MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Life
  • Relationship
  • ಜ್ಯೋತಿಷಿ ಮಾತು ನಿಜವಾಯ್ತಾ? Bigg Boss ಅರವಿಂದ್​-ದಿವ್ಯಾ ಬ್ರೇಕಪ್​ ಆದ್ರಾ? ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು

ಜ್ಯೋತಿಷಿ ಮಾತು ನಿಜವಾಯ್ತಾ? Bigg Boss ಅರವಿಂದ್​-ದಿವ್ಯಾ ಬ್ರೇಕಪ್​ ಆದ್ರಾ? ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು

ಬಿಗ್ ಬಾಸ್-8 ಖ್ಯಾತಿಯ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡಗ ಜೋಡಿಯ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿದ್ದಾರೆ.

2 Min read
Author : Suchethana D
Published : Aug 03 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
16
ಗುರೂಜಿ ಭವಿಷ್ಯ
Image Credit : Social Media

ಗುರೂಜಿ ಭವಿಷ್ಯ

ಬಿಗ್​ಬಾಸ್​ನಲ್ಲಿ ಲವ್​ ಆಗಿ ಸ್ನೇಹ ಬೆಳೆಸೋರ ಮಧ್ಯೆ, ಮದುವೆಯಾಗಿಯೋ, ಮದುವೆವರೆಗೆ ಹೋಗಿರೋ ಜೋಡಿ ನಡುವೆ ಬ್ರೇಕಪ್​ ಆಗೇ ಆಗತ್ತೆ ಎಂದು ಈ ಹಿಂದೆ ಖ್ಯಾತ ಗುರೂಜಿ ಒಬ್ಬರು ಭವಿಷ್ಯ ನುಡಿದಿದ್ದರು. ಅದರಂತೆಯೇ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಡಿವೋರ್ಸ್​ ಆಯ್ತು. ಇದೀಗ ಬಿಗ್​ಬಾಸ್​-8 (Bigg Boss-8) ಮೂಲಕ ಫೇಮಸ್​ ಆಗಿದ್ದ ಜೋಡಿ, ಅರವಿಂದ ಕೆ.ಪಿ ಮತ್ತು ದಿವ್ಯಾ ಉರುಡಗ ನಡುವೆ ಬ್ರೇಕಪ್​ ಆಗಿದೆ ಎನ್ನುವ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಿಗ್​ಬಾಸ್​​ 8ರ ಲವ್​ ಬರ್ಡ್ಸ್​
Image Credit : Divya Uruduga Aravind KP Instagram

ಬಿಗ್​ಬಾಸ್​​ 8ರ ಲವ್​ ಬರ್ಡ್ಸ್​

ಅಷ್ಟಕ್ಕೂ ಈ ಜೋಡಿ 2021ರಂದು ನಡೆದಿದ್ದ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದಿವ್ಯಾ ಉರುಡುಗ ಹಾಗೂ ಕೆ.ಪಿ.ಅರವಿಂದ್ ಮಧ್ಯೆ ಮಾತುಕತೆ ಇರಲಿಲ್ಲ. ಆದರೆ, ನಂತರ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಲ್ಲೇ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನ ಬಿಚ್ಚಿ ಕೆ.ಪಿ.ಅರವಿಂದ್ ಕೈಬೆರಳಿಗೆ ದಿವ್ಯಾ ಉರುಡುಗ ತೊಡಿಸಿದ್ದರು. ಬಳಿಕ ನಾಲ್ಕೈದು ವರ್ಷ ಇವರ ಪ್ರೀತಿ ಮುಂದುವರೆಯಿತು. ಮದುವೆಯವರೆಗೂ ಸುದ್ದಿ ಬಂದು, ಶೀಘ್ರದಲ್ಲಿಯೇ ಮದುವೆ ಎಂದು ಘೋಷಿಸಿದ್ದರು.

