ ನಟಿ ನೀಡಿದ್ದ ಸಂದರ್ಶನದಲ್ಲಿ, ಮದುವೆಗೆ ಮೊದಲು ದೈಹಿಕ ಅನ್ಯೋನ್ಯತೆಯನ್ನು ಸಹಜ ಎಂದು ವಿವರಿಸಿದ್ದರು. "ನಾನು ಇನ್ನೂ ಗರ್ಭಿಣಿಯಾಗದಿರುವುದು ಕೇವಲ ಕಾಕತಾಳೀಯ" ಎಂದು ಹೇಳಿದ್ದರು. ಪ್ರೀತಿಯಲ್ಲಿರುವಾಗ ಮಾತ್ರ ದೈಹಿಕ ಅನ್ಯೋನ್ಯತೆಯು ಸಾಧ್ಯ. ಮದುವೆಗೆ ಮೊದಲು ದೈಹಿಕ ಅನ್ಯೋನ್ಯತೆಯು ಸಹಜ ಎಂದು ರೇಖಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರ ಪ್ರಕಾರ, ಪ್ರೀತಿಯಲ್ಲಿರುವುದರಲ್ಲಿ ಯಾವುದೇ ತಪ್ಪಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಸಂಬಂಧಗಳು
ಮಹಿಳೆಯರು
ಮನರಂಜನಾ ಸುದ್ದಿ

Latest Videos
Recommended Stories
Recommended image1
ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ: ಸುಧಾ ಮೂರ್ತಿ ಟಿಪ್ಸ್​
Recommended image2
ಮದುವೆ ದಿನವೇ ಓಡಿ ಹೋದ ಶಿರಸಿಯ ವಧು; ಕೆಜಿಗಟ್ಟಲೇ ಊಟ ವೇಸ್ಟ್; ಪೊಲೀಸ್‌ ಠಾಣೆ ಮೆಟ್ಟಿಲೇರಿದ ವರ!
Recommended image3
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
Related Stories
Recommended image1
ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ: ತರ್ಲೆ ದಿನಗಳ ನೆನೆದ ನಟ ಚಂದನ್
Recommended image2
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved