- Home
- Life
- Relationship
- ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್ ಪ್ರೈಡ್ ಮಾರ್ಚ್, ಬಿಗ್ ಬಾಸ್ ಸ್ಪರ್ಧಿಯೂ ಭಾಗಿ!
ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್ ಪ್ರೈಡ್ ಮಾರ್ಚ್, ಬಿಗ್ ಬಾಸ್ ಸ್ಪರ್ಧಿಯೂ ಭಾಗಿ!
ಕಂಠೀರವ ಕ್ರೀಡಾಂಗಣದಿಂದ ಟೌನ್‌ಹಾಲ್‌ವರೆಗೆ ಲೈಂಗಿಕ ಅಲ್ಪಸಂಖ್ಯಾತರ ಹೆಮ್ಮೆಯ ಮೆರವಣಿಗೆ ನಡೆಯಿತು. LGBTQIA+ ಸಮುದಾಯದ 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಲಿಂಗ, ಲೈಂಗಿಕ ಅಲ್ಪಸಂಖ್ಯಾತರ ನಿಗಮ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು.

ಬದಲಾವಣೆ ಮತ್ತು ವೈವಿಧ್ಯತೆಗಾಗಿ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ (LGBTQIA)ಹೆಮ್ಮೆಯ ಮೆರವಣಿಗೆ ನಡೆದಿದೆ. ಭಾನುವಾರ ಕಂಠೀರವ ಸ್ಟೇಡಿಯಂನಿಂದ (Bengaluru) ಟೌನ್‌ಹಾಲ್‌ವರೆಗೆ ಭಾರೀ ಮೆರವಣಿಗೆ (Pride March) ನಡೆದಿದೆ.
LGBTQIA+ ಸಮುದಾಯವು ಭಾನುವಾರ ಕಂಠೀರವ ಕ್ರೀಡಾಂಗಣದಿಂದ ಟೌನ್ ಹಾಲ್ ವರೆಗೆ ಪ್ರೈಡ್ ಮಾರ್ಚ್‌ನೊಂದಿಗೆ ಅಂತಾರಾಷ್ಟ್ರೀಯ ಹೆಮ್ಮೆಯ ತಿಂಗಳು ಆಚರಿಸಿದಾಗ ಬೆಂಗಳೂರು ಬಣ್ಣ ಮತ್ತು ಶಕ್ತಿಯಿಂದ ಜೀವಂತವೆನಿಸಿಕೊಂಡಿತು.
ಈ ಮಾರ್ಚ್‌ನಲ್ಲಿ350 ಕ್ಕೂ ಹೆಚ್ಚು ಮಂದಿ ಎಲ್‌ಜಿಬಿಟಿಕ್ಯೂ ಸಮುದಾಯದವರು ಭಾಗವಹಿಸಿದ್ದರು. ಇಡೀ ಮಾರ್ಚ್ ಸಂಪೂರ್ಣ ಶಾಂತಿಯುತವಾಗಿ ನೆರವೇರಿದೆ.
ಸಿಎಸ್‌ಜಿಎಂಆರ್ ಸಂಘಟನೆಯಿಂದ ಈ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ಪ್ರೈಡ್ ಮಂತ್ ಪ್ರಯುಕ್ತವಾಗಿ ಲಿಂಗ, ಲೈಂಗಿಕ ಅಲ್ಪಸಂಖ್ಯಾತರ ನಿಗಮ ಸ್ಥಾಪನೆ ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
ಮೆರವಣಿಗೆಗೆ ಪೊಲೀಸ್ ಭದ್ರತೆ ಮತ್ತು ರಕ್ಷಣೆಯನ್ನು ಚೆನ್ನಾಗಿ ಯೋಜಿಸಲಾಗಿತ್ತು, ಅಧಿಕಾರಿಗಳು ಕಾರ್ಯಕ್ರಮ ಮತ್ತು ಉದ್ದೇಶ ಎರಡಕ್ಕೂ ಬಲವಾದ ಬೆಂಬಲವನ್ನು ತೋರಿಸಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
"ಪ್ರತಿಭಟನೆಯ ಹಕ್ಕು, ವಿವಾಹದ ಹಕ್ಕು ಸೇರಿದಂತೆ ನಮ್ಮ ಬೇಡಿಕೆಗಳನ್ನು ಧ್ವನಿಯೆತ್ತಲು ಮತ್ತೆ ರಸ್ತೆಗೆ ಇಳಿದಿರುವುದು ತುಂಬಾ ಸಂತೋಷ ತಂದಿತು" ಎಂದು ಎಲ್‌ಜಿಬಿಟಿಕ್ಯೂ ಸೌವಿಕ್ ಆಚಾರ್ಜಿ ಹೇಳಿದ್ದಾರೆ.
ಬೆಂಗಳೂರು ಪ್ರೈಡ್ ಆರಂಭದಿಂದಲೂ ಜೊತೆ ಸಂಬಂಧ ಹೊಂದಿರುವ, ರಾಜ್‌ಪಿಲಾದ ಎಚ್‌ಆರ್‌ಎಚ್ ಮನ್ವೇಂದ್ರ ಸಿಂಗ್ ಗೋಹಿಲ್ ಪರವಾಗಿ ದಕ್ಷಿಣ ಭಾರತದ ಡ್ರ್ಯಾಗ್ ಕ್ವೀನ್ ಮತ್ತು ರಾಯಭಾರಿಯಾಗಿರುವ ಆಡಮ್ ಪಾಷಾ, ತಮ್ಮ ಕಮ್ಯುನಿಟಿಯ ಬಗ್ಗೆ ಪ್ರೀತಿ ಮತ್ತು ಸ್ವೀಕಾರವನ್ನು ಅರ್ಥಮಾಡಿಕೊಳ್ಳುವ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ್ದಾರೆ.
"ನಮ್ಮ ಸಮುದಾಯಕ್ಕೆ ಮಿತ್ರರು ಇರುವುದು ಮುಖ್ಯ. ಇನ್ನೂ ಮುಖ್ಯವಾದ ವಿಷಯವೆಂದರೆ ನಾವು ಯಾವುದಕ್ಕಾಗಿ ನಿಲ್ಲುತ್ತೇವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವುದು" ಎಂದು ಬಿಗ್ ಬಾಸ್‌ನ ಮಾಜಿ ಸ್ಪರ್ಧಿಯೂ ಆಗಿರುವ ಆಡಮ್ ಪಾಷಾ ಹೇಳಿದ್ದಾರೆ.
ಪ್ರೈಡ್ ಮಾರ್ಚ್ ವೇಳೆ ಎಲ್‌ಜಿಬಿಟಿಕ್ಯು ಕಮ್ಯುನಿಟಿ ಹಲವು ಬದಲಾವಣೆಗೆ ಕರೆಕೊಟ್ಟಿದೆ. ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ
LGBTQIA+ ಸಮುದಾಯವು ಕರ್ನಾಟಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ತಿಳಿಸಿದೆ, ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಮತಾಂತರ ಚಿಕಿತ್ಸೆ ಮತ್ತು ಬಲವಂತದ ಶಸ್ತ್ರಚಿಕಿತ್ಸೆಗಳನ್ನು ನಿಷೇಧಿಸಿ ಎಂದಿದೆ.
ಕಾನೂನುಬದ್ಧವಾಗಿ ನಾನ್-ಬೈನರಿ ಮತ್ತು ಟ್ರಾನ್ಸ್‌ಜೆಂಡರ್ ಗುರುತುಗಳನ್ನು ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ
ಉಚಿತ ಮತ್ತು ಅಂತರ್ಗತ ಆರೋಗ್ಯ ರಕ್ಷಣೆಯನ್ನು ಒದಗಿಸಿ ಎಲ್‌ಜಿಬಿಟಿಕ್ಯೂ ಸಮುದಾಯದವರಿಗೂ ವಿಸ್ತರಿಸಬೇಕು ಎಂದು ಹೇಳಿದೆ.
ಲೈಂಗಿಕ ಹಿಂಸೆ ಮತ್ತು ಬಲವಂತದ ವಿವಾಹಗಳಿಂದ ರಕ್ಷಣೆ ನೀಡಬೇಕು. ಉದ್ಯೋಗ ಮತ್ತು ವಸತಿ ಮೀಸಲಾತಿಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಕಿರುಕುಳವನ್ನು ನಿಲ್ಲಿಸಬೇಕು. ಸಮುದಾಯವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಅಂತರ್ಗತ ಶಿಕ್ಷಣ, ಕಾನೂನು ಸುಧಾರಣೆಗಳು ಮತ್ತು ಕಲ್ಯಾಣ ಬೆಂಬಲದ ಅಗತ್ಯವನ್ನು ಸಹ ಧ್ವನಿಸಿತು.