Related Articles

Related image1
ಪತಿಯ ಜೊತೆ ಸ್ಟೆಪ್​ ಹಾಕಿದ ಶ್ರೀರಸ್ತು ಶುಭಮಸ್ತು ಲಾವಣ್ಯ ಭಾರಧ್ವಾಜ್​-ಹೀಗೊಂದು ಕ್ಯೂಟ್​ ಬೇಬಿ ಬಂಪ್​ ಷೋ
Related image2
ಮಧ್ಯರಾತ್ರಿ ಎದ್ದು ಮೇಕಪ್​ ಮಾಡಿಕೊಳ್ಳೋ ಪತ್ನಿ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ ಗಂಡ: ಕೋರ್ಟ್​ ಹೇಳಿದ್ದೇನು
36
ಮದುವೆಯ ಬಗ್ಗೆ ಗಪ್​ಚುಪ್​
Image Credit : Divya Uruduga Aravind KP Instagram

ಮದುವೆಯ ಬಗ್ಗೆ ಗಪ್​ಚುಪ್​

ಇವರಿಬ್ಬರ ಮದ್ವೆ ಯಾವಾಗ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಅಂದಹಾಗೆ ಈ ಜೋಡಿ ‘ಅರ್ಧಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ರಿಲೀಸ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಕುತೂಹಲದ ಸಂಗತಿಯೇನೆಂದ್ರೆ ಲವ್​ ಆಗಿ ಮೂರು ವರ್ಷ ಆಗಿದ್ದರೂ ಇಬ್ಬರೂ ಪ್ರಪೋಸ್​ ಮಾಡಿರಲಿಲ್ಲ. ಬಳಿಕ 2023ರಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಪೋಸ್​ ಮಾಡಿದ್ದರು.

46
ಬ್ರೇಕಪ್​ ಆಯ್ತಾ ಜೋಡಿ?
Image Credit : Divya Uruduga Aravind KP Instagram

ಬ್ರೇಕಪ್​ ಆಯ್ತಾ ಜೋಡಿ?

ಆದರೆ, ಮದುವೆಗೆ ಮುನ್ನವೇ ಈ ಜೋಡಿ ಬ್ರೇಕಪ್​ ಆಗಿರುವುದಾಗಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇವರಿಬ್ಬರೂ ಅನ್‌ಫಾಲೋ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಜಾಲತಾಣಗಳಲ್ಲಿ ವೈರಲ್​ ಆಗುವ ಸುದ್ದಿಗಳೆಲ್ಲವೂ ಸತ್ಯವೇ ಆಗಿರುವುದಿಲ್ಲ. ಚಿಕ್ಕದೊಂದು ವಿಷಯ ಬಹುದೊಡ್ಡದಾಗುವುದು ಇದೆ. ಇಲಿ ಹೋದರೆ, ಹುಲಿ ಹೋಯಿತು ಎನ್ನುವಂತೆ ಇದೆ ಜಾಲತಾಣದ ಸ್ಥಿತಿ. ಆದರೆ ಇದರ ಹೊರತಾಗಿಯೂ ಈ ಜೋಡಿಯ ಬ್ರೇಕಪ್​ ಬಗ್ಗೆ ಇವರ ಆಪ್ತರಾಗಿರುವ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ರಿಯಾಕ್ಟ್​ ಮಾಡಿದ್ದಾರೆ.

56
ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಏನ್ ಹೇಳಿದ್ರು?
Image Credit : Asianet News

ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಏನ್ ಹೇಳಿದ್ರು?

ಅಂದಹಾಗೆ ಈ ಜೋಡಿ ಎಲ್ಲಿಯೂ ರಿಯಾಕ್ಟ್​ ಮಾಡಲಿಲ್ಲ. ಜೊತೆಗೆ, ಇವರಿಬ್ಬರ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ಗಳನ್ನು ಅವರಷ್ಟೇ ನೋಡಲು ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನೂ ಬೇರೆಯವರು ಪರಿಶೀಲಿಸುವಂತೆ ಇಲ್ಲ. ಆದರೂ ಈ ಬಗ್ಗೆ ಆ್ಯಂಕರ್​ ಯಶವಂತ್​ ಅವರ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ಚಕ್ರವರ್ತಿ ಚಂದ್ರಚೂಡ್ ಅವರು ಕೆಲವೊಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ.

