- Home
- Entertainment
- TV Talk
- ನೋಡಲು ಹೋಗಿದ್ದು ದರ್ಶನ್‌ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
ನೋಡಲು ಹೋಗಿದ್ದು ದರ್ಶನ್‌ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ, ಹೈಸ್ಕೂಲ್‌ನಲ್ಲಿದ್ದಾಗ 'ಸಾರಥಿ' ಪ್ರಚಾರಕ್ಕಾಗಿ ಬಂದಿದ್ದ ದರ್ಶನ್‌ರನ್ನು ನೋಡಲು ಸ್ಕೂಲ್ ಬಂಕ್ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ದರ್ಶನ್ ಬದಲು ಧರ್ಮ ಕೀರ್ತಿರಾಜ್‌ರನ್ನು ಭೇಟಿಯಾಗಿದ್ದು, ಅವರೊಂದಿಗೇ ನಾಯಕಿಯಾಗಿದ್ದು ಕಾಕತಾಳೀಯ ಎಂದಿದ್ದಾರೆ.

ಬಿಗ್‌ಬಾಸ್ ಜೋಡಿ
ಬಿಗ್‌ಬಾಸ್ 11ರ ಸ್ಪರ್ಧಿಗಳಾಗಿದ್ದ ನಟಿ ಅನುಷಾ ರೈ (Anusha rai) ಹಾಗೂ ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಕ್ಲೋಸ್ ಆಗಿ ಸಕರ್ಸದ್ದು ಮಾಡಿದವರು. ಇದು ಅಲ್ಲಿ ಹಲವರ ಕಣ್ಣು ಕೂಡ ಕುಕ್ಕಿತ್ತು. ಒಂದು ಹಂತದಲ್ಲಿ ಇದೇ ಕಾರಣವನ್ನು ಮುಂದಿಟ್ಟುಕೊಂಡು ಅವರಿಬ್ಬರನ್ನೂ ನಾಮಿನೇಟ್ ಮಾಡುವ ಕೆಲಸ ಕೂಡ ನಡೆದಿತ್ತು.
ಫ್ರೆಂಡ್ಷಿಪ್ ಗುಸುಗುಸು
ಈ ಬಗ್ಗೆ ಅಂದು ಅಸಮಾಧಾನ ವ್ಯಕ್ತಪಡಿಸಿದ್ದ ಅನುಷಾ ರೈ 'ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಯಾಕೆ ಎಲ್ಲರೂ ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ? ಎಂದೆಲ್ಲಾ ಪ್ರಶ್ನಿಸಿದ್ದರು. ಅದೆಲ್ಲಾ ಈಗ ಬಿಗ್‌ಬಾಸ್ ವೀಕ್ಷಕರ ತಲೆಯಿಂದಲೂ ಹೋಗಿ ಆಗಿದೆ ಅನ್ನಿ. ಆದರೆ, ಇದೀಗ ನಟಿ ತಾವು ಹೈಸ್ಕೂಲ್ನಲ್ಲಿ ಇದ್ದಾಗ ನಡೆದ ಘಟನೆಯೊಂದರ ಬಗ್ಗೆ ಮೆಲುಕು ಹಾಕಿದ್ದಾರೆ.
ಸಾರಥಿ ಸಿನಿಮಾ ವೇಳೆಯ ಘಟನೆ
ಗಿಚ್ಚಿ ಗಿಲಿಗಿಲಿ ಷೋನಲ್ಲಿ ಈ ಜೋಡಿ ಭಾಗವಹಿಸಿತ್ತು. ಆ ಸಂದರ್ಭದಲ್ಲಿ ನಟಿ, ನಾನು ಎಸ್ಎಸ್ಎಲ್ಸಿಯಲ್ಲಿ ಇದ್ದೆ ಬಹುಶಃ. ಆಗ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ಅದರ ಪ್ರಮೋಷನ್ಗೆ ದರ್ಶನ್ ಸರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್ ಎಲ್ಲಾ ಬಂದಿದ್ರು. ನಾನು ದರ್ಶನ್ ಸರ್ ಅವರನ್ನು ನೋಡಬೇಕು ಎಂದು ಸ್ಕೂಲ್ ಬಂಕ್ ಮಾಡಿ ಹೋಗಿದ್ದೆ. ಆದರೆ ಅಲ್ಲಿ ದರ್ಶನ್ ಸರ್ ಸಿಗಲಿಲ್ಲ. ಮಠದ ಒಳಗೆ ಹೋಗಿದ್ದರು ಎನ್ನುತ್ತಲೇ ಅಂದಿನ ಘಟನೆ ತಿಳಿಸಿದ್ದಾರೆ.
ದರ್ಶನ್‌ರನ್ನು ನೋಡಲು ಹೋಗಿದ್ದೆ, ಆದರೆ...
ನನ್ನ ಕಣ್ಣಿಗೆ ಬಿದ್ದದ್ದು ಧರ್ಮ ಕೀರ್ತಿರಾಜ್ ಅವರು. ಅವರನ್ನು ಮಾತನಾಡಿಸಿದ್ದೆ. ಆದರೆ ಕುತೂಹಲದ ವಿಷಯ ಎಂದರೆ, ನಾನು ಹೈಸ್ಕೂಲ್ನಲ್ಲಿ ಇದ್ದಾಗ ಸಿನಿಮಾಕ್ಕೆ ಬರಬೇಕು ಎಂದು ಕನಸು ಕಂಡವಳೇ ಅಲ್ಲ. ಅಲ್ಲಿ ದರ್ಶನ್ ಅವರನ್ನು ಮೀಟ್ ಆಗಲು ಹೋಗಿದ್ದೆ, ಧರ್ಮ ಕೀರ್ತಿರಾಜ್ ಕಂಡಿದ್ದರು. ಆದರೆ ಆಮೇಲೆ, ಖಡಕ್ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಜೊತೆ ನಾನು ನಾಯಕಿಯಾದರೆ, ದರ್ಶನ್ ಸರ್ ಮುಹೂರ್ತಕ್ಕೆ ಬಂದಿದ್ದು ಕಾಕತಾಳೀಯ ಎಂದಿದ್ದಾರೆ.
ಕಾರಿನ ಕ್ರೇಜ್
ಅಂದಹಾಗೆ ಸದ್ಯ ಅನುಷಾ ಅವರು ಸದ್ದು ಮಾಡ್ತಿರೋದು ಈ ಫ್ರೆಂಡ್ಷಿಪ್ನಿಂದಲ್ಲ, ಬದಲಿಗೆ ಕಾರಿನ ಕಲೆಕ್ಷನ್ನಿಂದ.ಇತ್ತೀಚೆಗೆ ತಮ್ಮ ಸಿನಿಮಾದ ಪ್ರೇಸ್‌ಮೀಟ್‌ಗೆ ಬಂದಿದ್ದ ಅನುಷಾ ರೈ, ಕಾರ್ ಕ್ರೇಜ್ ಹಾಗೂ ಕಲೆಕ್ಷನ್ ಬಗ್ಗೆ ಮಾತನಾಡಿದ್ದರು.
ಕಾರುಗಳ ರಾಣಿ
“ಸದ್ಯಕ್ಕೆ ಮನೆಯಲ್ಲಿ ಐದು ಕಾರುಗಳಿವೆ. ನನಗೆ ಎಲ್ಲರೂ ಹೇಳ್ತಾರೆ ಫ್ಯೂಚರ್‌ಗೆ ಸೇವ್ ಮಾಡಿಕೋ ಅಂತ. ಆದರೆ, ನಾಳೆ ಏನು ಅನ್ನೋದು ನಮಗೆ ಗೊತ್ತಿಲ್ವಲ್ಲ. ಮದುವೆ ಆದಮೇಲೆ ಬಹುಶಃ ನನ್ನ ಗಂಡನ ಬಳಿ ಎಷ್ಟು ಕಾರುಗಳಿದ್ರು, ಅದು ಒಂಥರ ಬೇರೆ ಲೈಫ್. ಮದುವೆಗೂ ಮುಂಚೆ ನಾನು ಕಾರ್‌ಗಳನ್ನ ಡ್ರೈವ್ ಮಾಡಬೇಕು ಅಂತ ಆಸೆ. ಡ್ರೀಮ್ ಕಾರ್ ಅಂದರೆ, ರೇಂಜರ್ ರೋವರ್ ತಗೋಬೇಕು ಅನ್ನೋ ಆಸೆ ಇದೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