66
ವಿಚಿತ್ರ ದಿನ ಬಂದುಬಿಟ್ಟಿದೆ
Image Credit : our own

ವಿಚಿತ್ರ ದಿನ ಬಂದುಬಿಟ್ಟಿದೆ

“ಅರವಿಂದ್‌ ಕೆಪಿ ನನ್ನ ತಮ್ಮ ಹಾಗೂ ದಿವ್ಯಾ ಉರುಡುಗ ನನಗೆ ತಂಗಿ ಇದ್ದಂಗೆ. ಆದರೆ ಇವತ್ತಿನ ದಿನಗಳಲ್ಲಿ ಹೇಗಾಗಿಬಿಟ್ಟಿದೆ ಎಂದರೆ, ನಾನು ನಿನ್ನನ್ನ ಬಿಟ್ಟೆ ಅಂತ ಹೇಳೋಕೆ ಇನ್​ಸ್ಟಾಗ್ರಾಮ್​ನಲ್ಲಿ ಅನ್‌ಫಾಲೋ ಮಾಡಿ ಸೂಚನೆ ಕೊಡೋ ತರಹ ಆಗಿಬಿಟ್ಟಿದೆ ಎಂದಿರುವ ಚಂದ್ರಚೂಡ ಅವರು, ನಿಜಕ್ಕೂ ಇವರಿಬ್ಬರ ಸ್ಟೇಟಸ್​ ಏನು ಎನ್ನೋದು ನನಗೆ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಮಾತನಾಡಿಲ್ಲ. ದಿವ್ಯಾ ಇತ್ತೀಚೆಗೆ ಬ್ಯಾಡ್ಮಿಂಟನ್‌ ಆಡ್ತಾ ಇದ್ರು. ನನ್ನ ಪ್ರಕಾರ, ಅವರಿಬ್ಬರು ಚೆನ್ನಾಗಿರ್ತಾರೆ, ಚೆನ್ನಾಗಿರ್ಲಿ. ನಾನು ಅಷ್ಟೇ ಹೇಳಬಲ್ಲೆ” ಎಂದಿದ್ದಾರೆ ಅವರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಪ್ರೀತಿ

Latest Videos
Recommended Stories
Recommended image1
ಈ 5 ರಾಶಿ ಜನರು ಸೇಡು ತೀರಿಸಿಕೊಳ್ಳುವಲ್ಲಿ ಮೊದಲ ಸ್ಥಾನದಲ್ಲಿದ್ದಾರೆ, ವರ್ಷಗಳ ನಂತರವೂ ಅವಮಾನವನ್ನು ಮರೆಯುವುದಿಲ್ಲ
Recommended image2
ಅಪ್ಪನ ಸೆಲ್ಯೂಟ್‌ಗಾಗಿ 1.5 ಲಕ್ಷದ ಕೆಲಸಕ್ಕೆ ಗುಡ್‌ಬೈ! ಬಡ ಡ್ರೈವರ್​ ಪುತ್ರನ ಸ್ಟೋರಿ ಕೇಳಿ ಅಮಿತಾಭ್​ ಬಚ್ಚನ್​ ಭಾವುಕ
Recommended image3
ನನಗೆ ಗಂಡನೂ ಬೇಕು ಅವನೂ ಬೇಕು! ಗಂಡ ಒಪ್ಪಿದರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ಈ ಪ್ರಕರಣ?
Related Stories
Recommended image1
ಪತಿಯ ಜೊತೆ ಸ್ಟೆಪ್​ ಹಾಕಿದ ಶ್ರೀರಸ್ತು ಶುಭಮಸ್ತು ಲಾವಣ್ಯ ಭಾರಧ್ವಾಜ್​-ಹೀಗೊಂದು ಕ್ಯೂಟ್​ ಬೇಬಿ ಬಂಪ್​ ಷೋ
Recommended image2
ಮಧ್ಯರಾತ್ರಿ ಎದ್ದು ಮೇಕಪ್​ ಮಾಡಿಕೊಳ್ಳೋ ಪತ್ನಿ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ ಗಂಡ: ಕೋರ್ಟ್​ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved